ಲೇಖಕ: admin

ಪುತ್ತೂರು ಜು.1 NEWS DESK : ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದರಲ್ಲಿಯೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳುತ್ತಲೇ ಇರುತ್ತಾರೆ. ಬದಲಾದ ತಾಂತ್ರಿಕತೆಯೊಂದಿಗೆ ಹೆಜ್ಜೆ ಹಾಕುತ್ತಾ ತನ್ನಲ್ಲಿರುವ ತಾಂತ್ರಿಕ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳುವುದಕ್ಕೆ ಸೂಕ್ತ ವೇದಿಕೆ ನೀಡುವುದಕ್ಕಾಗಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಅನ್‍ಬೌಂಡ್ ಎನ್ನುವ 3 ದಿನಗಳ ತಾಂತ್ರಿಕ ಉತ್ಸವ ಕಾರ್ಯಕ್ರಮ ನಡೆಯಿತು. ರೀಸರ್ಚ್ ಎಂಡ್ ಪ್ರೆಸೆಂಟೇಶನ್, ಪ್ರಾಬ್ಲೆಮ್ ಸಾಲ್ವಿಂಗ್, ಮೆಷಿನ್ ಲರ್ನಿಂಗ್, ಡೇಟಾ ಪ್ರಾಸೆಸಿಂಗ್, ಸರ್ಕ್ಯೂಟ್ ಡಿಸೈನ್ ಎಂಡ್ ಡಿಬಗ್ಗಿಂಗ್, ಸರ್ವೆ, ಮಾಡೆಲಿಂಗ್, ಯುನಿಟ್ಸ್ ಎಂಡ್ ಮೆಶರ್‍ಮೆಂಟ್ಸ್ ಹೀಗೆ ಕಂಪ್ಯೂಟರ್ ವಿಭಾಗಕ್ಕೆ ಸಂಬಂಧಿಸಿದಂತೆ 4, ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 2, ಸಿವಿಲ್ ವಿಭಾಗದಲ್ಲಿ 2, ಮೆಕ್ಯಾನಿಕಲ್ ವಿಭಾಗದಲ್ಲಿ 2 ಹಾಗೂ ಎಲ್ಲಾ ವಿಭಾಗಗಳಿಗೆ ಸಂಬಂಧಿಸಿದಂತೆ 1 ಹೀಗೆ ಒಟ್ಟು 11 ವಿಷಯಗಳಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳು ನಡೆದವು. ಕಾರ್ಯಕ್ರಮವನ್ನು ಇಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಅಡ್ವಾನ್ಸ್ಡ್ ಮೈಕ್ರೋ ಡಿವೈಸಸ್ ಸಂಸ್ಥೆಯಲ್ಲಿ ಸಿಲಿಕಾನ್ ಡಿಸೈನ್…

Read More

ಮಡಿಕೇರಿ ಜು.1 NEWS DESK : ಕನಾ೯ಟಕ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಔಷಧಿ ಉದ್ಯಮ ಕ್ಷೇತ್ರದಲ್ಲಿ ವ್ಯಾಪಾರಿಗಳ ಸೇವೆ ಪರಿಗಣಿಸಿ ಕೆಮಿಸ್ಟ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಡಿಕೇರಿಯ ಗಣೇಶ್ ಮೆಡಿಕಲ್ಸ್ ನ ಡಿ.ಐ.ಪುರುಷೋತ್ತಮ ಭಟ್ ಮತ್ತು ವೀಣಾ ಪುರುಷೋತ್ತಮ, ದಾವಣಗೆರೆಯ ಪೋಪಟ್ ಲಾಲ್ ಜೈನ್, ಮೈಸೂರಿನ ರಾಘವನ್, ಉಜಿರೆಯ ಶ್ರೀಧರ್, ತುಮಕೂರಿನ ಎಂ.ಎಸ್.ಅನಂತ್, ಬಾಗಲಕೋಟೆಯ ಬಂಡು ಆರ್.ಕಟ್ಟಿ ಅವರಿಗೆ ಭಾರತೀಯ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್ ಶಿಂಧೆ ಮತ್ತು ಪ್ರಮುಖರು ಕೆಮಿಸ್ಟ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದಭ೯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕೆ.ಹರೀಶ್ ಮೈಸೂರು (ಕಾನೂನು) ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಫ್ಯಾನ್ಸಿಸ್ ಪಿ.ಡಬ್ಲ್ಯು ,  ಮಡಿಕೇರಿ (ಲೆಕ್ಕಪರಿಶೋಧಕ) , ಕೆ.ಎಸ್.ರಮೇಶ್ ಹೊಳ್ಳ, ಮಡಿಕೇರಿ ( ಧಾಮಿ೯ಕ) , ಅನಿಲ್ ಹೆಚ್.ಟಿ. ಮಡಿಕೇರಿ (ಮಾಧ್ಯಮ) , ಚೇತನ್ ಶಾಂತಿನಿಕೇತನ, ಮಡಿಕೇರಿ ( ಸಾಮಾಜಿಕ ಸೇವೆ) ಅವರುಗಳನ್ನೂ ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.

Read More

ಮಡಿಕೇರಿ ಜು.1 NEWS DESK : ಮಾದಕ ವ್ಯಸನಿಗಳಾಗುವುದನ್ನು ತಪ್ಪಿಸುವಲ್ಲಿ ಔಷಧಿ ವ್ಯಾಪಾರಸ್ಥರ ಪಾತ್ರ ಮಹತ್ವದ್ದಾಗಿದೆ, ಮಕ್ಕಳು, ಯುವಪೀಳಿಗೆ ಭಾರತದ ಜನಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ ಎಂಬುದನ್ನು ಪರಿಗಣಿಸಿ ಈ ಸಮುದಾಯವು ಮಾದಕ ವ್ಯಸನಿಗಳಾಗದಂತೆ ತಡೆಗಟ್ಟುವಲ್ಲಿ ವ್ಯಾಪಾರಸ್ಥರು ಜಾಗ್ರತಿ ಮೂಡಿಸಬೇಕೆಂದು  ಅಖಿಲ ಭಾರತ  ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ್  ಎಸ್.ಶಿಂಧೆ  ಕರೆ ನೀಡಿದ್ದಾರೆ. ನಗರದ ಗೌಡ ಸಮಾಜದ  ಸಭಾಂಗಣದಲ್ಲಿ ಆಯೋಜಿತ ಕನಾ೯ಟಕ ಔಷಧಿ ವ್ಯಾಪಾರಿಗಳ  ಸಂಘದ 66 ನೇ ವಾಷಿ೯ಕ ಮಹಾಸಭೆ ಮತ್ತು ನಿರಂತರ ಕಲಿಕಾ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಮಾಜ ನಿಮಾ೯ಣದಲ್ಲಿ ಔಷಧಿ ವ್ಯಾಪಾರಸ್ಥರ ಹೊಣೆಗಾರಿಕೆ ಹಿಂದೆಂದಿಗಿಂತಲೂ ಇಂದಿನ ದಿನಗಳಲ್ಲಿ ಹೆಚ್ಚಾಗಿದೆ. ಮಕ್ಕಳು, ಯುವಪೀಳಿಗೆಯಲ್ಲಿ ಮಾದಕ ವ್ಯಸನ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಇಂಥ ಅಂಶಗಳುಳ್ಳ ಔಷಧಿಗಳನ್ನು ಯುವಜನಾಂಗಕ್ಕೆ ನೀಡಬಾರದು. ಮುಖ್ಯವಾಗಿ ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಮಾದಕ ಚಟವನ್ನು ಹೊಂದುತ್ತಿದ್ದು ಇದಕ್ಕಾಗಿ ಔಷಧಿ ವ್ಯಾಪಾರಿಗಳ  ಬಳಿ ಬಂದಾಗ ಅವರನ್ನು ಉತ್ತೇಜಿಸದೇ ದುಷ್ಟಟಗಳಿಂದ ದೂರವಿರುವಂತೆ ತಿಳುವಳಿಕೆ ನೀಡುವ ಕೆಲಸವೂ…

Read More

ಬೆಂಗಳೂರು ಜು.1 NEWS DESK : ಫೇಕ್ ನ್ಯೂಸ್ ಗಳ ಬಗ್ಗೆ ಇಡೀ ಸಮಾಜ ಬಹಳ ಎಚ್ಚರದಿಂದ ಇರಬೇಕು. ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಬೆಂಗಳೂರು ಪ್ರೆಸ್ ಕ್ಲಬ್ , ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ‌ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು. ಫೇಕ್ ನ್ಯೂಸ್ ಗಳ ಪತ್ತೆಗೆ, ನಿಯಂತ್ರಣಕ್ಕೆ, ಈ ಬಗ್ಗೆ ಕ್ರಮಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ Fact check ಘಟಕಗಳನ್ನು ಕ್ರಿಯಾಶೀಲಗೊಳಿಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಇಲಾಖೆ ಆಯುಕ್ತರಾದ…

Read More

ಮಡಿಕೇರಿ ಜು.1 NEWS DESK : ಕೊಡಗು ಪತ್ರಕರ್ತರ ಸಂಘ ಹಾಗೂ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ದಿನಾಚರಣೆನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಪತ್ರಿಕಾ ಭವನ ಟ್ರಸ್ಟ್ ನ ಮ್ಯಾನೆಂಜಿಂಗ್‌ ಟ್ರಸ್ಟಿ ಎಂ.ಪಿ.ಕೇಶವ ಕಾಮತ್‌ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳು, ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ನರೇಂದ್ರ ರೈ ದೇರ್ಲ, ಗಡಿನಾಡ ಸಂಚಾರಿ ಸಂಪಾದಕ ಟಿ.ಪಿ.ರಮೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರಾದ ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಜಿ. ಚಿದ್ವಿಲಾಸ್‌, ಗಡಿನಾಡ ಸಂಚಾರಿ ಸಂಪಾದಕ ಟಿ.ಪಿ.ರಮೇಶ್, ಸುಂಟಿಕೊಪ್ಪದ ಸಂಯುಕ್ತ ಕರ್ನಾಟಕ ವರಿಗಾರರಾದ ಕೆ.ಹೆಚ್.‌ಶಿವಣ್ಣ, ಗೋಣಿಕೊಪ್ಪಲು ಸುದ್ದಿ ಸಂಸ್ಥೆ ಸಂಪಾದಕ ಟಿ.ಎಲ್.‌ಶ್ರೀನಿವಾಸ್‌ ಹಾಗೂ ಸೋಮವಾರಪೇಟೆ ವಿಜಯ ಕರ್ನಾಟಕ ವರದಿಗಾರ ತೇಲಪಂಡ ಕವನ್‌ ಕಾರ್ಯಪ್ಪ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

Read More

ಮಡಿಕೇರಿ ಜು.1 NEWS DESK : ಕ್ರಿಯೇಟಿವ್‌ ಪಿಯು ಕಾಲೇಜಿನ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಸಿ.ಎ ಫೌಂಡೇಶನ್, ಸಿ.ಎಸ್‌.ಇ.ಇ.ಟಿ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಸಿ.ಎ.ಪ್ರದೀಪ್ ಜೋಗಿ ಆಗಮಿಸಿ, ಮಾತನಾಡಿ, ಪ್ರಸ್ತುತ ವಿದ್ಯಮಾನದಲ್ಲಿ ಚಾರ್ಟರ್ಡ್‌ ಅಕೌಂಟ್‌ ಕೋರ್ಸ್‌ ಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಫುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಒದಗಿಸುವ ಕೋರ್ಸ್‌ ನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಸಿ.ಎಸ್.ಇ.ಇ.ಟಿ ಬಗ್ಗೆ ಖ್ಯಾತ ಕಂಪೆನಿ ಸೆಕ್ರೇಟರಿ ಸಂತೋಷ ಪ್ರಭು ವಿದ್ಯಾರ್ಥಿಗಳಿಗೆ ಕಂಪೆನಿ ಸೆಕ್ರೇಟಿಯ ಕಾರ್ಯವೈಖರಿ ಹಾಗೂ ಅಗತ್ಯತೆಗಳ ಬಗ್ಗೆ ವಿವರಿಸಿದರು. ಸಂಸ್ಥೆಯ ಸಂಸ್ಥಾಪಕ ಕೆ.ಎಸ್‌.ಗಣಪತಿ ಭಟ್‌ ವಿದ್ಯಾರ್ಥಿಗಳಿಗೆ ಕೋರ್ಸ್‌ ನ ಮಹತ್ವವನ್ನು ನೀಡಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಘವೇಂದ್ರ ಬಿ.ರಾವ್‌, ಜ್ಞಾನೇಶ್‌ ಕೋಟ್ಯಾನ್‌, ಉಮೇಶ್‌, ಚಂದ್ರಕಾಂತ್‌ , ಉಪನ್ಯಾಸಕಿ ಅಕ್ಷತಾ ಮತ್ತಿತರಿದ್ದರು.

Read More

ಮಡಿಕೇರಿ ಜು.1 NEWS DESK : ಕಡಂಗ ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಿಸಲಾಯಿತು. ನಿವೃತ್ತ ಮುಖ್ಯ ಶಿಕ್ಷಕರಾದ ಬೈಚನ ವೈ.ಎ.ತಂಗಮ್ಮ ಮತ್ತು ಅವರ ಪತಿ ಬೈಚನ ಸೋಮಣ್ಣ ಶಾಲೆಯ ಮುಖ್ಯ ಶಿಕ್ಷಕರಾದ ಪಿ.ಎಂ.ಶಾಂತಿಕುಮಾರಿ  ಅವರಿಗೆ 100 ಟೈ ಮತ್ತು ಬೆಲ್ಟ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ  ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Read More

ನಾಪೋಕ್ಲು ಜು.1 NEWS DESK : ಕೊಡಗು ಜಿಲ್ಲಾ ಪೊಲೀಸ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ಹಾಗೂ ಎನ್.ಸಿ.ಸಿ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನವನ್ನು ಆಚರಿಸಲಾಯಿತು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿ ಪೂರ್ವ ಕಾಲೇಜಿನಿಂದ ಮೂರ್ನಾಡು ಪಟ್ಟಣದಲ್ಲಿ ಜಾಥಾ ನಡೆಸಿ ಮಾದಕ ವಸ್ತುಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮೂರ್ನಾಡು ಪಟ್ಟಣದಲ್ಲಿ ವಿದ್ಯಾರ್ಥಿಗಳು ಕಲಾವೇದಿಕೆ, ಕುಶಾಲನಗರ ತಂಡ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಬೀದಿ ನಾಟಕ ಪ್ರದರ್ಶಿಸಿದರು. ವಿದ್ಯಾರ್ಥಿಗಳಿಗೆ ಮೂರ್ನಾಡು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್ ಉಪ್ಪಳಿಕೆ ಪ್ರತಿಜ್ಞಾವಿಧಿ ಬೋಧಿಸಿದರು. ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದಮಯಂತಿ, ಎನ್ ಸಿಸಿ ಅಧಿಕಾರಿ ಕಾವೇರಪ್ಪ, ಪ್ರಾಂಶುಪಾಲರಾದ ದೇವಕಿ, ಉಪನ್ಯಾಸಕಿ ರೋಹಿಣಿ, ಶಿಕ್ಷಕಿ ಉಷಾ, ರಶ್ಮಿ ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಜು.1 NEWS DESK : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸೋಮವಾರಪೇಟೆಯ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

Read More

ಮಡಿಕೇರಿ ಜು.1 NEWS DESK : ಭಾಗಮಂಡಲ, ಚೇರಂಗಾಲ ಗ್ರಾಮದ ಕೋಳಿಕಾಡು ಪೈಸಾರಿಯ ನಿವಾಸಿ ಕೆ.ಪಿ.ಸುಂದರ (32) ಜೂ.24 ರಂದು ಕಾಣೆಯಾಗಿರುತ್ತಾರೆ. ಯಾರಾದರು ಕಂಡಲ್ಲಿ ದೂರವಾಣಿ ಸಂಖ್ಯೆ (81050 22032) ಯನ್ನು ಸಂಪರ್ಕಿಸುವಂತೆ ಸಹೋದರ ರವೀಂದ್ರ (ಬಾಲಾಜಿ) ಕೋರಿದ್ದಾರೆ.

Read More