ಮಡಿಕೇರಿ ಆ.12 NEWS DESK : 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಶಾಮುಕ್ತ ಭಾರತ ಅಭಿಯಾನದಡಿ ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನ ಮಾದಕ ವಸ್ತು ಸೇವನೆ ಮಾಡದಿರಲು ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ಲೇಖಕ: admin
ಮಡಿಕೇರಿ ಆ.12 NEWS DESK : ದೇಶದ ರಕ್ಷಣೆಗಾಗಿ ಯುದ್ಧದಲ್ಲಿ ವೈರಿಗಳ ವಿರುದ್ಧ ಸೆಣೆಸಾಡಿ ಭಾರತ ಭೂಮಿಯನ್ನು ಉಳಿಸಿದ ನಿವೃತ್ತ ಯೋಧರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ನಗರದಲ್ಲಿ ನಡೆಯಿತು. ನಗರದ ಕಾವೇರಿ ಹಾಲ್ ಸಭಾಂಗದಣಲ್ಲಿ ನಡೆದ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಸಾಧಕ-ಬಾಧಕ ಚರ್ಚೆಯ ಜೊತೆಗೆ ಕದನ ಕಲಿಗಳಿಗೆ ಗೌರವ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಾಜಿ ಸೈನಿಕರು, ಅವರ ಕುಟುಂಬ ಹಾಗೂ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಾಜಿ ಸೈನಿಕರ ಮಕ್ಕಳನ್ನು ಸನ್ಮಾನಿಸಲಾಯಿತು. 1965, 1971 ಭಾರತ, ಪಾಕಿಸ್ತಾನ ಯುದ್ಧ, 1963ರ ಭಾರತ ಚೀನಾ ಯದ್ಧದಲ್ಲಿ ಭಾಗಿಯಾದ ನಿವೃತ್ತ ಕರ್ನಲ್ ಕೆ.ಸಿ.ಸುಬ್ಬಯ್ಯ, ನಿ.ಲೆ.ಕ.ಪಿ.ಸಿ.ಕರುಂಬಯ್ಯ, ಮುಂಡಚಾರಿಕ ಬೋಪಯ್ಯ, ಟಿ.ಬಿ.ತಿಮ್ಮಯ್ಯ, ಎಂ.ಯು.ಕುಶಾಲಪ್ಪ, ಸಿ.ಎಂ.ಕಾರ್ಯಪ್ಪ, ರಾಮಯ್ಯ, ಬಿ.ಎಸ್.ಗಣಪತಿ, ಎಂ.ಸಿ.ಅಪ್ಪಯ್ಯ, ಬಿ.ಸಿ.ಮುತ್ತಣ್ಣ, ಪಿ.ಕೆ.ಪಾಪಯ್ಯ, ಸೋಮಣ್ಣ, ಎಂ.ಎಸ್.ಕುಂಞಪ್ಪ, ಪಿ.ಎಂ.ಕುಶಾಲಪ್ಪ, ಕೆ.ಯು.ಗಣಪತಿ, ಡಬ್ಲ್ಯೂ.ಪಿ.ಸುಬ್ಬಯ್ಯ, ಕೆ.ಎಂ.ದೇವಯ್ಯ, ಬಿ.ಯು.ಕಾಳಪ್ಪ, ಎಂ.ಬಿ.ಅಪ್ಪಣ್ಣ, ಎಂ.ಎಸ್.ಪೂವಯ್ಯ, ಎಂ.ಸಿ.ಕರುಂಬಯ್ಯ, ಎಂ.ಎ.ಸೋಮಯ್ಯ, ಬಿ.ಎ.ಬೆಳ್ಯಪ್ಪ, ಬಿ.ವೈ.ಉತ್ತಪ್ಪ, ಬಿ.ಎಸ್.ಉತ್ತಪ್ಪ, ಬಿ.ಎಸ್.ಜಪ್ಪು…
ಮಡಿಕೇರಿ ಆ.12 NEWS DESK : ಸೋಮವಾರಪೇಟೆ ತಾಲ್ಲೂಕಿನ ನಗರೂರು ನಿವಾಸಿ, ಕಾಫಿ ಬೆಳೆಗಾರ ಎಸ್.ಎಸ್.ಬಸವರಾಜ್ (78) ಇಂದು ಬೆಳಗಿನ ಜಾವ ನಿಧಾನರಾದರು. ಮೃತರ ಅಂತ್ಯಕ್ರಿಯೆ ಸಂಜೆ 4 ಗಂಟೆಗೆ ಸೋಮವಾರಪೇಟೆಯ ವೀರಶೈವ ರುದ್ರ ಭೂಮಿಯಲ್ಲಿ ನೆರವೇರಲಿದೆ. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಡಿಕೇರಿ ಆ.12 NEWS DESK : ಸುಂಟಿಕೊಪ್ಪ ನಾರ್ಗಾಣೆ ಗ್ರಾಮದ ಶ್ರೀದೇವಿ ಬಡಾವಣೆಯ ವಿನಾಯಕ ಸ್ಟೋರ್ಸ್ ಮಾಲೀಕರಾದ ಪಟ್ಟಮುತ್ತು ಅವರ ಪುತ್ರ ಮದನ್ ಕುಮಾರ್ (20) ಅನಾರೋಗ್ಯದಿಂದ ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು. ಮದನ್ ಕುಮಾರ್ ಮೈಸೂರು ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದರು.
ನಾಪೋಕ್ಲು ಆ.12 NEWS DESK : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮೂರ್ನಾಡು ಗ್ರಾ.ಪಂ ಸಿಬ್ಬಂದಿಗಳು ಹಾಗೂ ಸ್ಥಳೀಯ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕ ಸಂಘದ ಸದಸ್ಯರು ಮೂರ್ನಾಡುವಿನಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ಮೂರ್ನಾಡು ಪ್ರಾಥಮಿಕ ಶಾಲೆಗೆ ಹೋಗುವ ಮಾರ್ಗ ಮತ್ತು ಶಾಲೆಯ ಆವರಣದಲ್ಲಿದ್ದ ಗಿಡಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶುಚಿಗೊಳಸಿದರು. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಆ.12 NEWS DESK : ನಾಪೋಕ್ಲು ಪೊಲೀಸ್ ಠಾಣೆಯ ಕ್ರೈಂ ಬ್ರಾಂಚಿನ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದುಗ್ಗಳ ಶ್ರೀಧರ (ಬಾಚಿ ಗದ್ದೆ) ಜುಲೈ 31ಕ್ಕೆ ಸೇವೆಯಿಂದ ನಿವೃತ್ತಿ ಹೊಂದಿದ್ದು, ಅವರನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ನಿವೃತ್ತ ದುಗ್ಗಳ ಶ್ರೀಧರ ಹಾಗೂ ಪತ್ನಿ ಪಾರ್ವತಿ ದಂಪತಿಗಳನ್ನು ಸನ್ಮಾನಿಸಿ ನಿವೃತ್ತ ಜೀವನ ಶುಭಪ್ರದವಾಗಿರಲೆಂದು ಹಾರೈಸಿದರು. ಸಂಪಾಜೆ ಗ್ರಾಮದವರಾದ ದುಗ್ಗಳ ಶ್ರೀಧರ್, 1981 ರಿಂದ 1991 ರವರೆಗೆ ದೂರವಾಣಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಬಳಿಕ ಪೊಲೀಸ್ ಇಲಾಖೆ ಸೇರಿ ವಿರಾಜಪೇಟೆಯ ಟೌನ್ ಸ್ಟೇಷನ್ ನಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ನಾಪೋಕ್ಲು ಪೋಲಿಸ್ ಠಾಣೆಯಲ್ಲಿ ಆರು ವರ್ಷ, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರು ವರ್ಷ, ಹೆಡ್ ಕಾನ್ಸ್ಟೇಬಲ್ ಆಗಿ ಮಡಿಕೇರಿಯ ಗ್ರಾಮೀಣ ಸ್ಟೇಷನ್ ನಲ್ಲಿ ಆರು ವರ್ಷ ಸೇವೆ…
ನಾಪೋಕ್ಲು ಆ.12 NEWS DESK : ಅಂತಾರಾಷ್ಟ್ರೀಯ ಹಾಕಿಪಟು ಹಾಗೂ ಒಲಂಪಿಯನ್, ಪ್ರಸ್ತುತ ಬೆಂಗಳೂರಿನಲ್ಲಿ ಹಾಕಿ ಕರ್ನಾಟಕ ಸಂಸ್ಥೆಯ ಜನರಲ್ ಸೆಕ್ರೆಟರಿ ಮತ್ತು ಬೆಂಗಳೂರಿನ ಖೇಲೋ ಇಂಡಿಯಾದ ಪರ್ಫಾರ್ಮೆನ್ಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಅಂಜಪರವಂಡ ಸುಬ್ಬಯ್ಯ ಹಾಕಿ ಕ್ರೀಡೆ ಅಭಿವೃದ್ಧಿಗೆ ಉತ್ತೇಜನ ನೀಡುವ ಸಲುವಾಗಿ ಮೂರ್ನಾಡು ವಿದ್ಯಾಸಂಸ್ಥೆಗೆ 30 ಹಾಕಿ ಸ್ಟಿಕ್, 30 ಹಾಕಿ ಬಾಲ್ ಹಾಗೂ ಗೋಲ್ ಕೀಪರ್ ಕಿಟ್ ಸೇರಿ ಒಟ್ಟು 50,000 ರೂ,ಮೌಲ್ಯದ ಹಾಕಿ ಕ್ರೀಡಾ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಡಾ.ಅಂಜಪರವಂಡ ಸುಬ್ಬಯ್ಯ ಮಾತನಾಡಿ, ಹಾಕಿ ಕ್ರೀಡೆಗೆ ಮೂರ್ನಾಡು ವಿದ್ಯಾ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು, ಕ್ರೀಡೆಯನ್ನು ಉತ್ತೇಜಿಸಲು ಸಂಸ್ಥೆಗೆ ಇನ್ನೂ ಮುಂದಿನ ದಿನಗಳಲ್ಲಿ ತಮ್ಮಿಂದಾಗುವ ಕೊಡುಗೆಯನ್ನು ನೀಡುವ ಭರವಸೆ ನೀಡಿದರು. ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ.ಚೌರಿರ ಜಗತ್ ತಿಮ್ಮಯ್ಯ ಕೊಡುಗೆಯನ್ನು ಸ್ವೀಕರಿಸಿ, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಲು ದಾನಿಗಳು ನೀಡಿದ ಕೊಡುಗೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಈ ಸಂದರ್ಭ ಮೂರ್ನಾಡು ವಿದ್ಯಾ ಸಂಸ್ಥೆಯ…
ಬೆಂಗಳೂರು ಆ.12 NEWS DESK : ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ವಿಶ್ವ ಆನೆ ದಿನದಂದು ಆಯೋಜಿಸಿದ್ದ ಮಾನವ-ಆನೆ ಸಂಘರ್ಷ ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಈ ಸಂದರ್ಭ ಡಿಸಿಎಂ ಡಿ.ಕೆ.ಶಿವಕುಮಾರ್, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಜಾರ್ಖಂಡ್ ಅರಣ್ಯ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಆ.12 NEWS DESK : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಪತ್ರಕರ್ತರು ಕಾರ್ಯನಿರ್ವಹಿಸಿದರೆ ಸಮಾಜದಲ್ಲಿ ಸಕರಾತ್ಮಕ ಬದಲಾವಣೆ ತರಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವೀಯ ತುಡಿಗಳಿಗೆ ಸ್ಪಂದಿಸುವ ಗುಣವನ್ನು ಪತ್ರಕರ್ತರು ಹೊಂದಿರಬೇಕು. ಮಾನವೀಯ ಸಂಬಂಧಗಳನ್ನು ಬೆಳದುಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಇಂದಿನ ಕಾಲಘಟ್ಟದಲ್ಲಿ ಬಂದಿದೆ. ಸಮಾಜದ ಕಷ್ಟ-ಕಾರ್ಪಣ್ಯಗಳಿಗೆ ಮಿಡಿಯಬೇಕಾದರೆ ನಮ್ಮಲ್ಲಿ ಮಾನವೀಯ ಅಂತಕರಣ ಇದ್ದರೆ ಮಾತ್ರ ಸಾಧ್ಯ. ಕೇವಲ ವರದಿಗಾರಿಗೆ ಮಾತ್ರ ಪತ್ರಕರ್ತರ ಕೆಲಸವಲ್ಲ. ಜನರ ಕಣ್ಣೀರಿಗೆ ಸ್ಪಂದಿಸುವ, ಅನ್ಯಾಯಕ್ಕೆ ಒಳಗಾದವರಿಗೆ ಧ್ವನಿಯಾಗುವ ಅವಕಾಶ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರಿಗಿದೆ. ಇದರ ಸದ್ಬಳಕೆ ಆಗಬೇಕು ಎಂದರು. ಕೋವಿಡ್‍ನಿಂದ ಅನೇಕ ಪತ್ರಕರ್ತರು ಪಾಣ ಕಳೆದುಕೊಂಡರು. ಅವರ ಕುಟುಂಬಕ್ಕೆ ಸರಕಾರದಿಂದ ರೂ.5 ಲಕ್ಷ ಪರಿಹಾರ ಕೊಡಿಸುವ ಕೆಲಸ ಸಂಘಟನೆಯಿಂದಾಗಿದೆ.…
ಜೈಪುರ ಆ.12 NEWS DESK : ರಾಜಸ್ಥಾನದಾದ್ಯಂತ ಭಾರೀ ಮಳೆಯಾಗಿದ್ದು, ನಿನ್ನೆ ಭಾನುವಾರ 15 ಜನರ ದುರಂತ ಸಾವಿಗೆ ಕಾರಣವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಸಾವು ಸಂಭವಿಸಿದೆ. ಭರತ್‌ಪುರದಲ್ಲಿ ಏಳು, ಜುಂಜುನುದಲ್ಲಿ ಮೂರು, ಕರೌಲಿಯಲ್ಲಿ ಮೂರು, ಜೋಧ್‌ಪುರದಲ್ಲಿ ಒಬ್ಬರು ಮತ್ತು ಬನ್ಸ್ವಾರಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಪ್ರತ್ಯೇಕ ಘಟನೆಗಳಲ್ಲಿ, ಜೈಪುರ ಸಮೀಪದ ಕನೋಟಾ ಅಣೆಕಟ್ಟಿನಲ್ಲಿ ಐವರು ಯುವಕರು ಮುಳುಗಿ ಮೃತಪಟ್ಟಿದ್ದು, ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.ಭರತ್‌ಪುರದಲ್ಲಿ 14 ರಿಂದ 22 ವರ್ಷದೊಳಗಿನ ಏಳು ಯುವಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿರುವ ಭೀಕರ ಮಳೆ ಸಂಬಂಧಿತ ದುರಂತ ಸಂಭವಿಸಿದೆ.






