ಲೇಖಕ: admin

ಕೊಡ್ಲಿಪೇಟೆ NEWS DESK ಆ.10 : “ಜಾತ್ಯಾತೀತತೆ ಭಾರತದ ಧರ್ಮ” ಎಂಬ ಶೀರ್ಷಿಕೆಯೊಂದಿಗೆ ಆಗಸ್ಟ್ 15 ರಂದು ದೇಶದ  ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಸಂಜೆ 4 ಗಂಟೆಗೆ ಸುಂಟಿಕೊಪ್ಪದಲ್ಲಿ ನಡೆಯುವ ರಾಷ್ಟ್ರ ರಕ್ಷಾ ಸಂಗಮ ಕಾರ್ಯಕ್ರಮದ ಪ್ರಚಾರ ಕೊಡ್ಲಿಪೇಟೆ ಎಸ್ ಕೆ ಎಸ್ ಎಸ್ ಎಫ್ ಶಾಖಾ ಕಚೇರಿಯಲ್ಲಿ ನಡೆಯಿತು. ಪ್ರಚಾರ ಕಾರ್ಯಕ್ರಮದಲ್ಲಿ SYS ಕೊಡಗು ಉಪಾಧ್ಯಕ್ಷರಾದ ಹಂಸ ಹಾಜಿ, ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ, ಪ್ರಮುಖರಾದ ಹಮೀದ್ ಮೌಲವಿ, ಜಿಲ್ಲಾ ನಾಯಕರುಗಳು, ಎಸ್ ವೈ ಎಸ್ ಆಮಿಲಾ ಉಪಾಧ್ಯಕ್ಷರಾದ ಅಬ್ದುಲ್ ರಹಮಾನ್, ಸದಸ್ಯರುಗಳಾದ ಉಮ್ಮರ್, ಶೇಖಬ್ಬ, ಎಸ್ ಕೆ ಎಸ್ ಎಸ್ ಎಫ್ ಜೊತೆ ಕಾರ್ಯದರ್ಶಿ ಮುಸ್ತಫಾ ಸಬ್ಬಿ ಹಾಗೂ ಶಾಖೆಯ ಇತರ ಸದಸ್ಯರುಗಳು ಭಾಗವಹಿಸಿದ್ದರು.

Read More

ವಿರಾಜಪೇಟೆ NEWS DESK ಆ.10 : ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಥಮ ಶನಿವಾರದ ವಿಶೇಷ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನಡೆಯಿತು. ಅರ್ಚಕರಾದ ಸಂತೋಷ್ ಹೆಬ್ಬಾರ್ ಮತ್ತು ಪವನ್ ಕುಮಾರ್ ಭಟ್ ಸಾರಥ್ಯದಲ್ಲಿ ಗಣಪತಿ ಹೋಮ, ನವಗ್ರಹ ಪೂಜೆ, ಶನಿ ಶಾಂತಿ,ಶನಿ ಜಪ, ರಾಹು ಕೇತು ಜಪ, ಕುಂಕುಮಾರ್ಚನೆ, ಮೃತ್ಯುಂಜಯ ಜಪ ಪೂಜಾದಿಗಳು ಜರುಗಿತು. ಮಧ್ಯಾಹ್ನ ಶ್ರೀ ಶನೀಶ್ವರ ಸ್ವಾಮಿಗೆ ಮಹಾ ಮಂಗಳಾರತಿ, ಮಾಹಾಪೂಜೆ ನೆರವೇರಿತು. ದೇಗುಲ ತಕ್ಕರಾದ ಚೊಕಂಡ ರಮೇಶ್ ಮತ್ತು ಕುಟುಂಬಸ್ಥರು, ಪುರೋಹಿತ ವರ್ಗ, ಗ್ರಾಮಸ್ಥರು, ನಗರ ಮತ್ತು ಸ್ಥಳೀಯ ಗ್ರಾಮಗಳಿಂದ ಅಧಿಕ ಸಂಖ್ಯೆಯ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.  ದೇವಾಲಯದಲ್ಲಿ ತಾ 17 ,24, 31 ರಂದು ಶ್ರಾವಣ ಶನಿವಾರದ ವಿಶೇಷ ಪೂಜೆಗಳು ನಡೆಯಲಿದೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Read More

ಚಾಮರಾಜನಗರ NEWSDESKಆ.10 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋಧ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ‘ಚೆಲುವ ಚಾಮರಾಜನಗರ’ “ಭರಚುಕ್ಕಿ ಜಲಪಾತೋತ್ಸವ” ವನ್ನು ಉದ್ಘಾಟಿಸಿ ಮಾತನಾಡಿದರು. ಸಚಿವರಾದ ಎಚ್.ಕೆ.ಪಾಟೀಲ್, ಕೆ.ವೆಂಕಟೇಶ್, ಶಿವರಾಜ ತಂಗಡಗಿ, ಶಾಸಕರಾದ ಹನೂರು ಮಂಜುನಾಥ್, ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್, ಸಂಸದರಾದ ಸುನಿಲ್ ಬೋಸ್, ವಿಧಾನ‌ ಪರಿಷತ್ ಸದಸ್ಯರಾದ ಡಾ.ತಿಮ್ಮಯ್ಯ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

Read More

ಸಿದ್ದಾಪುರ NEWS DESK ಆ.10 : ತಿತಿಮತಿ ಅರಣ್ಯ ವಲಯದ ಚೆನ್ನಂಗಿ ವ್ಯಾಪ್ತಿಯ ಬಾಡಗಬಾಣಂಗಾಲ, ಹುಂಡಿ, ಮಠ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದ 32 ಕಾಡಾನೆಗಳನ್ನು ಮರಳಿ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶನಿವಾರ ಸಫಲರಾದರು. ಕಾಫಿ ತೋಟಗಳ ಮಾರ್ಗದಲ್ಲಿ ತೆರಳಿದ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿಗಳು ಬಾಡಗಬಾಣಂಗಾಲ ಗ್ರಾಮದ ಬಾಣಂಗಾಲ ಎಸ್ಟೇಟ್ ನಿಂದ ಮಾರ್ಗೊಳ್ಳಿ ಎಸ್ಟೇಟ್ ಮೂಲಕ ಕಾಡಾನೆಗಳನ್ನು ಓಡಿಸಿದರು. ಸುಮಾರು 8 ಕೀಲೋ ಮೀಟರ್ ದೂರದಲ್ಲಿರುವ ಮಾಲ್ದಾರೆ ಅರಣ್ಯಕ್ಕೆ 32 ಆನೆಗಳ ಹಿಂಡನ್ನು ಪಟಾಕಿ ಸಿಡಿಸಿ ಕಾಡಿಗಟ್ಟುವಲ್ಲಿ ಯಶಸ್ವಿಯಾದರು. ಈ ಆನೆಗಳು ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿ ಕಾರ್ಮಿಕರು ಹಾಗೂ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದವು. ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ ಮತ್ತು ಎಸಿಎಫ್ ಗೋಪಾಲ್ ನಿರ್ದೇಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಗಂಗಾಧರ ಇವರ ನೇತೃತ್ವದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶಶಿ ಪಿ.ಟಿ, ದೇವರಾಜ್ ಡಿ., ಅರಣ್ಯ ಪಾಲಕ ರಾಜೇಶ್, ಆರ್‌ಆರ್‌ಟಿ ಸಿಬ್ಬಂದಿಗಳಾದ ಸಚಿನ್, ಶಂಕರ್,…

Read More

ಮಡಿಕೇರಿ ಆ.10 NEWS DESK : ಗ್ರಾಮೀಣ ಸೊಗಡಿನ ಜಾನಪದ ಕಲೆಯ ರಾಜ್ಯ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಮಡಿಕೇರಿ ಸಮೀಪ ಕಗ್ಗೋಡ್ಲುವಿನ ಗದ್ದೆಯಲ್ಲಿ ಸಂಭ್ರಮದಿಂದ ನಡೆಯಿತು. ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೂತ್ ಹಾಸ್ಟೇಲ್ ಅಸೋಸಿಯೇಶನ್ ಆಫ್ ಇಂಡಿಯಾದ ಮಡಿಕೇರಿ ಘಟಕ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಕಗ್ಗೊಡ್ಲು ಕಾವೇರಿ ಯುವಕ ಸಂಘದ ಸಂಯುಕ್ತಾಶ್ರಯದಲ್ಲಿ ಕಗ್ಗೋಡ್ಲುವಿನ ದಿವಂಗತ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ಜಿಲ್ಲೆಯ ಹಲವು ತಂಡಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವು. ಸಾರ್ವಜನಿಕ ಪುರುಷ ಮತ್ತು ಮಹಿಳೆಯರ ಹಗ್ಗ ಜಗ್ಗಾಟ, ಸಾರ್ವಜನಿಕ ಪುರುಷರ ವಾಲಿಬಾಲ್, ಸಾರ್ವಜನಿಕ ಮಹಿಳೆಯರಿಗೆ ಥ್ರೋಬಾಲ್, ಪ್ರೌಢ ಶಾಲಾ ಬಾಲಕಿಯರಿಗೆ ಥ್ರೋಬಾಲ್ ಪಂದ್ಯಾವಳಿ, ಪ್ರೌಢಶಾಲಾ ಬಾಲಕ-ಬಾಲಕಿಯರ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು, ಅದರಲ್ಲೂ ಹಗ್ಗಜಗ್ಗಾಟ ಸ್ಪರ್ಧೆ ಅತ್ಯಂತ ಕುತೂಹಲಕಾರಿಯಾಗಿ ನಡೆದು ಗಮನ ಸೆಳೆಯಿತು. ಉದ್ಘಾಟನೆ :: ಕ್ರೀಡಾಕೂಟವನ್ನು ಕ್ರೀಡಾ ಇಲಾಖೆ ಅಧಿಕಾರಿ…

Read More

ಮಡಿಕೇರಿ ಆ.10 NEWS DESK : ಮಡಿಕೇರಿ ರೋಟರಿ ವುಡ್ಸ್ ಸಂಸ್ಥೆಯ ವತಿಯಿಂದ ಮೇಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜರ್ಕಿನ್ ಗಳನ್ನು ಕೊಡುಗೆಯಾಗಿ ನೀಡಲಾಯಿತು. ಮಳೆ‌ ಮತ್ತು ಚಳಿ ಯಿಂದ ಮಕ್ಕಳಿಗೆ ರಕ್ಷಣೆಯನ್ನು ನೀಡುವ ಉದ್ದೇಶದಿಂದ ರೋಟರಿ ವುಡ್ಸ್ ವತಿಯಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಒಟ್ಟು 47 ವಿದ್ಯಾರ್ಥಿಗಳು ಈ ಯೊಜನೆಯ ಉಪಯೋಗ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಮಾತನಾಡಿದ ರೊಟರಿ ವುಡ್ಸ್ ಅಧ್ಯಕ್ಷ ಕಿಗ್ಗಾಲು ಹರೀಶ್ ವಿದ್ಯಾರ್ಥಿಗಳು ಈ ಕೊಡುಗೆಯ ಸದುಪಯೋಗ ಪಡೆದುಕೊಳ್ಳುವಂತೆಯೂ, ಮಕ್ಕಳು ಆರೋಗ್ಯವನ್ನು ಕಾಪಾಡಿಕೊಂಡು ಭವಿಷ್ಯದಲ್ಲಿ ಆರೋಗ್ಯವಂತ ಪ್ರಜೆಗಳಾಗುವಂತೆ ಕರೆ ನೀಡಿದರು. ಜರ್ಕಿನ್ ಗಳನ್ನು ಕೊಡುಗೆಯಾಗಿ ನೀಡಿದ ರೋಟರಿ ವುಡ್ಸ್ ಸಂಸ್ಥೆಯ ನಿದೇ೯ಶಕ .ಬಾಲಸುಬ್ರಹ್ಮಣ್ಯ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ರೂಪಿಸುವಲ್ಲಿ ಶಿಕ್ಷಣ ಬಹಳ ಮುಖ್ಯ. ಭವಿಷ್ಯದಲ್ಲೂ ಶಾಲೆಗೆ ಕೊಡುಗೆಗಳನ್ನು ನೀಡಲು ತಾನು ಸಿದ್ಧ ಎಂದು ಘೋಷಿಸಿದರು. ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸವಿತ, ರೋಟರಿ ಮಡಿಕೇರಿ ವುಡ್ಸ್ ನಿದೇ೯ಶಕರಾದ ಭಗತ್ ರಾಜ್, ರಂಜಿತ್ ಕಿಗ್ಗಾಲ್, ಪಿ.ರವಿ, ಲೋಕೇಶ್, ಕಶ್ಯಪ್,…

Read More

ಮಡಿಕೇರಿ ಆ.10 NEWS DESK : ಕೊಡಗು ಜಿಲ್ಲಾ ಮಾನವ ಬಂಧುತ್ವ ವೇದಿಕೆ ಮತ್ತು ಮಹಾಮೈತ್ರಿ ಬೌದ್ಧ ವಿಹಾರ ಟ್ರಸ್ಟ್‍ನ ಸಂಯುಕ್ತಾಶ್ರಯದಲ್ಲಿ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಪರಿಕಲ್ಪನೆಯಂತೆ ಬಸವ ಪಂಚಮಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನೆಯ ಪ್ರಮುಖರು ಹಾಗೂ ನಿಲಯದ ವಿದ್ಯಾರ್ಥಿಗಳು ಬುದ್ಧ, ಬಸವ, ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಜೆ.ಎಲ್.ಜನಾರ್ಧನ್, ಬಸವಣ್ಣನವರ ವೈಚಾರಿಕ ದೃಷ್ಟಿಕೋನದಲ್ಲಿ ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರ ಪರಿಕಲ್ಪನೆಯಂತೆ ನಾಗರಪಂಚಮಿಯಲ್ಲಿ ಹುತ್ತಕ್ಕೆ ಹಾಲು ಎರೆದು ವ್ಯರ್ಥ ಮಾಡುವ ಬದಲು ಹಸಿದ ಮಕ್ಕಳಿಗೆ ಹಾಲುಣಿಸುವ ಬಸವ ತತ್ವ ಪರಿಪಾಲನೆಗೆ ಇಡೀ ರಾಜ್ಯ ಮಾದರಿಯಾಯಿತು ಎಂದರು. ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜೆ.ಆರ್.ಪಾಲಾಕ್ಷ ಮಾತನಾಡಿ, ವಿದ್ಯಾರ್ಥಿಗಳು ಮೌಡ್ಯಾಚಾರಣೆಗಳಿಂದ ದೂರ ಉಳಿದು ಉನ್ನತ ಮಟ್ಟದ ಶಿಕ್ಷಣ ಪಡೆಯಬೇಕು ಮತ್ತು ವೈಚಾರಿಕತೆಯ…

Read More

ಮಡಿಕೇರಿ ಆ.10 NEWS DESK : ಮಾರ್ಕೆಟ್ ಸಂತೆ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿ ಮತ್ತು ಮಡಿಕೇರಿ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ಆ.15 ರಂದು ಸ್ವಾತಂತ್ರ್ಯೋತ್ಸವವನ್ನು ನಗರದ ವೃದ್ಧಾಶ್ರಮದ ಹಿರಿಯರೊಂದಿಗೆ ಸಂಭ್ರಮದಿಂದ ಆಚರಿಸಲಾಗುವುದೆಂದು ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎ.ಅಬ್ದುಲ್ ರಜಾಕ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸ್ನೇಹಜೀವಿ, ನೊಂದವರ ಬಾಳಿನ ಆಶಾ ಕಿರಣ” ಎಂಬ ಘೋಷವಾಕ್ಯದೊಂದಿಗೆ ನಗರದ “ತನಲ್” ವಿಕಾಸ್ ಜನಸೇವಾ ಟ್ರಸ್ಟ್ ನ ವೃದ್ಧಾಶ್ರಮದಲ್ಲಿರುವ ಸುಮಾರು 32 ಮಂದಿ ಹಿರಿಯರೊಂದಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಲ್ಲಿನ ಮಾರುಕಟ್ಟೆ ಆವರಣದಲ್ಲಿ ಆಚರಿಸಲಾಗುತ್ತದೆ ಎಂದರು. ಅಂದು ಬೆಳಿಗ್ಗೆ 9.30 ಗಂಟೆಗೆ ಸುಬೇದಾರ್ ಕ್ಯಾಪ್ಟನ್ ಹೆನ್ರಿ ಡೇವಿಡ್ ವೇಗಸ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಲಿದ್ದು, 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ನಗರಸಭಾ ಪೌರಾಯುಕ್ತ ವಿಜಯ್ ಉದ್ಘಾಟಲಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಾರ್ಕೆಟ್ ಸಂತೆ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಆಲಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಬಶೀರ್ ಅಹ್ಮದ್, ಅಮೀನ್ ಮೊಯಿಸಿನ್, ಮನ್ಸೂರ್…

Read More

ಮಡಿಕೇರಿ ಆ.10 NEWS DESK : ಸೋಮವಾರಪೇಟೆಯ ಶ್ರೀ ನಾರಾಯಣಗುರು ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ.ಆರ್.ಚಂದ್ರಹಾಸ್, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಂ.ಇಂದಿರಾ ಮೋಣಪ್ಪ ಆಯ್ಕೆಯಾಗಿದ್ದಾರೆ. ಸಮಿತಿ ಅಧ್ಯಕ್ಷರಾಗಿದ್ದ ಬಿ.ಎ.ಭಾಸ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2024-27ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸಿ.ಲಕ್ಷ್ಮಣ್ ಪೂಜಾರಿ, ಉಪಾಧ್ಯಕ್ಷರಾಗಿ ಎಸ್.ಕೆ. ಸುಂದರ್, ಸಹಕಾರ್ಯದರ್ಶಿಯಾಗಿ ಪುಷ್ಪ ನರೇಶ್, ಖಜಾಂಚಿಯಾಗಿ ಎಂ.ಜಿ. ರಮೇಶ್, ಸಂಘಟನಾ ಕಾರ್ಯದರ್ಶಿಯಾಗಿ ಬಿ.ಸಿ. ದಿನೇಶ್ ಪೂಜಾರಿ ಆಯ್ಕೆಯಾದರು. ಸಮಿತಿ ನಿರ್ದೇಶಕರುಗಳಾಗಿ ಜಿ.ಗಣೇಶ್, ಉಷಾ ಶೇಷಪ್ಪ, ಜಯಂತ್, ಯಶೋಧ ಚಂದ್ರಶೇಖರ್, ವಿನೋದ್ ಜಯರಾಮ್, ಬಿ.ಎಂ.ಪ್ರಶಾಂತ್, ಬಿ.ಎಂ. ರೋಹಿತ್, ನಿತಿನ್ ಕೃಷ್ಣಪ್ಪ, ಎಸ್. ಎಸ್. ರಾಜಶೇಖರ್, ಬಿ.ಆರ್.ಹೇಮಂತ್ ಕುಮಾರ್, ಶ್ರೀಧರ್ ಪೂಜಾರಿ, ಲಿಂಗರಾಜ್ ಪೂಜಾರಿ ಹಾಗೂ ಸಮಿತಿ ಸಲಹೆಗಾರರಾಗಿ ಬಿ.ಎ.ಭಾಸ್ಕರ್ ಅವರುಗಳನ್ನು ಆಯ್ಕೆ ಮಾಡಲಾಯಿತು.

Read More

ಸೋಮವಾರಪೇಟೆ ಆ.10 NEWS DESK : ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ದೆಹಲಿಯಲ್ಲಿ ನಡೆಸಲು ಉದ್ದೇಶಿಸಿರುವ ವೀರಭದ್ರ ವರ್ಧಂತಿಹೋತ್ಸವಕ್ಕೆ ಆರ್ಟ್ ಆಫ್ ಲಿವಿಂಗ್‍ನ ಶ್ರೀ ರವಿಶಂಕರ್ ಗುರೂಜಿ ಅವರನ್ನು ಆಹ್ವಾನಿಸಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆಶ್ರಮದಲ್ಲಿ ರವಿಶಂಕರ್ ಗುರೂಜಿ ಅವರನ್ನು ಭೇಟಿ ಮಾಡಿದ ರಾಜ್ಯದ ವಿವಿಧ ಭಾಗಗಳ ಮಠಾಧೀಶರ ತಂಡ ಕಳೆದ 6 ವರ್ಷಗಳಿಂದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಈ ರಾಷ್ಟ್ರದ ಸಂಸ್ಕೃತಿ ರಕ್ಷಕ, ಆಂಜನೇಯ ಸ್ವಾಮಿಗೆ ಲಿಂಗದೀಕ್ಷೆ ನೀಡಿದ ವೀರಭದ್ರ ದೇವರ ಜಯಂತಿ ಆಚರಿಸಿಕೊಂಡು ಬರುತಿದೆ ಹಾಗೂ ಅವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.    ಈ ಭಾರಿ ರಾಷ್ಟ್ರ ರಾಜಧಾನಿ ದೆಹಲಿಯ ಭಾರತ್ ಮಂದಿರದಲ್ಲಿ ನಡೆಯಲಿರುವ ವೀರಭದ್ರೇಶ್ವರ ವರ್ಧಂತಿ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಆದ್ದರಿಂದ ತಾವುಗಳು ಸಾನಿಧ್ಯ ವಹಿಸುವುದರೊಂದಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕೆಂದು ಕೋರಿದರು. ಇದಕ್ಕೆ ಪ್ರತಿಕ್ರಿಯೆ ರವಿಶಂಕರ್ ಗುರೂಜಿ, ಪುರಾಣ ಇತಿಹಾಸದಲ್ಲಿ ವೀರಭದ್ರ ಸ್ವಾಮಿಗೆ ವಿಶೇಷ ಧಾರ್ಮಿಕ ಹಿನ್ನಲೆ…

Read More