ಮಡಿಕೇರಿ ಜು.6 NEWS DESK : ಗಾಳಿಬೀಡು ಗ್ರಾಮದ ತೋಟವೊಂದರಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಉರಗ ತಜ್ಞ ರಕ್ಷಿಸಿದ್ದಾರೆ. ಗಾಳಿಬೀಡು ಗ್ರಾಮದ ಕರಕರನ ಪವನ್(ಪ್ರಭು) ಅವರ ಕಾಫಿ ತೋಟದಲ್ಲಿ ಕೆಲಸ ಮಾಡುವ ಸಂದರ್ಭ ಹೆಬ್ಬಾವು ಕಾಣಿಸಿಕೊಂಡಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಅರಣ್ಯ ಬಿಟ್ಟಿದ್ದಾರೆ.
ಲೇಖಕ: admin
ಮಡಿಕೇರಿ ಜು.6 NEWS DESK : ನಿಟ್ಟೂರು ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ನಿಟ್ಟೂರು ಕಾರ್ಮಾಡು ಗ್ರಾಮದಲ್ಲಿ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ್ ದಿವಸ್ ಆಚರಣೆ ಮಾಡಲಾಯಿತು. ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ವಿರಾಜಪೇಟೆ ಮಂಡಳ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಲ್ಚೀರ ಕವಿತಾ ಬೋಜಪ್ಪ, ನಿಟ್ಟೂರು ಗ್ರಾ.ಪ0 ಉಪಾಧ್ಯಕ್ಷ ಚಕ್ಕೇರ ಅಯ್ಯಪ್ಪ, ಸದಸ್ಯರಾದ ಪಡಿಞರಂಡ ಕವಿತಾ ಪ್ರಭು, ಬಿಜೆಪಿ ನಿಟ್ಟೂರು ಶಕ್ತಿ ಕೇಂದ್ರದ ಎಸ್.ಟಿ.ಮಹೊರ್ಚದ ಸದಸ್ಯ ನಾಗ ಮುಂತಾದವರು ಹಾಜರಿದ್ದರು.
ನಾಪೋಕ್ಲು ಜು.6 NEWS DESK : ಶಿಸ್ತನ್ನು ಬೆಳೆಸಿಕೊಳ್ಳಲು ಹಾಗೂ ಮಕ್ಕಳ ಸರ್ವಾಂಗೀಣ ಅಭಿವೃಧ್ಧಿಗೆ ಪೋಷಕರ, ಶಿಕ್ಷಕರ ಪಾತ್ರ ಬಹು ಮುಖ್ಯ ಎಂದು ಆಕ್ಸ್ ಫರ್ಡ್ ಶಾಲಾ ಮುಖ್ಯೋಪಾಧ್ಯಾಯಿನಿ ಕವಿತಾ ಹೇಳಿದರು. ಕುಂಜಿಲದ ಆಕ್ಸ್ ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಿಕ್ಷಕ – ಪೋಷಕರ ಸಭೆಯಲ್ಲಿ ಮಾತನಾಡಿ, ಮಕ್ಕಳ ಭವಿಷ್ಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಆಕ್ಸ್ ಫರ್ಡ್ ಶಾಲೆಯ ನಿರ್ವಾಹಕ ಅಧಿಕಾರಿ ಶಾಹಿದ್ ಅಲಿ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲು ಕಿವಿ ಮಾತು ಹೇಳಿದರು . ಸಭೆಯಲ್ಲಿ ಅಧ್ಯಾಪಕ ವೃಂದ ಹಾಗೂ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಜು.6 NEWS DESK : ಲಯನ್ಸ್ ಮತ್ತು ಲಿಯೋ ಕ್ಲಬ್ ನ 2024- 25ರ ಸಾಲಿನ ನೂತನ ಆಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ನಾಪೋಕ್ಲು ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ಬಿನ ನೂತನ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಖಜಾಂಚಿ ಕಾಂಡಂಡ ರೇಖಾ ಪೊನ್ನಣ್ಣ, ಲಿಯೋ ನೂತನ ಅಧ್ಯಕ್ಷ ಅಂಕುರ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಉಮ್ಮು ಹಬೀಬ, ಕಾರ್ಯದರ್ಶಿ ಬಿ.ಸಿ.ನವಲ್ ನಾಚಪ್ಪ ಹಾಗೂ ಖಜಾಂಚಿ ದ್ರುವ್ ದೇವಯ್ಯ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಕನ್ನಂಬಿರ ಸುಧಿ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಬಡ್ಡೀರ ನಳಿನಿ ಪೂವಯ್ಯ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ಕುಡುಪಿ ಅರವಿಂದ್ ಶೆಣೈ PMJF (VPG 1) ಮಂಗಳೂರು ಲಯನ್ಸ್ ಜಿಲ್ಲೆ ಉಪರಾಜ್ಯಪಾಲ ಪದಗ್ರಹಣ ಅಧಿಕಾರಿಗಳಾಗಿ ಪಾಲ್ಗೊಂಡು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಲೈನ್ಸ್ ಸಂಸ್ಥೆಯ ಧ್ಯೇಯ ಉದ್ದೇಶಗಳ ಬಗ್ಗೆ ವಿವರಿಸಿದರು.…
ನಾಪೋಕ್ಲು ಜು.6 NEWS DESK : ಚೆಯ್ಯಂಡಾಣೆ, ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ನಿರಂತರ ಉಪಟಳದಿಂದ ಬೇಸತ್ತ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ. ಚೈಯಂಡಾಣೆ, ನರಿಯಂದಡ ಗ್ರಾ.ಪಂ ವ್ಯಾಪ್ತಿಯ ಚೆಯ್ಯಂಡಾಣೆ, ನರಿಯಂದಡ, ಚೇಲಾವರ, ಕೋಕೇರಿ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಕೃಷಿ ಫಸಲನ್ನು ತಿಂದು ನಷ್ಟ ಪಡಿಸುತ್ತಿದೆ. ಗ್ರಾಮದ ಪೊಕ್ಕೋಳಂಡ್ರ, ಕೋಡಿಮಣಿಯoಡ, ಬೊವೇರಿಯಂಡ, ಬಿಳಿಯಂಡ್ರ, ಮಕ್ಕಿಮನೆ, ಮಂಜoಡ್ರ, ನೆಲ್ಲಮಕ್ಕಳ, ಮುಂಡ್ಯೋಲಂಡ ಅವರ ತೋಟಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ಅಡಿಕೆ, ಕಾಫಿ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಈ ಭಾಗದ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅರಣ್ಯ ಇಲಾಖೆಯ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ನಡೆಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನರಿಯಂದಡ ಗ್ರಾಮಸ್ಥ ಪೊಕ್ಕೋಳಂಡ್ರ ಧನೋಜ್ ಅಳಲು ತೋಡಿಕೊಂಡಿದ್ದಾರೆ. ಕಾಡಾನೆ ತಡೆಗೆ ಅರಣ್ಯ ಇಲಾಖೆ ತಕ್ಷಣವೇ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ನಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ ಹತ್ತು ದಿನಗಳೊಳಗೆ ಯಾವುದೇ…
ಮಡಿಕೇರಿ ಜು.6 NEWS DESK : ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಮರಳಿ ನೀಡುವ ಸೇವಾ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆಯ ಮಾಜಿ ರಾಜ್ಯಪಾಲ ಪ್ರಕಾಶ್ ಕಾರಂತ್ ಕರೆ ನೀಡಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ನಡೆದ ರೋಟರಿ ಮಡಿಕೇರಿಯ 2024- 25 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಪದಗ್ರಹಣ ಅಧಿಕಾರಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ರೋಟರಿ ಪದಾಧಿಕಾರಿಗಳು ಬದಲಾದ ಕಾಲಘಟ್ಟಕ್ಕೆ ತಕ್ಕ ಹಾಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಬೇಕು. ಧನಾತ್ಮಕ ಚಿಂತನೆಗಳ ಮೂಲಕ ಜನಸೇವೆ ಮಾಡಬೇಕು. ಸೇವಾ ಮನೋಭಾವನೆಯ ಸದಸ್ಯರು ರೋಟರಿಗೆ ಅಗತ್ಯವಿದ್ದು, ಮಹಿಳೆಯರು ಸೇರಿದಂತೆ ವೈವಿಧ್ಯಮಯ ಕ್ಷೇತ್ರದಲ್ಲಿರುವ ಪ್ರತಿನಿಧಿಗಳನ್ನು ನೇಮಿಸಿಕೊಳ್ಳಿ ಎಂದು ಸಲಹೆ ನೀಡಿದರು. ಸಮಾಜದಿಂದ ನಾವು ಸಾಕಷ್ಟು ಪಡೆದುಕೊಳ್ಳುತ್ತೇವೆ, ಅದನ್ನು ಮರಳಿ ಸಮಾಜಕ್ಕೆ ನೀಡುವ ಗುಣದೊಂದಿಗೆ ಸೇವೆಯನ್ನು ಮಾಡಬೇಕು ಎಂದು ಪ್ರಕಾಶ್ ಕಾರಂತ್ ತಿಳಿಸಿದರು. ಸಹಾಯಕ ರಾಜ್ಯಪಾಲ ಡಿ.ಎಂ.ಕಿರಣ್ ಮಾತನಾಡಿ ಈ ಬಾರಿ ರೋಟರಿ ಜಿಲ್ಲೆಯಲ್ಲಿ 8 ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಾದಕ ವಸ್ತು…
ಮಡಿಕೇರಿ ಜು.6 NEWS DESK : ಮಕ್ಕಳು ಓದಿನೊಂದಿಗೆ ಸಾಹಿತ್ಯ ಕ್ಷೇತ್ರದತ್ತಲೂ ಒಲವು ತೋರಬೇಕೆಂದು ಗಣ್ಯರು ಕರೆ ನೀಡಿದರು. ಕನ್ನಡ ಸಿರಿ ಸ್ನೇಹ ಬಳಗ ಹಾಗೂ ಮಡಿಕೇರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಾಹಿತಿ ದಿ. ಜಿ.ಟಿ.ನಾರಾಯಣ ರಾವ್ ಅವರ ಬದುಕು ಬರಹ ಕುರಿತ ಉಪನ್ಯಾಸ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ.ಅನಂತಶಯನ, ವಿದ್ಯಾರ್ಥಿಗಳು ಪ್ರಶ್ನಿಸುವ, ಉತ್ತರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಸ್ವಾತಂತ್ರ್ಯವಿದೆ, ಅದನ್ನು ಉಪಯೋಗಿಸಿಕೊಳ್ಳಬೇಕೆಂದು ಹೇಳಿದರು. ಪ್ರಪಂಚದಲ್ಲಿ ಲೋಕದೊಳಗಡೆ ಮತ್ತಷ್ಟು ಲೋಕಗಳಿವೆ. ಕ್ರೀಡೆ, ಸಾಹಿತ್ಯ, ಸಂಗೀತ, ಪಾಪಿಗಳ ಲೋಕ ಕೂಡ ಇದೆ. ಅದರಲ್ಲಿ ಅಧ್ಯಾತ್ಮಿಕ ಲೋಕ ಚೆನ್ನಾಗಿದೆ. ಧ್ಯಾನದಿಂದ ಸ್ಥಿರತೆ, ಅನಂತತೆಯನ್ನು ಸಾಧಿಸಬಹುದಾಗಿದೆ. ಸಾಹಿತ್ಯ ಲೋಕ ಅತಿ ಮುಖ್ಯವಾದುದಾಗಿದೆ. ಸಾಹಿತಿ ಸಾಮಾನ್ಯನಾಗಿ ಕಂಡರೂ ಆತನಲ್ಲಿ ಎಲ್ಲ ರೀತಿಯ ಸ್ವಭಾವಗಳು ಅಡಕವಾಗಿರುತ್ತದೆ. ಬರಹದಲ್ಲಿ ಕಲಾತ್ಮಕತೆ, ಸೃಜಶೀಲತೆ ಇರುತ್ತದೆ. ಎಲ್ಲವೂ…
ಕುಶಾಲನಗರ ಜು.6 NEWS DESK : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೊಡಗಿನ ಸೈನಿಕ ಶಾಲೆ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ಬೆಂಗಳೂರಿನ ರಾಜಭವನದಲ್ಲಿ ಭೇಟಿ ಮಾಡಿ, ಶಾಲೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಶಾಲೆಯಲ್ಲಿನ ವಿವಿಧ ತರಬೇತಿ ಚಟುವಟಿಕೆಗಳು ಮತ್ತು ಶಾಲೆಯು ಸಾಧಿಸಿದ ಗಮನಾರ್ಹ ಪ್ರಗತಿ ಕುರಿತು ವಿವರಿಸಿದರು. ಶಾಲೆಯಲ್ಲಿ ಕೇಂದ್ರೀಕೃತ ತರಬೇತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿದ ಯು.ಪಿ.ಎಸ್.ಸಿ ಮತ್ತು ಎಸ್.ಎಸ್.ಬಿ ತರಬೇತಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನ ನೀಡುವುದರೊಂದಿಗೆ ಅಗತ್ಯ ಮತ್ತು ನಿಖರವಾದ ವಿನ್ಯಾಸಗೊಳಿಸಲಾದ ತರಬೇತಿಯನ್ನು ನೀಡಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು. ಶಾಲೆಯು ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ಒಟ್ಟು 36 ವಿದ್ಯಾರ್ಥಿಗಳು ದೇಶದ ಭೂಸೇನೆ, ನೌಕಾ ಸೇನೆ ಮತ್ತು ವಾಯುಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. 42ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯರಾಗಿದ್ದು, ಸುಮಾರು 15 ವಿದ್ಯಾರ್ಥಿಗಳು ವೈದ್ಯರಾಗಲು ದೇಶದ ಪ್ರತಿಷ್ಠಿತ ವೈದ್ಯಕೀಯ…
ಮಡಿಕೇರಿ ಜು.6 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತೀಯ ಹರಿಕಾರ ಡಾ.ಬಾಬು ಜಗಜೀವನ್‍ರಾಂ ಅವರ 38ನೇ ಪರಿನಿರ್ವಾಣ ಕಾರ್ಯಕ್ರಮವನ್ನು ಆಚರಿಸಲಾಯಿತು. ನಗರದ ಗಾಂಧಿ ಭವನದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಡಾ.ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಜಿ.ಪಂ ಸಿಇಒ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ್ ನಾರ್ವಡೆ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಪೌರಾಯುಕ್ತ ವಿಜಯ್ ಇತರರು ಇದ್ದರು.
ಮಡಿಕೇರಿ ಜು.6 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಣೆ ಮಾಡಲಾಯಿತು. ನಗರದ ಗಾಂಧಿ ಮೈದಾನದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಫಲಾನುಭವಿಗಳಿಗೆ ವಿತರಿಸಿದರು. ಈ ಸಂದರ್ಭ ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ಶಾಸಕರಾದ ಎ.ಎಸ್.ಪೊನ್ನಣ್ಣ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಇತರರು ಇದ್ದರು.






