ಕುಣಿಗಲ್ NEWS DESK ಆ.4 : ತಾನು ಸಾಯುವುದಾಗಿ ಸಹೋದರನಿಗೆ ವೀಡಿಯೋ ಕಳುಹಿಸಿ ದೊಡ್ಡಕೆರೆಯ ಕೋಡಿ ಹಾಲಮಡುವಿನ ನಾಲೆಯ ನೀರಿಗೆ ಹಾರಿ ಯುವಕನ್ನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಪಟ್ಟಣದ ಮಹಾವೀರ ನಗರದ ನಿವಾಸಿ ಬಿ.ಆನಂದ್ (28) ಮೃತ ಯುವಕನಾಗಿದ್ದು, ಆ.2 ರಂದು ಮನೆಯಿಂದ ಹೊರ ಹೋದವರು ಮತ್ತೆ ಮರಳಲಿಲ್ಲ ಎಂದು ತಿಳಿದು ಬಂದಿದೆ. ಆನಂದ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು “ನನ್ನ ಸಾವಿಗೆ ಯಾರು ಕಾರಣರಲ್ಲ, ನಾನು ಬದುಕಬೇಕು ಅನ್ನಿಸುತ್ತಿಲ್ಲ, ಹಾಗಾಗಿ ನಾನು ಸಾಯುತ್ತಿದ್ದೇನೆ” ಎಂದು ತನ್ನ ಸಹೋದರ ಸಾಗರ್ ಗೆ ವೀಡಿಯೋ ಮಾಡಿ ಕಳುಹಿಸಿದ್ದರು. ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ನಾಲೆಯಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.
ಲೇಖಕ: admin
ಸಾಗರ್ NEWS DESK ಆ.4 : ದೇವಾಲಯವೊಂದರ ಗೋಡೆ ಕುಸಿದು ಬಿದ್ದು 10ರಿಂದ 15 ವರ್ಷದ 9 ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾನುವಾರ ನಡೆದಿದೆ. ಶಹಪುರ್ ಗ್ರಾಮದ ಹರ್ದೌಲ್ ಬಾಬಾ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾರಾಕಾರ ಮಳೆಯಿಂದಾಗಿ ಪಾಳು ಬಿದ್ದಿದ್ದ ಗೋಡೆ ಕುಸಿದು ಬಿದ್ದು ಈ ಘಟನೆ ಸಂಭವಿಸಿದ್ದು, ಮೃತರ ಕುಟುಂಬಕ್ಕೆ ಸರ್ಕಾರ ತಲಾ 4ಲಕ್ಷ ರೂ. ಪರಿಹಾರ ಘೋಷಿಸಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ.
ಬೆಂಗಳೂರು NEWS DESK ಆ.4: ಕ್ರೀಡಾ ಸಾಧಕರನ್ನು ಗುರುತಿಸಿ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ಒದಗಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಅವರು ಭಾನುವಾರ ಕೃಷ್ಣಾದಲ್ಲಿ ಭಾನುವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿoದ ಒಲoಪಿಕ್ಸ್, ಪ್ಯಾರಾಲಿoಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ ಗಳಲ್ಲಿ ಪದಕ ವಿಜೇತ 12ಮಂದಿ ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿ ಮಾತನಾಡಿದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ 2016-17ರ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಒಲಂಪಿಕ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾಗಿದ್ದ ಕ್ರೀಡಾಕೂಟದ ಸಂದರ್ಭದಲ್ಲಿ, ಒಲಂಪಿಕ್ಸ್, ಏಶ್ಯಾಡ್ ಮತ್ತು ಕಾಮನ್‌ವೆಲ್ತ್‌ನಂತಹ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡುವ ಕ್ರೀಡಾಳುಗಳಿಗೆ ಸರ್ಕಾರಿ ನೌಕರಿ ಒದಗಿಸುವುದಾಗಿ ಘೋಷಣೆ ಮಾಡಿದ್ದೆ. ಸರ್ಕಾರ ಬದಲಾದ ಬಳಿಕ ಇದು ನೆನೆಗುದಿಗೆ ಬಿದ್ದಿತ್ತು. ಇದೀಗ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಈ ಹಿಂದೆ…
ತಿತಿಮತಿ NEWS DESK ಆ.4 : ತಿತಿಮತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ “ಆ್ಯಂಟಿ ಮೈಕ್ರೋಬಿಯಲ್ ಸ್ವೀವರ್ಡ್‌ಶಿಪ್ ಗಾಗಿ ಆ್ಯಂಟಿ ಬಯೋಗ್ರಾಮ್‌ಗಳ ತರಬೇತಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು, ಇಂದಿನ ಕಾಲಮಾನದಲ್ಲಿ, ಆರೋಗ್ಯದ ಮಹತ್ವದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಂಡಿರಬೇಕು ಎಂದರು. ಬದಲಾವಣೆಗಳಿಗೆ ಅನುಗುಣವಾಗಿ ನಮ್ಮನ್ನು ನಾವು ತೊಡಗಿಸಿಕೊಂಡು ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತಿಯನ್ನು ಹೊಂದಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮಡಿಕೇರಿ NEWS DESK ಆ.4 : ಕೊಡವ ಜನಾಂಗವೂ ಈ ಮಣ್ಣಿನ ಮೂಲದಿಂದ ಬೆಳೆದು ಬಂದಿದೆ. ಭೂಮಿಯೆ ನಮ್ಮ ಎಲ್ಲಾ ಸಂಸ್ಕೃತಿ ಮತ್ತು ಬದುಕಿನ ಮೂಲ, ಹಾಗೇ ಒಂದು ಜಾನಾಂಗದ ಹೆಗ್ಗುರುತೇ ಆ ಜನಾಂಗದ ಭಾಷೆ. ಭಾಷೆ ಮತ್ತು ಮಣ್ಣಿನ ಮೂಲತನ ಉಳಿದರೆ ಮಾತ್ರ ಕೊಡವಾಮೆ ಬೆಳೆಯಲಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅಭಿಪ್ರಾಯಪಟ್ಟಿದ್ದಾರೆ. ಪೊನ್ನಂಪೇಟೆ ತಾಲ್ಲೂಕು ಬೇಗೂರಿನ ಪಟ್ಟಕೇರಿ ಅಂಬಲ ಸಂಘಟನೆಯ ಎಂಟನೇ ವರ್ಷದ ಬೇಲ್ ನಮ್ಮೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿ ಮತ್ತು ಭಾಷೆಯನ್ನು ಉಳಿಸುವಂತೆ ಕರೆ ನೀಡಿದರು. ಕೊಡವರ ಹುಟ್ಟಿನಿಂದ ಸಾವಿನವರೆಗೆ, ಪ್ರತೀ ಹಬ್ಬ ಹಾಗೂ ಆಚರಣೆಗಳು ಭೂಮಿ ಮತ್ತು ಗದ್ದೆಯ ಸುತ್ತಲೇ ನಿಂತಿದೆ. ಪ್ರತಿಯೊಂದು ಆಚರಣೆಗಳು ಕೂಡ ಕೃಷಿ ಆಧಾರಿತವಾಗಿಯೇ ಇದೆ. ನಮ್ಮ ಸಂಪ್ರದಾಯ ಆಚರಣೆಯ ಮೂಲ ಹೆಗ್ಗುರತೇ ಭಾಷೆ. ನಾವೆಷ್ಟೇ ಮುಂದುವರೆದು ಏನೇ ಸಾಧನೆಗಳನ್ನು ಮಾಡಿದರೂ ನಮ್ಮ ಭಾಷೆಯನ್ನು ಕಡೆಗಣಿಸಿದರೆ ನಾವು ಇದ್ದೂ ಇಲ್ಲದಂತೆ. ಆದ್ದರಿಂದ ಈ ಕೊಡಗಿನ…
ಸುಂಟಿಕೊಪ್ಪ NEWS DESK ಆ.4 : ಮನೆಯ ಹಿಂಭಾಗದಲ್ಲಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಶೀಟ್ ನ ಮೇಲೆ ಬಿದ್ದು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಬೈಕ್ ಮೆಕಾನಿಕ್ ಶಶಿ(40) ಎಂಬುವವರೇ ಮೃತ ದುರ್ದೈವಿ. ಗಂಭೀರವಾಗಿ ಗಾಯಗೊಂಡಿದ್ದ ಶಶಿ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪತ್ನಿ ಸಂಧ್ಯಾ ಗ್ರಾ.ಪಂ ಕಚೇರಿ ಸಿಬ್ಬಂದಿಯಾಗಿದ್ದಾರೆ.
ಕುಶಾಲನಗರ NEWS DESK ಆ.4 : ಕೇರಳದ ವೈನಾಡ್ ನಲ್ಲಿ ಭೂ ಕುಸಿತದಿಂದ ಸಂತ್ರಸ್ತರಾದ ನಾಗರಿಕರಿಗೆ ಸಹಾಯ ಹಸ್ತ ಚಾಚುವ ಸಂಬಂಧ ಕುಶಾಲನಗರ ಕಾವೇರಿ ಆಟೋ ನಿಲ್ದಾಣದ ಚಾಲಕರ ತಂಡ ಅಗತ್ಯ ವಸ್ತುಗಳೊಂದಿಗೆ 8 ಆಟೋಗಳಲ್ಲಿ ತೆರಳಿ ಭಾನುವಾರ ಸ್ವಯಂಸೇವಕರಾಗಿ ಕೆಲಸ ನಿರ್ವಹಿಸಿದರು. ಕುಶಾಲನಗರ ಸರಕಾರಿ ಆಸ್ಪತ್ರೆ ಹಿಂಭಾಗದಲ್ಲಿರುವ ಕಾವೇರಿ ಆಟೋ ಚಾಲಕ ಮಾಲೀಕರು, ಚಾಲಕರು ಅಕ್ಕಿ ಬೇಳೆ ಎಣ್ಣೆ ದಿನಸಿ ಪದಾರ್ಥಗಳು ಬಟ್ಟೆಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತಮ್ಮ ಆಟೋಗಳಲ್ಲಿ ತುಂಬಿಸಿ ಭಾನುವಾರ ಮುಂಜಾನೆ 5 ಗಂಟೆ ವೇಳೆಗೆ 8 ಆಟೋಗಳಲ್ಲಿ ಸುಮಾರು ಹತ್ತಕ್ಕೂ ಅಧಿಕ ಮಂದಿ ತೆರಳಲಿದ್ದಾರೆ. ಅಲ್ಲಿಯ ಸಂತ್ರಸ್ತರಿಗೆ ನೆರವು ನೀಡುವುದು ಮತ್ತು ತಮ್ಮ ವಾಹನದ ಮೂಲಕ ಅಲ್ಲಿನ ಜನರಿಗೆ ತಮ್ಮ ಕೈಲಾದಷ್ಟು ಸೇವೆ ಸಲ್ಲಿಸುವುದರೊಂದಿಗೆ ಸಂತ್ರಸ್ತರಿಗೆ ಅನುಕೂಲ ಕಲ್ಪಿಸುವುದು ತಮ್ಮ ಉದ್ದೇಶವಾಗಿದೆ ಎಂದು ತಂಡದ ಪ್ರಮುಖರಾದ ಅರೀಫ್ ತಿಳಿಸಿದ್ದಾರೆ. ಚಾಲಕರಾದ ಆರೀಫ್, ಚೇತನ್, ನೂತನ್, ಮಹೇಶ್ ವಿಜಯ್ ಪ್ರಜ್ವಲ್ ಹಮೀದ್, ಕುಮಾರ್ ಮತ್ತಿತರರು ತೆರಳಿ ತಮ್ಮೊಂದಿಗೆ ಒಯ್ದ ದಿನ ನಿತ್ಯದ ಅಗತ್ಯ…
ಮಡಿಕೇರಿ NEWS DESK ಆ.4 : ಕ್ರೋಧಿ ಸಂವತ್ಸರದ ಗ್ರೀಷ್ಮ ಋತುವಿನ ದಕ್ಷಿಣಾಯನ ಕರ್ಕಾಟಕ ಮಾಸ ಆಷಾಢ ಕೃಷ್ಣಪಕ್ಷದ ಅಮಾವಾಸ್ಯೆಯ ದಿನವಾದ ಇಂದು ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ “ಪೊಲಿಂಕಾನ ಉತ್ಸವ” ವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಶ್ರೀ ಭಗಂಡೇಶ್ವರ ದೇವಾಲಯದ ಪ್ರಧಾನ ಅರ್ಚಕರಾದ ಎಸ್.ರವಿಕುಮಾರ್ ಅವರ ನೇತೃತ್ವದಲ್ಲಿ “ಪೊಲಿಂಕಾನ ಉತ್ಸವ” ಮತ್ತು ಮಹಾಪೂಜೆ ನಡೆಯಿತು. ತುಂಬಿ ಹರಿಯುತ್ತಿರುವ ಕಾವೇರಿಗೆ ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಲಾಯಿತು. ದೇವಾಲಯದ ಕಾರ್ಯನಿರ್ವಾಹಣಾಧಿಕಾರಿಗಳಾದ ಚಂದ್ರಶೇಖರ್ ಎನ್.ಜಿ, ತಕ್ಕಮುಖ್ಯಸ್ಥರಾದ ಬಳ್ಳಡ್ಕ ಬಿ.ಸಿ.ಅಪ್ಪಾಜಿ, ಶ್ರೀ ತಲಕಾವೇರಿ ದೇವಾಲಯದ ತಕ್ಕಮುಖ್ಯಸ್ಥರಾದ ಕೋಡಿ ಯು.ಮೋಟಯ್ಯ, ಸಿಬ್ಬಂದಿ ವರ್ಗ ಹಾಗೂ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಸೋಮವಾರಪೇಟೆ NEWS DESK ಆ.4 : ಭಾರತೀಯ ಸೇನೆ (BSF)ಯಲ್ಲಿ ದೇಶದ ಗಡಿಗಳಲ್ಲಿ ಸುಧೀರ್ಘ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿರುವ ಸೋಮವಾರಪೇಟೆ ತಾಲ್ಲೂಕು ಬಿಳಹ ಗ್ರಾಮದ ಕರುಣಾಕರ್ ಅವರನ್ನು ಹಿಂದು ಜಾಗರಣ ವೇದಿಕೆ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ನೇತೃತ್ವದಲ್ಲಿ ಇಂದು ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಗೌರವಿಸಿ ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು.
ಮಡಿಕೇರಿ NEWS DESK ಆ.4 : ಭಾರತ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳು ಅಖಂಡ ಭಾರತಕ್ಕಾಗಿ ನಡೆದಿತ್ತು. ಆದರೆ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿದ್ದ ಅಖಂಡ ಭಾರತವನ್ನು ತ್ರಿಖಂಡವಾಗಿ ತುಂಡರಿಸಲು ಕಾರಣವಾದ ಅಂದಿನ ನೈಜ ಘಟನೆಗಳನ್ನು ಯುವ ಸಮೂಹಕ್ಕೆ ನೆನಪಿಸುವುದು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಯೋಧರ ಸ್ಮರಣೆ ಮಾಡುವುದು ಹಾಗೂ ಕಳೆದು ಹೋದ ಭಾರತದ ಭೂಭಾಗಗಳನ್ನು ಮತ್ತೆ ಪಡೆಯುವ ಸಂಕಲ್ಪದೊಂದಿಗೆ ಹಿಂದು ಜಾಗರಣ ವೇದಿಕೆಯು ಕೊಡಗು ಜಿಲ್ಲೆಯ ಆರು ಕಡೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವೇದಿಕೆಯ ಜಿಲ್ಲಾ ಸಂಯೋಜಕರಾದ ಕುಕ್ಕೇರ ಅಜಿತ್ ತಿಳಿಸಿದ್ದಾರೆ. ಪ್ರತೀ ವರ್ಷ ದೇಶದಾದ್ಯಂತ ಸ್ವಾತಂತ್ರ್ಯೋತ್ಸವಕ್ಕೆ ಮುಂಚಿತವಾಗಿ ಆಗಸ್ಟ್ ತಿಂಗಳಿನಲ್ಲಿ ಅಖಂಡ ಭಾರತ ಸಂಕಲ್ಪ ದಿನವನ್ನು ಆಯೋಜಿಸುತ್ತಿದೆ. ಅದರಂತೆ ಆ.7ರಂದು ವೀರಾಜಪೇಟೆ, ಆ.9ರಂದು ಮಡಿಕೇರಿ, ಆ.10ರಂದು ಮಾದಾಪುರ, ಆ.11ರಂದು ಕೊಡ್ಲಿಪೇಟೆ, 12ರಂದು ಪೊನ್ನಂಪೇಟೆ ಹಾಗೂ ಆ.14ರಂದು ಕುಶಾಲನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥ ಸಾಗಲಿದೆ.…






