ಮಡಿಕೇರಿ ಮೇ 6 NEWS DESK : ಮೊದಲು ಮುದ್ರಣಗೊಂಡು ಮಾರಾಟವಾಗುತ್ತಿತ್ತು. ಈಗ ಮಾರಾಟಗೊಂಡು ಮುದ್ರಣವಾಗುತ್ತದೆ. ಇತೀಚೆಗೆ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿಡ್ಡ ಒಂದು ಸಂದೇಶವನ್ನು ಓದಿದಾಗ ಮನದಲ್ಲಿ ಒಂದು ರೀತಿಯ ಗೊಂದಲ ಮೂಡಿತು. ಇದು ವಾಸ್ತವ ಕೂಡ, ನಗ್ನ ಸತ್ಯ ಕೂಡ. ಸುಮಾರು 3 ರಿಂದ 4 ತಿಂಗಳ ಹಿಂದೆ ಪತ್ರಿಕೆಯಲ್ಲಿ ಓದಿದ ನೆನಪು. ಕನ್ನಡ ದಿನಪತ್ರಿಕೆಯ ಮಹಿಳಾ ಪ್ರಕಾಶಕರೊಬ್ಬರು ಅವರ ಹೆಸರು ಮರೆತು ಹೋಗಿದೆ ಅವರು ಸಮಾರಂಭವೊಂದರಲ್ಲಿ ಬಹಿರಂಗವಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ನ್ಯಾಯಮಾರ್ಗದಲ್ಲಿ ಪತ್ರಿಕೆ ನಡೆಸಲು ಸಾಧ್ಯವಿಲ್ಲವೆಂದು. ಹೌದು ಇದು ವಾಸ್ತವ. ಭಾರತದಲ್ಲಿ ಮೂರು ಅಂಗಗಳು ಶಾಸಕಾಂಗ, ಆಡಳಿತಾಂಗ, ನ್ಯಾಯಾಂಗ. ಅದರೊಂದಿಗೆ ಪತ್ರಿಕಾಂಗ ಸೇರಿಕೊಂಡಿದೆ. ಈ ನಾಲಕ್ಕು ಅಂಗಗಳು ಆಧಾರ ಕಂಬಗಳು ಪ್ರಜಾಪ್ರಭುತ್ವದಲ್ಲಿ. ಅವುಗಳಲ್ಲಿ ನ್ಯಾಯಾಂಗ ಇನ್ನು ಸ್ವಲ್ಪ ಮಟ್ಟಿಗೆ ಗೌರವ ಉಳಿಸಿಕೊಂಡಿತು. ಆದರೆ ಇತೀಚೆಗೆ ಸುಮಾರು 600ಕ್ಕು ಹೆಚ್ಚಿನ ಸುಪ್ರೀಂಕೋರ್ಟ್‍ನ ವಕೀಲರು ನ್ಯಾಯಾಂಗದ ವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಕಳವಳ…
ಲೇಖಕ: admin
ಬೆಂಗಳೂರು ಮೇ 6 NEWS DESK : ಕಳೆದ ಕೆಲ ತಿಂಗಳುಗಳಿಂದ ಏರುಮುಖವಾಗಿದ್ದ ಕಾಫಿ ದರವು ಕಳೆದ ಐದು ದಿನಗಳಿಂದ ಇಳಿಮುಖವಾಗಿರುವುದು ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಏಪ್ರಿಲ್ ಕೊನೆ ವಾರದಲ್ಲಿ ಸರ್ವಕಾಲಿಕ ದಾಖಲೆ ಏರಿಕೆ ಆಗಿ ಬೆಳೆಗಾರರಿಗೆ ಸಂತಸ ನೀಡಿದ್ದ ರೋಬಸ್ಟಾ ಕಾಫಿ ದರ ಕಳೆದ ಏಪ್ರಿಲ್ 29 ರಿಂದ ಕುಸಿತ ಕಾಣುತಿದ್ದು ಆತಂಕದ ಅಲೆ ಸೃಷ್ಟಿಸಿದೆ. ಲಂಡನ್ ಕಾಫಿ ಮಾರುಕಟ್ಟೆಯಲ್ಲಿ ರೊಬಸ್ಟಾ ಪಾರ್ಚ್ ಮೆಂಟ್ ಪ್ರತೀ ಟನ್ ಗೆ 4165 ಅಮೆರಿಕನ್ ಡಾಲರ್ ಗಳಿಗೆ ವಹಿವಾಟು ಆಗುತಿದ್ದ ಕಾಫಿ ನಾಲ್ಕು ದಿನಗಳ ಸತತ ಕುಸಿತದ ನಂತರ ಶುಕ್ರವಾರ ಸಂಜೆಯ ವೇಳೆಗೆ ಪುನಃ ಕುಸಿದು 3550 ಡಾಲರ್ ಗಳಿಗೆ ವಹಿವಾಟು ಮುಗಿಸಿದೆ. ಭಾರತೀಯ ಕಾಫಿಯು ತನ್ನ ಉತ್ಕೃಷ್ಟ ಗುಣಮಟ್ಟದ ಕಾರಣದಿಂದಾಗಿ ಮೊದಲಿನಿಂದಲೂ ಪ್ರೀಮಿಯಂ ಬೆಲೆಗೆ ಮಾರಾಟ ಆಗುತ್ತಿದೆ. ದೇಶದಲ್ಲಿ ಉತ್ಪಾದನೆಯಾಗುವ ಬಹುತೇಕ ಕಾಫಿ ರಫ್ತು ಆಗುವುದರಿಂದಾಗಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿಯೇ ದರ ನಿಗದಿ ಆಗುತ್ತದೆ. ಏರುಮುಖವಾಗಿದ್ದ ಕಾಫಿ ದರ ಕುಸಿತಕ್ಕೆ…
ಮಡಿಕೇರಿ ಮೇ 6 NEWS DESK : ಎಐಸಿಸಿ ವಿಶೇಷ ವೀಕ್ಷಕರಾಗಿ ರಾಯಚೂರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರುವ ಶಾಸಕ ಡಾ.ಮಂತರ್ ಗೌಡ ಅವರು, ಕಾಂಗ್ರೆಸ್ ಪಕ್ಷದ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಭೋಸರಾಜು, ಶಾಸಕ ಜಿ.ಹಂಪಯ್ಯ ನಾಯಕ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಕಾರ್ಯಕರ್ತರು ಹಾಜರಿದ್ದರು.
ಬೆಂಗಳೂರು NEWS DESK ಮೇ 5 : ಹಾಸನ ಜಿಲ್ಲೆಯಲ್ಲಿ ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರ ನೆರವಿಗಾಗಿ ವಿಶೇಷ ತನಿಖಾ ತಂಡವು ಸಹಾಯವಾಣಿ ಸ್ಥಾಪಿಸಿದೆ. ತನಿಖೆಯ ಸಂದರ್ಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಸಂತ್ರಸ್ತರು ಇರುವುದು ತಿಳಿದು ಬಂದಿದ್ದು, ಸಂತ್ರಸ್ತರು ಹಾಗೂ ಬಾತ್ಮೀದಾರರಿಗೆ (ಮಾಹಿತಿದಾರರಿಗೆ) ಕಾನೂನು ನೆರವು ಹಾಗೂ ರಕ್ಷಣೆ ನೀಡಲು ಸಹಾಯವಾಣಿ ತೆರೆಯಲಾಗಿದ್ದು.6360938947 ಸಹಾಯವಾಣಿ ಸಂಖ್ಯೆ ಸಂಪರ್ಕಿಸಬಹುದು.ಸಂತ್ರಸ್ತರು ಅಥವಾ ಬಾತ್ಮೀದಾರರ ಹೆಸರುಗಳನ್ನು ಗೌಪ್ಯವಾಗಿಡಲಾಗುವುದು ಎಂದು ವಿಶೇಷ ತನಿಖಾ ತಂಡದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಮೇ 5 NEWS DESK : ನಗರದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವ ಕೋಲವು ಮೇ 5 ರಿಂದ 7ರ ವರೆಗೆ ನಡೆಯಲಿದೆ. ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಮೇ 6 ರಂದು ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಳಸ ಪೂಜೆ, ನವಕ ಪಂಚಗವ್ಯ ಕಳಸಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಶ್ರೀ ಪಾಷಾಣಮೂರ್ತಿ ದೈವದ ಕಳಸ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ. ::: ನಾಗದರ್ಶನ ::: ನಾಗ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶದ ಪ್ರಯುಕ್ತ ಅಂದು ಬೆಳಿಗ್ಗೆ 8 ಗಂಟೆಯಿಂದ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭೀಷೇಕ ನಡೆಯಲಿದ್ದು, ಪೂವಾಹ್ನ 11 ಗಂಟೆಗೆ ನಾಗದರ್ಶನ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ…
ಮಡಿಕೇರಿ ಮೇ 5 NEWS DESK : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ರಥೋತ್ಸವವು ಮೇ 7 ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ದೇವಾಲಯದಲ್ಲಿ ಧ್ವಜಾರೋಹಣದ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, 6.30 ಗಂಟೆಗೆ ಗಣಪತಿ ಹೋಮ, 7.30ಕ್ಕೆ ದೇವಿಗೆ ಅಭಿಷೇಕ, ಹೂವಿನ ಅಲಂಕಾರ ನಂತರ ತೀರ್ಥ ಸ್ನಾನ ನಡೆಯಲಿದೆ. ಬೆಳಿಗ್ಗೆ 9.20ಕ್ಕೆ ಕಳಸ ಪೂಜೆ, ನೈವೇದ್ಯ ಪ್ರಸಾದ ಹಾಗೂ ಮಹಾಮಂಗಳಾತಿ ನಡೆಯಲಿದೆ. ಹಗಲು 11.45ಕ್ಕೆ ದೇವಿಯ ರಥೋತ್ಸವವು ದೇವಾಲಯದ ಆವರಣದ ಸುತ್ತಲೂ ನೆರವೇರಲಿದ್ದು, ನಂತರ ತುಲಾಭಾರ, ತಲೆಮುಡಿ ತೆಗೆಯುವುದು, ತೀರ್ಥಸ್ನಾನ, ಉರುಳು ಸೇವೆ, ಕುಂಕುಮ ಅರ್ಚನೆ ಮತ್ತು ಮಂಗಳಾರತಿ ಜರುಗಲಿದೆ. ಅಪರಾಹ್ನ 12 ಗಂಟೆಗೆ ಅನ್ನದಾನ, 12.30ಕ್ಕೆ ತಾಯಿಯ ದರ್ಶನ, ಸಂಜೆ 6 ಗಂಟೆಗೆ ದೇವಾಲಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ದೀಪಾಲಂಕಾರ ಜರುಗಲಿದ್ದು, ರಾತ್ರಿ 9 ಗಂಟೆಗೆ ಅನ್ನದಾನ ಸೇವೆ, ದೇವಿಯ ದರ್ಶನ ಹಾಗೂ…
ಸೋಮವಾರಪೇಟೆ NEWS DESK ಮೇ 5 : ಮೇ 20 ರಿಂದ ಹತ್ತು ದಿನಗಳು ಯುರೋಪ್ ಪ್ರವಾಸಕ್ಕೆ ತೆರಳಲಿರುವ ಭಾರತ ಕಿರಿಯರ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ತಂಡದಲ್ಲಿ ಜಿಲ್ಲೆಯ ಸೋಮವಾರಪೇಟೆಯ ಹಾಕಿ ಆಟಗಾರ ವಚನ್ ಅಶೋಕ್ ಮತ್ತು ಪೊನ್ನಂಪೇಟೆಯ ಬಿಪಿನ್ ರವಿ ಆಯ್ಕೆಯಾಗುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಬ್ಬರೂ ಆಟಗಾರರು ಪೊನ್ನಂಪೇಟೆಯ ಕ್ರೀಡಾಶಾಲೆಗೆ ಸೇರ್ಪಡೆಗೊಂಡು ಹತ್ತನೇ ತರಗತಿ ಮುಗಿದ ನಂತರ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಟ್ಟಿಗೆ ಭಾರತ ಕಿರಿಯರ ತಂಡಕ್ಕೆ ಆಯ್ಕೆಯಾಗುವ ಮೂಲಕ ಅಪರೂಪದ ಸ್ನೇಹಿತರೆನಿಸಿಕೊಂಡಿದ್ದಾರೆ. ಒಟ್ಟಾರೆ ಕರ್ನಾಟಕ ರಾಜ್ಯದಿಂದ 20 ಮಂದಿ ತಂಡದಲ್ಲಿ ಸ್ಥಾನ ಪಡೆದಿರುವ ಈರ್ವರು ಆಟಗಾರರು ಎಲ್ಲಾ ಪಂದ್ಯಾವಳಿಯಲ್ಲೂ ಜೊತೆಯಾಗಿ ಆಡಿರುವುದು ವಿಶೇಷ. ಮೂಲತಃ ಸೋಮವಾರಪೇಟೆಯ ಡಾಲ್ಫಿನ್ಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶೋಕ್ ಮತ್ತು ಸುಜಿನಿ ದಂಪತಿಗಳ ಪುತ್ರನಾಗಿರುವ ವಚನ್, ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಒಲವು ಮೂಡಿಸಿಕೊಂಡು ಎಂಟನೇ ತರಗತಿಗೆ ಪೊನ್ನಂಪೇಟೆಯ ಕ್ರೀಡಾಶಾಲೆಗೆ ಆಯ್ಕೆಯಾಗುತ್ತಾರೆ. ನಂತರ ಪಿಯುಸಿಗೆ ಬೆಂಗಳೂರಿನ…
ಮಡಿಕೇರಿ ಮೇ 5 NEWS DESK : ಮರ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆಯ ಎಡವಾರ ಗ್ರಾಮದ ನಿವಾಸಿ ಮಿತ್ರೇಶ್ (43) ಮೃತ ದುರ್ದೈವಿ. ಭಾನುವಾರ ಮಧ್ಯಾಹ್ನ 12.30ರ ಸಮಯದಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡ ಮಿತ್ರೇಶ್ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಘಟನೆ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಚೆಟ್ಟಳ್ಳಿ ಮೇ 5 NEWS DESK : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಶ್ವದಾಖಲೆಯ ಟೆನ್ನಿಸ್ ಆಟಗಾರ ಕೊಡಗಿನ ಮಚ್ಚಂಡ ರೋಹನ್ ಬೋಪಣ್ಣ ಅವರ ಪರವಾಗಿ ಮಾದಾಪುರದ ಅವರ ಸ್ವಗೃಹದಲ್ಲಿ ಪೋಷಕರಾದ ಮಚ್ಚಂಡ ಪ್ರಭಾ ಬೋಪಣ್ಣ ಹಾಗೂ ಮಲ್ಲಿಕಾ ಬೋಪಣ್ಣ ಅವರಿಗೆ ಮಡಿಕೇರಿ ಕೊಡವ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಸನ್ಮಾನಿಸಿ ಮಾತನಾಡಿ ಮಡಿಕೇರಿ ಕೊಡವ ಸಮಾಜದ ಸದಸ್ಯರಾಗಿರುವ ಬೋಪಣ್ಣರವರ ಮಗ ರೋಹನ್ ಬೋಪಣ್ಣ ಅವರ ಸಾಧನೆಯನ್ನು ಶ್ಲಾಘಿಸಿ ಇನ್ನಷ್ಟು ಸಾಧನೆಯನ್ನು ಮಾಡಲೆಂದು ಆಶಿಸಿದರು. ಈ ಸಂದರ್ಭ ಸಮಾಜದ ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರುಗಳಾದ ಮೂವೆರ ಜಯರಾಂ, ನಂದಿನೆರವಂಡ ರವಿಬಸಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಕಾಂಡೆರ ಲಲ್ಲುಕುಟ್ಟಪ್ಪ ಹಾಜರಿದ್ದರು.
ಮಡಿಕೇರಿ ಮೇ 5 NEWS DESK : ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ನಂತರ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. 2022 ಜೂ.8 ರಂದು 8.30 ಗಂಟೆಗೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಂಗಿ ನಿವಾಸಿ ತಂಗಪ್ಪನ್.ಕೆ.ಕೆ ಎಂಬುವವರ ಮನೆಗೆ ಅಪರಿಚಿತ ಮುಸುಕುಧಾರಿ ವ್ಯಕ್ತಿಗಳು ನುಗ್ಗಿ ತಂಗಪ್ಪನ್ ಹಾಗೂ ಪತ್ನಿಯ ಮೇಲೆ ಹಲ್ಲೆ ಮಾಡಿ, ಬೆದರಿಸಿ ಮನೆಯಲ್ಲಿದ್ದ ಅಂದಾಜು ರೂ.2ಲಕ್ಷ ಹಾಗೂ 8 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದೊಯ್ದಿದ್ದರು. ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಚನ್ನಂಗಿ ನಿವಾಸಿ ಲವಕುಮಾರ್ ಎಂ.ಕೆ (51), ಅತ್ತೂರಿನ ವಿನೋದ್ ಹೆಚ್.ಸಿ (45), ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಸಮೀಪದ ಅನೀಶ್ ಪಿ.ಎಸ್ (33), ಅತ್ತೂರಿನ ಪ್ರವೀಣ್ ಕುಮಾರ್ (46) ಹಾಗೂ ಭದ್ರಗೊಳದ ರಫೀಕ್ ಕೆ.ಈ (45) ಎಂಬುವವರನ್ನು ಬಂಧಿಸಿದ್ದಾರೆ. ಬAಧಿತ ಆರೋಪಿಗಳ ಬಳಿಯಿಂದ ರೂ.60 ಸಾವಿರ ನಗದು, 7.9 ಗ್ರಾಂ ಚಿನ್ನದ ಸರ,…






