ಮಡಿಕೇರಿ ಜೂ.12 NEWS DESK : ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಬಂಧಿಸಿದ ಪ್ರಕರಣಗಳು ವರದಿಯಾದಲ್ಲಿ ಮಾಹಿತಿ ನೀಡಲು ವಿಪತ್ತು ನಿರ್ವಹಣಾ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ-08272-221077, 08272-221099, ವಾಟ್ಸಾಪ್ ನಂ. 8550001077, ಮಡಿಕೇರಿ ತಾಲ್ಲೂಕು- ವಿಪತ್ತು ನಿರ್ವಹಣಾ ಕೇಂದ್ರ- 08272-228396, ವಿರಾಜಪೇಟೆ ತಾಲ್ಲೂಕು-ವಿಪತ್ತು ನಿರ್ವಹಣಾ ಕೇಂದ್ರ 08274-257328, ಸೋಮವಾರಪೇಟೆ ತಾಲ್ಲೂಕು-ವಿಪತ್ತು ನಿರ್ವಹಣಾ ಕೇಂದ್ರ 08276-282045, ಕುಶಾಲನಗರ ತಾಲ್ಲೂಕು- ವಿಪತ್ತು ನಿರ್ವಹಣಾ ಕೇಂದ್ರ 08276-200198 ಹಾಗೂ ಪೊನ್ನಂಪೇಟೆ ತಾಲ್ಲೂಕು- ವಿಪತ್ತು ನಿರ್ವಹಣಾ ಕೇಂದ್ರ 08274-249700 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ.
ಲೇಖಕ: admin
ಮಡಿಕೇರಿ ಜೂ.12 NEWS DESK : ಗಾಳಿಬೀಡು ಮುಖ್ಯರಸ್ತೆಯಿಂದ 1ನೇ ಮೊಣ್ಣಂಗೇರಿ, ಫೈರಿಂಗ್ ರೇಂಜ್ ವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನಗಳ ಸಂಚಾರ ಮತ್ತು ಪಾದಾಚಾರಿಗಳ ಓಡಾಟಕ್ಕೂ ಅನಾನುಕೂಲವಾಗಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ಗ್ರಾಮಸ್ಥ ಗುಡ್ಡೆಮನೆ ಉಮೇಶ್, ಗಾಳಿಬೀಡು ಗ್ರಾ.ಪಂ ವ್ಯಾಪ್ತಿಯ ಗಾಳಿಬೀಡು, 1ನೇ ಮೊಣ್ಣಂಗೇರಿ ಹಾಗೂ ಫೈರಿಂಗ್ ರೇಂಜ್ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದೆ. ವಾಹನಗಳ ಸಂಚಾರ ಅಸಾಧ್ಯವಾಗಿದ್ದು, ವಿದ್ಯಾರ್ಥಿಗಳು ನಿತ್ಯ ಕಷ್ಟ ಪಡುತ್ತಿದ್ದಾರೆ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರು ಒಗ್ಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 1ನೇ ಮೊಣ್ಣಂಗೇರಿಯಲ್ಲಿ ಬೃಹತ್ ಕಟ್ಟಡಗಳ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು, ಕಿರಿದಾದ ರಸ್ತೆಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿವೆ. ಉತ್ತಮ ರೀತಿಯಲ್ಲಿದ್ದ ಕಾಂಕ್ರಿಟ್ ರಸ್ತೆ ಇದೀಗ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಬಗ್ಗೆ ನೂತನ ರೆಸಾರ್ಟ್ ಮತ್ತು ವಿಲ್ಲಾಗಳ ಮಾಲೀಕರೊಂದಿಗೆ ಸಭೆ ನಡೆಸಿ ಗ್ರಾಮಸ್ಥರು ಚರ್ಚಿಸಿದಾಗ ರಸ್ತೆ…
ಕುಶಾಲನಗರ ಜೂ.12 NEWS DESK : ಕುಶಾಲನಗರ ಹಾಗೂ ಹಾರಂಗಿ ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ಹಂಪ್ ಅಳವಡಿಸುವಂತೆ ಆಗ್ರಹಿಸಿ ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಕುಶಾಲನಗರ ಹಾರಂಗಿ ರಸ್ತೆಯಲ್ಲಿ ವಿಪರೀತವಾಗಿ ಅಪಘಾತಗಳು ಸಂಭವಿಸುತ್ತಿವೆ. ಮೂಕಾಂಬಿಕ ಕಾಲೇಜು, ಸುಂದರನಗರ ಪ್ರಥಮ ದರ್ಜೆ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ರಸ್ತೆಯಲ್ಲಿ ನಡೆದಾಡುತ್ತಾರೆ. ವಾಹನಗಳ ಅತಿವೇಗದಿಂದ ಸಾರ್ವಜನಿಕರು ರಸ್ತೆಯಲ್ಲಿ ಭಯದಿಂದ ಸಂಚರಿಸುವಂತಾಗಿದೆ. ಕುಶಾಲನಗರ ಹಾರಂಗಿ ರಸ್ತೆಯು ಹೊಸದಾಗಿ ಡಾಂಬರೀಕರಣ ಹಾಗೂ ರಸ್ತೆ ಅಗಲೀಕರಣವಾಗಿರುವುದರಿಂದ ವಾಹನಗಳು ಅತಿವೇಗವಾಗಿ ಸಂಚರಿಸುತ್ತಿರುತ್ತವೆ. ಹದಿನೈದು ದಿನಗಳ ಹಿಂದೆ 22 ವರ್ಷದ ಯುವಕ ಅಪಘಾತದಿಂದ ಸಾವನ್ನಪ್ಪಿದ್ದಾನೆ. ರಸ್ತೆಹುಬ್ಬು ಇಲ್ಲದ ಕಾರಣ ವಾಹನಗಳ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸುತ್ತಿವೆ. ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಪಂಚಾಯಿತಿಯಿಂದ ಪತ್ರ ವ್ಯವಹಾರ ನಡೆಸಲಾಗಿದ್ದು, ಯಾವುದೇ ಕ್ರಮಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು. ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ, ಕುಶಾಲನಗರ…
ಮಡಿಕೇರಿ ಜೂ.12 NEWS DESK : ಸಮರ್ಥ ಕನ್ನಡಿಗರು ಸಂಸ್ಥಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಿಮ್ಮ ಪ್ರತಿಭೆ ನಮ್ಮ ಪ್ರೋತ್ಸಾಹ ಕಾಯ೯ಕ್ರಮ ಆಯೋಜಿಲಾಗಿದ್ದು, ಮಕ್ಕಳಿಗೆ ವೈಯಕ್ತಿಕ ನೃತ್ಯ ಹಾಗೂ ಕಥೆ ಹೇಳುವ ಆನ್ ಲೈನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ತಿಳಿಸಿದ್ದಾರೆ. ಸ್ಪಧೆ೯ಯ ವಿವರ ಇಂತಿದೆ : ಕಥೆ ಹೇಳುವ ಸ್ಪರ್ಧೆ : ನಿಯಮಗಳು : ವೈಯಕ್ತಿಕ ಸ್ಪರ್ಧೆಯಾಗಿದ್ದು, 3 ವರ್ಷದಿಂದ 6 ವರ್ಷದ ಒಳಗಿನ ಮಕ್ಕಳು ಮಾತ್ರ ಭಾಗವಹಿಸಬೇಕು, ಮೂರು ನಿಮಿಷ ಅವಧಿಯಲ್ಲಿ ಕಥೆಯ ನೀತಿಯನ್ನು ಹೇಳಬೇಕು., ಕಥೆ ಕನ್ನಡದಲ್ಲಿಯೇ ಇರಬೇಕು. ನೃತ್ಯ ಸ್ಪರ್ಧೆ : 7 ವರ್ಷದಿಂದ 12 ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದು. ಕನ್ನಡ ಭಕ್ತಿಗೀತೆಗಳಿಗೆ 3 ನಿಮಿಷದ ಅವಧಿಯೊಳಗೆ ನೃತ್ಯ ಮಾಡಬೇಕು. ಭರತನಾಟ್ಯ ಸ್ಪರ್ಧೆ : ಚಲನಚಿತ್ರದ ಗೀತೆಗೆ ಭರತನಾಟ್ಯ ಮಾಡುವಂತಿಲ್ಲ, ಭರತನಾಟ್ಯ ದ ಉಡುಗೆ – ತೊಡುಗೆ ಕಡ್ಡಾಯ., 3 ನಿಮಿಷದ ಅವಧಿ, 12 ವರ್ಷದಿಂದ 18 ವರ್ಷದ…
ಮಡಿಕೇರಿ, ಜೂ.12 NEWS DESK : ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಫೀ.ಮಾ.ಕಾರ್ಯಪ್ಪ ಕಾಲೇಜಿಗೆ ಅವಶ್ಯವಿದ್ದ ಶೌಚಾಲಯವನ್ನ ನಿರ್ಮಿಸಿ ಕೊಡಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪಿ.ಎಲ್.ಧರ್ಮ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ, ಮಿಸ್ಟಿಹಿಲ್ಸ್ ಅಧ್ಯಕ್ಷ ಪ್ರಮೋದ್ ರೈ, ಪ್ರಾಂಶುಪಾಲ ಡಾ. ಸಿ.ಬಿ.ರಾಮಚಂದ್ರ, ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಕುಲಸಚಿವ ಡಾ.ಸೀನಪ್ಪ ಶೌಚಾಲಯ ಕಟ್ಟಡ ಉದ್ಘಾಟಿಸಿದರು. ಪ್ರಾಂಶುಪಾಲ ಮೇ. ಡಾ.ರಾಘವ ಮಾತನಾಡಿ, ಮಿಸ್ಟಿಹಿಲ್ಸ್ ಕಾಲೇಜಿನ ಏಳಿಗೆಗೆ ಕೈ ಜೋಡಿಸುತ್ತಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಮೋದ್ ರೈ ಮಾತನಾಡಿ ಶೌಚಾಲಯವನ್ನು ರೋಟರಿ ಜಿಲ್ಲಾ ಗ್ರಾಂಟ್‍ನಿಂದ ಸುಮಾರು ರೂ. 1.81 ಲಕ್ಷ ವೆಚ್ಚದಲ್ಲಿ ನಿರ್ಮಿಸಿದುದಾಗಿ ಹೇಳಿದರು. ಸ್ಥಾಪಕ ಅಧ್ಯಕ್ಷ ಬಿ.ಜಿ.ಅನಂತ ಶಯನ ಮಾತನಾಡಿ ಸಂಸ್ಥೆಯು ಎರಡು ದಶಕಗಳಿಂದ ಕಾಲೇಜಿನೊಂದಿಗೆ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ನಡೆಸುತ್ತಿರುವುದಾಗಿ ವಿವರಿಸಿದರು. ಸ್ಥಳದಲ್ಲಿ ರೋಟರಿ ಉಪರಾಜ್ಯಪಾಲ ಡಿ.ಎಂ.ತಿಲಕ್, ಮಾಜಿ ಎ.ಜಿ.ರವೀಂದ್ರ ರೈ, ನಾಮಾಂಕಿತ ಅಧ್ಯಕ್ಷ ಮಧುಸೂದನ್ ಹಾಗೂ ಸದಸ್ಯರು ಹಾಜರಿದ್ದರು.
ವಿರಾಜಪೇಟೆ ಜೂ.12 NEWS DESK : ಮಂಗಳೂರು ವಿಶ್ವವಿದ್ಯಾಲದ ಬಿ.ಎಸ್ಸಿ ಪದವಿ ಪರೀಕ್ಷೆಯಲ್ಲಿ ಶೇ.97 ರಷ್ಟು ಅಂಕಗಳನ್ನು ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಆರನೇ ರ‍್ಯಾಂಕ್ ಪಡೆದ ಸೆಂಟ್ ಆನ್ಸ್ ಪದವಿ ಕಾಲೇಜಿನ ವಿದ್ಯಾರ್ಥಿನಿ ವಿನಿಷಾರನ್ನು ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಪದವಿ ಕಾಲೇಜಿನ ವ್ಯವಸ್ಥಾಪಕ ಮತ್ತು ಪಿಯು ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು, ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರುಗಳು ಮತ್ತು ವಿದ್ಯಾಸಂಸ್ಥೆಯ ವ್ಯವಸ್ಥಾಪಕ ರೆ.ಫಾ.ಜೇಮ್ಸ್ ಡೊಮಿನಿಕ್, ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಐಕ್ಯೂಎಸಿ ಸಂಚಾಲಕಿ ಹೇಮ ಮತ್ತು ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಕುಶಾಲನಗರ ಜೂ.12 NEWS DESK : ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದBRUSH UP – 2K24 ಜಿಲ್ಲಾ ಸಮಿತಿ ಹಾಗೂ ಉಪಸಮಿತಿಗಳ ನಾಯಕರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಉಪಾಧ್ಯಕ್ಷ ತಮ್ಲೀಕ್ ದಾರಿಮಿ ಉದ್ಘಾಟಿಸಿದರು. ಪ್ರಸ್ತುತ ಸಾಲಿನಲ್ಲಿ ಎಸ್.ಕೆ.ಎಸ್.ಎಸ್.ಎಫ್ ಶಾಖಾ ಸಮಿತಿಯು ರೋಗಿಗಳಿಗೆ ಸಂಗ್ರಹಿಸುವ ಸಹಾಯ ಧನದಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ ಮೊತ್ತವನ್ನು ಸಂಗ್ರಹಿಸಿದ ಸಿದ್ದಾಪುರ, ನೆಲ್ಲಿಹುದಿಕೇರಿ ಹಾಗೂ ಕೊಡ್ಲಿಪೇಟೆ ಶಾಖೆಗಳಿಗೆ ಕಾರ್ಯಕ್ರಮದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಾಧ್ಯಮ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಉನೈಸ್ ಹುಂಡಿ, ಫರ್ಹಾನ್ ನೆಲ್ಲಿಹುದಿಕೇರಿ ಹಾಗೂ ಸಿದ್ದೀಕ್ ಶನಿವಾರಸಂತೆ ಅವರನ್ನು ಅಭಿನಂದಿಸಲಾಯಿತು. ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಶುಹೈಬ್ ಫೈಝಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಉಪಾಧ್ಯಕ್ಷರಾದ ಇಕ್ಬಾಲ್ ಬಾಳಿಲ, ಪ್ರಮುಖರಾದ ಹಂಸ ಹಾಜಿ, ಅಬ್ದುಲ್ ಮಜೀದ್, ಅಬ್ದುಲ್ಲಾ ಫ್ಲೈ ಕೂರ್ಗ್ ಹಾಗೂ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉಪಸಮಿತಿಗಳ ನಾಯಕರುಗಳು ಮತ್ತು ಸದಸ್ಯರುಗಳು ಭಾಗವಹಿಸಿದ್ದರು. ಜಿಲ್ಲಾ ಪ್ರಧಾನ…
ಮಡಿಕೇರಿ ಜೂ.12 NEWS DESK : ಕೊಡಗಿನ ಸೈನಿಕ ಶಾಲೆಯಲ್ಲಿ ಎನ್‍ಸಿಸಿ ಶಿಬಿರ ನಡೆಯುತ್ತಿದ್ದು, ಶಿಬಿರಾರ್ಥಿಗಳು ಹಾರಂಗಿ ಜಲಾಶಯದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದರು. ಶಿಬಿರಾರ್ಥಿಗಳು ಜಲಾಶಯದ ಆವರಣ ಸುತ್ತ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ಅಭಿಯಾನದಲ್ಲಿ ಸುಮಾರು 168 ಎನ್‍ಸಿಸಿ ಶಿಬಿರಾರ್ಥಿಗಳು, ನಾಲ್ಕು ಎನ್‌ಸಿಸಿ ಅಧಿಕಾರಿಗಳು ಹಾಗೂ ಸೈನಿಕ ಶಾಲೆ ಕೊಡಗಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.
ನವದೆಹಲಿ ಜೂ.11 NEWS DESK : ಕೇಂದ್ರ ಸರಕಾರದ ಬೃಹತ್ ಕೈಗಾರಿಕೆ ಖಾತೆಯ ಸಚಿವರಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರ ವಹಿಸಿಕೊಂಡರು. ಭಾರತವು ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಸಂಕಲ್ಪ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸು ಮಾಡುವುದು ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಗಣನೀಯವಾಗಿ ಹೆಚ್ಚಿಸಿ ದೇಶಾದ್ಯಂತ ವಿಸ್ತೃತವಾಗಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಶ್ರಮಿಸಲಾಗುವುದು ಎಂದು ಸಚಿವ ಕುಮಾರಸ್ವಾಮಿ ಭರವಸೆ ನೀಡಿದರು. ಈ ಸಂದರ್ಭ ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವಿಧ ವಿಚಾರಗಳ ಕುರಿತು ಚರ್ಚಿಸಿದರು.
ಮಡಿಕೇರಿ ಜೂ.11 NEWS DESK : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ ಸರಕಾರದ ಸಚಿವ ಸಂಪುಟದಲ್ಲಿ ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡದೆ ಸಾಮಾಜಿಕ ನ್ಯಾಯವನ್ನು ಕಡೆಗಣಿಸಲಾಗಿದೆ ಎಂದು ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಸಂಪುಟದಲ್ಲಿ 72 ಸಚಿವರ ಪೈಕಿ ಒಂದೇ ಸಮುದಾಯದ 25 ಮಂದಿಗೆ ಸ್ಥಾನ ನೀಡಲಾಗಿದೆ. ಶೇ.2 ರಷ್ಟು ಇರುವ ಬ್ರಾಹ್ಮಣರು ಸಂಪುಟದಲ್ಲಿ ಶೇ.35 ರಷ್ಟು ಸ್ಥಾನ ಪಡೆದುಕೊಂಡಿದ್ದಾರೆ. ಬೇರೆ ಸಮುದಾಯದವರು ಬಿಜೆಪಿಗೆ ಮತದಾನ ಮಾಡಿಲ್ಲವೇ ಎಂದು ಪ್ರಶ್ನಿಸಿದರು. ಕರ್ನಾಟದಲ್ಲಿ 17 ಬಿಜೆಪಿ ಸಂಸದರಿದ್ದು, ಐವರಿಗೆ ಸಚಿವ ಸ್ಥಾನ ನೀಡಲಾಗಿದೆ. ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. ಲಿಂಗಾಯಿತ ಸಮುದಾಯದ ವಿ.ಸೋಮಣ್ಣ ಅವರಿಗೆ ರಾಜ್ಯ ಖಾತೆ ಸ್ಥಾನ ನೀಡಲಾಗಿದೆ. ನಿಜವಾಗಿಯೂ ಬಿಜೆಪಿ ಬಳಿ ಸಾಮಾಜಿಕ ನ್ಯಾಯ ಇದೆಯೇ ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಸಚಿವರಾಗಿರುವ…






