ಲೇಖಕ: admin

ಕುಶಾಲನಗರ, ಸೆ.25 NEWS DESK : ಕೂಡುಮಂಗಳೂರು ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಸುಂದರನಗರ ವಾರ್ಡ್ ನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ವೃದ್ಧರೋರ್ವರ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದೆ. ಕೂಡಲೇ ಈ ಬಗ್ಗೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆಯ ಹಾದಿಯಿಡಿಯಬೇಕಾಗುತ್ತದೆ ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಬಿ.ಶಂಶುದ್ಧೀನ್ ಎಚ್ಚರಿಸಿದ್ದಾರೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರ ನಿವಾಸಿ ಗಂಗಾಧರ್ ಎಂಬವರು ರಸ್ತೆಯಲ್ಲಿ ಸಂಚರಿಸುವ ವೇಳೆ ಬೀದಿ ನಾಯಿಗಳ ಗುಂಪು ದಾಳಿ ಮಾಡಿವೆ. ಇದರ ಪರಿಣಾಮ ಅವರು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾರ್ವಜನಿಕರು ರಸ್ತೆಯಲ್ಲಿ ತಿರುಗಾಡದಂತಾಗಿದೆ ಎಂದರು. ಇನ್ನು ಮಕ್ಕಳು ಶಾಲೆಗೆ ತೆರಳುವಾಗ ಬೀದಿ ನಾಯಿಗಳ ದಾಳಿ ಮಾಡಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಅನಾಹುತ ಸಂಭವಿಸುವವರೆಗೆ ಕಾಯದೇ ಕೂಡಲೇ ಬೀದಿ ನಾಯಿಗಳ ಹಾವಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಗ್ರಾಮಸ್ಥರೊಡನೆ ಸೇರಿ ಪಂಚಾಯಿತಿ ಮುಂಭಾಗ…

Read More

ಮಡಿಕೇರಿ, NEWS DESK ಸೆ.25: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಕೊಡಗು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಆಶೋದಯ ಸಮಿತಿಯ ಸಹಯೋಗದಲ್ಲಿ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಮಗ್ರ ಉಚಿತ ಆರೋಗ್ಯ ಶಿಬಿರ (IHC) ಆಯೋಜಿಸಲಾಯಿತು. ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಮತ್ತು ಅಗತ್ಯ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಆರೋಗ್ಯ ತಪಾಸಣೆ, ಆರೋಗ್ಯ ಮಾಹಿತಿ ಹಾಗೂ ಸಮಾಲೋಚನೆ ನೀಡಲಾಯಿತು. ಎಚ್‌ಐವಿ/ಏಡ್ಸ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ಸೋಂಕುಗಳಿಂದ ಮುನ್ನೆಚ್ಚರಿಕೆ ವಹಿಸುವ ವಿಧಾನಗಳು, ಸುರಕ್ಷತಾ ಕ್ರಮಗಳು ಹಾಗೂ ಅಗತ್ಯವಿದ್ದಾಗ ಸೂಕ್ತ ಆರೋಗ್ಯ ಸೇವೆ ಪಡೆಯುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಯಿತು. ಎಚ್‌ಐವಿ/ಏಡ್ಸ್ ಕುರಿತು ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು, ಸೋಂಕಿತರೊಂದಿಗೆ…

Read More

ಬೆಂಗಳೂರು, NEWS DESK ಸೆ.25: ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್‌ಗಳ (RPC ಮತ್ತು KK) ನೇಮಕಾತಿಗೆ ಸಂಬಂಧಿಸಿದ ದೇಹದಾರ್ಢ್ಯ ಪರೀಕ್ಷೆ (PST) ಹಾಗೂ ಸಹಿಷ್ಣುತಾ ಪರೀಕ್ಷೆ (ET) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 3,991 ಹುದ್ದೆಗಳಿಗೆ 19,396 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಇದರಲ್ಲಿ ಉಳಿಕೆ ಮೂಲ ವೃಂದ (RPC)ದ 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ (KK) ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ಅರ್ಹರಾಗಿದ್ದಾರೆ. RPC ವೃಂದದ ಪರೀಕ್ಷಾ ವೇಳಾಪಟ್ಟಿ: ಬೆಂಗಳೂರು ನಗರ: 2,015 ಹುದ್ದೆಗಳು, 9,887 ಅಭ್ಯರ್ಥಿಗಳು — ಸೆ.28ರಿಂದ ಅ.5ರವರೆಗೆ. ಪರೀಕ್ಷಾ ಕೇಂದ್ರಗಳು ಚಾಮರಾಜಪೇಟೆ, ಆಡುಗೋಡಿ ಹಾಗೂ ತನಿಷಂದ್ರ. ಕೇಂದ್ರ ವಲಯ: 200 ಹುದ್ದೆಗಳು, 946 ಅಭ್ಯರ್ಥಿಗಳು — ಸೆ.28ರಿಂದ ಅ.3ರವರೆಗೆ. ಬೆಂಗಳೂರು, 3ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನ, ಕೊರಮಂಗಲ. ದಕ್ಷಿಣ ವಲಯ: 395 ಹುದ್ದೆಗಳು, 1,891 ಅಭ್ಯರ್ಥಿಗಳು — ಸೆ.28ರಿಂದ ಅ.5ರವರೆಗೆ. ಮೈಸೂರು CAR ಪರೇಡ್ ಮೈದಾನ.…

Read More

ಮಡಿಕೇರಿ NEWS DESK ಸೆ.25 : ಮಡಿಕೇರಿ ನಗರ ಯುವ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭ ಯುವ ಕಾಂಗ್ರೆಸ್ ನಗರಾಧ್ಯಕ್ಷ ಅರ್ಜುನ್ ಟಿ.ಆರ್. ಅವರ ನೇತೃತ್ವದಲ್ಲಿ ನಡೆಯಿತು. ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾಗಿ ಯಶವಂತ್, ನಿತಿನ್ ಥಾಮಸ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ರತಾಪ್, ಕಿಶನ್, ಗಗನ್ ಹಾಗೂ ಮಹೇಶ್ ಅಧಿಕಾರ ಸ್ವೀಕರಿಸಿದರು. ಅರ್ಜುನ್ ಟಿ.ಆರ್. ಮಾತನಾಡಿ ಯುವ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸಲು ಎಲ್ಲರೂ ಕೈಜೋಡಿಸಬೇಕು, ಯುವ ಸಮೂಹವನ್ನು ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಹುಲ್ ಮಾರ್ಷಲ್, ಅನ್ಫಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಮ್, ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೊಳಿ, ನಗರ ಯುವ ಕಾಂಗ್ರೆಸ್ ಉಪಾಧ್ಯಕ್ಷ…

Read More

ವಿರಾಜಪೇಟೆ, NEWS DESK ಸೆ.25: ಅರಣ್ಯದಂಚಿನ ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವುದು ಹಾಗೂ ಅರಣ್ಯ ಇಲಾಖೆಯ ಸೇವಾ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ವತಿಯಿಂದ ವಿರಾಜಪೇಟೆ ವಲಯ ಅರಣ್ಯ ಇಲಾಖೆಗೆ ನೂತನ ಮಹೇಂದ್ರ ಬೊಲೆರೋ ವಾಹನವನ್ನು ಒದಗಿಸಲಾಗಿದೆ. ಕೊಡಗಿಗೆ ಅರಣ್ಯ ಸಚಿವರು ಆಗಮಿಸಿದ್ದ ಸಂದರ್ಭದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅರಣ್ಯ ಇಲಾಖೆಗೆ ಉತ್ತಮ ವಾಹನ ಸೌಲಭ್ಯ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸರ್ಕಾರ ಈಗಾಗಲೇ ಕ್ಷೇತ್ರದ ಕೆಲವು ಭಾಗಗಳಿಗೆ ವಾಹನ ಸೌಲಭ್ಯ ಒದಗಿಸಿದ್ದು, ಇದೀಗ ಮತ್ತೊಂದು ನೂತನ ವಾಹನವನ್ನು ವಿರಾಜಪೇಟೆ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ನೂತನ ವಾಹನವನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು…

Read More

ಮಡಿಕೇರಿ, NEWS DESK ಸೆ.25: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ 2025-26ನೇ ಸಾಲಿನ 25ನೇ ವಾರ್ಷಿಕ ಮಹಾಸಭೆ ನಗರದ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಚೇತನ ಚಿಲುಮೆ ಬಾಲಭವನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2006-07ನೇ ಸಾಲಿನಿಂದ ನಿರಂತರವಾಗಿ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದು, 2025-26ನೇ ಸಾಲಿನಲ್ಲಿ ರೂ.29.33 ಲಕ್ಷ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಮಹಾಸಭೆಯಲ್ಲಿ ಸದಸ್ಯರಿಗೆ ಶೇ.10ರಷ್ಟು ಡಿವಿಡೆಂಡ್ ಘೋಷಿಸಲಾಯಿತು. 2002ರ ಡಿಸೆಂಬರ್ 22ರಂದು ಆರಂಭಗೊಂಡಿರುವ ಸಂಘವು ಕಳೆದ 24 ವರ್ಷಗಳಿಂದ ಸ್ವಂತ ಬಂಡವಾಳದ ಮೂಲಕ ವ್ಯವಹಾರ ನಡೆಸುತ್ತಿದೆ. 2026ರ ಮಾರ್ಚ್ 31ರ ವೇಳೆಗೆ ಸಂಘವು ಒಟ್ಟು 1,912 ಸದಸ್ಯರನ್ನು ಹೊಂದಿದ್ದು, ಇವರ ಪೈಕಿ 1,039 ಸದಸ್ಯರು ಪೂರ್ಣ ಮುಖಬೆಲೆಯ ಷೇರು ಮೊತ್ತ ಪಾವತಿಸಿದ್ದಾರೆ. ಉಳಿದ 873 ಸದಸ್ಯರ ಪಾಲುಗಳು ಅಪೂರ್ಣವಾಗಿವೆ. ಸದಸ್ಯರಿಂದ ಒಟ್ಟು ರೂ.98.52 ಲಕ್ಷ ಷೇರು ಬಂಡವಾಳ ಸಂಗ್ರಹವಾಗಿದೆ. ಸಂಘದಲ್ಲಿ ಅಡಮಾನ ಸಾಲ, ಜಾಮೀನು ಸಾಲ,…

Read More

ಮಡಿಕೇರಿ, NEWS DESK ಸೆ. 25: ಬದಲಾಗುತ್ತಿರುವ ಕಾನೂನುಗಳನ್ನು ಗಮನದಲ್ಲಿರಿಸಿಕೊಂಡು ಪ್ರತಿಯೊಬ್ಬ ಔಷಧಿ ವ್ಯಾಪಾರಿಯೂ ಪಾರದರ್ಶಕವಾಗಿ ವ್ಯವಹರಿಸುವುದರ ಜೊತೆಗೆ ಗ್ರಾಹಕರಿಗೆ ಸೇವಾ ಮನೋಭಾವದಿಂದ ಔಷಧಿಗಳನ್ನು ನೀಡಬೇಕು ಎಂದು ಕೊಡಗು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಯ ಅಂಕಿತ ಅಧಿಕಾರಿ ಡಾ. ಅನಿಲ್ ಧಾವನ್ ಕರೆ ನೀಡಿದರು. ನಗರದ ಫಾರ್ಮಾ ಭವನದಲ್ಲಿ ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಔಷಧಿ ತಜ್ಞರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಾಪಾರಿಯೂ ಆಹಾರ ಪರವಾನಗಿ ಪಡೆಯುವುದು ಕಡ್ಡಾಯ. ಉತ್ತಮ ಗುಣಮಟ್ಟದ ಆಹಾರ ಮತ್ತು ಔಷಧಿಗಳನ್ನು ಗ್ರಾಹಕರಿಗೆ ಒದಗಿಸುವುದು ವ್ಯಾಪಾರಸ್ಥರ ಆದ್ಯತೆಯಾಗಬೇಕು. ಈ ಸಂಬಂಧ ಯಾವುದೇ ದೂರುಗಳು ಬಂದಲ್ಲಿ ಅಂತಹ ವ್ಯಾಪಾರಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಅನಿಲ್ ಧಾವನ್ ಎಚ್ಚರಿಸಿದರು. ಕೊಡಗು ಔಷಧಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಅಂಬೆಕಲ್ಲು ಜೀವನ್ ಕುಶಾಲಪ್ಪ ಮಾತನಾಡಿ, ಸಮಾಜಕ್ಕೆ ಔಷಧಿ ವ್ಯಾಪಾರಸ್ಥರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಗೌರವಿಸುವ ದಿನವನ್ನು…

Read More

ಮಡಿಕೇರಿ, NEWS DESK ಸೆ.25 –   ಮೂರು  ವಿಭಿನ್ನ ಯೋಗಾಸನಗಳ ಮೂಲಕ  ಮದೆನಾಡಿನ   ವಿದ್ಯಾಥಿ೯ನಿ ಸಿಂಚನಾ  ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್ಸ್೯ ಮಾಡಿದ್ದಲ್ಲದೇ, ಈ ಮೂಲಕ  ಯೋಗಪ್ರದಶ೯ನದಲ್ಲಿ  18 ಅಂತರರಾಷ್ಟ್ರೀಯ ದಾಖಲೆಗಳನ್ನು   ಮಾಡಿರುವ ಕೀತಿ೯ಗೆ ಪಾತ್ರಳಾದಳು. ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಲಾಮಂದಿರದಲ್ಲಿ ಜರುಗಿದ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್೯ಗಾಗಿನ ಯೋಗ ಪ್ರದಶ೯ನದಲ್ಲಿ ಮದೆನಾಡಿನ ಬಿಜಿಎಸ್ ಶಾಲೆಯ 7 ನೇ ತರಗತಿ ವಿದ್ಯಾಥಿ೯ನಿ ಸಿಂಚನಾ ಮೂರು ಯೋಗಪ್ರದಶ೯ನಗಳನ್ನು ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್ಸ್೯ನಲ್ಲಿ ಸ್ಥಾನ ಪಡೆದಳು. ಡಿಂಬಾಸನದಲ್ಲಿ 5 ನಿಮಿಷ ಸತತವಾಗಿ ಚಲಿಸುವುದು, ಧನುರಾಸನ ಭಂಗಿಯಲ್ಲಿ ತಿರುಗುವುದು ಮತ್ತು 1 ನಿಮಿಷದ ಕಾಲ ಸುತ್ತ ಡಿಂಬಾಸನವನ್ನು ಮಾಡುವ ಮೂಲಕ ಮೂರು ವಿಶ್ವದಾಖಲೆಗಳನ್ನು ಏಕವೇದಿಕೆಯಲ್ಲಿ ಮಾಡಿದ ಹಿರಿಮೆಗೆ ಸಿಂಚನಾ ಪಾತ್ರಳಾದಳು. ಈ ಮೂರು  ದಾಖಲೆಗಳೊಂದಿಗೆ ಸಿಂಚನಾ ಈವರೆಗೆ 18 ಅಂತರರಾಷ್ಟೀಯ ದಾಖಲೆಗಳನ್ನು ಯೋಗದಲ್ಲಿ ಮಾಡಿರುವ ಸಾಧ೯ನೆಗೆ ಪಾತ್ರಳಾದಳು. ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾಡ್ಸ್೯ನ…

Read More

ಮಡಿಕೇರಿ NEWS DESK ಸೆ.25 : ಕರ್ನಾಟಕ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ, ಬೆಂಗಳೂರು ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಭರತ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಕೆ.ಎಸ್.ಭರತ್ ಕುಮಾರ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇವರೊಂದಿಗೆ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಉಷಾರಾಣಿ ಹಾಗೂ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ವಿ.ಭವಾನಿ ಅವರು ಕೂಡ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಭಿನಂದಿಸಿದರು. ಈ ಮೂವರನ್ನು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳ ಹುದ್ದೆಗಳಿಗೆ ಪರಿಗಣಿಸುವಂತೆ ಸೆ.10ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. *ಕೊಡಗಿನ ಭರತ್ ಕುಮಾರ್* ಬೆಂಗಳೂರು ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಸ್.ಭರತ್ ಕುಮಾರ್ ಅವರು ವಿರಾಜಪೇಟೆಯವರಾಗಿದ್ದು, ಬೋರೇಗೌಡ ಕಾಂಪ್ಲೆಕ್ಸ್ ಮಾಲೀಕರು, ಜಿಲ್ಲಾ ಪರಿಷತ್…

Read More

ವಿರಾಜಪೇಟೆ, NEWS DESK ಸೆ.25: ಮುಂಬರುವ 2027ನೇ ಸಾಲಿನಲ್ಲಿ ಆಯೋಜಿಸಲಾಗುತ್ತಿರುವ ಅಜ್ಜಿಕುಟ್ಟಿರ ಹಾಕಿ ನಮ್ಮೆ–2027ರ ಪೂರ್ವಭಾವಿ ಸಭೆ ವಿರಾಜಪೇಟೆಯಲ್ಲಿ ನಡೆಯಿತು. ಕೊಡವ ಕುಟುಂಬಗಳ ಪ್ರತಿಷ್ಠಿತ ಹಾಕಿ ಪಂದ್ಯಾವಳಿಗಳಲ್ಲಿ ಒಂದಾಗಿರುವ ಹಾಕಿ ನಮ್ಮೆಯನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ. 2027ನೇ ಸಾಲಿನ ಪಂದ್ಯಾವಳಿಯ ಪ್ರಾಯೋಜಕತ್ವವನ್ನು ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಮನೆತನವಾದ ಅಜ್ಜಿಕುಟ್ಟಿರ ಕುಟುಂಬ ವಹಿಸಿರುವುದು ವಿಶೇಷವಾಗಿದೆ. ಶಾಸಕರ ವಿರಾಜಪೇಟೆಯ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಾಕಿ ಪಂದ್ಯಾವಳಿಯ ರೂಪುರೇಷೆ, ವಿವಿಧ ಕಾರ್ಯಕ್ರಮಗಳ ಆಯೋಜನೆ ಹಾಗೂ ಪಂದ್ಯಾವಳಿಯ ಯಶಸ್ವಿ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಮೈದಾನ ಸಜ್ಜುಗೊಳಿಸುವಿಕೆ, ವಿವಿಧ ಸಮಿತಿಗಳ ರಚನೆ, ಸಮಿತಿಗಳ ಜವಾಬ್ದಾರಿ ಹಾಗೂ ಉಸ್ತುವಾರಿಗಳ ಆಯ್ಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಿ, ಅಗತ್ಯ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ನರೇನ್ ಕಾರ್ಯಪ್ಪ, ಅಜ್ಜಿಕುಟ್ಟಿರ ಕುಟುಂಬದ ಸರ್ವ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More