ಲೇಖಕ: admin

ಮಡಿಕೇರಿ, NEWS DESK ಸೆ. 25: ಕೊಡಗಿನ ಭೂಮಿ, ಸಂಸ್ಕೃತಿ ಹಾಗೂ ಸಮುದಾಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಸಂಕಲ್ಪದೊಂದಿಗೆ ‘ಕೊಡಗು ಶಕ್ತಿ ನಡಪು’ ಅ. 3ರಂದು ನಡೆಯಲಿದೆ ಎಂದು ಯಾತ್ರೆಯ ಆಯೋಜಕ ಬಲ್ಯಾಟಂಡ ಪೂಣಚ್ಚ ಮಾಚಯ್ಯ ತಿಳಿಸಿದ್ದಾರೆ. ಕಾವೇರಿ ಮಾತೆಯ ಉಗಮಸ್ಥಳ ತಲಕಾವೇರಿಯಿಂದ ಬೆಳಿಗ್ಗೆ 6.30ಕ್ಕೆ ಆರಂಭವಾಗುವ ಯಾತ್ರೆ ಪೇರೂರು ಇಗ್ಗುತ್ತಪ್ಪ ಹಾಗೂ ನೆಲಜಿ ಇಗ್ಗುತ್ತಪ್ಪ ದೇವಾಲಯಗಳ ಮೂಲಕ ಸಾಗಿಬಂದು, ಮಳೆ, ಬೆಳೆ ಹಾಗೂ ಸುಗ್ಗಿಯೊಂದಿಗೆ ಆಳವಾದ ಸಂಬಂಧ ಹೊಂದಿರುವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಂಜೆ 6.30ಕ್ಕೆ ಅಂತ್ಯಗೊಳ್ಳಲಿದೆ. ಅಖಿಲ ಕೊಡವ ಸಮಾಜ, ಇಗ್ಗುತ್ತಪ್ಪ ದೇವಾಲಯ ಸಮಿತಿಗಳು, ಮಲ್ಮ ಬೆಟ್ಟ ಹೋರಾಟ ಸಮಿತಿಗಳು ಹಾಗೂ ಸ್ಥಳೀಯ ಗ್ರಾಮಸ್ಥರ ಸಹಕಾರದಲ್ಲಿ ಯಾತ್ರೆ ನಡೆಯಲಿದೆ. ಮಾರ್ಗದ ಆಯ್ದ ಭಾಗಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಲಾಗಿದ್ದು, ಕೆಲವು ಸಂಪರ್ಕ ಮಾರ್ಗಗಳಲ್ಲಿ ವಾಹನದ ನೆರವು ಪಡೆಯಲಾಗುತ್ತದೆ. ಒಟ್ಟು ಸುಮಾರು 40 ಕಿ.ಮೀ. ದೂರವನ್ನು ಒಂದೇ ದಿನದಲ್ಲಿ ಕ್ರಮಿಸುವ ಉದ್ದೇಶ ಹೊಂದಲಾಗಿದೆ. ಸಂರಕ್ಷಣೆಗೆ ಸಂಕಲ್ಪ ಪಶ್ಚಿಮಘಟ್ಟಗಳ ಪ್ರಮುಖ ಭಾಗವಾಗಿರುವ ಕೊಡಗು ಜೀವವೈವಿಧ್ಯ…

Read More

ಮಡಿಕೇರಿ ಸೆ.24 NEWS DESK : ಐಸಿಎಆರ್-ಐಐಎಚ್‍ಆರ್ ನ ಬೆಂಗಳೂರಿನ ಬೆಳೆ ಸಂರಕ್ಷಣಾ ವಿಭಾಗದ ‘ಅಣಬೆ ಪ್ರಯೋಗಾಲಯ’ದ ಸಹಯೋಗದೊಂದಿಗೆ, ಚೆಟ್ಟಳ್ಳಿಯಲ್ಲಿರುವ ಐಸಿಎಆರ್-ಐಐಎಚ್‍ಆರ್‍ನ ‘ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ’ವು(ಸಿಎಚ್‍ಇಎಸ್) 2026ರ ಸೆಪ್ಟೆಂಬರ್, 25 ರಂದು ಚೆಟ್ಟಳ್ಳಿಯ ಐಸಿಎಆರ್-ಸಿಎಚ್‍ಇಎಸ್ ಸಂಸ್ಥೆಯಲ್ಲಿ “ಅಣಬೆ ಕೃಷಿ ಕುರಿತಾದ ಪ್ರದರ್ಶನ ಮತ್ತು ತರಬೇತಿ ಕಾರ್ಯಕ್ರಮ ನಡೆಯಲಿದೆ. ಭಾರತ ಸರ್ಕಾರದ ‘ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ಯ (ಆರ್‍ಕೆವಿವೈ) ಆರ್ಥಿಕ ನೆರವಿನೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು, ರೈತರು, ವಿದ್ಯಾರ್ಥಿಗಳು, ಉದ್ಯಮಿಗಳು ಮತ್ತು ಇತರ ಸಂಬಂಧಿತರ ನಡುವೆ ವೈಜ್ಞಾನಿಕ ಅಣಬೆ ಕೃಷಿಯ ಕುರಿತು ಜಾಗೃತಿ ಮೂಡಿಸುವ ಮತ್ತು ಅದನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮದಲ್ಲಿ ಅಣಬೆ ವೈವಿಧ್ಯತೆಯ ಪ್ರದರ್ಶನ, ತಾಂತ್ರಿಕ ತರಬೇತಿ ಅವಧಿಗಳು ಹಾಗೂ ‘ಅತ್ಯುತ್ತಮ ಅಣಬೆ ಬೆಳವಣಿಗೆ ಚೀಲ’ಮತ್ತು ‘ಅತ್ಯುತ್ತಮ ಮೌಲ್ಯವರ್ಧಿತ ಅಣಬೆ ಉತ್ಪನ್ನ’ಕ್ಕಾಗಿ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಮಡಿಕೇರಿ ಸೆ.24 NEWS DESK : ಕಾರ್ಮಿಕ ಕಾಯ್ದೆಗಳ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿ ಯತ್ನಟ್ಟಿ ಮತ್ತು ತಂಡದವರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು. ಪೊನ್ನಂಪೇಟೆ ತಾಲ್ಲೂಕಿನ ಕೊಳತೋಡು, ಬೈಗೋಡು, ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡಿ ಬಾಲ್ಯವ್ಯವಸ್ಥೆ ಹಾಗೂ ಕಿಶೋರಾವಸ್ಥೆ ಬಗ್ಗೆ ಕಾರ್ಮಿಕ ಕಾಯ್ದೆಯಡಿ ವಿವಿಧ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಯಿತು. ಹಾಗೆಯೇ ತುರ್ತು ಸಹಾಯವಾಣಿ 112, ಮಕ್ಕಳ ಸಹಾಯವಾಣಿ 1098, ಮಹಿಳೆಯರ ಸಹಾಯವಾಣಿ 181, ಸೈಬರ್ ಸಹಾಯವಾಣಿ 1930, ಜೀತ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ ನಿಯಂತ್ರಣ ಕಾಯ್ದೆ, ಸೈಬರ್ ಅಪರಾಧಗಳ ನಿಯಂತ್ರಣ ಮತ್ತು ಮಾದಕ ದ್ರವ್ಯಗಳ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಇಲಾಖಾ ಅಧಿಕಾರಿ ಎಂ.ಎಂ.ಯತ್ನಟ್ಟಿ ಅವರು ಮಾಹಿತಿ ನೀಡಿದರು. ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಸಿ.ಮಾದಪ್ಪ, ಪೊಲೀಸ್ ಇಲಾಖೆಯ ಸಹಾಯಕ ಉಪ ನಿರೀಕ್ಷಕರಾದ…

Read More

ಮಡಿಕೇರಿ ಸೆ.24 NEWS DESK : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯುಷ್ ಹಾಗೂ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಕರಿಕೆ ಗ್ರಾಮದಲ್ಲಿ ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮದ ಫಲಾನುಭವಿಗಳಿಗೆ ಪೋಷಣ್ ವಾಟಿಕಗಳಲ್ಲಿ ಬೆಳೆಯುವ ಉತ್ಪನ್ನಗಳು ಹಾಗೂ ಸ್ಥಳೀಯವಾಗಿ ದೊರೆಯುವ ಋತುಮಾನಿಕ ಆಹಾರ ಪ್ರದರ್ಶನ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಪ್ರಸನ್ನ ಕುಮಾರ್ ದಿನನಿತ್ಯದ ಆಹಾರದಲ್ಲಿ ಮತ್ತು ಚಿಕ್ಕ ಮಕ್ಕಳ ಪೂರಕ ಆಹಾರದಲ್ಲಿ ನಿಯಮತವಾಗಿ ಬಳಸುವಂತೆ ಉತ್ತೇಜಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು. ಶಿಶು ಹಾಗೂ ತಾಯಿ ಮರಣ ತಡೆಯುವುದು, ಜತೆಗೆ ಅಪೌಷ್ಟಿಕತೆ ಹೋಗಲಾಡಿಸಲು ಮುಂದಾಗಬೇಕಿದೆ. ಆ ದಿಸೆಯಲ್ಲಿ ಕರಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು. ಕರಿಕೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಬಾಲಚಂದ್ರ ನಾಯರ್ ಅವರು ಮಾತನಾಡಿ ಉತ್ತಮ ಆಲೋಚನೆ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಉತ್ತಮ ಕರ್ತವ್ಯ ನಿಷ್ಠೆ ಅಗತ್ಯ. ಆ ನಿಟ್ಟಿನಲ್ಲಿ ಕೊರೋನಾ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ…

Read More

ಬೆಂಗಳೂರು, ಸೆ.24 NEWS DESK : ಬೆಂಗಳೂರು ಕೊಡಗು ಗೌಡ ಸಮಾಜ ವತಿಯಿಂದ ಅ.4ರಂದು ಬೆಂಗಳೂರಿನ ಉಳ್ಳಾಲಿನಲ್ಲಿರುವ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಆಯೋಜಿಸಿರುವ ‘ಕೈಲ್ ಮುಹೂರ್ತ ಜಂಬರ–2026’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರನ್ನು ಆಹ್ವಾನಿಸಲಾಯಿತು. ಕೊಡಗು ಗೌಡ ಸಮಾಜದ ಪದಾಧಿಕಾರಿಗಳು ವಿಧಾನಸೌಧದಲ್ಲಿ ಶಾಸಕ ಪೊನ್ನಣ್ಣ ಅವರನ್ನು ಭೇಟಿ ಮಾಡಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ನೀಡಿ, ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ಕೊಡಗು ಗೌಡ ಸಮಾಜ  ಅಧ್ಯಕ್ಷ ವಿಂಗ್ ಕಮಾಂಡರ್ ಅಯ್ಯಟೀರ ಮನೋಜ್ ಕುಮಾರ್, ಉಪಾಧ್ಯಕ್ಷ ಕುದುಪಜೆ ಮೋಹನ್, ಗೌರವ ಕಾರ್ಯದರ್ಶಿ ಬೇಕಲ್ ಬಿಪಿನ್, ಜಂಟಿ ಕಾರ್ಯದರ್ಶಿ ಗೋವಿಂದಮ್ಮನ ಪ್ರವೀಣ್ ಕುಮಾರ್, ಸದಸ್ಯ ಕೆ.ಆರ್. ದಿನೇಶ್ ಹಾಗೂ ಕಾನೂನು ಸಲಹೆಗಾರ ನಿಡ್ಡೆಮಲೆ ಪ್ರಕಾಶ್ ಉಪಸ್ಥಿತರಿದ್ದರು.

Read More

ಮಡಿಕೇರಿ, NEWS DESK ಸೆ.24: ಸಂಶೋಧನಾ ಕ್ಷೇತ್ರದಲ್ಲಿ ಕೊಡಗಿನ ಹೆಮ್ಮೆಗೆ ಮತ್ತೊಂದು ಗರಿ ಮೂಡಿದೆ. ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜೆ.ಜಿ. ಮಂಜುನಾಥ್ ಅವರು ವಿಶ್ವದ ಪ್ರತಿಷ್ಠಿತ ಎಲೆಕ್ಟ್ರೋಕೆಮಿಕಲ್ ಸೊಸೈಟಿಯ ‘ಟಾಪ್ ECS ರಿವ್ಯೂವರ್ 2025–26’ ಗೌರವಕ್ಕೆ ಆಯ್ಕೆಯಾಗಿದ್ದಾರೆ. ವೈಜ್ಞಾನಿಕ ಸಂಶೋಧನಾ ಲೇಖನಗಳ ಪರಿಶೀಲನೆ, ಅವುಗಳ ಗುಣಮಟ್ಟ ಹಾಗೂ ಸಂಶೋಧನಾ ಪ್ರಕಟಣೆಗಳ ವಿಶ್ವಾಸಾರ್ಹತೆಯನ್ನು ಕಾಪಾಡುವಲ್ಲಿ ಡಾ. ಮಂಜುನಾಥ್ ಅವರು ಸಲ್ಲಿಸಿರುವ ಅತ್ಯುತ್ತಮ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಗೌರವಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. 2026ರ ECS ಪೀರ್ ರಿವ್ಯೂ ವೀಕ್ ಅಂಗವಾಗಿ ಸೆಪ್ಟೆಂಬರ್ 14ರಂದು ಸೊಸೈಟಿಯ ವತಿಯಿಂದ ಡಾ. ಮಂಜುನಾಥ್ ಅವರಿಗೆ ಅಭಿನಂದನಾ ಪತ್ರವನ್ನು ಕಳುಹಿಸಲಾಗಿದ್ದು, ಅವರ ಪರಿಶ್ರಮ, ಸಮಯೋಚಿತ ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಪ್ರಶಂಸಿಸಲಾಗಿದೆ. ಈ ಬಾರಿ 2025–26ನೇ ಸಾಲಿನ ಟಾಪ್ ECS ರಿವ್ಯೂವರ್‌ಗಳಾಗಿ ಒಟ್ಟು 38 ಸಂಶೋಧಕರನ್ನು ಗುರುತಿಸಲಾಗಿದೆ. ಈ ಪೈಕಿ ಆರ್ಗ್ಯಾನಿಕ್ ಮತ್ತು ಬಯೋಎಲೆಕ್ಟ್ರೋಕೆಮಿಸ್ಟ್ರಿ ವಿಭಾಗದಿಂದ…

Read More

ವಿರಾಜಪೇಟೆ, NEWS DESK ಸೆ.24: ಸ್ವಯಂ ಸೇವೆಯು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳಿಗೆ ಸಮಾನತೆ, ನೈರ್ಮಲ್ಯ, ನಾಯಕತ್ವ ಗುಣ, ಶಿಸ್ತು ಹಾಗೂ ಸಮಯದ ಸದ್ಬಳಕೆಯಂತಹ ವಿಚಾರಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಎನ್‌ಎಸ್‌ಎಸ್‌ ಹಾಗೂ ಯೂತ್ ರೆಡ್ ಕ್ರಾಸ್ ಉತ್ತಮ ವೇದಿಕೆಯಾಗಿದೆ ಎಂದು ಕೊಡಗು ಎಜುಕೇಶನಲ್ ಮತ್ತು ಸೋಶಿಯಲ್ ಟ್ರಸ್ಟ್‌ನ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಬುಧವಾರ ನಡೆದ ಎನ್‌ಎಸ್‌ಎಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಯಕರಿಗೆ ಬ್ಯಾಡ್ಜ್ ವಿತರಿಸಿ ಹಾಗೂ ಸ್ವಯಂಸೇವಕರಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು. ಎನ್‌ಎಸ್‌ಎಸ್ ಘಟಕವನ್ನು ಮಹಾತ್ಮ ಗಾಂಧೀಜಿಯವರ ನೂರನೇ ಜನ್ಮದಿನದ ಸವಿನೆನಪಿಗಾಗಿ ಆರಂಭಿಸಲಾಗಿದ್ದು, ಇಂದು ಹೆಮ್ಮರವಾಗಿ ಬೆಳೆದು ದೇಶದಾದ್ಯಂತ ಕಾಲೇಜುಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ‘ನನಗಲ್ಲ, ನಿನಗೆ’ ಎಂಬ ಧ್ಯೇಯವಾಕ್ಯದಂತೆ ಸಮಾಜದಲ್ಲಿ ಸರ್ವರೂ ಸ್ವಾರ್ಥವನ್ನು ತೊರೆದು ಸಮಾನತೆ, ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದಿಂದ…

Read More

ವಿರಾಜಪೇಟೆ, NEWS DESK ಸೆ.24: ವಿಪತ್ತು ನಿರ್ವಹಣೆಯ ಕೌಶಲ್ಯ, ಶಿಕ್ಷಣ ಹಾಗೂ ತರಬೇತಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ ಎಂದು ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಹೇಳಿದರು. ಸೆಂಟ್ ಆನ್ಸ್ ಪದವಿ ಕಾಲೇಜಿನ ಐಕ್ಯುಎಸಿ, ಎನ್‌ಎಸ್‌ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಎನ್‌ಎಸ್‌ಎಸ್ ದಿನಾಚರಣೆ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಪತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಾದ್ಯಂತ ಎನ್‌ಡಿಆರ್‌ಎಫ್ ತಂಡವು ವಿಪತ್ತುಗಳು ಸಂಭವಿಸಿದ ಸಂದರ್ಭದಲ್ಲಿ ಜನರ ಜೀವ ರಕ್ಷಣೆ ಸೇರಿದಂತೆ ವಿವಿಧ ರಕ್ಷಣಾ ಕಾರ್ಯಗಳಲ್ಲಿ ಸಮಯಪ್ರಜ್ಞೆಯಿಂದ ಸೇವೆ ಸಲ್ಲಿಸುತ್ತಿದೆ. ವಿದ್ಯಾರ್ಥಿಗಳು ಮೊದಲಿನಿಂದಲೇ ಇಂತಹ ತರಬೇತಿಗಳನ್ನು ಪಡೆಯುವುದರಿಂದ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್‌ಡಿಆರ್‌ಎಫ್ ತಂಡವು ಕಾಲೇಜು ಮಟ್ಟದಲ್ಲಿಯೂ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎನ್‌ಡಿಆರ್‌ಎಫ್‌ನ ಇನ್ಸ್‌ಪೆಕ್ಟರ್ ಹಾಗೂ ಟೀಮ್ ಕಮಾಂಡರ್…

Read More

ಮಡಿಕೇರಿ NEWS DESK ಸೆ.24: ಬಹುಸಂಖ್ಯಾತರ ಪ್ರದೇಶದಲ್ಲಿ ಸಂಯೋಜಿತ ಭೂಪ್ರದೇಶದಲ್ಲಿ ವಾಸಿಸುವ ಸಣ್ಣ ಆದಿಮಸಂಜಾತ ಸಮುದಾಯಗಳಿಗೆ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ಹಕ್ಕು ಇದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವಲ್ಯಾಂಡ್ ಸ್ವಾಯತ್ತತೆ ಕೊಡವರ ಕಾನೂನುಬದ್ಧ, ಸಂವಿಧಾನಾತ್ಮಕ ಮತ್ತು ಮಾನವ ಹಕ್ಕಾಗಿದ್ದು, ಕೊಡವರು ಯಾರ ದಯೆಯನ್ನೂ ಕೇಳುತ್ತಿಲ್ಲ  ಎಂದು ಅವರು ಹೇಳಿದ್ದಾರೆ. ರಾಜ್ಯ ಸ್ಥಾನಮಾನಕ್ಕಾಗಿ ಜನಮತ ಸಂಗ್ರಹದಲ್ಲಿ ಬಹುಮತದ ಬೆಂಬಲ ಅಗತ್ಯವಾಗಬಹುದು. ಆದರೆ ಸ್ವಾಯತ್ತತೆಯ ಬೇಡಿಕೆಯನ್ನು ಸಂವಿಧಾನಾತ್ಮಕ ಸಂಸ್ಥೆಗಳ ಮುಂದೆ ಮಂಡಿಸುವ ಹಕ್ಕು ಪ್ರತ್ಯೇಕವಾಗಿ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕೊಡವರ ವಿಶಿಷ್ಟ ವಂಶಾವಳಿ, ಸಾಂಸ್ಕೃತಿಕ ಗುರುತು, ಸಂಪ್ರದಾಯಗಳು ಹಾಗೂ ಆದಿಮಸಂಜಾತ ಲಕ್ಷಣಗಳನ್ನು ಸಂರಕ್ಷಿಸುವ ಅಗತ್ಯವಿದೆ. ಕೊಡವರ ಸಾಂಸ್ಕೃತಿಕ ಅಸ್ಮಿತೆ, ಮಾತೃಭಾಷೆ ಕೊಡವ ತಕ್ಕ್, ಜನಪದೀಯ ಆಚರಣೆಗಳು, ಕುಲ ಪದ್ಧತಿ, ವಂಶವಾಹಿನಿ, ಮಂದ್‌ಗಳು, ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ, ದೈವಿಕ ಅರಣ್ಯಗಳು, ಗನ್-ತೋಕ್ ಸೇರಿದಂತೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ರಕ್ಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಸಂವಿಧಾನದ ವಿಧಿ 14,…

Read More

ಸೋಮವಾರಪೇಟೆ, NEWS DESK ಸೆ.24: ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ದೇವಾಲಯ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಶೇಷ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನವನ್ನು ಸಾರಾಸಗಟಾಗಿ ತಿರಸ್ಕರಿಸಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಆಡಳಿತಾಧಿಕಾರಿ ನಾಗೇಶ್ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜು ಹಾಗೂ ಕಾರ್ಯದರ್ಶಿ ಯೋಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಾವುದೇ ಕಾರಣಕ್ಕೂ ಶಾಂತಳ್ಳಿ ಮಾತ್ರವಲ್ಲದೆ ಇಡೀ ಕೊಡಗು ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಗೊಳಿಸಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಬಗ್ಗನ ಅನಿಲ್, ರಾಜಶೇಖರ್, ಕೆ.ಎಂ. ಲೋಕೇಶ್, ಎಸ್.ಜಿ. ಮೇದಪ್ಪ, ಡಾಲಿ ಪ್ರಕಾಶ್, ರಾಮಚಂದ್ರ, ಕೃಷ್ಣಕುಮಾರ್, ಸುಖಾಂತ್ ಬಸವರಾಜು, ಮುತ್ತಣ್ಣ ಸೇರಿದಂತೆ ಗ್ರಾಮಸ್ಥರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯ ಅಂತ್ಯದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸಲು ಸಭೆ ತೀರ್ಮಾನಿಸಿತು.

Read More