ಲೇಖಕ: admin

ನಾಪೋಕ್ಲು ಜ.8 : ಬಲ್ಲಮಾವಟಿ ಗ್ರಾ.ಪಂ ಯ 2022-23 ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆ ಹಾಗೂ ಜಮಾ ಮಂದಿ ಸಭೆಯನ್ನು ಜ.9 ರಂದು ಗ್ರಾ.ಪಂ ಅಧ್ಯಕ್ಷರಾದ ಎಂ.ಪಿ .ಶಾಂತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ನೋಡಲ್ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ಸಭೆಯನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೌರಿರ ಶರತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಜ.8 :   ಸೋಮವಾರಪೇಟೆಯ ಆಂಜನೇಯ ದೇವಾಲಯದ ಆಡಳಿತ ಸಮಿತಿ ಸದಸ್ಯರ  ನಿಯೋಗವು ಕರ್ನಾಟಕ ಸರ್ಕಾರದ ಮುಜರಾಯಿ ಮತ್ತು ಸಾರಿಗೆ ಸಚಿವ  ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿದರು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಬೆಂಗಳೂರಿನ ಸಚಿವರ ಕಚೇರಿಗೆ ಭೇಟಿ ನೀಡಿದ ಆಡಳಿತ ಮಂಡಳಿ ಪ್ರಮುಖರು ಹಾಗೂ ಸದಸ್ಯರು  ಸೋಮವಾರಪೇಟೆ ಕಕ್ಕೆಹೊಳೆ ಸಮೀಪದ ಶ್ರೀ ಆಂಜನೇಯ ದೇವಾಲಯದ ಪುನಶ್ಚೇತನ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು, ಶೀಘ್ರವೇ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದರು. ನಿಯೋಗದಲ್ಲಿ  ದೇವಾಲಯ ಸಮಿತಿ ಸದಸ್ಯರಾದ ಗೋಪಾಲ್, ನಂದ, ಸುರೇಶ್, ಸೀತಾರಾಮ್, ಉದ್ಯಮಿ ಅರುಣ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಯು. ಕಿರಣ್  ಹಾಜರಿದ್ದರು.

Read More

ಮಡಿಕೇರಿ ಜ.8 :  ಕೊಡಗು ಜಿಲ್ಲಾ ಪೊಲೀಸ್, ಲಯನ್ಸ್ ಕ್ಲಬ್ ಮಡಿಕೇರಿ, ರೋಟರಿ ಮಿಸ್ಟರಿ ಹಿಲ್ಸ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಹಯೋಗದಲ್ಲಿ ಮಡಿಕೇರಿಯಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳ ಸಾಗಾಣಿಕೆ ತಟೆಗಟ್ಟುವ  ಕುರಿತು  ಜಾಗೃತಿ ಜಾಥಾ ನಡೆಯಿತು. ಮಡಿಕೇರಿಯ ಗದ್ದುಗೆಯಿಂದ ಆರಂಭವಾದ ಜಾಥಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಚಾಲನೆ ನೀಡಿದರು. ಮಡಿಕೇರಿಯ ಗದ್ದುಗೆಯಿಂದ ಆರಂಭವಾದ ಮೇರವಣಿಗೆ ಐಜಿ ಸರ್ಕಲ್, ಕಾಲೇಜು ರಸ್ತೆ, ಕೆ.ಎಸ್.ಆರ್.ಟಿ ಬಸ್ ನಿಲ್ದಾಣದ, ಮುತ್ತಣ್ಣ ಸರ್ಕಲ್ ಮುಕಾಂತರ ಸಾಗಿ ರಾಜಾಸೀಟಿನಲ್ಲಿ ಕೊನೆಗೊಂಡಿತು‌. ಮೆರವಣಿಗೆಯ ಉದ್ದಕ್ಕೂ ಮಾದಕ ವಸ್ತುಗಳನ್ನ ತೆಜಿಸುವಂತೆ ಘೋಷಣೆಗಳು ಮೊಳಗಿತು. ಜಾಥಕ್ಕೆ  ಆಟೋ, ಟ್ಯಾಕ್ಸಿ ಲಾರಿ ಮಾಲೀಕರು ಹಾಗೂ ಚಾಲಕರು ಸಹಕಾರ ನೀಡಿದರು. ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಇತ್ತಿಚೀನ ದಿನಗಳಲ್ಲಿ ಹೆಚ್ಚಿನ ಯುವಕರು ಮಾದಕ ವಸ್ತುಗಳ ಚಟಕ್ಕೆ ಒಳಗಾಗಿ ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಸಾಕಷ್ಟು ಅಭಿಯಾನಗಳನ್ನ ನಡೆಸಿಕೊಂಡು ಬರಲಾಗುತ್ತಿದ್ದರೂ ಕೂಡ  ಯುವ ಪಿಳೀಗೆ…

Read More

ಮಡಿಕೇರಿ ಜ.8 :  ಕೂಡಿಗೆಯ ಪವಿತ್ರ ತಿರು ಕುಟುಂಬ ಚರ್ಚ್ ನ  ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯದ ಧರ್ಮಗುರುಗಳಾದ ವಂದನೀಯ ಸ್ವಾಮಿ ಚಾರ್ಲ್ಸ್ ನೋರೋನಾ ಅವರ ಸಮ್ಮುಖದಲ್ಲಿ ಕುಶಾಲನಗರದ ಸಂತ ಸಬಾಸ್ಟಿಯನ್ ದೇವಾಲಯದ ಧರ್ಮಗುರು ವಂದನೀಯ ಎಂ.ಮಾರ್ಟಿನ್   ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ಕೊಡಗು ವಲಯದ ಹಲವು ಧರ್ಮಕೇಂದ್ರದ ಗುರಗಳು ಹಾಗೂ ಕನ್ಯಾ ಸ್ತ್ರೀಯರು  ಹಾಜರಿದ್ದರು.  ಬಲಿಪೂಜೆಯ ನಂತರ ಭವ್ಯ ತೇರಿನೊಂದಿಗೆ ಮೆರವಣಿಗೆ ನಡೆಯಿತು.

Read More

ಚೆಯ್ಯಂಡಾಣೆ ಜ.7 : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು. ಜ.15ವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು, ಇದರ ಅಂಗವಾಗಿ ಚೇಲಾವರದ ಪೋನ್ನೊಲ ಸಾರ್ಥವು ಬೈತೂರ್ ಕಾರ್ಯಾರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಚೇಲಾವರದ ಮನೆ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಯನ್ನು ವಿತರಿಸಲಾಯಿತು. ಈ ಸಂದರ್ಭ  ನಾಡು ತಕ್ಕರಾದ ಪಟ್ಟಚೆರುವಂಡ ಜಿಮ್ಮ ಚಿಟ್ಟಿಯಪ್ಪ, ಪ್ರಮುಖರಾದ ಪಟ್ಟಚೆರುವಂಡ ಹರಿ ಮುತ್ತಪ್ಪ, ಚರ್ಮಣ, ಮುಂಡಿಯೋಳಂಡ ಪ್ರವೀಣ್ ಈರಪ್ಪ, ಬಾಚಮಂಡ ಲೋಕೇಶ್, ಪವನ್ ಮಂಜು, ಕುಟ್ಟನ ಸೀತಾರಾಂ ಮತಿತ್ತರರು ಹಾಜರಿದ್ದರು. ವರದಿ :  ಅಶ್ರಫ್  

Read More

ಮಂಗಳೂರು, ಜ.7;ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೆಯುಡಬ್ಲ್ಯುಜೆ ರಾಜ್ಯಮಟ್ಟದ ‘ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ -2024’ಕ್ರಿಕೆಟ್ ಪಂದ್ಯಾಟ ಜ.5ರಿಂದ 7 ರವರೆಗೆ ಅಡ್ಯಾರಿನ  ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದ ಕ್ಯಾ.ಪ್ರಾಂಜಲ್ ‌ಸ್ಮರಣೆ ಯೊಂದಿಗೆ ನಡೆದ ಪಂದ್ಯಾವಳಿ ಯಲ್ಲಿ ಬೆಂಗಳೂರು ನಗರ ಕಾರ್ಯ ನಿರತ ಪತ್ರಕರ್ತರ ಸಂಘ ಪ್ರಥಮ ಹಾಗೂ ಹಾಸನ ಕಾರ್ಯ ನಿರತ ಪತ್ರಕರ್ತರ ತಂಡ ದ್ವಿತೀಯ ಹಾಗೂ ಮಂಡ್ಯ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ತೃತೀಯ ಪ್ರಶಸ್ತಿ ಗಳಿಸಿದೆ. ಸಮಾರೋಪ ಸಮಾರಂಭದಲ್ಲಿ ವಿಧಾನ ಸಭಾ ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಬೈರತಿ ಬಸವರಾಜು, ಬಿ.ರಮಾನಾಥ ರೈ,ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ ಶುಭ ಹಾರೈಸಿದರು. ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ, ದ.ಕ ಜಿಲ್ಲಾ ಧಿಕಾರಿ ಮುಲ್ಲೈ ಮುಗಿಲನ್ ,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು,…

Read More

ಮಡಿಕೇರಿ ಜ.7 : ಸೋಮವಾರಪೇಟೆ ತಾಲ್ಲೂಕಿನ ಹೋಬಳಿ ಕೇಂದ್ರವಾದ ಮಾದಾಪುರ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿಯಾಗಿರುವುದರಿಂದ ಜನಸಾಮಾನ್ಯರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು 1 ವರ್ಷದಲ್ಲಿ 3 ಮಂದಿ ವರ್ವಾವಣೆಗೊಂಡಿದ್ದಾರೆ. ಕಳೆದ 3 ತಿಂಗಳಿನಿಂದ ಪಿಡಿಒ ಇಲ್ಲದೆ ಗ್ರಾಮ ಪಂಚಾಯಿತಿಯ 2 ಸಾಮಾನ್ಯ ಸಭೆಯೂ ನಡೆದಿಲ್ಲ. ಪಿಡಿಒ ಆಗಿದ್ದ ಸುಮೇಶ್ ಬೇರೆಡೆಗೆ ವರ್ಗವಾದ ನಂತರ ಸುರೇಶ್ ಎಂಬುವವರನ್ನು ನಿಯೋಜಿಸಲಾಗಿತ್ತು. ಕೆಲವು ದಿನಗಳು ಕರ್ತವ್ಯ ನಿರ್ವಹಿಸಿದ ನಂತರ ಅವರನ್ನು ಇಲ್ಲಿನ ಸೇವೆಯಿಂದ ಮುಕ್ತ್ತಗೊಳಿಸಿ ದಕ್ಷಿಣ ಕೊಡಗಿನ ಗ್ರಾ.ಪಂ ಗೆ ನೇಮಿಸಲಾಗಿದೆ. ನೂತನ ಪಿಡಿಓ ಬಂದ ನಂತರ ತಮ್ಮ್ ನೀಡಿ ಅವರ ಹೆಸರಿಗೆ ಪಂಚಾಯಿತಿ ದಾಖಲಾತಿ ಬರಲು 1 ತಿಂಗಳು ಕಾಲಾವಕಾಶ ಬೇಕಾಗಿದೆ. ಮಾದಾಪುರ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರುಗಳು ನಿಯೋಗ ತೆರಳಿ ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಶ್ವತ ಪಿಡಿಒ ನೇಮಕಕ್ಕೆ ಒತ್ತಾಯಿಸಿ ಮನವಿ ಸಲ್ಲಿಸಿದರೂ ಇದುವರೆಗೆ ನೇಮಕವಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.…

Read More

ಮಡಿಕೇರಿ ಜ.7 : ಕೊಡವ ಜನಾಂಗದ ಶ್ರೀಮಂತ ಸಂಸ್ಕೃತಿಯ ಬಗ್ಗೆ ಯುವ ಪೀಳಿಗೆಗೆ ಅರಿವು ಮೂಡಿಸಬೇಕಾಗಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ದೇಶತಕ್ಕರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ.ಸುಬ್ರಮಣಿ ಅವರು ಕರೆ ನೀಡಿದ್ದಾರೆ. ಕುಶಾಲನಗರ ಕೊಡವ ಸಮಾಜದಲ್ಲಿ ನಡೆದ ಪುತ್ತರಿ ಊರೋರ್ಮೇರ ಸಂತೋಷ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮುಂದಿನ ಪೀಳಿಗೆಗೆ ಸಂಸ್ಕೃತಿ ಸಂಪ್ರದಾಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ನೊಂದು ಜೀವ ತೆರುವುದು ಬಿಟ್ಟು ತಮ್ಮ ಗುರಿಯನ್ನು ಸಾಧಿಸುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಪತ್ರಕರ್ತ ಅಜ್ಜನಿಕಂಡ ಪಿ.ಮಹೇಶ್ ನಾಚಯ್ಯ ಕೊಡವರು ಯಾವುದೇ ಸಂದರ್ಭ ತಮ್ಮ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಬಾರದು. ಹಿರಿಯರು ಬಳುವಳಿ ನೀಡಿದ ಆಸ್ತಿಯಲ್ಲಿ ದುಡಿದು ನೆಮ್ಮದಿಯನ್ನು ಕಾಣಬೇಕು. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಜನಾಂಗದ ಶ್ರೇಯೋಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ಸಮಾಜಕ್ಕೆ…

Read More

ಸೋಮವಾರಪೇಟೆ ಜ.7 : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಇವರ ಆಶ್ರಯದಲ್ಲಿ ಪಟ್ಟಣದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ಭಾನುವಾರ ನಡೆದ 17 ವರ್ಷ ವಯೋಮಿತಿಯ ಬಾಲಕಿಯರ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್‌ನಲ್ಲಿ ಜಯಗಳಿಸಿ ಜಾರ್ಖಂಡ್ ಮತ್ತು ಚಂಡೀಗಡ ತಂಡಗಳು ಫೈನಲ್ ತಲುಪಿವೆ. ಜಾರ್ಖಂಡ್ ತಂಡವು ಮಧ್ಯಪ್ರದೇಶ ವಿರುದ್ಧ 7-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತು. ಜಾರ್ಖಂಡ್ ತಂಡದ ರೋಷನಿ ಮತ್ತು ಸುಶ್ಮಿತಾ ಲಾಕ್ರಾ ತಲಾ ಎರಡು ಗೋಲು ಗಳಿಸಿದರೆ, ಅನುಪ್ರಿಯ, ಜಮುನಾ, ಲಿಯೋನಿ ಹೆಮ್ರಾಮ್ ತಲಾ ಒಂದು ಗೋಲು ಗಳಿಸಿದರು. ಜಾರ್ಖಂಡ್ ತಂಡವು 6 ಫೀಲ್ಡ್ ಗೋಲುಗಳನ್ನು ಮತ್ತು ಪೆನಾಲ್ಟಿ ಕಾರ್ನರ್ ಮೂಲಕ ಒಂದು ಗೋಲು ದಾಖಲಿಸಿತು. ದಿನದ ಎರಡನೇ ಸೆಮಿಫೈನಲ್ ಪಂದ್ಯ ಚಂಡೀಗಡ ಮತ್ತು ಮಣಿಪುರ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಸಮಬಲದ ಹೋರಾಟ ಕಂಡುಬಂದರೂ ಚಂಡೀಗಡ ತಂಡ ಮಣಿಪುರ…

Read More

ಮಡಿಕೇರಿ ಜ.7 : ಕುಮಾರಪರ್ವತದ ತಪ್ಪಲಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾದುಕೆಗೆ ಪೂರ್ವ ಶಿಷ್ಟ ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಯಿತು. ವರ್ಷಕ್ಕೆ ಒಂದು ಬಾರಿ ಮಾತ್ರ ಕುಕ್ಕೆ ದೇಗುಲದ ವತಿಯಿಂದ ಇಲ್ಲಿ ಪೂಜೆ ನೆರವೇರುತ್ತದೆ. :ಪೌರಾಣಿಕ ಹಿನ್ನೆಲೆ:  ಕುಮಾರಪರ್ವತದಲ್ಲಿ ಕುಮಾರಸ್ವಾಮಿಯು ತಾರಕಾದಿ ರಾಕ್ಷಸರನ್ನು ಕೊಂದು ಕತ್ತಿಯ ಅಲಗನ್ನು ಕುಮಾರಪರ್ವತದಲ್ಲಿ ಹುಟ್ಟುವ ಕುಮಾರಧಾರಾ ನದಿಯಲ್ಲಿ ತೊಳೆದನು. ಬಳಿಕ ಷಣ್ಮುಖನು ವಾಸುಕಿಯೊಂದಿಗೆ ಕುಕ್ಕೆ ಕ್ಷೇತ್ರದಲ್ಲಿ ನೆಲೆಯಾದನು ಎಂದು ಕ್ಷೇತ್ರ ಪುರಾಣ ಉಲ್ಲೇಖಿಸಿದೆ. ತಾರಕಾದಿ ರಾಕ್ಷಸರನ್ನು ಕುಮಾರಸ್ವಾಮಿ ಈ ಪರ್ವತ ಶ್ರೇಣಿಯಲ್ಲೇ ವಧೆ ಮಾಡಿದನು. ಈ ಪರ್ವತ ಶ್ರೇಣಿಯಲ್ಲೇ ತ್ರಿಮೂರ್ತಿಗಳ ಸಮ್ಮುಖದಲ್ಲಿ ಮಾರ್ಗಶಿರ ಶುದ್ಧ ಷಷ್ಠಿ(ಚಂಪಾಷಷ್ಠಿ)ಯ ದಿನ ದೇವೇಂದ್ರನ ಮಗಳಾದ ದೇವಸೇನೆಯನ್ನು ಷಣ್ಮುಖನಿಗೆ ವಿವಾಹ ಮಾಡಿಸಿ ಪಟ್ಟಾಭಿಷೇಕ ಮಾಡಿಸಲಾಯಿತು. ಈ ಅಭಿಷೇಕದ ನೀರು ಮುಂದೆ ಹರಿದು ಕುಮಾರಧಾರಾ ನದಿಯಾಯಿತು ಎಂದೂ ಪುರಾಣಗಳು ಉಲ್ಲೇಖಿಸಿವೆ. ಕುಮಾರಪರ್ವತದಲ್ಲಿ ಷಣ್ಮುಖನಿಗೆ ವಿವಾಹವಾದ ಪ್ರದೇಶದಲ್ಲಿ ಈಗಲೂ ಸುಬ್ರಹ್ಮಣ್ಯನ ಪಾದಗಳು ಇವೆ. ಇದನ್ನು ಕುಮಾರಪಾದ ಎನ್ನುತ್ತಾರೆ. ಇದರ ಪಕ್ಕದಲ್ಲಿ ವಾಸುಕಿಯೂ ಗೋಚರಿತವಾಗಿದೆ. ಇದಕ್ಕೆ…

Read More