ಮಡಿಕೇರಿ ಜ.8 : ಪಾಲೂರು ಗ್ರಾಮದ ವಾರ್ಷಿಕ ಊರೊರ್ಮೆ ಸಮಾರಂಭ ಸಂಭ್ರಮದಿಂದ ಜರುಗಿತು. ‘ಪಾಲೂರ್ ಕೊಡವಾಮೆ ಕೂಟ’ ವತಿಯಿಂದ ನಡೆದ 18ನೇ ವರ್ಷದ ಕಾರ್ಯಕ್ರಮದಲ್ಲಿ ಪಾಲೂರಿನಲ್ಲಿ ನೆಲೆಸಿರುವ ಮಂದನೆರವಂಡ, ನೆರವಂಡ, ಚೆರುವಾಳಂಡ, ಮೇಪಾಡಂಡ, ಪೊದುವಾಡ, ಪೈಕೇರ, ಬೊಳ್ಳಿಯಂಡ, ಬಲ್ಲಂಡ ಕುಟುಂಬಗಳ ಸದಸ್ಯರು ಪಾಲ್ಗೊಂಡಿದ್ದರು. ಮೇಪಾಡಂಡ ವೇಣು ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ “ಕೊಡವರ ಆಚಾರ, ವಿಚಾರ ಹಾಗೂ ಕಲೆ ಬಹಳ ವಿಶಿಷ್ಟವಾದದ್ದು. ಯುವಜನತೆ ನಮ್ಮ ಸಂಸ್ಕೃತಿಯನ್ನ ಕಾಪಾಡಲು ಒಗ್ಗಟ್ಟಿನಿಂದ ಆಸಕ್ತಿ ತೋರಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಮದ ಹಿರಿಯ ಕಾಫಿ ಬೆಳೆಗಾರರಾದ ನೆರವಂಡ ಎಂ.ಹರೀಶ್ ಅವರನ್ನ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡವಾಮೆ ಕೂಟದ ವತಿಯಿಂದ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಗ್ರಾಮಸ್ಥರಿಗೆ ಹಲವು ಮನೋರಂಜನಾ…
ಲೇಖಕ: admin
ನಾಪೋಕ್ಲು ಜ.8 : ಕಾಡಾನೆ ಲದ್ದಿಯಲ್ಲಿ ಕಾಫಿ ಬೀಜಗಲು ಯಥೇಚ್ಛವಾಗಿ ಕಂಡುಬರುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಾಪೋಕ್ಲು ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ರೈತರು ಆತಂಕಕ್ಕೆ ಈಡಾಗಿದ್ದಾರೆ. ಈ ಹಿಂದೆ ಕಾಡಾನೆಗಳು ಕಾಫಿ, ಅಡಿಕೆ, ತೆಂಗು ಫಲಬರಿತ ಗಿಡಗಳನ್ನು ಹಾಗೂ ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿದ್ದರೆ ಇದೀಗ ಕಾಫಿಯ ಹಣ್ಣುಗಳನ್ನು ತಿಂದ ನಷ್ಟಪಡಿಸುತ್ತಿವೆ. ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ ನಾಲ್ಕಾರು ಆನೆಗಳು ಅಡ್ಡಾಡುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ಕಾಡಾನೆಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಭತ್ತದ ಕಟಾವು ಮುಗಿದಿದ್ದು ಇದೀಗ ಕಾಡಾನೆಗಳು ತೋಟ ನುಸುಳಿವೆ. ಕಾಫಿಯ ರೆಂಬೆಗಳನ್ನು ಮುರಿದು ಹಣ್ಣಾಗಿರುವ ಕಾಫಿಯನ್ನು ತಿಂದು ನಷ್ಟಪಡಿಸುತ್ತಿವೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಲ್ಲದೆ ಸರಕಾರ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾ.ಪಂ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಒತ್ತಾಯಿಸಿದ್ದಾರೆ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಜ.8 : ಭಾರತೀಯ ಅಂಚೆ ಇಲಾಖೆಯ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಂಚೆ ಚೀಟಿಗಳ ಹಬ್ಬ ಕಾರ್ಯಕ್ರಮದಲ್ಲಿ ಕರ್ನಾಟಕದ ಮೊದಲ ಮಹಿಳಾ ಉದ್ಯಮಿ ಕಾಫಿಪುಡಿ ಸಾಕಮ್ಮ ಅವರ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸಲಾಯಿತು. ಸಾಕಮ್ಮನವರ ಕುಟುಂಬಸ್ಥರಾದ ತಾರ ಮಂಜು ಗೌಡ, ಅರಕಲಗೂಡು ಶಾಸಕ ಎ.ಮಂಜು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಪತ್ನಿ ದಿವ್ಯ ಮಂತರ್, ಉಪಾಸಿ ಮಾಜಿ ಅಧ್ಯಕ್ಷ ವಿನೋದ್ ಶಿವಪ್ಪ, ಬೆಳೆಗಾರ ಹಾಗೂ ಉದ್ಯಮಿ ಆನಂದ ಬಸಪ್ಪ ಅವರುಗಳು ಪೋಸ್ಟಲ್ ಕವರ್ ಅನ್ನು ಅನಾವರಣಗೊಳಿಸಿದರು. ಸುಮಂಗಲಿ ಸೇವಾ ಆಶ್ರಮದ ಸ್ವಯಂ ಸೇವಕಿ ಡಾ.ಸುಶೀಲಮ್ಮ, ಖ್ಯಾತ ಕಲಾವಿದೆ ರಾಧಾ ಮಲ್ಲಪ್ಪ, ಭಾರತೀಯ ಅಂಚೆ ಇಲಾಖೆ ನಿರ್ದೇಶಕಿ ಪ್ರೀತಿ ಅಗ್ರವಾಲ್ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಉಪಸ್ಥಿತಿಯಲ್ಲಿ ಸಂಜೆ ಸಮಾರೋಪ ಸಮಾರಂಭ ನಡೆಯಿತು. ಮಹಿಳಾ ಸಬಲೀಕರಣ’ ಎಂಬ ವಿಷಯದಡಿಯಲ್ಲಿ ರಾಜ್ಯ ಅಂಚೆಚೀಟಿಗಳ ಸಂಗ್ರಹಣೆ ಮತ್ತು ಪ್ರದರ್ಶನದ ಹಬ್ಬದಲ್ಲಿ ವಿಶ್ವ…
ಸೋಮವಾರಪೇಟೆ ಜ.8 : ರಕ್ತದಾನದಿಂದ ಜೀವದಾನಮಾಡಿದಂತೆ ಎಂದು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು. ಸೋಮವಾರಪೇಟೆಯ ತಥಾಸ್ತು ಸಂಸ್ಥೆ ಹಾಗೂ ಜಿಲ್ಲಾ ರಕ್ತನಿಧಿ ಘಟಕದ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ರಕ್ತ ದಾನ ಮಾಡುವುದರಿಂದ ಒಂದು ಜೀವ ಉಳಿಸಿದಂತಾಗುತ್ತದೆ. ಅಪಘಾತ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ತ ನೀಡಲು ಮುಂದಾಗಬೇಕೆಂದರು. ನೂರಾಹನ್ನೊಂದು ವರ್ಷಗಳ ಕಾಲ ಬಾಳಿ ಜಾತಿ, ಮತ, ಭೇದ ನೀಡದೆ ಸರ್ವಜನಾಂಗದ ಮಕ್ಕಳಿಗೂ ಶಿಕ್ಷಣ, ದಾಸೋಹ ಹಾಗೂ ಆಶ್ರಯ ನೀಡಿದ ಕಾಯಕಯೋಗಿ ಶಿವಕುಮಾರ ಸ್ವಾಮಿಗಳ ದಾಸೋಹ ದಿನದ ನೆನಪಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಜಿಲ್ಲಾ ರಕ್ತ ನಿಧಿ ಮುಖ್ಯಸ್ಥ ಡಾ.ಕರುಂಬಯ್ಯ ಮಾತನಾಡಿ, ರಕ್ತದಾನ ಶ್ರೇಷ್ಠವಾದದ್ದು ಆದ್ದರಿಂದ ಆರೋಗ್ಯವಂತ ವ್ಯಕ್ತಿಗಳು ವರ್ಷಕ್ಕೆ ಮೂರು ನಾಲ್ಕು ಬಾರಿ ರಕ್ತ ದಾನಮಾಡಬಹುದೆಂದು ಸಲಹೆ ನೀಡಿದರು. ಹಲವು ಸಂದರ್ಭಗಳಲ್ಲಿ ರಕ್ತ ಅನಿವಾರ್ಯವಾಗಿದೆ ಆದ್ದರಿಂದ ದಾನಿಗಳು ಮುಂದೇಬರಬೇಕು ಎಂದ ಅವರು…
ಸುಂಟಿಕೊಪ್ಪ ಜ.8 : ಕರ್ನಾಟಕದಲ್ಲಿ ಹುಟ್ಟಿರುವ ನಾವುಗಳು ಮೊದಲು ಕನ್ನಡವನ್ನು ಕಲಿತು ಇತರರಿಗೆ ಕನ್ನಡವನ್ನು ಕಲಿಸಿ ಬೆಳೆಸಲು ಮುಂದಾಗಬೇಕೆಂದು ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ವ್ಯವಸ್ಥಾಪಕ ವಂ.ರೇ.ಫಾ.ಅರುಳ್ ಸೇಲ್ವಕುಮಾರ್ ಹೇಳಿದರು. ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸುವರ್ಣ ಕರ್ನಾಟಕ 50ರ ಅಂಗವಾಗಿ ಹೋಬಳಿ ಮಟ್ಟದ ಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡವನ್ನು ಕಲಿತು ಬೆಳೆಸಲು ನಿರ್ಧರಿಸಿದ್ದು, ಅದರಂತೆ ಮಕ್ಕಳು ಕನ್ನಡವನ್ನು ಕಲಿತು ಬೆಳೆಸುವುದು ನಮ್ಮೆಲ್ಲಾರಿಗೂ ಸ್ಫೂರ್ತಿದಾಯಕಗಿದೆ ಅದ್ದರಿಂದ ಎಲ್ಲಾರೂ ಕನ್ನಡವನ್ನು ಬೆಳೆಸುವ, ಕರ್ನಾಟಕ ಉಳಿಸುವ ಕಾರ್ಯ ಮಾಡಬೇಕೆಂದು ಕರೆ ನೀಡಿದರು.ಸುಂಟಿಕೊಪ್ಪ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸೆಬಾಸ್ಟೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯ ಪ್ಲಾಂಟೇಶನ್ ವ್ಯವಸ್ಥಾಪಕ ಶಶಾಂಕ್, ಸಂತ ಮೇರಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯ ಸೇಲ್ವರಾಜ್, ಸುಂಟಿಕೊಪ್ಪ ಕನ್ನಡ…
ನಾಪೋಕ್ಲು ಜ.8 : ಕೊಳಕೇರಿಯ ಕೂವಲೆ ಕಾಡು ಜಾಗದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ನಾಪೋಕ್ಲು ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ಭೂಮಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ನಾಪೋಕ್ಲು ಗ್ರಾಮದ ನಿವಾಸಿ ಸಲೀಂ ಹಾಜಿ ಅವರು, ಕೊಳಕೇರಿಯ ಕೂವಲೆ ಕಾಡಿನಲ್ಲಿ ಸ್ಥಳ ದಾನ ನೀಡಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಒದಗಿಸಲಾದ ಹದಿನೈದು ಲಕ್ಷ ರೂಪಾಯಿ ಹಾಗೂ ನರೇಗ ಉದ್ಯೋಗ ಖಾತ್ರಿ ಯೋಜನೆ ಅಡಿ ನೀಡಲಾದ 5 ಲಕ್ಷ ಸೇರಿದಂತೆ ಒಟ್ಟು 20 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುವುದು ಎಂದು ವನಜಾಕ್ಷಿ ಹೇಳಿದರು. ಈ ಸಂದರ್ಭ ಪಂಚಾಯಿತಿ ಉಪಧ್ಯಕ್ಷ ಹೇಮ ಅರುಣ್, ಗ್ರಾ.ಪಂ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ನಾಪೋಕ್ಲು ಜ.8 : ಎಸ್‍ವೈಎಸ್ ಕೊಡಗು ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ ಜಿಲ್ಲಾ ಕಹ್ಫುಲ್ ವರಾ ಮಜ್ಲಿಸುನ್ನೂರ್ ಬೃಹತ್ ಆಧ್ಯಾತ್ಮಿಕ ಸಂಗಮ ಕಾರ್ಯಕ್ರಮವು ನಾಪೋಕ್ಲುವಿನ ಮಾರುಕಟ್ಟೆ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಕೊಡಗು ಉಪ ಖಾಝಿಗಳಾದ ಅಬ್ದುಲ್ಲಾ ಉಸ್ತಾದ್, ಆಧ್ಯಾತ್ಮಿಕ ಉಲಮಾ ಒಕ್ಕೂಟದ ಯುವಜನ ಘಟಕವಾದ ಸುನ್ನಿ ಯುವಜನ ಸಂಘ (ಎಸ್‌ವೈಎಸ್ ) ಕಳೆದ 70 ವರ್ಷಗಳಿಂದ ಧಾರ್ಮಿಕ ಮತ್ತು ಶೈಕ್ಷಣಿಕ ಹಾಗೂ ಜನಪರ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಸಂಘಟನೆಯಾಗಿದೆ ಎಂದ ಅವರು ಶಾಂತಿ ಹಾಗೂ ಸಮಾಧಾನ ಮತ್ತು ಸಹಬಾಳ್ವೆಯನ್ನು ಸಾರುವ ಸಂಘಟನೆಯಾಗಿದೆ ಎಂದು ತನ್ನ ಅನುಭವ ಹಾಗೂ ಅಭಿಪ್ರಾಯವನ್ನು ವ್ಯಕ್ತಪಡಿಸಿರು. ಮಜ್ಲಿಸುನ್ನೂರ್ ನೇತೃತ್ವ ವಹಿಸಿ ಮಾತನಾಡಿದ ಪಾಣಕ್ಕಾಡ್ ಮುಈನ್ ಅಲಿ ಶಿಹಾಬ್ ತಂಙಳ್ ಆಧ್ಯಾತ್ಮಿಕವಾಗಿ ಜನ ಮನಸ್ಸುಗಳನ್ನು ಶುಚೀಕರಿಸುವುದರ ಮೂಲಕ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಎಂದ ಅವರು ಕೆಲವು ಘಟನೆಗಳನ್ನು ಆಧರಿಸಿ ಧಾರ್ಮಿಕ ಉಪನ್ಯಾಸವನ್ನು ನೀಡಿದರು. ಚೆರಿಯಪರಂಬು ದರ್ಗಾ ಝಿಯಾರತ್ ಹಿರಿಯ ವಿದ್ವಾಂಸರಾದ ಹುಸೈನ್ ಮುಸ್ಲಿಯಾರ್ ಕುಂಜಿಲ…
ಮಡಿಕೇರಿ ಜ.8 : ಕೊಡಗು ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಜ.24 ಮತ್ತು 25 ರಂದು ಕೊಡಗು ಜಿಲ್ಲಾ ಮಟ್ಟದ ಮೇಲಾಟ ಕ್ರೀಡಾ ಸ್ಪರ್ಧೆ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ವಿ.ಲೋಕೇಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, 14 ಮತ್ತು 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರಿಗೆ ಕೂಡಿಗೆ ಕ್ರೀಡಾಶಾಲೆಯಲ್ಲಿ ಪಂದ್ಯಾವಳಿ ನಡೆಯಲಿದ್ದು, ಆಯ್ಕೆಯಾದ ಅರ್ಹ ಕ್ರೀಡಾಪಟುಗಳು ಫೆ.16 ರಿಂದ 18ರ ವರೆಗೆ ಅಹಮದಾಬಾದ್-ಗುಜರಾತ್ ಯುನಿವರ್ಸಿಟಿ ನವರಂಗಪುರದ ಸರ್ದಾರ್ ಪಾಟೀಲ್ ಸ್ಪೋರ್ಟ್ಸ್ ಸಿಟಿಯಲ್ಲಿ ನಡೆಯಲಿರುವ 19ನೇ ರಾಷ್ಟ್ರೀಯ ಅಂತರ್ ಜಿಲ್ಲಾ ಅಥ್ಲೆಟಿಕ್ಸ್ ಮೀಟ್ ನಲ್ಲಿ ಭಾಗವಹಿಸಬಹುದಾಗಿದೆ ಎಂದು ಹೇಳಿದ್ದಾರೆ. :: ವಯೋಮಿತಿ :: 14 ವರ್ಷದೊಳಗಿನ ಬಾಲಕ, ಬಾಲಕಿಯರು 19.02.2010 ರಿಂದ 18.02.2012 ರೊಳಗೆ ಹಾಗೂ 16 ವರ್ಷದೊಳಗಿನ ಬಾಲಕ, ಬಾಲಕಿಯರು 19.02.2008 ರಿಂದ 18.02.2010 ರೊಳಗೆ ಜನಿಸಿದವರಾಗಿರಬೇಕು. :: ಸ್ಪರ್ಧೆಗಳು :: (ಟ್ರಯಥ್ಲಾನ್ ಎ) 14 ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ಉದ್ದ ಜಿಗಿತ ಮತ್ತು ಎತ್ತರ…
ಮಡಿಕೇರಿ ಜ.8 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ “ಸಂವಿಧಾನ ಮತ್ತು ರಾಷ್ಟ್ರೀಯ ಏಕತೆಯ ಸಮಾವೇಶ” ಸಂಘಟನಾ ಸಮಿತಿ ಸಭೆ ನಡೆಸಿ, ಸಮಾವೇಶದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಹಾಗೂ ಸಚಿವರಾದ ಹೆಚ್.ಕೆ.ಪಾಟೀಲ್, ಕೆ.ಹೆಚ್.ಮುನಿಯಪ್ಪ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಹಾಗೂ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಹಾಗೂ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.
ನಾಪೋಕ್ಲು ಜ.8 : ಬಲ್ಲಮಾವಟಿ ಗ್ರಾ.ಪಂ ಯ 2022-23 ಸಾಲಿನ ಸಾಮಾಜಿಕ ಲೆಕ್ಕಪರಿಶೋಧನಾ ಗ್ರಾಮ ಸಭೆ ಹಾಗೂ ಜಮಾ ಮಂದಿ ಸಭೆಯನ್ನು ಜ.9 ರಂದು ಗ್ರಾ.ಪಂ ಅಧ್ಯಕ್ಷರಾದ ಎಂ.ಪಿ .ಶಾಂತಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ನೋಡಲ್ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಪಿಂಚಣಿದಾರರ ಸಂಘದ ಕಟ್ಟಡದಲ್ಲಿ ಸಭೆಯನ್ನು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೌರಿರ ಶರತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ವರದಿ : ದುಗ್ಗಳ ಸದಾನಂದ






