ಲೇಖಕ: admin

ವಿರಾಜಪೇಟೆ ಅ.30 : ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ‘ರಸ್ತೆ ಸ್ವಚ್ಛತಾ ಕಾರ್ಯ” ನಡೆಯಿತು. ಪೆರುಂಬಾಡಿಯ ಚೆಕ್‍ಪೋಸ್ಟ್‍ನಿಂದ (ತನಿಖಾ ಠಾಣೆ) ವಾಟೆಕೊಲ್ಲಿ ಅರಣ್ಯ ಇಲಾಖೆ ಕ್ಯಾಂಪ್‍ವರೆಗೆ ಕಾಲೇಜಿನ ಸುಮಾರು85 ಸ್ವಯಂ ಸೇವಕ-ಸೇವಕಿಯರನ್ನೊಳಗೊಂಡ ತಂಡವು ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಪ್ರಯಾಣಿಕರು ಮತ್ತುದಾರಿಹೋಕರು ಎಸೆದ ಪ್ಲಾಸ್ಟಿಕ್ ಮತ್ತುಇತರೆ ತ್ಯಾಜ್ಯಗಳನ್ನು ಸುಮಾರು 6ಕಿ.ಮೀ ವರೆಗೆಕಾಲ್ನಡಿಗೆಯ ಮೂಲಕ ಸಂಗ್ರಹಿಸಿ ಅರಣ್ಯಇಲಾಖೆಯಕ್ಯಾಂಪ್‍ಗೆ ನೀಡಲಾಯಿತು. ವಾಟೆಕೊಲ್ಲಿಅರಣ್ಯ ಇಲಾಖಾ ಕ್ಯಾಂಪ್ 1ರ ಸುಮಾರು 8 ಸಿಬ್ಬಂದಿಗಳ ಮಾರ್ಗದರ್ಶನದೊಂದಿಗೆ ಸ್ವಚ್ಛತಾ ಶ್ರಮದಾನ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ದಯಾನಂದ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಹೆಚ್.ಎಲ್.ವೇಣುಗೋಪಾಲ್ ಮತ್ತು ವಾಟೆಕೊಲ್ಲಿ ಅರಣ್ಯ ಇಲಾಖೆ ಕ್ಯಾಂಪ್ 1ರ ಸಿಬ್ಬಂದಿಗಳು ಹಾಗೂ ಸ್ವಯಂ ಸೇವಕ-ಸೇವಕಿಯರು ಹಾಜರಿದ್ದರು. 

Read More

ಪಪ್ಪಾಯ ಕಾಯಿ ಮತ್ತು ಹಣ್ಣು ಎರಡರಿಂದಲೂ ನಮಗೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಮಾಗಿದ ಪಪ್ಪಾಯ ಹಣ್ಣನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ.  ಪಪ್ಪಾಯ ಕಾಯಿ ಮತ್ತು ಹಣ್ಣು ಎರಡರಿಂದಲೂ ನಮಗೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಇದರಿಂದ ಆಗುವ ಲಾಭ ಹೆಚ್ಚು.  ಪಪ್ಪಾಯ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಪ್ರತಿನಿತ್ಯ ಪಪಾಯ ಹಣ್ಣನ್ನು ಸೇವಿಸುವುದರಿಂದ ಅಥವಾ ಪಪ್ಪಾಯ ಜ್ಯೂಸ್ ಮಾಡಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚಾಗಿ ಬೇಗ ಅನಾರೋಗ್ಯಕ್ಕೆ ತುತ್ತಾಗುವುದನ್ನು ಕಡಿಮೆ ಮಾಡುತ್ತದೆ. ಯಕೃತ್ತಿನ ಸಮಸ್ಯೆಗೆ  : ನಿಮ್ಮಲ್ಲಿ ಯಕೃತ್ ನ ಸಮಸ್ಯೆ ಕಾಡುತ್ತಿದ್ದರೆ ಪಪ್ಪಾಯ ಬೀಜವನ್ನು ಉಪಯೋಗಿಸುವುದು ಒಳ್ಳೆಯದು. ಏಕೆಂದರೆ ಪಪ್ಪಾಯ ಬೀಜದಲ್ಲಿ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿದೆ. ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಪಪ್ಪಾಯದ ಬೀಜ ಹೊಂದಿದೆ. ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಅಥವಾ ಸೋಂಕನ್ನು ಹೋಗಲಾಡಿಸಲು ಇದು ಸಹಾಯಕಾರಿ. ಮೊದಲಿಗೆ ಮಾಗಿದ ಪಪ್ಪಾಯ ಹಣ್ಣಿನ ಬೀಜವನ್ನು ಹಣ್ಣಿನಿಂದ ಬೇರ್ಪಡಿಸಬೇಕು. ಹೀಗೆ ಬೇರ್ಪಡಿಸಿದ ಬೀಜವನ್ನು ಮೂರು, ನಾಲ್ಕು ದಿನಗಳ…

Read More

ಮಡಿಕೇರಿ ಅ.30 :  ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಪೂರ್ವಭಾವಿ  ಸಭೆಯು ನ.4 ರಂದು  ನಡೆಯಲಿದೆ ಎಂದು ಮೂರು ನಾಡಿನ ತಕ್ಕಮುಖ್ಯಸ್ಥ  ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 10.30ಕ್ಕೆ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆಯಲಿದ್ದು, ಮೂರು ನಾಡಿನ ತಕ್ಕ ಮುಖ್ಯಸ್ಥರು ಹಾಗೂ ನಾಡಿನವರು ಆಗಮಿಸಿ ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದರು. ವರ್ಷಂಪ್ರತಿ ಪುತ್ತರಿ ಕಳೆದು ಮೂರು ದಿನಗಳಲ್ಲಿ ಇತಿಹಾಸ ಪ್ರಸಿದ್ಧದ ಕೈಮುಡಿಕೆ ಪುತ್ತರಿ ಕೋಲ್ ಮಂದ್ ನಡೆಯಲಿದ್ದು, ಈ ಸಂದರ್ಭದಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಸೇರಿದಂತೆ ಈ ಮೂರು ನಾಡಿಗೆ ಸೇರಿದ ವಿವಿಧ ಊರುಗಳ ತಕ್ಕ ಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಒಂದೆಡೆ ಸೇರಿ ಸಾಂಪ್ರದಾಯಿಕ ಕೋಲ್ ಮಂದ್ ಅನ್ನು ಸಂಭ್ರಮದಿಂದ ನಡೆಸಲಾಗುತ್ತದೆ ಎಂದರು. ಈ ಸಂದರ್ಭ ಮೂರು ನಾಡಿನವರಿಗೆ ವಿವಿಧ ಪೈಪೋಟಿ ಸೇರಿದಂತೆ ಸಾರ್ವಜನಿಕರಿಗೂ ಮುಕ್ತವಾಗಿ ಪೈಪೋಟಿಯನ್ನು ಏರ್ಪಡಿಸಲಾಗುತ್ತದೆ.…

Read More

ಮಡಿಕೇರಿ ಅ.30 : ಬೇಳೂರು ಮಠದ ಆಸ್ತಿಯಲ್ಲಿ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವವರು ಭೂಮಿಯನ್ನು ಮಠಕ್ಕೆ ಹಿಂದಿರುಗಿಸಬೇಕು, ತಪ್ಪಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಚಿತ್ರದುರ್ಗ ಬೃಹನ್ಮಠದ ಆಡಳಿತಾಧಿಕಾರಿ ರೇಖಾ ಅವರು ಎಚ್ಚರಿಕೆ ನೀಡಿದ್ದಾರೆ. ಸೋಮವಾರಪೇಟೆ ಸಮೀಪದ ಬೇಳೂರು ಗ್ರಾಮದಲ್ಲಿ ಚಿತ್ರದುರ್ಗ ಬೃಹನ್ಮಠಕ್ಕೆ ಸೇರಿದ ಮಠದ ಆವರಣದಲ್ಲಿ ಮಠ ಹಾಗೂ ಮಠದ ಆಸ್ತಿಯ ಕುಂದುಕೊರತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿಂತೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು. ಬೃಹನ್ಮಠದ ಆಸ್ತಿಯನ್ನು ಸಂರಕ್ಷಿಸಲು ಮತ್ತು ಕಾನೂನು ಹೋರಾಟ ನಡೆಸಲು ಹಿರಿಯ ಹಾಗೂ ಅನುಭವಿ ವಕೀಲರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ಮಠದ ಆಸ್ತಿಯನ್ನು ಪ್ರಸ್ತುತ ಕೆಂಪು, ಹಳದಿ ಹಾಗೂ ಹಸಿರು ವಲಯಗಳನ್ನಾಗಿ ವಿಭಜಿಸಿ ಕಾನುನು ಘಟಕ ಕ್ರಮ ಕೈಗೊಳ್ಳಲು ಸಿದ್ಧವಾಗಿದೆ. ಆದ್ದರಿಂದ ಅಕ್ರಮವಾಗಿ ಮಠದ ಆಸ್ತಿಯನ್ನು ಬಳಸಿಕೊಳ್ಳುತಿರುವವರು ನೀವಾಗಿಯೇ ಹಿಂತಿರುಗಿಸಿದರೆ ಒಳ್ಳೆಯದು ಎಂದು ತಿಳಿಸಿದರು. ಮಠದ ಆಸ್ತಿ, ಮರಗಳ ಹನನ ಸೇರಿದಂತೆ ಇನ್ನಿತರ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಮಠಗಳು ದಾಸೋಹಕ್ಕೆ ಮೊದಲ ಆದ್ಯತೆ…

Read More

ಮಡಿಕೇರಿ ಅ.30 : ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2023-2024 ನೇ ಸಾಲಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ 7ದಿನಗಳ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ವಿರಾಜಪೇಟೆಯ ಸಂತ ಅನ್ನಮ್ಮ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರತಿಮಾ ರೈ  ಕಾಯ೯ಕ್ರಮದಲ್ಲಿ ಮಾತನಾಡಿ , ಎನ್‍ಎಸ್‍ಎಸ್  ಶಿಬಿರಾರ್ಥಿ ಗಳು ಶಿಬಿರದಲ್ಲಿ ಮೈ ಗೂಡಿಸಿಕೊಂಡಿರುವ ಜೀವನಮೌಲ್ಯ, ಸಹಕಾರ ಮನೋಭಾವ, ಶಿಸ್ತು ಮೊದಲಾದ ಗುಣಗಳನ್ನು ತಮ್ಮ ಜೀವನದ ಭಾಗವಾಗುವಂತೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರತಿ ದಿನ, ಪ್ರತಿ ಕ್ಷಣ ಪ್ರತಿಯೊಂದರಿಂದ ಕಲಿಯುವುದು ಬಹಳಷ್ಟಿದೆ. ಹೀಗಾಗಿ ವಿದ್ಯಾರ್ಥಿಗಳು ಸದಾ ಅಧ್ಯಯನ ಶೀಲರಾಗಿ ಅಪರಿಪೂರ್ಣತೆ ಯಿಂದ ಪರಿಪೂರ್ಣತೆ ಕಡೆಗೆ ಸಾಗುವಂತೆ ಪ್ರತಿಮಾ ರೈ ಸಲಹೆ ನೀಡಿದರು. ವೇದಿಕೆಯಲ್ಲಿ ಶಿಬಿರದ ನಿರ್ದೇಶಕರು ಹಾಗೂ ಸಂಸ್ಥೆ ಯ ಪ್ರಾಂಶುಪಾಲ ಸಿ.ಜಿ. ಮಂದಪ್ಪ, ಹರದೂರು ಗ್ರಾ.ಪಂ ಅಧ್ಯಕ್ಷೆ ಉಷಾ, ಕಾರ್ಯಕ್ರಮಾಧಿಕಾರಿ ಎನ್.ಎನ್. ಮನೋಹರ್, ಸಹ ಶಿಬಿರಾಧಿಕಾರಿ…

Read More

ಪುತ್ತೂರು ಅ.30 : ನೂತನ ಆವಿಷ್ಕಾರ ಮತ್ತು ಕೌಶಲ್ಯದ ಗಮನಾರ್ಹ ಪ್ರದರ್ಶನದ ಮೂಲಕ ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ತಂಡವು ಪ್ರತಿಷ್ಠಿತ ಕಲ್ಟಿನ್ನೋ (Cultinno) ಇನ್ನೋವೇಶನ್ ಹಬ್ ಚಾಲೆಂಜ್ ನ ಅಂತಿಮ ಹಂತಕ್ಕೆ ತಲುಪುವ ಮೂಲಕ ಅಸಾಧಾರಣ ಸಾಧನೆಯನ್ನು ಮಾಡಿದ್ದಾರೆ. ಕಲ್ಟಿನ್ನೋ ಸಂಸ್ಥೆಯು ಆಯೋಜಿಸಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆಯು ಗುರುತಿಸಲ್ಪಟಿದ್ದು, ಯೋಜನೆಯ ಅಂತಿಮ ಹಂತದ ಅಭಿವೃದ್ಧಿಗೆ 25,000 ರೂ. ಗಳ ಅನುದಾನ ದೊರಕಿದೆ. ಎಲೆಕ್ಟ್ರಿಕಲ್ ವಾಟರ್ ಹೀಟರ್ ನ ಕಾಯಿಲ್‌ಗಳ ಮೇಲೆ ಗಡಸು ನೀರಿನ ಪರಿಣಾಮವನ್ನು ಕಡಿಮೆ ಮಾಡುವ ಸವಾಲಿನ ಸ್ಪರ್ಧೆ ಇದಾಗಿದ್ದು, ಸ್ಪರ್ಧೆಯುದ್ದಕ್ಕೂ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಕೌಶಲ ಹಾಗೂ ಹೊಸತನವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರ ಮಟ್ಟದ ತಂಡಗಳೊಂದಿಗೆ ಸ್ಪರ್ಧಿಸಿ ಅಂತಿಮ ಹಂತಕ್ಕೆ ತಲಪಿದ್ದಾರೆ. ಸೂಕ್ತ ಪರಿಹಾರದ ಜೊತೆಗೆ ಶಕ್ತಿಯ ಪರಿಣಾಮಕಾರಿ ಸದ್ಬಳಕೆ, ಕಡಿಮೆ ವೆಚ್ಚ ಹಾಗೂ ಪರಿಸರ ಸ್ನೇಹಿ ಯೋಜನೆಗಳ ಮೂಲಕ ಆಯೋಜಕರ ಗಮನ ಸೆಳೆದಿದ್ದಾರೆ. ದೊರೆತ ಅನುದಾನವನ್ನು ಬಳಸಿ ಮೂಲ…

Read More

ಬೆಂಗಳೂರು ಅ.30 :  ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವಾಲಯದ ಅಧಿಕಾರಿ, ಸಿಬ್ಬಂದಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಹಾಗೂ ನಸೀರ್‌ ಅಹ್ಮದ್‌, ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು  ಸಮಾರಂಭದಲ್ಲಿ  ಪಾಲ್ಗೊಂಡಿದ್ದರು.

Read More

ಮಡಿಕೇರಿ ಅ.30 :  ಕೊಡವ ಕುಟುಂಬ ತಂಡಗಳ ನಡುವಿನ ಮೂರನೇ ವರ್ಷದ ಕೌಟುಂಬಿಕ ಹಗ್ಗ ಜಗ್ಗಾಟ ಸ್ಪರ್ಧೆ ಬೊಟ್ಟೋಳಂಡ ಕಪ್ ಲೋಗೋ ಅನಾವಣಗೊಳಿಸಲಾಯಿತು. ಮಡಿಕೇರಿ ಹೊರ ವಲಯದಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಲಾಂಛನ ಅನಾವರಣ ಮಾಡಿದರು. ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತೀತೀರ ರೋಷನ್ ಅಪ್ಪಚ್ಚು, ಟಗ್ ಆಫ್‌ವಾರ್‌ ಅಕಾಡೆಮಿ ಅಧ್ಯಕ್ಷ ಪೊನ್ನೋಳತಂಡ ಕಿರಣ್ ಸೊನ್ನಪ್ಪ ಮತ್ತಿತರರು ಇದ್ದರು. ಪ್ರಥಮ ವರ್ಷ ಪೊನ್ನೋಳತಂಡ ಕಪ್‌, ದ್ವಿತೀಯ ವರ್ಷ ಚೆಟ್ಟಂಗಡ ಕಪ್ ನಡೆದಿತ್ತು.

Read More

ನಾಪೋಕ್ಲು ಅ.30 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶ್ರೀ ಇಗ್ಗುತ್ತಪ್ಪ ದೇವರ ಪರದಂಡ ಆರಾಧನೆ ಎಂದೇ ಪ್ರಸಿದ್ಧವಾಗಿರುವ ಪತ್ತಾಲೋದಿ ಉತ್ಸವ ಶ್ರದ್ಧಭಕ್ತಿಯಿಂದ ಜರುಗಿತು. ಉತ್ಸವದ ಅಂಗವಾಗಿ ತುಲಾಭಾರ ಸೇವೆ ಹಾಗೂ ವಿವಿಧ ಪೂಜಾ ಕಾರ್ಯಗಳ ನಂತರ ವಿಶೇಷ ಮಹಾಪ ಪೂಜೆ ನೆರವೇರಿತು. ಈ ಸಂದರ್ಭ ಸರ್ವ ಸಮುದಾಯದ ಭಕ್ತ ಜನರ ಶ್ರೇಯೋಭಿವೃದ್ಧಿಗೆ ಹಾಗೂ ಕೊಡಗಿನಲ್ಲಿ ಹಸಿರು ನೆಲೆಸಿ ಸುಭಿಕ್ಷೆ ಸಮೃದ್ಧಿಯಿಂದ ಕೂಡಿರುವಂತೆ ದೇವತಕ್ಕರಿಂದ ಪ್ರಾರ್ಥನೆ ಹಾಗೂ ತೀರ್ಥ ಪ್ರಸಾದ ವಿತರಿಸಲಾಯಿತು. ನಂತರ ಸಂಪ್ರದಾಯದಂತೆ ದೇವರ ನೃತ್ಯ ಬಲಿ ನೆರವೇರಿತು. ಉತ್ಸವದ ಅಂಗವಾಗಿ ದೇವಾಲಯದ ನಮಸ್ಕಾರ ಮಂಟಪ, ಗರ್ಭಗುಡಿ ಸೇರಿದಂತೆ ಸನ್ನಿಧಿಯ ಆವರಣದಲ್ಲಿ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಈ ಸಂದರ್ಭ ದೇವಾಲಯದ ದೇವತಕ್ಕರಾದ ಪರದಂಡ ಕುಟುಂಬಸ್ಥರು ಸೇರಿದಂತೆ ಊರ ಪರ ಊರಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ

Read More

ನಾಪೋಕ್ಲು ಅ.30 : ಪುರಾತನ ಕಾಲದಿಂದ ಸಾಂಪ್ರದಾಯಿಕವಾಗಿ ಸಂರಕ್ಷಿಸಲ್ಪಟ್ಟ ಉಪಯೋಗಿಸಲ್ಪಟ್ಟ ವನ್ಯಜೀವಿಗಳ ಉತ್ಪನ್ನಗಳ ವಿಷಯದಲ್ಲಿ ಆತಂಕ ಮತ್ತು ಗೊಂದಲ ಏರ್ಪಟ್ಟಿದೆ. ಇದು ಕೊಡಗಿನ ಜನರಿಗೂ ಸಮಸ್ಯೆಯಾಗಲಿದೆ. ಈ ಬಗ್ಗೆ ಶಾಸಕರು ಜನರಿಗೆ ಸ್ಪಂದಿಸುವಂತೆ ಅಖಿಲ ಕೊಡವ ಸಮಾಜ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದೆ. ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಿಯಪ್ಪ, ಗೌರವ ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್ ಮಾತನಾಡಿ, ನೆಲಜಿ ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಶಾಸಕರನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಿಯಪ್ಪ , ಗೌರವ ಕಾರ್ಯದರ್ಶಿ ಕೀತಿಯಂಡ ವಿಜಯ ಕುಮಾರ್ ಅವರು ಭೇಟಿಯಾಗಿ ಚರ್ಚಿಸಿದರು. ರಾಜ್ಯದ ಜನಸಾಮಾನ್ಯರಲ್ಲಿ ಬೆಂಗಳೂರಿನ ಅರಣ್ಯಾಧಿಕಾರಿಗಳು ಸೃಷ್ಟಿಸಿದ ಆತಂಕದ ಪರಿಸ್ಥಿತಿಯನ್ನು ವಿವರಿಸಿ, ಜನಸಾಮಾನ್ಯರಲ್ಲಿ ಗೊಂದಲದ ವಾತಾವರಣವನ್ನುಂಟು ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದರು. ಶಾಸಕ ಪೊನ್ನಣ್ಣ ಅವರು ಬೆಂಗಳೂರಿನಲ್ಲಿ ನಡೆದ ಘಟನೆಗಳ ಹಿನ್ನಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ಇನ್ನೆರಡು ದಿವಸಗಳೊಳಗೆ ಜನತೆಯ ಮುಂದಿಡುವುದಾಗಿ ತಿಳಿಸಿದರು.…

Read More