ಮಡಿಕೇರಿ ನ.23 : ಬರ ಪರಿಹಾರವಾಗಿ ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರ 200 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಘಟಕ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ಮಳೆಯ ಕೊರತೆಯಿಂದ ರಾಜ್ಯವ್ಯಾಪಿ ಬರದ ಛಾಯೆ ಮೂಡಿದೆ. ಕೊಡಗು ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದೆ. ಆದರೆ ಸರ್ಕಾರ ಬರ ಪರಿಹಾರ ನೀಡುವ ಕಾಳಜಿಯನ್ನು ತೋರುತ್ತಿಲ್ಲವೆಂದು ಟೀಕಿಸಿದ್ದಾರೆ. ಸಕಾಲದಲ್ಲಿ ಮಳೆ ಬಾರದೆ ಭತ್ತದ ಕೃಷಿಗೆ ಹಿನ್ನಡೆಯಾಗಿದೆ, ಸೆಪ್ಟಂಬರ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಕೃಷಿ ಫಸಲು ಮತ್ತು ಕಾಫಿ ನಷ್ಟವಾಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.30ರಷ್ಟು ಕಡಿಮೆ ಮಳೆಯಾಗಿದ್ದು, ಕೃಷಿಕ ವರ್ಗ ಆತಂಕಕ್ಕೆ ಒಳಗಾಗಿದೆ. ರೈತರ ಒತ್ತಾಯದ ಹಿನ್ನೆಲೆ ರಾಜ್ಯ ಸರ್ಕಾರ ಕೊಡಗು ಜಿಲ್ಲೆಗೆ ಕೇವಲ 7.5ಕೋಟಿ ರೂ. ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿರುವ 2 ಲಕ್ಷಕ್ಕೂ ಅಧಿಕ ಕೃಷಿಕರಿಗೆ ಈ ಹಣವನ್ನು ಹಂಚಿಕೆ ಮಾಡಿದರೆ ತಲಾ 300 ರೂ. ಮಾತ್ರ…
ಲೇಖಕ: admin
ಮಡಿಕೇರಿ ನ.23 : ಸಂಘಟಿತರಾಗುವುದರಿಂದ ಅಗತ್ಯ ಸೌಲಭ್ಯಗಳನ್ನು ಸಹಕಾರಿಯಾಗುವುದಲ್ಲದೇ, ಬಹುಕಾಲದ ಬೇಡಿಕೆಗಳ ಈಡೇರಿಕೆ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅಭಿಮತ ವ್ಯಕ್ತಪಡಿಸಿದರು. ನಗರದ ಮೈತ್ರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗಿನಿಂದ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ಬಳಿಕ ಪೊಲೀಸರು ಸುಗಮ ಜೀವನ ನಡೆಸವಂತಾಗಬೇಕು. ಸರಕಾರದ ಸೌಲಭ್ಯಸುಲಭವಾಗಿ ದೊರೆಯಬೇಕಾದರೆ ಸಂಘಟನಾತ್ಮಕ ಚಟುವಟಿಕೆ ಮುಖ್ಯವಾಗಿತ್ತದೆ. ಸಂಘ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಶ್ಲಾಘಿಸಿದ ಅವರು, ಸಂಘದ ಚಟುವಟಿಕೆಗೆ ಪೂರಕ ಸಹಕಾರ ನೀಡುತ್ತೇನೆ. ಮೈತ್ರಿ ಭವನ ದುರಸ್ತಿ ಕಾರ್ಯಕ್ಕೆ ಶೀಘ್ರದಲ್ಲಿ ಮುಂದಾಗಲಾಗುವುದು. ಇದರಿಂದ ಆರ್ಥಿಕ ಕ್ರೋಡಿಕರಣಕ್ಕೆ ಸಹಕಾರಿಯಾಗಲಿದೆ ಎಂದರು. ಧ್ವಜ ದಿನಾಚರಣೆಯಡಿ ಸಂಗ್ರಹಿಸಿದ ಶುಲ್ಕ ಕಳೆದ ಬಾರಿಗಿಂತ ಶೇ.50ರಷ್ಟು ಹೆಚ್ಚಿದೆ. ಜಿಲ್ಲಾ ಪೊಲೀಸ್ ಇಲಾಖೆಗೂ ನಿವೃತ್ತ ಪೊಲೀಸರ ಮಾರ್ಗದರ್ಶನವಿದೆ. ಕಾಲಕಾಲಕ್ಕೆ ಸರಿಯಾದ ಸಲಹೆ ನೀಡುತ್ತ ವೃತ್ತಿಯಲ್ಲಿರುವ ಪೊಲೀಸರನ್ನು ಜಾಗೃತಗೊಳಿಸುತ್ತಿದ್ದಾರೆ. ನಿವೃತ್ತ ಪೊಲೀಸರಿಗೆ ವಿಮೆ ಯೋಜನೆ ಜಾರಿ ಸಂಬಂಧ ಸರಕಾರದ…
ಮಡಿಕೇರಿ ನ.23 : ಒಂದು ಗ್ರಾಮದಲ್ಲಿ ಒಂದು ಸಹಕಾರ ಸಂಘ ಸ್ಥಾಪನೆಯಾಗಬೇಕೆಂಬುದು ಸರ್ಕಾರದ ಆಶಯವಾಗಿದ್ದು, ಆ ಮೂಲಕ ಸ್ಥಳೀಯ ರೈತರಿಗೆ ಗೊಬ್ಬರ, ಉತ್ಪನ್ನಗಳಿಗೆ ಗೋದಾಮು, ಶಿಕ್ಷಣ ನೀಡುವಂತಹ ಕಾರ್ಯಗಳನ್ನು ಕೈಗೊಂಡು ರೈತರ ಆರ್ಥಿಕತೆಯನ್ನು ವೃದ್ಧಿಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಕರಿಕೆ ಸಹಕಾರ ಸಂಘದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಕರಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರಿಕೆ ಸಹಕಾರ ‘ಸಹಕಾರ ಸಂಸ್ಥೆಗಳಲ್ಲಿ ಸರಳ ವ್ಯಾಪಾರ ಪ್ರಕ್ರಿಯೆ ಮತ್ತು ಉದಯೋನ್ಮುಖ ವಲಯಗಳ’ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಕೊಡಗು ಜಿಲ್ಲೆಯ ಕರಿಕೆ ಭಾಗದಲ್ಲಿ ಅಪ್ಪಿಕೊ ಚಳುವಳಿಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕರಿಕೆ ಪ್ಯಾಕ್ಸ್‍ನ ಸಣ್ಣ ಕೊಠಡಿಯಲ್ಲಿ ಉಳಿದುಕೊಂಡು…
ಮಡಿಕೇರಿ ನ.23 : ಕನಕದಾಸರ ಜಯಂತಿಯನ್ನು ನ.30 ರಂದು ಜಿಲ್ಲಾಡಳಿತ ವತಿಯಿಂದ ವ್ಯವಸ್ಥಿತವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯ ಗಾಂಧಿ ಭವನದಲ್ಲಿ ಕನಕದಾಸರ ಜಯಂತಿಯನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಶಿಷ್ಟಾಚಾರದಂತೆ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಉಪನ್ಯಾಸಕರ ಹೆಸರನ್ನು ತಿಳಿಸುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಕನಕ ಗುರುಪೀಠ ಮತ್ತು ಧರ್ಮದರ್ಶಿ ಎಂ.ನಂಜುಂಡಸ್ವಾಮಿ, ಕೊಡಗು ಜಿಲ್ಲಾ ಕೇಂದ್ರದಲ್ಲಿ ಕನಕದಾಸರ ಜಯಂತಿಯನ್ನು ಅರ್ಥಪೂರ್ಣವಾಗಿ ಆಯೋಜಿಸುವಂತಾಗಬೇಕು ಎಂದು ಮನವಿ ಮಾಡಿದರು. ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕುರುಬ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 25 ಸೆಂಟು ಜಾಗ ಗುರುತಿಸುವಂತಾಗಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಮುಖ್ಯಮಂತ್ರಿ ಅವರು ಜನವರಿ ಮೊದಲ ವಾರದಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ…
ಮಡಿಕೇರಿ ನ.23 : ವಿರಾಜಪೇಟೆ ರೋಟರಿ ಸಂಸ್ಥೆಯ ವತಿಯಿಂದ ನಡೆದ ವಿಜ್ಞಾನ ಮಾದರಿ ತಯಾರಿಕ ಸ್ಪರ್ಧೆಯಲ್ಲಿ ರೋಟರಿ ಪ್ರಾಥಮಿಕ ಶಾಲೆ ವಿರಾಜಪೇಟೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಾದ ಶ್ರೇಯಸ್, ಲಿಖಿತ, ಎಬಿನ್, ಶ್ರೇಷ್ಠ, ತನ್ ಜಿಮ್ ಭೂಕಂಪದ ಎಚ್ಚರಿಕಾ ಯಂತ್ರವನ್ನು ಸಿದ್ದಪಡಿಸಿ ಪ್ರಥಮ ಬಹುಮಾನ ಪಡೆದುಕೊಂಡರು. ಮಕ್ಕಳ ಭವಿಷ್ಯ ಉಜ್ವಲವಾಗಲೆಂದು ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯರಾದ ವಿಶಾಲಾಕ್ಷಿ, ಶಿಕ್ಷಕರು ಹಾಗೂ ಪೋಷಕರು ಹಾರೈಸಿದ್ದಾರೆ.
ಮಡಿಕೇರಿ ನ.23 : ಮಾಯಮುಡಿ ಗ್ರಾಮ ಪಂಚಾಯತ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮುದಾಯ ಹಾಗೂ ಅಕ್ಷರ ಪೌಂಡೇಶನ್ ವತಿಯಿಂದ ಗ್ರಾ.ಪಂ ಮಟ್ಟದ ಶಾಲಾ ಮಕ್ಕಳ ಗಣಿತ ಸ್ಪರ್ಧೆ ನಡೆಯಿತು. ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವು ಸ್ಪರ್ಧಾತ್ಮಕ ಯುಗದಲ್ಲಿದ್ದು, ಮಕ್ಕಳು ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕಷ್ಟಪಟ್ಟು ಓದುವುದರಿಂದ ಯಾವುದೇ ಪ್ರಯೋಜನವಿಲ್ಲ, ಇಷ್ಟಪಟ್ಟು ಓದಿ ಗುರಿಯನ್ನು ತಲುಪಬೇಕು ಮತ್ತು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಮೆಟ್ಟಲಕೋಡ್ ಶಾಲಾ ಮುಖ್ಯೋಪಾದ್ಯಾಯರಾದ ಸೋಪಿಯಾ, ಪರೀಕ್ಷಾ ಮಾರ್ಗದರ್ಶಕರಾದ ಅದೇಂಗಡ ಶೋಭಾ, ಶಿಕ್ಷಕರಾದ ಡಿ.ಯು.ರಾಗಿಣಿ, ಸುಮಿತ ರವಿ, ನಳಿನಿ, ಎಂ.ಟಿ.ಸತ್ಯ, ಪಿ.ವಿ.ಲಾಯ್ದ, ಎಂ.ಕೆ.ಲೀಲ ಉಪಸ್ಥಿತರಿದ್ದರು. ಗಣಿತ ಸ್ಪರ್ಧೆಯಲ್ಲಿ ರುದ್ರಬೀಡು ಹಿರಿಯ ಪ್ರಾಥಮಿಕ ಶಾಲೆ, ಚನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. :::…
ಮಡಿಕೇರಿ ನ.23 : ಮಾಯಮುಡಿ ಸರಕಾರಿ ಪ್ರೌಢಶಾಲೆಯಲ್ಲಿ ನಿರ್ಮಾಣಗೊಳ್ಳಲಿರುವ 5.20ಲಕ್ಷ ರೂ. ವೆಚ್ಚದ ಶೌಚಾಲಯ ಕಾಮಗಾರಿಗೆ ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಚಾಲನೆ ನೀಡಿದರು. ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣಗೊಳ್ಳುತ್ತಿದ್ದು, ಟಾಟು ಮೊಣ್ಣಪ್ಪ ಅವರು ಭೂಮಿಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಶುಚಿತ್ವಕ್ಕೆ ಆದ್ಯತೆ ನೀಡಬೇಕೆಂದು ಕರೆ ನೀಡಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಮೆಟ್ಟಲಕೋಡ್, ನರೇಗ ಅಭಿಯಂತರ ಗಣೇಶ್, ಗ್ರಾ.ಪಂ ಉಪಾಧ್ಯಕ್ಷೆ ಪಿ.ಎಸ್.ಶಾಂತ, ಸದಸ್ಯರುಗಳಾದ ಹೆಚ್.ಆರ್.ಸುಶೀಲ, ಜೆ.ಸುಮಿತ್ರ ಬಸವಣ್ಣ, ಸಿ.ಕೆ.ಪೂವಯ್ಯ, ಪಿ.ಮುತ್ತಮ್ಮ, ಶಾಲಾ ಮುಖ್ಯೋಪಾಧ್ಯಾಯರಾದ ವಾಣಿ ನಾಚಪ್ಪ, ಗುತ್ತಿಗೆದಾರರಾದ ಕಾಚುಮ ಖದೀಜ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ನ.22 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 2009 ರಿಂದ ಇಲ್ಲಿಯವರೆಗೆ 2563 ಹೆಚ್‍ಐವಿ ಸೋಂಕಿತರನ್ನು ಗುರುತಿಸಲಾಗಿದೆ. ಸೋಂಕನ್ನು 2025ರ ಒಳಗಾಗಿ ಶೂನ್ಯಕ್ಕೆ ಇಳಿಸುವ ನಿಟ್ಟಿನ ಗುರಿ ಸರ್ಕಾರದ್ದಾಗಿದೆ. ಈ ಬಾರಿ ಡಿ.1 ರಂದು ‘ಸಮುದಾಯಗಳು ಮುನ್ನಡೆಸಲಿ’ ಎನ್ನುವ ಘೋಷ ವಾಕ್ಯದೊಂದಿಗೆ ‘ವಿಶ್ವ ಏಡ್ಸ್ ದಿನ-2023’ನ್ನು ಆಚರಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.1 ಎಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಜಾಥ, ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು. ::: 657 ಸಾವು ::: ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ನಿಯಂತ್ರಣಾಧಿಕಾರಿ ಡಾ.ಆನಂದ್ ಮಾತನಾಡಿ, ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದಲ್ಲಿ ಕೊಡಗಿನಲ್ಲಿ ಹೆಚ್‍ಐವಿ ಸೋಂಕು ಮತ್ತು ಏಡ್ಸ್ ನಿಯಂತ್ರಣದಲ್ಲಿದ್ದು, ಸೋಂಕಿತರಿಗೆ ಅಗತ್ಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ ಎಂದು…
ಮಡಿಕೇರಿ ನ.22 : ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಪೊ ನ್ನಂಪೇಟೆ ತಾಲ್ಲೂಕಿನ ಕಿರುಗೂರು ಗ್ರಾಮದಲ್ಲಿ ನಡೆದಿದೆ. ಕೋತೂರು ಗ್ರಾಮದ ನಿವಾಸಿ ಶಶಿ(23) ಮೃತ ದುರ್ದೈವಿಯಾಗಿದ್ದಾರೆ. ಬೋಸ್ ಮಂದಣ್ಣ ಎಂಬುವವರಿಗೆ ಸೇರಿದ ಕಾರು ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಗಾಯಾಳು ಶಶಿಯನ್ನು ಗೋಣಿಕೊಪ್ಪ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಪೊನ್ನಂಪೇಟೆ ಕಡೆಯಿಂದ ಬಾಳೆಲೆಗೆ ಹೋಗುತ್ತಿದ ಬೈಕ್ ಹಾಗೂ ಬಾಳೆಲೆಯಿಂದ ಪೊನ್ನಂಪೇಟೆ ಗೆ ಹೋಗುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿತು. ಸ್ಥಳಕ್ಕೆ ವಿರಾಜಪೇಟೆ ಡಿವೈಎಸ್ಪಿ ಆರ್.ಮೋಹನ್ ಕುಮಾರ್ ಹಾಗೂ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿರಾಜಪೇಟೆ ನ.22 : ವಿರಾಜಪೇಟೆ ಮಾಜಿ ಸೈನಿಕರ ಸಂಘದ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಶಾಸಕರ ಕಚೇರಿಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು, ಶಾಲು ಹೊದಿಸಿ, ಸನ್ಮಾನಿಸಿ ಗೌರವಿಸಿದರು. ಈ ಹಿಂದೆ ಸರಕಾರ ಕೊಡಗಿನ ಮಾಜಿ ಸೈನಿಕರಿಗೆ ಜಾಗ ಮಂಜೂರು ಮಾಡಿದ್ದರೂ ಇದುವರೆಗು ಜಿಲ್ಲಾಧಿಕಾರಿಗಳು ಜಾಗವನ್ನು ಮಾಜಿ ಸೈನಿಕರಿಗೆ ಹಸ್ತಾಂತಿಸಿರುವುದಿಲ್ಲ. ಈ ಸಂಬಂಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮಾಜಿ ಸೈನಿಕರು ಶಾಸಕರಿಗೆ ಮನವಿ ಸಲ್ಲಿಸಿದರು. ಸನ್ಮಾನ ಸ್ವಿಕರಿಸಿದ ಮಾತನಾಡಿದ ಶಾಸಕ ಪೊನ್ನಣ್ಣ, ಮಾಜಿ ಸೈನಿಕರಿಗೆ ಜಾಗದ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮೇ.ಜ. ಕಾರ್ಯಪ್ಪ, ಮೇ.ಚಿಂಗಪ್ಪ, ವಿರಾಜಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರಿಶ್, ಸಂಘದ ಸದಸ್ಯರಾದ ಕೊಂಗಂಡ ಭೀಮಯ್ಯ, ಪಟ್ರಪಂಡ ಕರುಂಬಯ್ಯ ಹಾಗೂ ಸೋಮೇಶ್, ತೊರೇರ ರಾಜ ಪೂವಯ್ಯ, ಸುಬ್ಬಯ್ಯ, ಮತ್ತು ಟಿ,ಶೆಟ್ಟಿಗೇರಿ ಸಂಘದ ಆಡಳಿತ ಮಂಡಳಿ ಸದಸ್ಯರು ಮನವಿ ನೀಡುವ ಸಂದರ್ಭ ಹಾಜರಿದ್ದರು.






