ಲೇಖಕ: admin

ವಿರಾಜಪೇಟೆ ಅ.19 : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿರಾಜಪೇಟೆ ಹಿಂದೂ ಅಗ್ನಿದಳದ ವತಿಯಿಂದ ಹತ್ತನೆ ವರ್ಷದ ಪವಿತ್ರ ಕಾವೇರಿ ತೀರ್ಥ ವಿತರಣೆ ಮಾಡಲಾಯಿತು. ಕಾವೇರಿ ತೀರ್ಥೋದ್ಭವದ ನಂತರ  ತಲಕಾವೇರಿಯಿಂದ ವಿರಾಜಪೇಟೆ ತಂದು ನಗರದ ಎಲ್ಲಾ ಮನೆಗಳಿಗೆ ಕಾವೇರಿ ತೀರ್ಥವನ್ನು ಹಿಂದೂ ಅಗ್ನಿ ದಳದ ಅಧ್ಯಕ್ಷ ಸೋಮಶೇಖರ್  ನೇತೃತ್ವದಲ್ಲಿ ವಿತರಿಸಲಾಯಿತು. ಸಮಿತಿಯ ಸಂಚಾಲಕ ದಿನೇಶ್ ನಾಯರ್‌,  ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

Read More

ಮಡಿಕೇರಿ ಅ.19 : ಎರಡೂವರೆ ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎನ್ನುವುದು ಅರ್ಥಹೀನವಾದದ್ದು, ಇದರ ಬದಲಾಗಿ ಕನ್ನಡ ಭಾಷೆ, ಸಂಸ್ಕೃತಿಯನ್ನು ನಮ್ಮ ನಿತ್ಯ ಜೀವನ ಹಾಗೂ ನಮ್ಮ ವ್ಯವಹಾರಗಳಲ್ಲಿ ಬಳಸುವುದು ಆದ್ಯ ಕರ್ತವ್ಯವಾಗಬೇಕೆಂದು ಜಿಲ್ಲಾ ಲೀಡ್‍ಬ್ಯಾಂಕಿನ (ಅಗ್ರಣಿ ಬ್ಯಾಂಕ್) ಮಾಜಿ ಮುಖ್ಯ ವ್ಯವಸ್ಥಾಪಕ ಹಾಗೂ ವೃತ್ತಿ ಮಾರ್ಗದರ್ಶಕ ಆರ್.ಕೆ.ಬಾಲಚಂದ್ರ ಕರೆ ನೀಡಿದರು. ಜಿಲ್ಲಾ ಕ.ಸಾ.ಪ.ಸಹಯೋಗದಲ್ಲಿ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು( ಕ.ಸಾ.ಪ.) ವತಿಯಿಂದ ಕುಶಾಲನಗರದ ಸರಕಾರಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಾಹಿತಿ ದಿವಂಗತ ಎನ್.ಮಹಾಬಲ್ಲೇಶ್ವರ ಭಟ್ ಅವರ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಕನ್ನಡದ ಏಳು ಬೀಳುಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಉಳಿಯಲು ಅಥವಾ ಅಳಿಯಲು ನಾವೇ ಕಾರಣರಾಗುತ್ತೇವೆ, ಭಾಷೆ ಜೀವಂತವಾಗಿರಬೇಕಾದರೆ ಮಾತು ಮತ್ತು ಬರಹ ಎರಡು ಕೂಡ ಪ್ರಮುಖವಾಗಿರಬೇಕು ಎಂದು ಹೇಳಿದ ಅವರು, ಕನ್ನಡದ ಕುರಿತಾದ ಒಲವು ಮತ್ತು ಅರಿವನ್ನು ವಿದ್ಯಾರ್ಥಿ ಸಮುದಾಯದಲ್ಲಿ ಮೂಡಿಸಬೇಕಾಗಿದೆ ಎಂದು ಕರೆ ನೀಡಿದರು. ಒಂದು ಭಾಷೆ ನಾಶವಾದರೆ…

Read More

ಮಡಿಕೇರಿ ಅ.19 : 45ನೇ ವರ್ಷದ ಗೋಣಿಕೊಪ್ಪ ದಸರಾ ಜನೋತ್ಸವದ ಅಂಗವಾಗಿ ಹಲವು ಕಾರ್ಯಕ್ರಮಗಳು ಜನರ ಗಮನ ಸೆಳೆಯಿತು. ಯುವ ದಸರಾ ಸಮಿತಿ ವತಿಯಿಂದ ಆಯೋಜನೆಗೊಂಡಿದ್ದ ಬೈಕ್ ಸ್ಟಂಟ್ ಯುವ ಸಮೂಹವನ್ನು ಆಕರ್ಷಿಸಿತು. ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಬೈಕ್ ಸ್ಟಂಟ್‍ನಲ್ಲಿ ರೈಡರ್‍ಗಳಾದ ಮೈಸೂರಿನ ಸ್ಯುಮ್‍ಸನ್, ಸೌರಭ್ ಹಾಗೂ ಸಾದವ್ ತಮ್ಮ ಮೂರು ಬೈಕ್‍ಗಳಲ್ಲಿ ಸ್ಟಂಟ್ ಮಾಡಿದರು. ತಂಡದ ಸಹಾಸ ನೋಡುಗರನ್ನ ನಿಬ್ಬೆರಗಾಗುವಂತೆ ಮಾಡಿತು. ವೀಲಿಂಗ್, ಸ್ಟಾಪೀ, ಡಾರ್ನೆಟ್, ಕ್ಯಾನ್ ಕ್ರಶ್, ಪ್ರೀ ಸ್ಟೈಲ್ ವ್ಹೀಲಿಂಗ್ ಸಾಹಸ ಪ್ರದರ್ಶನಗಳು ಜನರನ್ನು ಆಕರ್ಷಿಸಿತು. ಬೈಕ್ ಸ್ಟಂಟ್ ವೀಕ್ಷಿಸಲು ಜನರು ಕಿಕ್ಕಿರಿದು ಪಾಲ್ಗೊಂಡಿದ್ದರು. ಮುಂಜಾನೆ ನಗರದ ಉಮಾಮೇಶ್ವರಿ ದೇವಾಲಯ ಆವರಣದಿಂದ ಜಿಲ್ಲಾ ಮಟ್ಟದ ಸೈಕಲ್ ರೇಸ್ ಕ್ರೀಡೆಗೆ ಠಾಣಾಧಿಕಾರಿ ರೂಪದೇವಿ ಬೀರಾದರ್ ಚಾಲನೆ ನೀಡಿದರು. ಈ ಸಂದರ್ಭ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಖಜಾಂಚಿ ದ್ಯಾನ್ ಸುಬ್ಬಯ್ಯ, ಯುವ ದಸರಾ ಸಮಿತಿ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ ಹಾಗೂ ಇತರ ತಂಡದ…

Read More

ನಾಪೋಕ್ಲು ಅ.19 : ಇತಿಹಾಸ ಪ್ರಸಿದ್ಧ ಬಲಮುರಿಯ ಶ್ರೀ ಕಣ್ವ ಮುನೀಶ್ವರ ಕ್ಷೇತ್ರದಲ್ಲಿ ಕಾವೇರಿ ಜಾತ್ರೆಯ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಜಾತ್ರೆಯ ಪ್ರಯುಕ್ತ ತೀರ್ಥ ಪೂಜೆ ಪುಣ್ಯ , ಪಿಂಡ ಪ್ರದಾನ, ಏಕಾದಶಿ ರುದ್ರ ಪಾರಾಯಣ, ಸತ್ಯನಾರಾಯಣ ಪೂಜೆ, ಅಭಿಷೇಕ ಸೇರಿದಂತೆ ಇನ್ನಿತರ ಪೂಜಾ ವಿಧಿ ವಿಧಾನಗಳು ಶ್ರದ್ಧಾ ಭಕ್ತಿಯಿಂದ ಭಕ್ತಾದಿಗಳು ಸಲ್ಲಿಸಿದರು. ಮಧ್ಯಾಹ್ನ ದೇವಾಲಯದಲ್ಲಿ ವಿಶೇಷ ಮಹಾಪೂಜೆ ನೆರವೇರಿ ಪ್ರಸಾದ ವಿತರಿಸಲಾಯಿತು. ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು. ಈ ಸಂದರ್ಭ ದೇವಾಲಯದ ಆಡಳಿತ ಅಧ್ಯಕ್ಷ ನೆರವಂಡ ಉತ್ತಪ್ಪ, ಕಾರ್ಯದರ್ಶಿ ಚೈಯಂಡ ತಿಮ್ಮಯ್ಯ, ಆಡಳಿತ ಮಂಡಳಿ ನಿರ್ದೇಶಕರು ಸೇರಿದಂತೆ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಅರ್ಚಕ ರವಿ ಕಲ್ಲುರಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವರದಿ : ದುಗ್ಗಳ ಸದಾನಂದ.

Read More

ನಾಪೋಕ್ಲು ಅ.19 : ನಾಪೋಕ್ಲುವಿನ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 27ನೇ ವರ್ಷದ ಪವಿತ್ರ ಕಾವೇರಿ ತೀರ್ಥ ವಿತರಿಸಲಾಯಿತು. ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಪ್ರತಿಮೆಯ ಭವ್ಯವಾದ ಪುಷ್ಪಾಲಂಕೃತ ರಥದೊಂದಿಗೆ ಪಾಲೂರಿನ ಪಾಲೂರಪ್ಪ ದೇವಾಲಯದಿಂದ ತಲಕಾವೇರಿಗೆ ತೆರಳಿ ಮೆರವಣಿಗೆ ಮೂಲಕ ಸಾಗಿದ ಸಮಿತಿ ಪದಾಧಿಕಾರಿಗಳು ತೀರ್ಥೋದ್ಭವದ ಬಳಿಕ ವಿವಿಧ ಸ್ಥಳಗಳಲ್ಲಿ ತೀರ್ಥ ವಿತರಿಸಿದರು. ನಂತರ ಪಾಲೂರಿನ ಸತ್ಯ ಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತ್ತು. ಈ ಸಂದರ್ಭ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣಪ್ಪ, ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟ೦ಡ ಸುಮಿದೇವಯ್ಯ ಮಚ್ಚಂಡ ಶಂಭು ಇನ್ನಿತರರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ

Read More

ನಾಪೋಕ್ಲು ಅ.19 : ಇತಿಹಾಸ ಪ್ರಸಿದ್ಧ ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಕಾವೇರಿ ನದಿಗೆ ಮಹಾ ಮಂಗಳಾರತಿಯೊಂದಿಗೆ ತೀರ್ಥ ಸ್ಥಾನ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಭಕ್ತಾದಿಗಳು (ತುಲಾ) ಕಾವೇರಿ ಸಂಕ್ರಮಣದ ಪುಣ್ಯ ತೀರ್ಥ ಸ್ಥಾನ ಮಾಡಿ ಎರಡನೆಯ ಪುಣ್ಯಾತೀರ್ಥ ಸ್ಥಾನವನ್ನು ಮಾಡುವುದು ತಲತಲಾಂತರ ಗಳಿಂದ ನಡೆದು ಬಂದ ಪದ್ಧತಿ ಪರಂಪರೆಯಾಗಿದ್ದು, ಭಕ್ತರು ಜಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿ ತಮ್ಮಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಕೇಶ ಮುಂಡನ, ಪಿಂಡಪ್ರಧಾನ, ಕಾವೇರಿ ತೀರ್ಥಸ್ನಾನ, ಕಾವೇರಿಯ ಬಾಲೋಪಾಟ್ ಮತ್ತಿತರ ಕಾರ್ಯಗಳು ಜರುಗಿದವು. ಕಾವೇರಿ ನದಿಗೆ ಮಹಾ ಮಂಗಳಾರತಿಯನ್ನು ಅರ್ಚಕ ಮಹಾಬಲೇಶ್ವರ ಭಟ್ ಸಹವರ್ತಿಗಳು ನೆರವೇರಿಸಿಕೊಟ್ಟರು. ಬಳಿಕ ನದಿಯಿಂದ ಪವಿತ್ರ ನೀರನ್ನು ಅರ್ಚಕರು ಬಿಂದಿಗೆಯಲ್ಲಿ ತುಂಬಿ ಶ್ರದ್ಧಾ ಭಕ್ತಿಯಿಂದ ದೇವಾಲಯಕ್ಕೆ ಕೊಂಡೊಯ್ದು ದೇವರ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಯಿತು. ಆನಂತರ ವಿಶೇಷ ಮಹಾಪೂಜೆ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು. ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.…

Read More

ಪಯ್ಯನ್ನೂರ್ ಅ.19 : ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಳ್ಳಾಲ ತಂಙ್ಙಳ್  ಅವರ 10ನೇ ಉರೂಸ್ ಸಮಾರಂಭದ ಅಂಗವಾಗಿ ಎಟ್ಟಿಕುಳಂನಲ್ಲಿ ಸಂಭ್ರಮದ ಮದನಿ ಸಂಗಮ ನಡೆಯಿತು. ಕಾರ್ಯಕ್ರಮವನ್ನು ಶೈಖುನಾ ತಾಜುಲ್ ಉಲಮಾರ ಸುಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿ ಕೋಯ ತಂಙ್ಙಳ್ ಸಭೆಯನ್ನು ಉದ್ಘಾಟಿಸಿದರು.  ಮದನಿಸ್ ಅಸೋಸಿಯೇಷನ್ ಕೇಂದ್ರ ಸಮಿತಿಯ ಅಧ್ಯಕ್ಷ  ತೀರ್ಥಹಳ್ಳಿ ಸಯ್ಯಿದ್ ಅಬೂಬಕರ್ ಸಿದ್ದೀಕ್ ಅಲ್-ಹಾದಿ ತಂಙ್ಙಳ್ ವಹಿಸಿದ್ದರು. ಸಯ್ಯಿದ್ ಅಬ್ದುಸ್ಸಲಾಂ ತಂಙ್ಙಳ್ ದುಆಕ್ಕೆ ನಾಯಕತ್ವ ನೀಡಿದರು. ಮದನೀಸ್ ಅಸೋಸಿಯೇಷನ್ ಕೇರಳ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೀಲಗಿರಿ ಬಶೀರ್ ಮದನಿ ಕೀ ನೋಟ್ ಮಂಡಿಸಿದರು. ನಂತರ  ಕೂಳೂರು ಬಶೀರ್ ಮದನಿ “ಸಂಘಟನೆಯ ಅನಿವಾರ್ಯತೆ” ಎಂಬ ವಿಷಯದ ಕುರಿತು  ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ “ಆಧ್ಯಾತ್ಮಿಕ” ಎಂಬ ವಿಷಯದ ಕುರಿತು  ವಿಚಾರ ಮಂಡಿಸಿದರು. ಮದನೀಸ್ ಅಸೋಸಿಯೇಷನ್ ಕೇರಳ ರಾಜ್ಯಾಧ್ಯಕ್ಷ ಸಯ್ಯಿದುಸ್ಸಾದಾತ್ ಆದೂರು ಸಯ್ಯಿದ್ ಅಶ್ರಫ್ ತಂಙ್ಙಳ್, ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙ್ಙಳ್ ಆಶಂಸಾ ಭಾಷಣ ಮಾಡಿದರು. ಸಅದಿಯ್ಯ…

Read More

ಸಿದ್ದಾಪುರ ಅ.19 :  ಗೋಜೊರಿಯೊ ಕರಾಟೆ ಶಾಲೆಯ ಆಶ್ರಯದಲ್ಲಿ ಎರಡು ದಿನಗಳ ರಿಕ್ಯೂ ಕೋಬೋ ಜುಟ್ಸಸು ತರಬೇತಿ ಶಿಬಿರ ನಡೆಯಿತು. ಸಿದ್ದಾಪುರದ ಎಸ್‌.ಎನ್ .ಡಿ.ಪಿ. ಸಭಾಂಗಣದಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಭಾರತೀಯ ಕೊಬೊಡೋ ಸಂಸ್ಥೆಯ ಮುಖ್ಯ ಶಿಕ್ಷಕ ಶಿಬೂಜೋ ಟಿ.ಡಿ. ಜಾನ್ಸನ್  ಹಾಗೂ ಸಹ ಶಿಕ್ಷಕ ಮೋಹನ್ ದಾಸ್ ಆಗಮಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಎರಡು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಕೋಬುಡೂ ತರಬೇತಿಯನ್ನು ನೀಡಲಾಗುತ್ತಿದೆ. ಗೋಜೊರಿಯೊ ಕರಾಟೆ ಶಾಲೆಯ ಮುಖ್ಯ ಶಿಕ್ಷಕ ಎಂ.ಬಿ ಚಂದ್ರನ್  ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಪಾಲ್ಗೊಂಡ ಕರಾಟೆ ಪಟುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹ ಶಿಕ್ಷಕ ಸೆಂಪಾಯಿ ಸಿ.ಹೆಚ್.ಬಶೀರ್, ಅಮೋಗ್ ಗೌಡ , ಹರಿಕೃಷ್ಣ, ಆಕಾಶ್, ಸೋನಿಖಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.  

Read More

ಮಡಿಕೇರಿ ಅ.19 : ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಯುವ ದಸರಾ ಸಮಿತಿ ವತಿಯಿಂದ ಗ್ರೀನ್ ಸಿಟಿ ಫೋರಂ ಸಹಯೋಗದಲ್ಲಿ ‘ದಸರಾ ಸೈಕ್ಲಥಾನ್-2023’ ಹಮ್ಮಿಕೊಳ್ಳಲಾಗಿದೆ. ಅ.21 ರಂದು ಬೆಳಗ್ಗೆ 8 ಗಂಟೆಗೆ ಸೈಕ್ಲಥಾನ್ ಆರಂಭವಾಗಲಿದೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಜನರಲ್ ತಿಮ್ಮಯ್ಯ ಸರ್ಕಲ್, ಹಳೆ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಎಲ್‍ಐಸಿ ಮಾರ್ಗವಾಗಿ ಸಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಳ್ಳಲಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ ಹಾಗೂ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ಲಾಸ್ಟಿಕ್ ಮುಕ್ತ ಕೊಡಗು, ಡ್ರಗ್ಸ್ ಮುಕ್ತ ಕೊಡಗು ಎಂಬ ಧ್ಯೇಯದೊಂದಿಗೆ ಸೈಕ್ಲಥಾನ್ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕವನ್ ಕೊತ್ತೋಳಿ-9741292825 ಸಂಖ್ಯೆಯನ್ನು ಸಂಪರ್ಕಿಸಬಹುದು.

Read More

ಮಡಿಕೇರಿ ಅ.19  : ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ   ಐದನೇ  ದಿನವಾದ   ಶುಕ್ರವಾರ ಮಕ್ಕಳ ದಸರಾ ಸಂಭ್ರಮ ಕಂಡುಬರಲಿದೆ. ಮಕ್ಕಳಿಂದಲೇ     ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಅ. 20 ರಂದು ಶುಕ್ರವಾರ  ಮಕ್ಕಳ ದಸರಾ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ  ರೋಟರಿ ಮಿಸ್ಟಿ ಹಿಲ್ಸ್  ಸಹಯೋಗದಲ್ಲಿ  ಮಕ್ಕಳಿಂದಲೇ ಸಂತೆ, ಅಂಗಡಿ, ಮಂಟಪ ಸ್ಪಧೆ೯ಗಳು ಜರುಗಲಿದ್ದು, ಇವುಗಳೊಂದಿಗೆ ಕ್ಲೇಮಾಡೆಲಿಂಗ್, ಛದ್ಮವೇಶ ಸ್ಪಧೆ೯ಗಳು ಆಯೋಜಿತವಾಗಿದೆ.  ಮಕ್ಕಳ ದಸರಾವನ್ನು ಶಾಸಕ ಡಾ.ಮಂಥರ್ ಗೌಡ ಉದ್ಘಾಟಸಲಿದ್ದು, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್ ಎಸ್ ಸಂಪತ್ ಕುಮಾರ್,  ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ, ಉಪಾಧ್ಯಕ್ಷೆ ಸವಿತಾರಾಕೇಶ್, ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ.ವೈ., ಖಜಾಂಜಿ ಅರುಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ…

Read More