ಲೇಖಕ: admin

ಮಡಿಕೇರಿ ಮೇ 10 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್ ಸೋಮವಾರಪೇಟೆ ತಾಲೂಕಿನ ಕುಂಬೂರು ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ  ಪತ್ನಿ  ಶೈಲಾ ರೊಂದಿಗೆ ಮತಚಲಾಯಿಸಿದರು.

Read More

ಮಡಿಕೇರಿ ಮೇ 10 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ.ಬೋಪಯ್ಯ ಮತಚಲಾಯಿಸಿದರು. ಪತ್ನಿ ಕುಂತಿ ಬೋಪಯ್ಯ ಹಾಗೂ ಪುತ್ರಿ ಯಶಿಕ ರೊಂದಿಗೆ ನಗರದ ಜೂನಿಯರ್ ಕಾಲೇಜು ಆವರಣದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

Read More

ಮಡಿಕೇರಿ ಮೇ 10 :  ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ ನಗರದ ಸಂತ ಮೈಕಲರ ಶಾಲೆಯ ಮತಗಟ್ಟೆಯಲ್ಲಿ ಹಿರಿಯ ರಾಜಕಾರಣಿ ಮಿಟ್ಟು ಚಂಗಪ್ಪ ಹಾಗೂ ಪತ್ನಿ ಯಶಿ ಚಂಗಪ್ಪ ಅವರು 30ನೇ ಬಾರಿಗೆ ಮೊದಲಿಗರಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ. ಎಐಸಿಸಿ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿರುವ 82 ವರ್ಷದ ಮಿಟ್ಟು ಚಂಗಪ್ಪ ಅವರು ಯುವ ಮತದಾರರಿಗೆ ಸ್ಫೂರ್ತಿಯಾಗಿದ್ದಾರೆ.

Read More

ಮಡಿಕೇರಿ ಮೇ 10 :  ಮುಂಜಾನೆಯಿಂದಲೆ  ವಿಧಾನ ಪರಿಷತ್ ಚುನಾವಣೆಗೆ  ಬಿರುಸಿನ ಮತದಾನ ನಡೆಯುತ್ತಿದ್ದು,  ಸಿದ್ದಲಿಂಗಪುರದ ಮತಗಟ್ಟೆ ಸಂಖ್ಯೆ 96 ರಲ್ಲಿ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಮತ ಚಲಾಯಿಸಿದರು.

Read More

ಮಡಿಕೇರಿ ಮೇ 10 :  ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ಬಳಿಯ ಸರ್ಕಾರಿ ವಾಲ್ಮೀಕಿ ಆಶ್ರಮ ಶಾಲೆಯ ಮತಗಟ್ಟೆಯಲ್ಲಿ ಆದಿವಾಸಿಗಳು ಮತದಾನ ಮಾಡಿ ಗಮನ ಸೆಳೆದರು.

Read More

ಮಡಿಕೇರಿ ಮೇ 10 :  ನಗರದ ತಾಲೂಕು ಪಂಚಾಯತ್ ಮತಗಟ್ಟೆಯಲ್ಲಿ  ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮತ್ತು ರೂಪಶ್ರೀ ಸತೀಶ ಅವರು ಮತದಾನ ಮಾಡಿದರು.

Read More

ಮಡಿಕೇರಿ ಮೇ 9 : ಶಸ್ತ್ರ ಚಿಕಿತ್ಸೆಯ ನಂತರ ಎರಡೂ ಕಣ್ಣುಗಳ ದೃಷ್ಟಿಯನ್ನು ಕಳೆದುಕೊಂಡಿರುವ ತರುಣೇಶ ಡಿ.ಎಸ್ ದೇವಗೋಂಡಿ ಅವರಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆ ಆರ್ಥಿಕ ನೆರವನ್ನು ನೀಡಿತು. ನಗರದ ಬಾಲಭವನದಲ್ಲಿ ಧನ ಸಹಾಯ ಹಸ್ತಾಂತರಿಸುವ ಸಂದರ್ಭ ಸಂಸ್ಥೆಯ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ಸದಸ್ಯರುಗಳಾದ ಉಮಾಗೌರಿ, ಮಲ್ಲಿಗೆ ಪೈ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ತರುಣೇಶ ಅವರು 4 ವರ್ಷಗಳ ಹಿಂದೆ ದೃಷ್ಟಿಯನ್ನು ಕಳೆದುಕೊಂಡಿದ್ದರು.

Read More

ಸೋಮವಾರಪೇಟೆ ಮೇ 9 : ಹತ್ತನೇ ತರಗತಿಯಲ್ಲಿ ಸೋಮವಾರಪೇಟೆ ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆ, ತಾಲ್ಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ಆಂಗ್ಲಮಾಧ್ಯಮ ಶಾಲೆ, ಓಎಲ್‌ವಿ ಆಂಗ್ಲ ಮಾಧ್ಯಮ ಶಾಲೆ ಶೇ.100ರಷ್ಟು ಫಲಿತಾಂಶ ಪಡೆದಿವೆ. ನೇರುಗಳಲೆ ಶಾಲೆಯಲ್ಲಿ 18 ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ಅತ್ಯುನ್ನತ ಶ್ರೇಣಿ, 14 ಉನ್ನತಶ್ರೇಣಿ, 3 ದ್ವಿತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಲಾಂಛನ್ ಶೇ.86, ನಿಶಾಂತ್ ಶೇ.85, ನವೀನ್ ಶೇ.84 ಅಂಕಗಳಿಸಿದ್ದಾರೆ. ಕುವೆoಪು ಶಾಲೆಯಲ್ಲಿ 44 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 26 ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವೈ.ಎಸ್.ಧನ್ಯ ಶಾಲೆಗೆ ಟಾಪರ್ ಆಗಿದ್ದು, 907 ಅಂಕಗಳೊoದಿಗೆ ಶೇ.97.12, ಎಸ್.ವೈ.ಹಿಮಾನಿ ಶೇ. 95.36, ಸಿ.ಎಸ್.ಸೂರ್ಯ 95.36, ಪುಷ್ಪಾಂಜಲಿ ಶೇ.93, ಅಮೃತ್ ಶೇ.93 ಅಂಕಗಳಿಸಿದ್ದಾರೆ. ಓಎಲ್‌ವಿ ಶಾಲೆ 83 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 32 ಉನ್ನತಶ್ರೇಣಿ, 14 ದ್ವಿತೀಯ ಶ್ರೇಣಿ, 11 ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕೆ.ಎಸ್.ಅನುಜ್ ಶೇ.98.72 ಅಂಕಗಳೊoದಿಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾನೆ. ದಿವಿನ್…

Read More

ಮಡಿಕೇರಿ ಮೇ 9 : ಹತ್ತನೇ ತರಗತಿ ಪರೀಕ್ಷೆಯಲ್ಲಿ ಮಡಿಕೇರಿ ನಗರದ ಸಂತ ಜೋಸೆಫರ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಆರ್.ರಿದಾ ಸುಮನ್ 625 ಕ್ಕೆ 615 ಅಂಕಗಳನ್ನು ಪಡೆದು ಶೇ. 98.4 ರಷ್ಟು ಫಲಿತಾಂಶದೊoದಿಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕನ್ನಡ 125, ಇಂಗ್ಲೀಷ್ 100, ಹಿಂದಿ 99, ವಿಜ್ಞಾನ 100, ಗಣಿತ 93, ಸಮಾಜ ವಿಜ್ಞಾನ 98 ಅಂಕ ಪಡೆದಿದ್ದಾಳೆ. ಈಕೆ ಮಡಿಕೇರಿ ಆಕಾಶವಾಣಿ ಕಾರ್ಯಕ್ರಮ ನಿರೂಪಕ ಬಿ.ಎಸ್.ರಫೀಕ್ ಅಹ್ಮದ್ ಹಾಗೂ ರೈಹಾನ ದಂಪತಿಯ ಪುತ್ರಿ.

Read More

ಸುಂಟಿಕೊಪ್ಪ ಮೇ 9 : ನಾಕೂರು – ಶಿರಾಂಗಾಲ ಗ್ರಾಮದ ದಿವಂಗತ ರಾಜಪ್ಪ ಮಾಸ್ಟರ್ ಅವರ ಪುತ್ರ, ಪ್ರಸ್ತುತ ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿ ನೆಲೆಸಿದ್ದ ವಕೀಲ ಎಸ್.ಆರ್.ಬಸಪ್ಪ (69) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಈರ್ವರು ಪುತ್ರಿಯರನ್ನು ಅಗಲಿದ್ದಾರೆ.

Read More