ಲೇಖಕ: admin

ಮಡಿಕೇರಿ ಜೂ.14 :  ಮಫ್ರೀಡಂ ಬಾಯ್ಸ್ ಹುಂಡಿ ಎಸ್. ಬಿ. ಸಿ ಸಿದ್ದಾಪುರದಲ್ಲಿ ಆಯೋಜಿಸಲಾದ ಪ್ರಥಮ ವರ್ಷದ ಕೊಡಗು ಮುಸ್ಲಿಂ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕುಶಾಲನಗರ ತಂಡ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. 36 ತಂಡಗಳು ಭಾಗವಹಿಸಿದ ಪಂದ್ಯಾವಳಿಯಲ್ಲಿ ಕುಶಾಲನಗರದ ರಫೀಕ್ – ಅಬು, ವಿರಾಜಪೇಟೆಯ ನವಾಫ್ – ಇರ್ಷಾದ್, ಹುಂಡಿಯ ರಿಯಾಸ್ – ಮುಸ್ತಫಾ, ಗೋಣಿಕೊಪ್ಪ ಸಜೀರ್ – ಸಿಬಿಲ್ ಜೋಡಿಗಳು ಸೆಮಿಫೈನಲ್ ಪ್ರವೇಶಿಸಿತ್ತು. ಕುಶಾಲನಗರ ಹಾಗೂ ವಿರಾಜಪೇಟೆ ನಡುವಿನ ಪ್ರಥಮ ಸೆಮಿಫೈನಲ್ ಪಂದ್ಯಾಟದಲ್ಲಿ ವಿರಾಜಪೇಟೆ ತಂಡವನ್ನು ಮಣಿಸಿ ಕುಶಾಲನಗರ ತಂಡ ಫೈನಲ್ ಪ್ರವೇಶಿಸಿತು. ಹುಂಡಿ ಹಾಗೂ ಗೋಣಿಕೊಪ್ಪ ತಂಡಗಳ ನಡುವಿನ ದ್ವಿತೀಯ ಸೆಮಿಫೈನಲ್  ಪಂದ್ಯಾವಳಿಯಲ್ಲಿ ಗೋಣಿಕೊಪ್ಪ ತಂಡವನ್ನು ಮಣಿಸಿ ಹುಂಡಿ ಜೋಡಿಗಳು ಫೈನಲ್ ಪ್ರವೇಶಿಸಿದರು‌. ರೋಚಕ ಫೈನಲ್ ಪಂದ್ಯಾವಳಿಯಲ್ಲಿ ಹುಂಡಿ ಹಾಗೂ ಕುಶಾಲನಗರ ಮೊದಲ ಸುತ್ತು ಸಹೋದರ ಜೋಡಿಗಳಾದ ರಿಯಾಸ್ ಹಾಗೂ ಮುಸ್ತಫಾ ರವರ ಹುಂಡಿ ತಂಡ ತಮ್ಮದಾಗಿಸಿಕೊಂಡಾಗ, ಎರಡನೇ ಹಾಗೂ ಮೂರನೇ ಸುತ್ತು ರಫೀಕ್ – ಅಬು ಜೋಡಿಗಳಾದ ಕುಶಾಲನಗರ…

Read More

ಮಡಿಕೇರಿ ಜೂ.13 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಸ್ನಾತಕೋತ್ತರ ಕೇಂದ್ರ, ಕೊಡಗು ವಿಶ್ವವಿದ್ಯಾನಿಲಯ ಚಿಕ್ಕಅಳುವಾರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆ, ಮಡಿಕೇರಿ, ಸೋಮವಾರಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕೊಡಗು ಶಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ, ಕುಶಾಲನಗರ ರೋಟರಿ ಸಂಸ್ಥೆ, ಲಯನ್ಸ್ ಸಂಸ್ಥೆ ಹಾಗೂ ವಾಣಿಜ್ಯೋದ್ಯಮಿಗಳ ನಿಗಮದ ಸಂಯುಕ್ತ ಆಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆಯು ಜೂ.14 ರಂದು ಬೆಳಗ್ಗೆ 11 ಗಂಟೆಗೆ ಚಿಕ್ಕ ಅಳುವಾರದ ಕೊಡಗು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು, ಶಾಸಕ ಡಾ.ಮಂಥರ್ ಗೌಡ, ಮುಖ್ಯಮಂತ್ರಿ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಪ್ರತಾಪ್ ಸಿಂಹ,…

Read More

ಮಡಿಕೇರಿ ಜೂ.13 : ಕೇಂದ್ರೀಯ ವಿದ್ಯಾಲಯದಲ್ಲಿ “ಸಂಯೋಜಿತ ಕಲಿಕೆಯ ಸಂದರ್ಭದಲ್ಲಿ ಫೌಂಡೇಶನ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಖಚಿತಪಡಿಸಿಕೊಳ್ಳುವುದು” ಎಂಬ ವಿಷಯದ ಕುರಿತು ಕೊಡಗು ಜಿಲ್ಲೆಯ ಎಲ್ಲಾ ಶಾಲಾ ಶಿಕ್ಷಕರಿಗೆ, ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ವರ್ಚುವಲ್ ನಲ್ಲಿ ಒಂದು ದಿನದ ಕಾರ್ಯಾಗಾರ ನಡೆಯಿತು. ಮುಖ್ಯ ಶಿಕ್ಷಕಿ ನಿರ್ಮಲ ಪತಾರೆ “ಸಂಯೋಜಿತ ಕಲಿಕೆಯ ಸಂದರ್ಭದಲ್ಲಿ ಫೌಂಡೇಶನ್ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರವನ್ನು ಖಚಿತಪಡಿಸಿಕೊಳ್ಳುವುದು” ಎಂಬ ವಿಷಯದ ಕುರಿತು ಪ್ರಸ್ತುತಪಡಿಸಿದರು. ಇದರ ಪ್ರಯುಕ್ತ ಶಾಲಾಮಕ್ಕಳಿಗೆ ಆಯೋಜಿಸಿದ ವಿವಿಧ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಪ್ರತ್ಯೇಕವಾಗಿ ಕಥೆ ಹೇಳುವುದು, ಪದ್ಯ ವಾಚನ, ಪೋಸ್ಟರ್ ತಯಾರಿಕೆ ಮತ್ತಿತರ ಬಗ್ಗೆ ಚರ್ಚೆ ನಡೆಯಿತು. ಮುಂದಿನ ದಿನಗಳಲ್ಲಿ ಡಿಜಿಟಲ್ ಎಜುಕೇಶನ್, ಸ್ಟೋರಿ ಮೇಕಿಂಗ್, ಪೋಸ್ಟರ್ ಮೇಕಿಂಗ್, ಜಾಗೃತಿ ಸೆಷನ್, ಎನ್‍ಇಪಿ ಹಾಗೂ ಜಿ-20 ಯ ಕುರಿತು ಭಾಷಣ ಉತ್ತೇಜಿಸುವ ಬಗ್ಗೆ ಚರ್ಚಿಸಲಾಯಿತು. ಈಗಾಗಲೇ ಕೇಂದ್ರೀಯ ವಿದ್ಯಾಲಯ ಶಾಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಎನ್‍ಇಪಿ ಯನ್ನು ಅಳವಡಿಸಿರುವ ಬಗ್ಗೆಯೂ ಹಾಗೂ ಮಕ್ಕಳಲ್ಲಿ ಯಾವ ರೀತಿಯ ಸಕಾರಾತ್ಮಕ…

Read More

ಮಡಿಕೇರಿ ಜೂ.13 : ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕಿನ ಗ್ರಾ.ಪಂ ಗಳ ಎರಡನೇ ಅವಧಿಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನಿಗಧಿ ಪಡಿಸುವ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅಧ್ಯಕ್ಷತೆಯಲ್ಲಿ ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಿತು. ಮೀಸಲಾತಿ ಸ್ಥಾನ ವಿವರ ಇಂತಿದೆ : ಕುಶಾಲನಗರ ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾ.ಪಂ. ಅಧ್ಯಕ್ಷ(ಪ್ರವರ್ಗ-ಬಿ ಮಹಿಳೆ), ಉಪಾಧ್ಯಕ್ಷ (ಎಸ್‍ಟಿ ಮಹಿಳೆ), ವಾಲ್ನೂರು ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ(ಸಾಮಾನ್ಯ), ನಂಜರಾಯಪಟ್ಟಣ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಸಾಮಾನ್ಯ), ಗುಡ್ಡೆಹೊಸೂರು ಅಧ್ಯಕ್ಷ (ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಕೂಡಿಗೆ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ(ಪ್ರವರ್ಗ-ಎ ಮಹಿಳೆ), ಕೂಡುಮಂಗಳೂರು ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ(ಪ್ರವರ್ಗ-ಎ ಮಹಿಳೆ, ಹೆಬ್ಬಾಲೆ ಅಧ್ಯಕ್ಷ(ಪ್ರವರ್ಗ-ಎ ಮಹಿಳೆ) ಉಪಾಧ್ಯಕ್ಷ(ಎಸ್‍ಸಿ), ತೊರೆನೂರು ಅಧ್ಯಕ್ಷ(ಪ್ರವರ್ಗ-ಎ), ಉಪಾಧ್ಯಕ್ಷ(ಸಾಮಾನ್ಯ ಮಹಿಳೆ), ಶಿರಂಗಾಲ ಅಧ್ಯಕ್ಷ (ಎಸ್‍ಟಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಚೆಟ್ಟಳ್ಳಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಬಿ ಮಹಿಳೆ), ಕೆದಕಲ್ ಅಧ್ಯಕ್ಷ(ಎಸ್‍ಸಿ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಕೊಡಗರಹಳ್ಳಿ ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಎ), ಕಂಬಿಬಾಣೆ ಅಧ್ಯಕ್ಷ(ಎಸ್‍ಸಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), 7ನೇ…

Read More

ಮಡಿಕೇರಿ ಮೇ.13 : ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದು ಗ್ರಾಮೀಣ ಕುಟುಂಬಕ್ಕೆ 100 ದಿನಗಳ ಕೆಲಸವನ್ನು ನೀಡುತ್ತಿದ್ದು, ಅರ್ಹರೆಲ್ಲರೂ ಬಳಸಿಕೊಳ್ಳುವಂತಾಗಬೇಕು ಎಂದು ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ. ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ನರೇಗಾ ಯೋಜನೆಯಡಿ ಹಲವು ಅಭಿವೃದ್ಧಿ ಕೆಲಸಗಳು ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದು, ಪ್ರಮುಖವಾಗಿ “ಅಮೃತ್ ಸರೋವರ” ಕಾಮಗಾರಿ ಪೂರ್ಣಗೊಳ್ಳುವಂತೆ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳ ಅಭಿವೃದ್ಧಿ ಸಂಬಂಧಿಸಿದಂತೆ ಮಾತನಾಡಿ ಜಲ ಜೀವನ್ ಮೀಷನ್ ಯೋಜನೆಯಡಿ ಬಾಕಿ ಇರುವ ಎಲ್ಲಾ ಕಾಮಗಾರಿ ಕೆಲಸಗಳನ್ನು ತುರ್ತಾಗಿ ಪೂರ್ಣಗೊಳಿಸಿ ನೀರಿನ ಸಮಸ್ಯೆಗಳು ಬರದಂತೆ ನೋಡಿಕೊಳ್ಳಲು ತಿಳಿಸಿದರು. ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ನಡೆಸಿ ಮಾದರಿ ಗ್ರಾಮಗಳನ್ನಾಗಿ ಮಾಡಲು ಶ್ರಮಿಸಬೇಕು ಎಂದರು. ಇದೀಗ ಶಾಲೆಗಳು ಪ್ರಾರಂಭವಾಗಿದ್ದು, ಡಿಜಿಟಲ್ ಗ್ರಂಥಾಲಯಗಳಿಗೆ ಶಾಲಾ ಮಕ್ಕಳು ಶೇ.100 ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮವಹಿಸಬೇಕು. ಜೊತೆಗೆ…

Read More

ಮಡಿಕೇರಿ ಜೂ.13 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಆಯೋಜಿಸಿದ್ದ `ಸೆಲ್ಫಿ ಕಂಟೆಸ್ಟ್’ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮೇ 10 ರಂದು ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಂದು ಮತದಾನ ಮಾಡಿದ ಬಳಿಕ ಮತದಾನ ಕೇಂದ್ರದ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಕಳುಹಿಸುವಂತೆ ತಿಳಿಸಲಾಗಿತ್ತು. ಈ ನಿಟ್ಟಿನಲ್ಲಿ ಸ್ಪರ್ಧೆಯ ನಿಯಮಾನುಸಾರ ಸೆಲ್ಫಿ ಕಳುಹಿಸಿ ವಿಜೇತರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿಜೇತರಿಗೆ ಜಿ.ಪಂ.ಸಿಇಒ ಡಾ. ಎಸ್.ಆಕಾಶ್ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಪ್ರಥಮ ಬಹುಮಾನವನ್ನು ಕಾರ್ಯಪ್ಪ, ದ್ವಿತೀಯ ಬಹುಮಾನವನ್ನು ಬಾನಂಡ ಆಶಾ ಸೂದನ್, ತೃತೀಯ ಬಹುಮಾನವನ್ನು ಗಿರಿಕುಮಾರ್ ಪಡೆದುಕೊಂಡರು. ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಯೋಜನಾಧಿಕಾರಿ ರಾಜ್‍ಗೋಪಾಲ್, ತಾ.ಪಂ.ಇಒ ಅಪ್ಪಣ್ಣ ಇತರರು ಇದ್ದರು.

Read More

ಮಡಿಕೇರಿ ಜೂ.13 : ಸೋಮವಾರಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷರು ಮತು ಉಪಾಧ್ಯಕ್ಷರನ್ನು ನಿಗಧಿ ಪಡಿಸುವ ಸಭೆಯು ಪಟ್ಟಣದ ಜಾನಕಿ ಕನ್ವೆನ್ಷನ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮೀಸಲಾತಿ ನಿಗಧಿ ಪ್ರಕ್ರಿಯೆ ನಡೆಸಲಾಗಿದ್ದು, ನೂತನ ಮೀಸಲಾತಿಯಂತೆ ಕೊಡ್ಲಿಪೇಟೆ ಗ್ರಾ.ಪಂ. ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಬಿ ಮಹಿಳೆ), ಬ್ಯಾಡಗೊಟ್ಟ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಎಸ್‍ಟಿ ಮಹಿಳೆ), ಬೆಸ್ಸೂರು ಅಧ್ಯಕ್ಷ(ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಹಂಡ್ಲಿ ಅಧ್ಯಕ್ಷ (ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಶನಿವಾರಸಂತೆ ಅಧ್ಯಕ್ಷ(ಪ್ರವರ್ಗ-ಬಿ ಮಹಿಳೆ), ಉಪಾಧ್ಯಕ್ಷ (ಪ್ರವರ್ಗ-ಎ), ದುಂಡಳ್ಳಿ ಅಧ್ಯಕ್ಷ(ಎಸ್‍ಸಿ), ಉಪಾಧ್ಯಕ್ಷ (ಪ್ರವರ್ಗ-ಎ ಮಹಿಳೆ), ನಿಡ್ತ ಅಧ್ಯಕ್ಷ(ಪ್ರವರ್ಗ-ಎ), ಉಪಾಧ್ಯಕ್ಷ (ಎಸ್‍ಸಿ ಮಹಿಳೆ), ಆಲೂರು ಸಿದ್ದಾಪುರ ಅಧ್ಯಕ್ಷ(ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ(ಎಸ್‍ಸಿ), ಗೌಡಳ್ಳಿ ಅಧ್ಯಕ್ಷ(ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ದೊಡ್ಡಮಳ್ತೆ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಶಾಂತಳ್ಳಿ (ಪ್ರವರ್ಗ-ಎ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ತೋಳೂರು ಶೆಟ್ಟಳ್ಳಿ ಅಧ್ಯಕ್ಷ(ಪ್ರವರ್ಗ-ಎ ಮಹಿಳೆ), ಉಪಾಧ್ಯಕ್ಷ…

Read More

ಮಡಿಕೇರಿ ಜೂ.13 : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಅಂತರ್ ಜಿಲ್ಲಾ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಪ್ಯ ಗ್ರಾಮದ ನಿವಾಸಿ ಸಿ.ಎಚ್ ಸೈಯದ್ ಬಂಧಿತ ಆರೋಪಿ. ನಾಪೋಕ್ಲು ಮೂರ್ನಾಡು ಮುಖ್ಯ ರಸ್ತೆಯಿಂದ ಹೊದವಾಡ ಗ್ರಾಮಕ್ಕೆ ತೆರಳುವ ಕೂಡು ರಸ್ತೆಯಲ್ಲಿರುವ ಬಸ್ ತಂಗುದಾಣದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು ಕಾರ್ಯಾಚರಣೆ ನಡೆಸಿ, 270 ಗ್ರಾಂ. ಗಾಂಜಾ ಸಹಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ಉಪ ಅಧೀಕ್ಷಕ ಸುಂದರ್ ರಾಜ್ ನಿರ್ದೇಶನದಂತೆ ಡಿವೈಎಸ್‍ಪಿ ಜಗದೀಶ್, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್, ಸಿಬ್ಬಂದಿಗಳಾದ ಸಾಜನ್, ಲವಕುಮಾರ್, ಪಂಚಲಿಂಗಪ್ಪ ಸತ್ತಿಗೇರಿ, ಶರತ್ ಕುಮಾರ್, ಪ್ರಸನ್ನ, ಗಿರೀಶ್ ಚಾಲಕ ಷರೀಫ್ ಪಾಲ್ಗೊಂಡಿದ್ದರು.

Read More

ಮಡಿಕೇರಿ ಜೂ.13 : ತಲಕಾವೇರಿಯನ್ನು ಪ್ರವಾಸೋದ್ಯಮ ಪಟ್ಟಿಯಿಂದ ಕೈಬಿಟ್ಟು ತೀರ್ಥಕ್ಷೇತ್ರವಾಗಿ ಘೋಷಿಸಲು ಕೊಡವಾಮೆರ ಕೊಂಡಾಟ ಸಂಘಟನೆ ಒತ್ತಾಯಿಸಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಪೆÇನ್ನಣ್ಣ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು, ಕೊಡವರ ಕುಲದೇವಿ, ಕೊಡಗಿನ ಬಹುಪಾಲು ಜನರ ಆರಾಧ್ಯ ಮಾತೆ, ದಕ್ಷಿಣ ಕರ್ನಾಟಕದ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರಪಟ್ಟಿಯಿಂದ ಕೈ ಬಿಟ್ಟು ಪುಣ್ಯ ತೀರ್ಥಕ್ಷೇತ್ರವೆಂದು ಮುಂಗಡ ಪತ್ರದಲ್ಲಿ ಘೋಷಿಸಬೇಕೆಂದು ಆಗ್ರಹಿಸಿದರು. ಅಲ್ಲದೆ ಸಂಗಮ ಕ್ಷೇತ್ರ ಭಾಗಮಂಡಲವನ್ನು ದೇವಳ ನಗರ (ಟೆಂಪಲ್ ಟೌನ್)ಎಂದು ಸರ್ಕಾರ ಮುಂದಿನ ಮುಂಗಡಪತ್ರದಲ್ಲಿ ಘೋಷಿಸುವುದಲ್ಲದೆ ಪಾರಂಪರಿಕ ಧಾರ್ಮಿಕ ಕ್ಷೇತ್ರವಾಗಿ ಮೂಲತನಕ್ಕೆ ಮತ್ತು ಸ್ಥಳೀಯರ ಬದುಕಿಗೆ ಧಕ್ಕೆ ಬಾರದಂತೆ ವಿಶೇಷ ಅಭಿವೃದ್ಧಿಯ ಪ್ಯಾಕೇಜ್ ಘೋಷಿಸುವಂತೆ ಕ್ರಮವಹಿಸಬೇಕೆಂದು ಒತ್ತಾಯಿಸಿದರು. ಕಳೆದ ಹಲವಾರು ತಿಂಗಳುಗಳಿಂದ ರಚಿಸದೆ ಇರುವ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನ ಸಮಿತಿಯನ್ನು ಒಳಗೊಂಡಂತೆ ಆದಷ್ಟು ಬೇಗ ರಚಿಸಲು ಸರ್ಕಾರ ಮುಂದಾಗಬೇಕೆಂದು ಸಂಘಟನೆಯ ಪ್ರಮುಖರು…

Read More

ಮಡಿಕೇರಿ ಜೂ.13 : ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದರೂ ನಿರೀಕ್ಷಿತ ಮಳೆಯಾಗುತ್ತಿಲ್ಲ. ಜೂನ್ 15ಕ್ಕೆ ಬಿಪೊರ್ ಜೋಯ್ ಚಂಡಮಾರುತ ಗುಜರಾತ್ ಪ್ರವೇಶಿಸಲಿದ್ದು, ಅದರ ಪರಿಣಾಮ ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈಗಾಗಲೇ ಕಂಡು ಬಂದಿರುವುದರಿಂದ ಕೊಡಗಿನಲ್ಲೂ ಶೀತ ಗಾಳಿಯೊಂದಿಗೆ ಸಾಧಾರಣ ಮಳೆಯಾಗುತ್ತಿದೆ. ವಾರ್ಷಿಕ 150 ರಿಂದ 200 ಇಂಚಿಗೂ ಅಧಿಕ ಮಳೆಯಾಗುವ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡು ಎರಡು ವಾರವೇ ಆಗಿದ್ದರೂ ಉತ್ತಮ ಮಳೆಯಾಗಿಲ್ಲ. ಬಿಸಿಲ ನಡುವೆಯೇ ತುಂತುರು ಮಳೆಯಾಗುತ್ತಿದ್ದು, ಕಳೆದ 2 ದಿನಗಳಿಂದ ಚಳಿಯ ವಾತಾವರಣ ಮೂಡಿದೆ. ಚಂಡಮಾರುತದ ಪರಿಣಾಮ ಮೋಡ ಕವಿದ ವಾತಾವರಣದೊಂದಿಗೆ ಚಳಿಯೂ ಇದ್ದು, ಮಳೆ ಆರಂಭಗೊಳ್ಳುವ ಲಕ್ಷಣ ಗೋಚರಿಸಿದೆ. ಚಂಡಮಾರುತದಿಂದ ಉಂಟಾಗಬಹುದಾದ ಅನಾಹುತ ಮತ್ತು ವಾಡಿಕೆ ಮಳೆ ಅತಿಯಾದರೆ ಎದುರಾಗಬಹುದಾದದ ಕಷ್ಟ ನಷ್ಟಗಳನ್ನು ಎದುರಿಸಲು ಜಿಲ್ಲಾಡಳಿತ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜಿಲ್ಲೆಯ ಇಬ್ಬರು ಶಾಸಕರು ಕೂಡ ಮುಂಜಾಗೃತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.…

Read More