ಲೇಖಕ: admin

ಯುಗಾದಿ ಹಬ್ಬವು ಎಲ್ಲರ ಬದುಕಿನಲ್ಲಿ ನೆಮ್ಮದಿ, ಸುಖ,ಶಾಂತಿ, ನೆಲೆಯೂರುವಂತೆ ಮಾಡಲಿ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು : ಕೆ.ಜಿ.ಬೋಪಯ್ಯ, ಶಾಸಕರು, ವಿರಾಜಪೇಟೆ ಕ್ಷೇತ್ರ, ಕೊಡಗು ಜಿಲ್ಲೆ.

Read More

ಯುಗಾದಿಯ ಹೊಸ ಬೆಳಕು ಸರ್ವರಿಗೂ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ : ಶುಭ ಕೋರುವವರು : ಬಿ.ಬಿ.ಐತ್ತಪ್ಪ ರೈ, ಅಧ್ಯಕ್ಷರು, ಕೊಡಗು ಜಿಲ್ಲಾ ತುಳುವೆರ ಜನಪದ ಕೂಟ.

Read More

ಕೊಡಗಿನ ಸಮಸ್ತ ಜನತೆಗೆ ಹಾಗೂ ಬೆಳೆಗಾರರಿಗೆ ಯುಗಾದಿ ಶುಭ ತರಲಿ >> ಶುಭ ಕೋರುವವರು ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ.

Read More

ಮಡಿಕೇರಿ ಮಾ.22 : ಕರ್ನಾಟಕ ಪ್ರಾಢಶಿಕ್ಷಣ ಪರೀಕ್ಷಾಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ  ಹಾಗೂ ಅಖಿಲ ಭಾರತ ಗಂಧರ್ವ ಮಹಾ ವಿದ್ಯಾಲಯ ಮುಂಬೈ ನಡೆಸಿದ ಪ್ರವೇಶಿಕ ಪೂರ್ಣ (3rd level)ಎರಡೂ ಪರೀಕ್ಷೆಯಲ್ಲಿಯು ಪೋನ್ನಂಪೇಟೆ ಯ ಗ್ರೀಷ್ಮ ಎನ್. ಜಿ. ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಇವರು ನಾಟ್ಯ ಸಂಕಲ್ಪ ನೃತ್ಯ ಶಾಲೆಯ ಕು. ಪ್ರೇಕ್ಷ ಭಟ್ ರವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.

Read More

ನಾಪೋಕ್ಲು ಮಾ.22 : ವಾಹನ ಚಾಲಕರು ಮತ್ತು ಮಾಲೀಕರು ತಮ್ಮ ವಾಹನಗಳಿಗೆ ಎಲ್ಲಾ ದಾ ಖಲಾತಿಗಳನ್ನು ಹೊಂದಿರಬೇಕೆಂದು ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಹೇಳಿದರು.  ನಾಪೋಕ್ಲು ಠಾಣೆಯಲ್ಲಿ ಕರೆಯಲಾಗಿದ್ದ ಆಟೋ ಚಾಲಕರ ಮತ್ತು ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು ವಾಹನ ಚಲಾಯಿಸುವವರು ಡ್ರೈವಿಂಗ್ ಲೈಸೆನ್ಸ್, ವಾಹನದ ಇನ್ಸೂರೆನ್ಸ್, ಸೇರಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿರಬೇಕು.ಇಲ್ಲದವರು ಒಂದು ವಾರದೊಳಗೆ  ದಾಖಲೆಗಳನ್ನು ಸರಿಪಡಿಸಬೇಕು ಇಲ್ಲದಿದ್ದರೆ ಮುಂದೆ ಕಾನೂನು ಕ್ರಮಕ್ಕೆ ಬದ್ಧರಾಗಿರಬೇಕೆಂದು ಎಚ್ಚರಿಕೆ ನೀಡಿದರು. ನಗರದಲ್ಲಿ  ಆಟೋ ನಿಲ್ದಾಣಕ್ಕೆ ಸ್ಥಳಾವಕಾಶ ಕಲ್ಪಿಸಿದ್ದರೂ ಅನಾವಶ್ಯಕವಾಗಿ ಆಟೋರಿಕ್ಷಾಗಳು ನಗರದಲ್ಲಿ ಸುತ್ತಾಡಿ ವಾಹನ ದಟ್ಟಣೆಗೆ ಕಾರಣಕರ್ತರಾಗುತ್ತಿದ್ದು  ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು. ನಾಪೋಕ್ಲು ವ್ಯಾಪ್ತಿಯಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟದ ಬಗ್ಗೆ, ಅಕ್ರಮ ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ, ಅಕ್ರಮ ಚಟುವಟಿಕೆ  ಮಾಡುವವರ ಬಗ್ಗೆ ಮಾಹಿತಿ ನೀಡಿ ಉತ್ತಮ ಸಮಾಜಕ್ಕಾಗಿ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದರು. ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದೆಂದು ಠಾಣಾಧಿಕಾರಿ ಮಂಜುನಾಥ್ ತಿಳಿಸಿದರು.  ವಾಹನ…

Read More

ಮಡಿಕೇರಿ ಮಾ.21 : ಸಮಾಜವಾದಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ 1999ರ ವಿಧಾನಸಭಾ ಚುನಾವಣೆಯಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಟಿ.ಕೆ.ಸಾಯಿಕುಮಾರ್ ಅವರು ಇಂದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನಲ್ಲಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಮ್ಮುಖದಲ್ಲಿ ಅವರು ಆಮ್ ಆದ್ಮಿ ಧ್ವಜ ಸ್ವೀಕರಿಸಿದರು. ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಾಯಿಕುಮಾರ್ ಅವರು ಎರಡು ವರ್ಷಗಳ ಕಾಲ ಸೋಮವಾರಪೇಟೆ ತಾಲ್ಲೂಕಿನ ಯುವ ಜನತಾ ದಳದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿ, ಸಹಕಾರ ಸಂಘಗಳ ಅಧ್ಯಕ್ಷರಾಗಿ ಜನಪರ ಕಾರ್ಯ ಮಾಡಿದ್ದಾರೆ. ಇವರ ಸೇರ್ಪಡೆಯಿಂದ ಆಮ್ ಆದ್ಮಿ ಪಾರ್ಟಿಯ ಕೊಡಗು ಘಟಕ ವಿಧಾನಸಭಾ ಚುನಾವಣೆಗೆ ಮತ್ತಷ್ಟು ಸಧೃಡಗೂಂಡಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಸಾಯಿಕುಮಾರ್ ಅವರು ಸಂಪೂರ್ಣ ಸಹಕಾರ ನೀಡಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.

Read More

ಮಡಿಕೇರಿ ಮಾ.21 : ಅಂತರರಾಷ್ಟ್ರೀಯ ಜನಾಂಗೀಯ ತಾರತಮ್ಯ ದಿನವಾದ ಇಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವ ಮೂಲಕ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಿತು. ಬೇಡಿಕೆಗಳ ಪರ ಘೋಷಣೆಗಳನ್ನು ಕೂಗಿದ ಪ್ರಮುಖರು ಅತಿಸೂಕ್ಷ್ಮ ಕೊಡವ ಬುಡಕಟ್ಟು ಜನಾಂಗದ ವಿರುದ್ಧ ನಡೆಯುತ್ತಿರುವ ತಾರತಮ್ಯ ಮತ್ತು ಪ್ರಚೋದನೆಯನ್ನು ಹತ್ತಿಕ್ಕಲು ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಧರಣಿಯ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಾತನಾಡಿ ಈಶಾನ್ಯ ಭಾರತ, ಲೇಹ್ ಮತ್ತು ಲಡಾಕ್, ಸ್ವಲ್ಪ ಮಟ್ಟಿನ ಹೈದರಾಬಾದ್ ಕರ್ನಾಟಕ ಪ್ರದೇಶದ ಮಾದರಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕೊಡವ ಲ್ಯಾಂಡ್‌ನ್ನು ನೀಡಬೇಕು. ಕೊಡವ ಜನಾಂಗವನ್ನು ಸಂವಿಧಾನದ 340 ಮತ್ತು 342 ವಿಧಿಯಡಿ ಎಸ್ಟಿ ಎಂದು ಘೋಷಿಸಬೇಕು. ಕೊಡವರ ಭೂಮಿ, ಜಾನಪದ ಕಲೆ, ಸಂಸ್ಕೃತಿ, ಜಾನಪದ ಕಾನೂನು ವ್ಯವಸ್ಥೆಗಳು, ಸಂಪ್ರದಾಯದ ಕಾನೂನು ಮತ್ತು ಅದರ ಐತಿಹಾಸಿಕ ನಿರಂತರತೆಯನ್ನು ಯಾವುದೇ ಅಡೆತಡೆಯಿಲ್ಲದೆ ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು. ಕೊಡವ ಜನಾಂಗೀಯ “ಸಂಸ್ಕಾರ ಗನ್” ಹಕ್ಕುಗಳನ್ನು…

Read More

ಮಡಿಕೇರಿ ಮಾ.21 : ಕೊಡಗಿನ ಎಲ್ಲಾ ಮಸೀದಿಗಳಿಗೆ ಉಪವಾಸ ತಿಂಗಳಿನ ಬೆಳಗ್ಗಿನ ಜಾವ ಕೊಡುವ ಆಝಾನ್ ಗೆ (ನಮಾಜ್ ಕರೆ) ವಿಶೇಷ ಅನುಮತಿ ನೀಡಬೇಕೆಂದು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ. ವಕ್ಫ್ ಜಿಲ್ಲಾಧ್ಯಕ್ಷ ಪಿ.ಎಂ.ಹಕೀಂ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪವಿತ್ರ ರಂಜಾನ್ ಮಾಸದ ಮಹತ್ವದ ಕುರಿತು ವಿವರಿಸಿದರು. ಮುಸ್ಲಿಮರಿಗೆ ರಂಝಾನ್ ಅತೀ ಪುಣ್ಯ ಮತ್ತು ಪ್ರಾಮುಖ್ಯತೆಯನ್ನು ಹೊಂದಿರುವ ತಿಂಗಳಾಗಿದೆ. ಎಲ್ಲರೂ ಒಂದೇ ಕಾರ್ಯವನ್ನು, ಸಮಾನ ರೀತಿಯಲ್ಲಿ, ಏಕಕಾಲದಲ್ಲಿ ಹಾಗೂ ಏಕ ಉದ್ದೇಶದಿಂದ ಮಾಡುತ್ತಿದ್ದೇವೆ ಎನ್ನುವ ಭಾವನೆಯನ್ನು ಮೂಡಿಸುತ್ತದೆ. ಮುಖ್ಯವಾಗಿ ಉಪವಾಸದ ಸಂದರ್ಭಗಳಲ್ಲಿ ಉಪವಾಸ ಸಿಂಧು ಅಥವಾ ಅಸಿಂಧು ಎಂದು ನಿರ್ಧಾರವಾಗುವುದು ಅಝಾನ್ ನಿಂದ. ಆದ್ದರಿಂದ ರಂಜಾನ್ ತಿಂಗಳನ್ನು ವಿಶೇಷವಾಗಿ ಪರಿಗಣಿಸಿ ಎಲ್ಲಾ ಮಸೀದಿಗಳಿಗೆ ಬೆಳಗ್ಗಿನ ಜಾವ ಆಝಾನ್ ಕರೆಗೆ ವಿಶೇಷ ಅನುಮತಿ ನೀಡಬೇಕೆಂದು ಹಕೀಂ ಮನವಿಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಮಾ.21 : ರಾಜ್ಯ ಸರ್ಕಾರ ಕೊಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಕೊಡವ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುವುದು ಸ್ವಾಗತಾರ್ಹ ಕ್ರಮವೆಂದು ಹರ್ಷ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಜೆಪಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ಮುಖ್ಯಮಂತ್ರಿಗಳು ನಿಗಮಕ್ಕೆ 100 ಕೋಟಿ ರೂ. ಅನುದಾನವನ್ನು ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರ ಅನೇಕ ವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಈಡೇರಿಸಿದ್ದಾರೆ. ಅವರಿಗೆ ನಾವು ಚಿರಋಣಿಗಳಾಗಿದ್ದೇವೆ, ಕೊಡವರ ಸರ್ವಾಂಗೀಣ ಅಭಿವೃದ್ಧಿಗಾಗಿ ಇರುವ ನಿಗಮಕ್ಕೆ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆ ನಿಗಮ ಸ್ಥಾಪನೆಯ ಬೇಡಿಕೆ ಇಟ್ಟಾಗ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ತಾವು ಸೇರಿದಂತೆ ಅನೇಕರು ಬೆಳಗಾವಿಗೆ ನಿಯೋಗ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದೆವು. ಅಂದು ಸಿಎಂ ನೀಡಿದ ಭರವಸೆ ಇಂದು ಈಡೇರಿದ್ದು, ಶಾಸಕರಾದ ಕೆ.ಜಿ.ಬೋಪಯ್ಯ, ಯುಕೊ ಸಂಘಟನೆಯ ಎಲ್ಲಾ ಪದಾಧಿಕಾರಿಗಳು,…

Read More

ಮಡಿಕೇರಿ ಮಾ.21 : ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನವನ್ನು ವಿರಾಜಪೇಟೆ ಕ್ಷೇತ್ರ ವ್ಯಾಪ್ತಿಗೆ ನೀಡಿದೆ. ಆದರೆ ಬಿಜೆಪಿ ಪದಾಧಿಕಾರಿಯಾಗಿದ್ದ ಜೋಕಿಂ ರೋಡ್ರಿಗಸ್ ಅವರು ಸ್ವಹಿತಾಸಕ್ತಿಗೋಸ್ಕರ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಅಧ್ಯಕ್ಷ ಪಿ.ಎಂ.ಹಕೀಂ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಪದಾಧಿಕಾರಿಯಾಗಿದ್ದ ಜೋಕಿಂ ರೋಡ್ರಿಗಸ್ ಅವರು ಸರ್ಕಾರದಿಂದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯಕ್ಕೆ ಯಾವುದೇ ಪ್ರಯೋಜನವಾಗಿಲ್ಲವೆಂದು ಟೀಕೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರದ ಕಳೆದ ಐದು ವರ್ಷಗಳ ಅವಧಿಯಲ್ಲಿ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಚರ್ಚ್‍ಗಳ ಸಮುದಾಯ ಭವನ ನಿರ್ಮಾಣ, ಸ್ಮಶಾನ ಅಭಿವೃದ್ಧಿ ಮೊದಲಾದ ಕಾರ್ಯಗಳಿಗೆ 10 ಕೋಟಿಗೂ ಹೆಚ್ಚಿನ ಅನುದಾನವನ್ನು ಶಾಸಕ ಕೆ.ಜಿ.ಬೋಪಯ್ಯ ಅವರ ಶಿಫಾರಸ್ಸಿನ ಮೇಲೆ ಒದಗಿಸಲಾಗಿದೆ. ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದ ಸಂದರ್ಭ ಕ್ರಿಶ್ಚಿಯನ್ ಅಭಿವೃದ್ಧಿ…

Read More