ಲೇಖಕ: admin

ಮಡಿಕೇರಿ ಮಾ.21 : ಎಂಬತ್ತು ವರ್ಷ ಮೇಲ್ಪಟ್ಟ ಹಿರಿಯರು, ವಿಕಲಚೇತನರು, ಕೋವಿಡ್-19 ಸೋಂಕಿತ/ ಬಾದಿತ ವ್ಯಕ್ತಿಗಳು ಹಾಗೂ ಅಗತ್ಯ ಸೇವೆಯಲ್ಲಿರುವವರು, ಮತಗಟ್ಟೆ ಕೇಂದ್ರಕ್ಕೆ ತೆರಳಲು ಆಗದಿರುವ ಮತದಾರರಿಗೆ ‘ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿದೆ. ಈ ಅವಕಾಶವನ್ನು ಅರ್ಹರು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿದರು. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ ಸಂಬಂಧ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರು, ಕೋವಿಡ್-19 ನಿಂದ ಬಾದಿತ ವ್ಯಕ್ತಿಗಳು ಹಾಗೂ ಅಗತ್ಯ ಸೇವೆಯಲ್ಲಿರುವ ವಿದ್ಯುತ್, ಬಿಎಸ್‍ಎನ್‍ಎಲ್, ರೈಲ್ವೆ, ದೂರದರ್ಶನ, ಆಕಾಶವಾಣಿ, ಆರೋಗ್ಯ, ವಿಮಾನಯಾನ, ರಾಜ್ಯ ರಸ್ತೆ ಸಾರಿಗೆ ನಿಗಮ, ಅಗ್ನಿಶಾಮಕ, ಮಾಧ್ಯಮ, ಸಂಚಾರಿ ಪೊಲೀಸ್ ಹಾಗೂ ಆಂಬ್ಯುಲೆನ್ಸ್‍ನಲ್ಲಿ ಸೇವೆ ನಿರ್ವಹಿಸುತ್ತಿರುವವರು ‘ಅಂಚೆ ಮತಪತ್ರ’ ಪಡೆದು ಮತದಾನ ಮಾಡಬಹುದಾಗಿದೆ ಎಂದು…

Read More

ಮಡಿಕೇರಿ ಮಾ.21 :  ಕೊಡಗು ಹಿತರಕ್ಷಣಾ ವೇದಿಕೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ನಗರದ ತ್ಯಾಗರಾಜ ಕಾಲೋನಿಯ ಶಕ್ತಿ ವೃದ್ಧಾಶ್ರಮದ  ವಾಸಿಗಳೊಡನೆ ಅರ್ಥಪೂರ್ಣವಾಗಿ ಆಚರಿಸಲಾಯಿತು.  ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಮೀನಾಜ್ ಪ್ರವೀಣ್  ಮಾತನಾಡಿ, ವೇದಿಕೆ ನಡೆದು ಬಂದ ಹಾದಿ ಹಾಗೂ ವೇದಿಕೆಯ ಕಾರ್ಯ ವೈಕರಿಗಳ ಬಗ್ಗೆ ಮಾಹಿತಿ ನೀಡಿದರು. ಸಮಾಜ ಸೇವಕ  ವಿಕ್ರಂ ಶೆಟ್ಟಿ ( ವಿಕ್ರಂ ಜಾದೂಗಾರ್ )  ಮಾತನಾಡಿ, ವೇದಿಕೆ ವತಿಯಿಂದ ಉತ್ತಮ ಕಾರ್ಯಕ್ರಮಗಳು  ನಡೆಸಲಾಗುತ್ತಿದ್ದು,  ಜನರ ಸಮಸ್ಯೆ ಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದೆ.  ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದ ಅವರು, ವೇದಿಕೆಯ ಜನಪರ ಕೆಲಸಗಳಿಗೆ ನಮ್ಮ ಸಹಕಾರವಿದೆ ಎಂದು ಹೇಳಿದರು. ಪ್ರಾಸ್ತಾವಿಕ ಮಾತನಾಡಿದ ವೇದಿಕೆ ಅಧ್ಯಕ್ಷ  ರವಿ ಗೌಡ,  ವೇದಿಕೆಯು  ಕಳೆದ ನಾಲ್ಕು ವರ್ಷಗಳಿಂದ ಉತ್ತಮ ರೀತಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದು,   ಕೊಡಗಿನಾದ್ಯಂತ  ಕೊಡಗು ಹಿತರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವೇದಿಕೆಯ ಪ್ರತಿ ಸದಸ್ಯರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದನೆ ನೀಡುತ್ತಿದ್ದು, ಮುಂದಿನ…

Read More

ಮಡಿಕೇರಿ ಮಾ.21 :  ಗೋಣಿಕೊಪ್ಪದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್ ಮೇಲೆ ಚಪ್ಪಲಿ ಚಿತ್ರವನ್ನಿಟ್ಟು ಅವಮಾನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು  ಆಗ್ರಹಿಸಿ  ದಲಿತ ಸಂಘರ್ಷ ಸಮಿತಿ ಕೊಡಗು  ಜಿಲ್ಲಾ ಘಟಕ ಆಗ್ರಹಿಸಿದೆ. ತಿತಿಮತಿಯ ಬಸ್ ನಿಲ್ದಾಣದಲ್ಲಿ  ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು ಮಾನವ ಸರಪಳಿ ರಚಿಸಿ ತಪ್ಪಿತಸ್ಥರನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು. ಬಿಜೆಪಿ ವತಿಯಿಂದ ಗೋಣಿಕೊಪ್ಪದಲ್ಲಿ ಆಯೋಜಿಸಿದ್ದ ವಿಜಯಸಂಕಲ್ಪ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ಪೋಸ್ಟರ್ ಮೇಲೆ ಮುಖ್ಯಮಂತ್ರಿಯವರ ಭಾವಚಿತ್ರದ ಪೋಸ್ಟರ್ ಅಳವಡಿಸಿ, ಅವರ ಕಾಲಿನ ಚಪ್ಪಲಿ, ಅಂಬೇಡ್ಕರ್ ಚಿತ್ರದ ತಲೆಯ ಮೇಲೆ ಇರುವಂತೆ ವ್ಯವಸ್ಥಿತವಾಗಿ ಕಟ್ಟಿದ್ದಾರೆ. ಬಿಜೆಪಿ, ಸಂಘಪರಿವಾರದ ಕಿಡಿಕೇಡಿಗಳ ಮನಸ್ಥಿತಿ ಇಂತಹ ಕೃತ್ಯಗಳಿಂದ ತಿಳಿದು ಬರುತ್ತದೆ ಎಂದು ದೂರಿದರು. ಈ ವಿಷಯವಾಗಿ ಗೋಣಿಕೊಪ್ಪ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಇದುವರೆಗೂ ಬಂದಿಸಿರುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ, ಗಡಿಪಾರು ಮಾಡುವಂತೆ ಸಂಘಟನೆಯ ಪ್ರಮುಖರು ಒತ್ತಾಯಿಸಿದರು.…

Read More

ಮಡಿಕೇರಿ ಮಾ.20 : ಕೊಡಗು ಗೌಡ ವಿದ್ಯಾ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಂಬೇಕಲ್ಲು ನವೀನ್ ಕುಶಾಲಪ್ಪ 1,118 ಮತ ಪಡೆದು ಜಯಗಳಿಸಿದ್ದಾರೆ. ಎದುರಾಳಿ ಕಟ್ಟೆಮನೆ ಸೋನಾ 949 ಮತ ಪಡೆದು ಪರಾಜಿತಗೊಂಡಿದ್ದಾರೆ. ನಗರದ ಕೊಡಗು ಗೌಡ ಸಮಾಜ ಆವರಣದಲ್ಲಿ 6 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. 5,100 ಸದಸ್ಯರ ಪೈಕಿ 2088 ಸದಸ್ಯರು ಮತದಾನ ಮಾಡಿದರು. ಇದರಲ್ಲಿ 38 ಮತಗಳು ಅಸಿಂಧುಗೊಂಡವು. ಅಧ್ಯಕ್ಷ, ಉಪಾಧ್ಯಕ್ಷ, ಕೋಶಾಧಿಕಾರಿ ಪ್ರತಿ ಸ್ಥಾನಕ್ಕೆ ಇಬ್ಬರು ಹಾಗೂ ಉಳಿದ 6 ನಿರ್ದೇಶಕ ಸ್ಥಾನಕ್ಕೆ ಒಟ್ಟು 12 ಮಂದಿ ಸ್ಪರ್ಧಿಸಿದ್ದು, ಕಾರ್ಯದರ್ಶಿಯಾಗಿ ಪೇರಿಯನ ಉದಯಕುಮಾರ್, ಜಂಟಿ ಕಾರ್ಯದರ್ಶಿಯಾಗಿ ತಳೂರು ಕೆ.ದಿನೇಶ್ ಕುಮಾರ್, ನಿರ್ದೇಶಕರುಗಳಾಗಿ (ಮಹಿಳಾ ಮೀಸಲು) ಕೆದಂಬಾಡಿ ಕಾಂಚನ ಕೀರ್ತನ್, ಪಾಂಡನ ಪುಷ್ಪವೇಣಿ ಪ್ರಕಾಶ್, ಪುದಿಯನೆರವನ ರೇವತಿ ರಮೇಶ್ ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಅಮೆ ಸಿ ಸೀತಾರಾಮ 1109 ಮತ ಪಡೆದು ಜಯಗಳಿಸಿದರೆ, ಕೆದಂಬಾಡಿ ಎಸ್.ಕೀರ್ತಿಕುಮಾರ್ 945 ಮತದಿಂದ ಸೋಲು ಅನುಭವಿಸಿದರು. ಕೋಶಾಧಿಕಾರಿ ಸ್ಥಾನಕ್ಕೆ ಸ್ಪರ್ಧಿಸಿದ್ದ…

Read More

ಮಡಿಕೇರಿ ಮಾ.21 : ಅಲ್ಲಾರಂಡ ರಂಗಚಾವಡಿ ವತಿಯಿಂದ ಮಾ.27 ರಂದು ಮಡಿಕೇರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಡೆಯಲಿದೆ. ಅಂದು ಬೆಳಿಗ್ಗೆ 10.30 ಗಂಟೆಗೆ ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ರಂಗ ಭೂಮಿ ಕಲಾವಿದ, ಕಸಾಪ ಮಾಜಿ ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಶ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಲ್ಲಾರಂಡ ರಂಗಚಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯರಾದ ರಾಧ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ರಂಗ ಕಲಾವಿದರಾದ ಉಳ್ಳಿಯಡ ಡಾಟಿ ಪೂವಯ್ಯ, ಪಟ್ಟಡ ಧನು, ರಂಗ ಕರ್ಮಿ ಬಾಲಾಜಿ ಕಶ್ಯಪ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ಮಾದೇಟಿರ ಬೆಳ್ಯಪ್ಪ ನಿರ್ದೇಶನದ “ಕಣಿವೆಯ ನೆಳಲಲ್ಲಿ” ನಾಟಕ ಪ್ರದರ್ಶನ ನಡೆಯಲಿದೆ ಎಂದು ಅಲ್ಲಾರಂಡ ರಂಗಚಾವಡಿಯ ಸಂಚಾಲಕ ಅಲ್ಲಾರಂಡ ವಿಠಲ ನಂಜಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಡಿಕೇರಿ ಮಾ.21 : ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೀಡುವ ಪ್ರಭಾಕರ ಕಲ್ಲೂರಾಯ ವಾರ್ಷಿಕ ದತ್ತಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಸ್ಮರಣಿಕೆಯನ್ನು ಹೊಂದಿದ್ದು, ಏ.30 ರಂದು ಕೇರಳದ ಕೊಚ್ಚಿನ್ ನಗರದ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎ.ಆರ್ ಸುಬ್ಬಯ್ಯಕಟ್ಟೆ ತಿಳಿಸಿದ್ದಾರೆ.

Read More

ಮಡಿಕೇರಿ ಮಾ.21 :  ನಾಪೊಕ್ಲುವಿನಲ್ಲಿ ನಡೆದ ಅಪ್ಪಚೆಟ್ಟೊಳಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಯಂತೆ ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ಸರಕಾರ ನುಡಿದಂತೆ ನಡೆದಿದೆ,  ಮುಖ್ಯಮಂತ್ರಿಗಳಿಗೆ, ಶಾಸಕರುಗಳಿಗೆ ಹಾಗೂ ಸರ್ಕಾರಕ್ಕೆ ಕೊಡವ ಜನಾಂಗದ ಪರವಾಗಿ ಧನ್ಯವಾದಗಳು ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದೆ. ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿರುವ ಅವರು ಇದರ ಯಶಸ್ಸಿನ ಹಿಂದೆ ಹಗಲಿರುಳು ಶ್ರಮಿಸಿರುವ ಯುಕೊ ಸಂಸ್ಥೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಬಳಗದವರ ಶ್ರಮ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಜನಾಂಗದ ಪರವಾಗಿ ಧನ್ಯವಾದ ಅರ್ಪಿಸಿದ್ದಾರೆ.…

Read More

ಮಡಿಕೇರಿ ಮಾ.21 :  ಚೆನ್ನೈನಲ್ಲಿ ಜರುಗಿದ ಇಂಡಿಯನ್ ನ್ಯಾಷನಲ್ ರೇಸಿಂಗ್ ಚಾಂಪಿಯನ್ ಶಿಪ್ ಮೋಟಾರ್ ರ‍್ಯಾಲಿಯ 4 ವಿಭಾಗಗಳಲ್ಲಿ ಕೊಡಗಿನ ಅಭಿನ್ ರೈ ಮೊದಲ ಸ್ಥಾನದೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಮದ್ರಾಸ್ ಮೋಟಾರ್ ಸ್ಪೋಟ್ಸ್ ಕ್ಲಬ್ ಆಯೋಜಿಸಿದ್ದ ಏಷ್ಟಾ ಪೆಸಿಫಿಕ್ ಮೋಟಾರ್ ರ‍್ಯಾಲಿಯಲ್ಲಿ ಹೋಂಡಾ ಸಿಟಿ ಕಾರ್ ನಲ್ಲಿ ಪಾಲ್ಗೊಂಡಿದ್ದ ಮೇಕೇರಿ ಗ್ರಾಮಮೂಲದ ಅಭಿನ್ ರೈ, ರಾಷ್ಟ್ರೀಯ ಮಟ್ಟದ ರ‍್ಯಾಲಿ ಚಾಲಕರಿಗೆ ಪ್ರಬಲ ಸ್ಪಧೆ೯ಯೊಡ್ಡಿದ್ದು 61 ಸ್ಪಧಿ೯ಗಳ ಪೈಕಿ ಅಂತಿಮ ಹಂತದಲ್ಲಿ 15 ನೇ ಸ್ಥಾನ ಪಡೆದುಕೊಂಡಿದ್ದಾರೆ. ಅಭಿನ್ ಜತೆ ನ್ಯಾವಿಗೇಟರ್ ಆಗಿ ಉದಯ್ ಕುಮಾರ್ ಪಾಲ್ಗೊಂಡಿದ್ದರು. ಈಗಾಗಲೇ 53 ಪ್ರಶಸ್ತಿಗಳನ್ನು ಅಭಿನ್ ಮೋಟಾರ್ ರ‍್ಯಾಲಿ  ಕ್ಷೇತ್ರದಲ್ಲಿ ತನ್ನದಾಗಿಸಿಕೊಂಡ ಹಿರಿಮೆಗೆ ಪಾತ್ರರಾಗಿದ್ದಾರೆ. ಅಭಿನ್ ರೈ ಮೇಕೇರಿ ಗ್ರಾಮದ ರತ್ನಾಕರ್ ರೈ ಮತ್ತು ನಮಿತಾ ರೈ ದಂಪತಿ ಪುತ್ರನಾಗಿದ್ದಾನೆ.

Read More

ಮಡಿಕೇರಿ ಮಾ.21 :  ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ,  ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೊಡಗು ಜಿಲ್ಲೆ,  ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಕೊಡಗು ಜಿಲ್ಲೆ,  ಮೆಕ್‌ಗಿಲ್ ವಿಶ್ವವಿದ್ಯಾನಿಲಯ ಕೆನಡಾ ಮತ್ತು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಡಗು ಶಾಖೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ ಮಡಿಕೇರಿಯ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಸಭಾಂಗಣದಲ್ಲಿ “ವಿಪತ್ತು ನಿರ್ವಹಣೆಯಲ್ಲಿ ವಿಶೇಷಚೇತನರ ಅವಶ್ಯಕತೆಗಳ ಅಳವಡಿಕೆಯ” ವಿಷಯದ ಕುರಿತಂತೆ ಜಿಲ್ಲಾ ಮಟ್ಟದ ಪ್ರಸರಣ ಕಾರ್ಯಾಗಾರ  ನಡೆಯಿತು. ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್   ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು 2018 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ವಿಪತ್ತು ಹಾಗೂ ಪ್ರವಾಹದ ಅನುಭವಗಳ ಕುರಿತಾದ ಮಾಹಿತಿಯನ್ನು ಹಂಚಿಕೊಂಡರು.  2018 ಆಗಸ್ಟ್ ಮಾಹೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದ ಅನುಭವಗಳ ಕುರಿತಾಗಿ ಹಾಗೂ ವಿಪತ್ತು ನಿರ್ವಹಣೆ ಯೋಜನೆಗೆ ನಿಯೋಜನೆಗೊಂಡಿದ್ದ ಎನ್.ಡಿ.ಆರ್.ಎಫ್ ತಂಡಗಳ ಕಾರ್ಯ ವೈಕರಿಗಳ…

Read More

ಚೆಟ್ಟಳ್ಳಿ ಮಾ.21 :    ಚೆನ್ನೈನಲ್ಲಿ ನಡೆದ ಇಂಡಿಯನ್ ನ್ಯಾಷನಲ್  ಸೌತ್ ಇಂಡಿಯಾ ರ‍್ಯಾಲಿಯ  ಜಿಪ್ಸಿಕ್ಲಾಸ್ ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೈವರ್) ಹಾಗೂ ಮೇಕೇರಿರ ಅಭಿನವ್ ಗಣಪತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ಮಾ.16 ರಿಂದ ಮಾ.19 ರವರೆಗೆ ಚೆನ್ನೈನಲ್ಲಿ ನಡೆದ ಈ ವರ್ಷದ ಮೊದಲ ಇಂಡಿಯನ್ ನ್ಯಾಷನಲ್ ರ‍್ಯಾಲಿ (INRC)ಯು ಚೆನ್ನೈನಲ್ಲಿ ಐಎನ್ ಆರ್ ಸಿ 1 ರಿಂದ ಐನ್ ಆರ್ ಸಿ 4 ಕ್ಯಾಟಗರಿ ಹಾಗೂ ಜಿಪ್ಸಿ ಕ್ಯಾಟಗರಿಯು ಹೆಚ್ಚಿನ  ವೇಗದ ತೀರಾ ಅಪಾಯ ಕಾರಿ ರ‍್ಯಾಲಿ  ನಡೆದಿದ್ದು, ರಾಷ್ಟ್ರ ಹಾಗೂ  ಅಂತರರಾಷ್ಟ್ರೀಯ ಮಟ್ಟದ 60 ನುರಿತ ರ‍್ಯಾಲಿ ಪಟುಗಳು ಭಾಗವಹಿಸಿದರು. ಜಿಪ್ಸಿಕ್ಲಾಸ್ ನಲ್ಲಿ ಕೊಡಗಿನ ಪೊನ್ನಂಪೇಟೆಯ ಕೊಕ್ಕೇಂಗಡ ದರ್ಶನ್ ನಾಚಪ್ಪ (ಡ್ರೈವರ್) ಹಾಗೂ ಮೇಕೇರಿರ ಅಭಿನವ್ ಗಣಪತಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಎರಡನೇ ಸ್ಥಾನ ಪಡೆದಿದ್ದಾರೆ. ದರ್ಶನ್ ನಾಚಪ್ಪ ಹಾಗೂ ಮೇಕೇರಿರ ಅಭಿನವ್ ಗಣಪತಿ ಈ ಹಿಂದೆ…

Read More