ಲೇಖಕ: admin

ಮಡಿಕೇರಿ ಏ.20 :  ಬೆಸ್ಸೂರು ಗ್ರಾ.ಪಂ ವ್ಯಾಪ್ತಿಯ ದೊಡ್ಡಬಂಡಾರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಧಿಕಾರಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಇವರಲ್ಲಿ ಗ್ರಾಮಸ್ಥರು ಕೋರಿಕೊಂಡ ಮೇರೆಗೆ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಸಂಬಂಧಿಸಿದ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು ಮುಂದಾಗಿದ್ದು, ಬೋರ್‍ವೆಲ್‍ನಲ್ಲಿ ಕೆಟ್ಟುಹೋಗಿದ್ದ ಮೋಟಾರನ್ನು ಸರಿಪಡಿಸಿ ಗ್ರಾಮಸ್ಥರಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಏ.20 : ಜವಾಹರ ನವೋದಯ ಪ್ರವೇಶ ಪರೀಕ್ಷೆಯು (6 ನೇ ತರಗತಿಯ ಪ್ರವೇಶಕ್ಕಾಗಿ ನಡೆಯುವ ಈ ಪರೀಕ್ಷೆಯು) ಇದೇ ಏಪ್ರಿಲ್, 29 ರಂದು ಬೆಳಗ್ಗೆ 11.30 ಗಂಟೆಗೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷಾರ್ಥಿಗಳು ಏಪ್ರಿಲ್, 29 ರಂದು ಬೆಳಗ್ಗೆ 9.30 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷಾರ್ಥಿಗಳು ಪರೀಕ್ಷೆಯ ಪ್ರವೇಶಪತ್ರವನ್ನು ನವೋದಯ ವಿದ್ಯಾಲಯ ಸಮಿತಿಯ ಜಾಲತಾಣದಿಂದ www.navodaya.gov.in ಡೌನ್‍ಲೋಡ್ ಮಾಡಿಕೊಳ್ಳಬಹುದು. ಅಥವಾ ಶಾಲಾ ಮುಖ್ಯೋಪಾಧ್ಯಾಯರನ್ನು ಅಥವಾ ಜವಾಹರ ನವೋದಯ ವಿದ್ಯಾಲಯ ಗಾಳಿಬೀಡಿನ ಕಚೇರಿಯನ್ನು ಸಂಪರ್ಕಿಸಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.9611862835, 7760898148 ನ್ನು ಸಂಪರ್ಕಿಸಬಹುದು ಎಂದು ಗಾಳಿಬೀಡು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಪಂಕಜಾಕ್ಷನ್ ತಿಳಿಸಿದ್ದಾರೆ. ಪರೀಕ್ಷೆಯು 6 ಕೇಂದ್ರಗಳಲ್ಲಿ ನಡೆಯಲಿದೆ. ಮಡಿಕೇರಿಯ ಸಂತ ಮೈಕಲರ ಪ್ರೌಢಶಾಲೆ, ಸೋಮವಾರಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು, ಒಎಲ್‍ವಿ ಹಿರಿಯ ಪ್ರಾಥಮಿಕ ಶಾಲೆ, ಫಾತಿಮಾ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ, ವಿರಾಜಪೇಟೆಯ ಸಂತ ಅನ್ನಮ್ಮ(ಸೆಂಟ್ ಆನ್ಸ್) ಶಾಲೆ ಹಾಗೂ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್…

Read More

ಸುಂಟಿಕೊಪ್ಪ ಏ.20 :  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾದಾಪುರದ ನಿವಾಸಿ ಪ್ರಸ್ತುತ ಬೆಂಗಳೂರಿನ ಉದ್ಯಮಿ ಎಸ್.ಪಿ.ಸುಬ್ಬಯ್ಯ ಅವರು ಐವತ್ತು ಸಾವಿರ ರೂ.ಮೌಲ್ಯದ  ಪ್ರೊಜೆಕ್ಟರ್ ಮತ್ತು ಗಣಕಯಂತ್ರವನ್ನು ಕೊಡುಗೆಯಾಗಿ  ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಗೀತಾ, ದೈಹಿಕ ಶಿಕ್ಷಕ ಪಾಸೂರ ನಂದ, ಶಿಕ್ಷಕರಾದ ಚಂದ್ರವತಿ, ಸೌಭಾಗ್ಯ ಹಾಜರಿದ್ದರು.

Read More

ಮಡಿಕೇರಿ ಏ.20 :  ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 22 ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅವರಲ್ಲಿ ಅಮೀನ್ ಮೋಹಿಸಿನ್(ಎಸ್‍ಡಿಪಿಐ), ಮುತ್ತಪ್ಪ ಎನ್.ಎಂ.(ಜನತಾದಳ ಜಾತ್ಯಾತೀತ), ಕೆ.ಬಿ.ರಾಜು(ಆರ್‍ಪಿಐ ಕರ್ನಾಟಕ), ಜಿ.ಜಿ.ಹೇಮಂತ್ ಕುಮಾರ್(ಪಕ್ಷೇತರ), ಅಪ್ಪಚ್ಚುರಂಜನ್ ಎಂ.ಪಿ.(ಭಾರತೀಯ ಜನತಾ ಪಾರ್ಟಿ), ಡಾ.ಮಂಥರ್ ಗೌಡ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ), ಎಚ್.ಎಂ.ಸೋಮಪ್ಪ (ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ)(ಸಿಪಿಐ), ದಿವಿಲ್ ಕುಮಾರ್ ಎ.ಎ.(ಬಹುಜನ ಸಮಾಜ ಪಕ್ಷ), ಎಂ.ಖಲೀಲ್(ಪಕ್ಷೇತರ), ರಶೀದ ಬೇಗಂ (ಇಂಡಿಯನ್ ಮೂವೆಮೆಂಟ್ ಪಾರ್ಟಿ), ಶ್ರೀನಿವಾಸ ರೈ ಬಿ.ಕೆ.(ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ), ಅಶ್ರಫ್ (ಪಕ್ಷೇತರ), ದರ್ಶನ್ ಶೌರಿ ಪಿ.ಕೆ.(ಪಕ್ಷೇತರ), ಬೋಪಣ್ಣ ಕೆ.ಪಿ.(ಆಮ್ ಆದ್ಮಿ ಪಾರ್ಟಿ), ಹರೀಶ್ ಆಚಾರ್ಯ(ಪಕ್ಷೇತರ), ಎಂ.ಮೊಹಮ್ಮದ್ ಹನೀಫ್(ಪಕ್ಷೇತರ), ಸಜೀರ್ ಮಜೀದ್ ನೆಲಾಟ್ (ಕರ್ನಾಟಕ ರಾಷ್ಟ್ರ ಸಮಿತಿ), ಉಸ್ಮಾನ್ ಕೆ.ಎ.(ಎಸ್‍ಡಿಪಿಐ), ಹಾಶಿಮ್ ಕೆ.ಎ.(ಪಕ್ಷೇತರ), ಸಿಂಧು ವೈ.ಎಂ.(ಪಕ್ಷೇತರ), ಪದ್ಮನಾಭ ಎ.ಎನ್.(ಜನ ಸಂಘ ಪಾರ್ಟಿ), ಶೃತಿ ಕೆ.ಪಿ.(ಪಕ್ಷೇತರ). ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆ.ಜಿ.ಬೋಪಯ್ಯ…

Read More

ಮಡಿಕೇರಿ ಏ.20 : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ  ಏಪ್ರಿಲ್‌ 21ರ ಶುಕ್ರವಾರ ಬೆಳಗ್ಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ. ಮಾರ್ಚ್‌ ತಿಂಗಳಿನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು www.karresults.nic.in ಪ್ರಕಟ ಮಾಡಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಪರೀಕ್ಷಾ ಮಂಡಳಿಯಿಂದ ಸುದ್ದಿಗೋಷ್ಟಿ ನಡೆಸಲಾಗುತ್ತದೆ. ನಂತರ ಫಲಿತಾಂಶವನ್ನು ಅಧಿಕೃತ ವೆಬ್ಸೈಟ್‌ನಲ್ಲಿ ಪ್ರಕಟ ಮಾಡಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Read More

ಮಡಿಕೇರಿ ಏ.20 : ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ಘಟಕವನ್ನು ಪಕ್ಷದ ಜಿಲ್ಲಾಧ್ಯಕ್ಷರು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿರುವ ಘಟಕದ ಜಿಲ್ಲಾಧ್ಯಕ್ಷ ಟಿ.ಡಿ.ಗೋವಿಂದರಾಜ್ ದಾಸ್, ಆರು ಬ್ಲಾಕ್ ಅಧ್ಯಕ್ಷರುಗಳು ರಾಜೀನಾಮೆ ನೀಡುವ ಮೂಲಕ ಕಾರ್ಮಿಕ ಘಟಕವನ್ನು ವಿಸರ್ಜನೆ ಮಾಡಿರುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷಗಳಿಂದ ಕೊಡಗು ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷನಾಗಿ ಜಿಲ್ಲೆಯ ಆರು ಬ್ಲಾಕ್‍ಗಳಲ್ಲಿ ಕಾರ್ಮಿಕ ವಿಭಾಗದ ಬ್ಲಾಕ್ ಅಧ್ಯಕ್ಷರನ್ನು ನೇಮಕ ಮಾಡಿದ್ದೇನೆ. ಅಲ್ಲದೆ ವಿವಿಧ ರೀತಿಯ ಕಾರ್ಮಿಕ ಸೇವೆಗಳನ್ನು ಪಕ್ಷದ ಪರವಾಗಿ ಮಾಡಿದ್ದೇನೆ. ನಿರಂತರ ಕಾರ್ಮಿಕರ ಹಾಗೂ ಪಕ್ಷ ಸಂಘಟನೆಗೆ ನೆರವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಜಿಲ್ಲೆಯ ಆರು ಬ್ಲಾಕ್ ಅಧ್ಯಕ್ಷರುಗಳು ಕಾರ್ಮಿಕ ಘಟಕದ ಪದಾಧಿಕಾರಿಗಳನ್ನು ಯಾವುದೇ ಸಭೆ, ಸಮಾರಂಭಗಳಿಗೆ ಆಹ್ವಾನಿಸದೆ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು. ನಾನು ಜಿಲ್ಲಾಧ್ಯಕ್ಷನಾಗಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲೇ ಅತಿ ಹೆಚ್ಚು 875 ಸದಸ್ಯರನ್ನು ನೋಂದಣಿ ಮಾಡಿದ್ದೇನೆ.…

Read More

ಮಡಿಕೇರಿ ಏ.20 :  ಮಡಿಕೇರಿ ವಿಧಾನಸಭಾ ಕ್ಷೇತ್ರದ ‘ಬಹುಜನ ಸಮಾಜ ಪಕ್ಷದ  ಅಭ್ಯರ್ಥಿ ಎ.ಎ.ದಿವಿಲ್ ಕುಮಾರ್ ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ದಿವಿಲ್ ಕುಮಾರ್ ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ  ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಭೀಮ ಪುತ್ರಿ ರೇವತಿ ರಾಜನ್ ,  ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಬೆಳ್ಯಪ್ಪ ಹಾಗೂ ಕಾರ್ಯಕರ್ತ ರವಿ  ಹಾಜರಿದ್ದರು. ::: ಮೆರವಣಿಗೆ :::  ನಾಮಪತ್ರ ಸಲ್ಲಿಕೆಗೂ ಮೊದಲು  ದಿವಿಲ್ ಕುಮಾರ್  ಮೂರ್ನಾಡು ಬಳಿಯ ಪಾಲೇಮಾಡು ಗ್ರಾಮದ ಕಾನ್ಶಿರಾಮ ನಗರದಿಂದ  ಮೆರವಣಿಗೆ ಮೂಲಕ ಆಗಮಿಸಿ ಮೂರ್ನಾಡು, ಹಾಕತ್ತೂರು ಮೂಲಕ ಮಡಿಕೇರಿಗೆ ಆಗಮಿಸಿ, ಸುದರ್ಶನ ವೃತ್ತದ ಫೀ.ಮಾ.ಕೆ.ಎಂ. ಕಾರ್ಯಪ್ಪ ವೃತ್ತ, ಜ.ತಿಮ್ಮಯ್ಯ ವೃತ್ತ, ನಗರ ಠಾಣೆ, ಹಳೇ ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ವೃತ್ತ ಕ್ಕಾಗಿ  ಗಾಂಧಿ ಮೈದಾನದವರೆಗೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. :: ಯೋಧರ ಪ್ರತಿಮೆಗಳಿಗೆ ಮಾಲಾರ್ಪಣೆ ::…

Read More

ನಾಪೋಕ್ಲು ಏ.10 : ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏ.22 ರಿಂದ ಬಾಳೆಯಡ ಕ್ರಿಕೆಟ್ ನಮ್ಮೆ ನಡೆಯಲಿದ್ದು, ಕ್ರೀಡಾಕೂಟಕ್ಕೆ ಭರದಿಂದ ಪೂರ್ವ ತಯಾರಿ ಕಾರ್ಯ ನಡೆಯುತ್ತಿದೆ. ಈ ಬಾರಿ ದಾಖಲೆಯ 252 ಕುಟುಂಬಗಳು ನೋಂದಾವಣೆ ಮಾಡಿಕೊಂಡಿವೆ ಎಂದು ಬಾಳೆಯಡ ಕ್ರಿಕೆಟ್ ನಮ್ಮೆ ಅಧ್ಯಕ್ಷ ಕರ್ನಲ್ ಸುಬ್ರಮಣಿ ತಿಳಿಸಿದರು. ನಾಪೋಕ್ಲು ವಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏ. 22 ರ ಬೆಳಗ್ಗೆ 7.30 ಕ್ಕೆ ನಾಪೋಕ್ಲು ಭಗವತಿ ದೇವಾಲಯದಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಿ, ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. 10.20 ಕ್ಕೆ ಮುಖ್ಯ ಅತಿಥಿಗಳೊಂದಿಗೆ ಸಾಂಪ್ರದಾಯಿಕ ಉಡುಗೆಯೊಂದಿಗೆ ಮೈದಾನದಲ್ಲಿ ಜಾಥಾ ನಡೆಸಲಾಗುವುದು. ಧ್ವಜಾರೋಹಣ, ಉದ್ಘಾಟನಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಚೆಟ್ಟಳ್ಳಿ ವಿಮೆನ್ಸ್ ತಂಡ-ಸಂಭ್ರಮ ಕೊಡವತೀಸ್ ಹಾಗೂ ಟಿ ಶೆಟ್ಟಿಗೇರಿ ಮಹಿಳಾ ತಂಡ-ಜೋಮಾಲೆ ಕೊಡವತೀಸ್ ತಂಡದಿಂದ ಪ್ರದರ್ಶನ ಪಂದ್ಯಾಟ ನಡೆಯಲಿದೆ ಎಂದರು. ಏ.22 ರಿಂದ ಮೇ ತಿಂಗಳ 21 ರವರೆಗೆ 30 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, 2772 ಆಟಗಾರರು ಪಾಲ್ಗೊಳ್ಳಿಲಿದ್ದಾರೆ ಎಂದು ಮಾಹಿತಿ…

Read More

ಮಡಿಕೇರಿ ಏ.20 : ಪೀಪಲ್ಸ್ ಮೂಮೆಂಟ್ ಫಾರ್ ಹ್ಯೂಮನ್ ರೈಟ್ಸ್ ಮತ್ತು ವೀರನಾಡು ರಕ್ಷಣಾ ವೇದಿಕೆಯ ಅಧ್ಯಕ್ಷರಾಗಿರುವ ಶ್ರೀ ಕೃಷ್ಣ ಗೋಶಾಲೆಯ ಸಂಸ್ಥಾಪಕ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ಜಿಲ್ಲಾಡಳಿತ ಭವನಕ್ಕೆ  ಆಗಮಿಸಿದ ಹರೀಶ್ ಜಿ.ಆಚಾರ್ಯ ಅವರು ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ನಂತರ ಮಾತನಾಡಿದ ಅವರು 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಿಲುಕಿ ಅನಾಥವಾಗಿ ಅಲೆದಾಡುತ್ತಿದ್ದ ಗೋವುಗಳಿಗೆ ಆಶ್ರಯ ನೀಡುವ ಸಲುವಾಗಿ ಶ್ರೀಕೃಷ್ಣ ಗೋಶಾಲೆಯನ್ನು ಸ್ಥಾಪಿಸಿದ್ದೇನೆ. ಆ ಮೂಲಕ ನೈಜ ಗೋಪ್ರೀತಿಯನ್ನು ತೋರಿಸಿದ್ದೇನೆ ಮತ್ತು ಗೋರಕ್ಷಣೆಗೆ ಆದ್ಯತೆ ನೀಡಿದ್ದೇನೆ. ಸಿನಿಮಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದು, ನನ್ನ ಬಹುತೇಕ ಸಮಯವನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದೇನೆ. ಜನ ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ.

Read More

ನಾಪೋಕ್ಲು ಏ.20 : ಗ್ರಾಮೀಣ ಭಾಗದ ಮಕ್ಕಳಿಗೆ ಸಹಕಾರಿಯಾಗಲೆಂದು 2001 ರಲ್ಲಿ ಸ್ಥಾಪಿಸಲಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ನಿರಂತರವಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿ 23ನೇ ವರ್ಷದ ಶಿಬಿರ ನಡೆಯಿತು. ಕರ್ನಾಟಕ ಪಬ್ಲಿಕ್ ಶಾಲೆಯ ಆಟದ ಮೈದಾನದಲ್ಲಿ ನಡೆದ ಶಿಬಿರದಲ್ಲಿ 65 ಶಿಬಿರಾರ್ಥಿಗಳು ವಿವಿಧ ಚಟುವಟಿಕಡಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ರಜಾ ಅವಧಿಯಲ್ಲಿ ಕಾಲಹರಣ ಮಾಡದೇ ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸುವುದರ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದೆ ಎಂದು ಸ್ಥಾಪಕ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಹೇಳಿದರು. “ಶಿಬಿರಗಳಿಂದ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಇಂದು ಮಕ್ಕಳಲ್ಲಿ ಶಿಸ್ತಿನ ಕೊರತೆ ಕಾಡುತ್ತಿದೆ. ಇದಕ್ಕೆ ಪೋಷಕರೇ ಕಾರಣ. ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ತರಬೇತಿಯ ಜೊತೆಗೆ ಶಿಸ್ತು ಹಾಗೂ ಸಮಯ ನಿರ್ವಹಣೆಯ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತಿದೆ. ನಮ್ಮಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಉನ್ನತ ಸ್ಥಾನಮಾನವನ್ನು ಅಲಂಕರಿಸಿಕೊಂಡಿದ್ದಾರೆ.…

Read More