ಮಡಿಕೇರಿ ಏ.21 : ಕೊಡಗಿಗೆ ಉತ್ತಮ ಮಳೆಯಾಗಲಿ ಎಂದು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಶಾಸಕ ಕೆ.ಜಿ.ಬೋಪಯ್ಯ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದಭ೯ ಮಾತನಾಡಿದ ಕೆ.ಜಿ.ಬೋಪಯ್ಯ, ಈ ವೇಳೆಗಾಗಲೇ ಮಳೆ ಬಂದು ಭೂಮಿ ತಂಪಾಗಬೇಕಾಗಿತ್ತು.ಆದರೆ ಮಳೆ ಕಾಣದೆ ಜನ ಕಂಗಾಲಾಗಿದ್ದಾರೆ. ಕಾಫಿ ಗಿಡಗಳು ಒಣಗುತ್ತಿದೆ. ಕೖಷಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಳೆ ಬರಲಿ ಎಂದು ಪೂಜೆ ಸಲ್ಲಿಸಿದ್ದೇನೆ. ಮಳೆಯ ಅಗತ್ಯ ತುತಾ೯ಗಿ ಇದೆ ಎಂದರು. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಮುಖರಾದ ಜಿ.ರಾಜೇಂದ್ರ, ಎಸ್.ಎಸ್.ಸಂಪತ್ ಕುಮಾರ್, ರಮೇಶ್ ಹೊಳ್ಳ , ಬಿ.ಕೆ .ರವೀಂದ್ರ ರೈ,ಮಹೇಶ್ ಜೈನಿ, ಕವನ್, ಉಮೇಶ್ ಸುಬ್ರಹ್ಮಣಿ, ಬಿ.ಕೆ. ಅರುಣ್ ಕುಮಾರ್ ಸೇರಿದಂತೆ ಮತ್ತಿತರು ಇದ್ದರು.
ಲೇಖಕ: admin
ಮಡಿಕೇರಿ ಏ.19 : ಹಾಡಹಗಲೇ ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರ ಗಂಭೀರ ಗಾಯಗೊಂಡಿರುವ ಘಟನೆ ಇಂಜಿಲಗೆರೆಯ ಗ್ರಾಮದ ಕೌರಿ ಎಂಬಲ್ಲಿ ನಡೆದಿದೆ. ಅಮ್ಮತ್ತಿ ಸಮೀಪದ ಕೌರಿ ನಿವಾಸಿ ಕಾಫಿ ಬೆಳೆಗಾರ ಉದ್ದಪಂಡ ಚಂಗಪ್ಪ (48) ಗಾಯಗೊಂಡ ವ್ಯಕ್ತಿ. ಮನೆಯಿಂದ ಕಾಫಿ ತೋಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿರುವ ಸಂದರ್ಭ ಕಾಡಾನೆಯೊಂದು ಹಿಂಬದಿಯಿಂದ ಬಂದು ಚಂಗಪ್ಪ ಅವರ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ. ಕಾಡಾನೆ ದಾಳಿಯಿಂದ ಚಂಗಪ್ಪ ಅವರ ಸೊಂಟಕ್ಕೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಅಮ್ಮತ್ತಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಡಿಕೇರಿ ಏ.21 : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು, ಉಡುಪಿ ಜಿಲ್ಲೆಗೆ 2ನೇ ಸ್ಥಾನ ಲಭಿಸಿದೆ. ಕೊಡಗು 3, ಉತ್ತರ ಕನ್ನಡ 4, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
ಮಡಿಕೇರಿ ಏ.21 : ವಿರಾಜಪೇಟೆ ಸಿವಿಲ್ ಕೋರ್ಟ್ ನ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ವಕೀಲ ಕೋಕ್ಕಂಡ ಅಪ್ಪಣ್ಣ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿದ್ದಂಡ ಪ್ರಥಮ್ ಕರುoಬಯ್ಯ , ಕಾರ್ಯದರ್ಶಿಯಾಗಿ ರಾಕೇಶ್, ಸಹಕಾರ್ಯದರ್ಶಿಯಾಗಿ ಎ.ಯು ತಾರಾ, ಖಾಚಾಂಜಿಯಾಗಿ ಪ್ರೀತಮ್ ಆಯ್ಕೆಯಾಗಿದ್ದು, ಸಮಿತಿ ಸದಸ್ಯರಾಗಿ ಕೋಪ್ಪಿರ ಅಮಿತ್ ಸೋಮಯ್ಯ, ಸಿಂಧೂರ ಸ್ವಾಮಿ, ಸುನಿಲ್, ರಂಜನ್, ಜಗದೀಶ್ ಹಾಜಿರಾ ಮುಂದಿನ 2 ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.
ಮಡಿಕೇರಿ,ಏ.21 : ಮಕ್ಕಳು ಉದಾಸೀನ ಮನೋಭಾವದಿಂದ ಹೊರಬಂದು ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕೆಂದು ಹಿರಿಯ ಕ್ರೀಡಾಪಟು ಜಿ.ಟಿ.ರಾಘವೇಂದ್ರ ಹೇಳಿದರು. ವಾಂಡರ‍್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ.ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳಿಗೆ ಹಿತವಚನಗಳನ್ನು ಹೇಳಿದರು. ಮಕ್ಕಳು ಎಂದಿಗೂಪ್ರಾಮಾಣಿಕರಾಗಿರಬೇಕು. ನಿಮ್ಮ ಹಿಂದೆ ಗುರುಗಳಿದ್ದಾರೆ, ಮುಂದೆ ಗುರಿ ಇರಬೇಕು. ಗುರುಗಳು ಹೇಳಿಕೊಡುವದನ್ನು ಶ್ರದ್ಧೆಯಿಂದ ಪಾಲಿಸಬೇಕು. ಮನಸನ್ನು ಏಕಾಗ್ರತೆಗೆ ತರಬೇಕು. ಬದ್ದತೆಯೊಂದಿಗೆ ಅಭ್ಯಾಸ ಮಾಡುವದರೊಂದಿಗೆ ಹಠವಿದ್ದರೆ ಸಾಧಿಸಲು ಸಾಧ್ಯವಾಗುತ್ತದೆ. ಇಲ್ಲಿ ಕಲಿಸುವದನ್ನು ಚಾಚೂ ತಪ್ಪದೆ ಅಭ್ಯಸಿಸಿದರೆ ಕೊನೆಯಲ್ಲಿ ಕ್ರಮಬದ್ಧವಾಗಿ ಹೊರಹೋಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಈಗಿನ ಮಕ್ಕಳು ಬಾಲ್ಯದಿಂದಲೇ ತಪ್ಪುದಾರಿಗೆ ಹೋಗುತ್ತಿದ್ದಾರೆ, ಹಾಗಾಗಿ ಮನೆಯಲ್ಲಿ ಪೋಷಕರು ಮಕ್ಕಳಿಗೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಭಾವನೆಗಳನ್ನು ಮೂಡಿಸಬೇಕು. ತಮ್ಮ ಮಕ್ಕಳನ್ನು ದೇಶಕ್ಕಾಗಿ ಅರ್ಪಣೆ ಮಾಡಬೇಕು. ಆಗ ಮಕ್ಕಳು ದೇಶಕ್ಕೆ ಅಮೂಲ್ಯ ಆಸ್ತಿಯಾಗುವದರೊಂದಿಗೆ ಪ್ರಪಂಚಕ್ಕೆ ಮಾರ್ಗದರ್ಶಕರಾಗುತ್ತಾರೆ. ಈ ಶಿಬಿರದಲ್ಲಿ ತರಬೇತಿ ನೀಡುತ್ತಿರುವ ಗುರುಗಳು ತಮ್ಮ ಸಮಯ, ಕೆಲಸ ಎಲ್ಲವನ್ನು…
ಮಡಿಕೇರಿ ಏ.21 : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ಮೂರನೇ ಸ್ಥಾನ ಪಡೆದುಕೊಂಡಿದೆ. ರಾಜ್ಯಾದ್ಯಂತ 5.24 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ನೀಡಿದೆ. ಸಾಮಾನ್ಯ ವಿದ್ಯಾರ್ಥಿಗಳು, ಪುನರಾವರ್ತಿತರು ಮತ್ತು ಖಾಸಗಿ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿ ಪ್ರಕಾರಗಳಿಗೆ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಇಂದು ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಅಧಿಕಾರಿಗಳು ಫಲಿತಾಂಶ ಪ್ರಕಟ ಮಾಡಿದ್ದು, ಪರೀಕ್ಷೆಯಲ್ಲಿ ಒಟ್ಟು 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. 7,02,067 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 5,24,209 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಈ ಬಾರಿ 74.67% ಫಲಿತಾಂಶ ದಾಖಲಾಗಿದೆ. ದಕ್ಷಿಣ ಕನ್ನಡ ಮೊದಲ ಸ್ಥಾನ (95.33%) ಉಡುಪಿಗೆ ಎರಡನೇ ಸ್ಥಾನ( 95.24%) ಕೊಡಗಿಗೆ 3ನೇ ಸ್ಥಾನ (90.55%) ಸಿಕ್ಕಿದರೆ ಯಾದಗಿರಿಗೆ (78.97%) ಕೊನೆಯ ಸ್ಥಾನ ಸಿಕ್ಕಿದೆ. ಎಂದಿನಂತೆ ಬಾಲಕೀಯರೇ…
ಮಡಿಕೇರಿ ಏ.20 : ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟಾಗಿ 44.20 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆಯೆಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಅವರು ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಅವಧಿಯಲ್ಲಿ ನಗದು ಸೇರಿದಂತೆ 2.16 ಲಕ್ಷ ರೂ. ಮೌಲ್ಯದ ಗಾಂಜಾ, ಚರಸ್, ಎಂಡಿಎಂಎಗಳನ್ನು ವಶಪಡಿಸಿಕೊಳ್ಳಲಾಗಿದೆಯೆಂದು ತಿಳಿಸಿದರು. ಚುನಾವಣಾ ಹಿನ್ನೆಲೆಯಲ್ಲಿ ಜಿಲ್ಲೆಯ ಆರು ಮಂದಿಯನ್ನು ಗಡಿಪಾರು ಮಾಡಲಾಗಿದೆಯೆಂದು ತಿಳಿಸಿದರು. ::: ದಾಖಲೆ ರಹಿತ ಹಣ ವಶ ::: ಜಿಲ್ಲಾ ವ್ಯಾಪ್ತಿಯಲ್ಲಿ ಅಗತ್ಯ ದಾಖಲೆ ಇಲ್ಲದ 25.52 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆಯ ಬಳಿಕ 17.20 ಲಕ್ಷ ರೂ.ಗಳನ್ನು ಹಿಂದಕ್ಕೆ ನಿಡಲಾಗಿದ್ದು, ಉಳಿದ ಮೊತ್ತಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆಯೆಂದು ಹೇಳಿದರು. ಸೂಕ್ತ ದಾಖಲೆ, ಕಾರಣಗಳಿಲ್ಲದೆ ಸಾಗಿಸಲಾಗುತ್ತಿದ್ದ 1.50 ಲಕ್ಷ ರೂ. ಮೌಲ್ಯದ ಸೀರೆಗಳನ್ನೂ ವಶಪಡಿಸಿಕೊಳ್ಳಲಾಗಿದೆಯೆಂದು ತಿಳಿಸಿದರು.
ಮಡಿಕೇರಿ ಏ.20 : ಮನೆಯಲ್ಲೆ ಮತದಾನ ಮಾಡಲು ಇಚ್ಛಿಸಿರುವ ಹಿರಿಯ ನಾಗರಿಕರಿಗೆ ಪೂರ್ವ ಸೂಚನೆ ನೀಡಿ, ಇದೇ ಏ.29 ರಿಂದ ಮೇ6 ರ ಒಳಗಾಗಿ, ಅವರಿರುವ ಮನೆಗಳಿಗೆ ಇಬ್ಬರು ಪೋಲಿಂಗ್ ಅಧಿಕಾರಿಗಳು ಮತ್ತು ಸೆಕ್ಟರ್ ಅಧಿಕಾರಿಗಳು ತೆರಳಿ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಾರೆ ಎಂದು ಜಿಲ್ಲಾಧಿಕಾರಿಗಳು ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ. ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮತಗಟ್ಟೆಗೆ ತೆರಳಲು ಸಾಧ್ಯವಾಗದೆ ಇರುವಂತದ 12,836 ಹಿರಿಯ ನಾಗರಿಕರಿಗೆ ಮತದಾನಕ್ಕಾಗಿ ಫಾರಂ ನಂ.12 ಡಿಯನ್ನು ಒದಗಿಸಲಾಗಿದೆ. ಇದರಲ್ಲಿ 2475 ಹಿರಿಯ ನಾಗರಿಕರು ಫಾರಂಗಳನ್ನು ಭರ್ತಿ ಮಾಡಿ ಒದಗಿಸಿರುವುದಾಗಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನಾಮಪತ್ರ ಸಲ್ಲಿಕೆ ಕಾರ್ಯ ಗುರುವಾರ ಮುಕ್ತಾಯವಾಗಿದ್ದು, ಕೊಡಗಿನ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಲ್ಲಿ ಒಟ್ಟು 32 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದರು. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 22 ಅಭ್ಯರ್ಥಿಗಳು 31 ನಾಮಪತ್ರಗಳನ್ನು ಮತ್ತು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ 10…
ಮಡಿಕೇರಿ ಏ.20 : ಕೊಡಗು ಜಿಲ್ಲೆಯಲ್ಲಿ ತೀವ್ರತರವಾದ ಮಳೆ ಕೊರತೆ ಎದುರಾಗಿದ್ದು, ಜಿಲ್ಲೆಯನ್ನು “ಬರ ಪೀಡಿತ ಪ್ರದೇಶ”ವೆಂದು ಘೋಷಿಸುವಂತೆ ಕೊಡಗು ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಪ್ರಮುಖರಾದ ಚೊಟ್ಟಕ್‍ಮಾಡ ರಾಜೀವ್ ಬೋಪಯ್ಯ, ಕೊಡಗು ಜಿಲ್ಲೆ ಮಳೆಯನ್ನು ಆಶ್ರಯಿಸಿದ ಕೃಷಿ ಪ್ರದೇಶವಾಗಿದ್ದು, ಇದೀಗ ಹವಾಮಾನ ವೈಪರೀತ್ಯದಿಂದ ಮಳೆಯ ತೀವ್ರ ಕೊರತೆ ಎದುರಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯಿಲ್ಲದೇ ಕಾಫಿ ಗಿಡಗಳು ಸಂಪೂರ್ಣ ಒಣಗಿ ಹೋಗಿದ್ದು, ಮತ್ತೆ ಹೊಸ ಗಿಡಗಳನ್ನು ಬೆಳೆಸಿ ಫಸಲು ಪಡೆಯಲು 20 ವರ್ಷಗಳ ಕಾಲ ಬೆಳೆಗಾರ ಪರದಾಡಬೇಕು. ಇದರಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಜಿಲ್ಲೆಯ ಬೆಳೆಗಾರರು, ಕೃಷಿ ಕಾರ್ಮಿಕರು, ರೈತರ ನೆರವಿಗೆ ಅಧಿಕಾರಿಗಳು ಮುಂದಾಗಬೇಕು. ಮಾತ್ರವಲ್ಲದೇ, ಕೊಡಗು ಜಿಲ್ಲೆಯನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿ ಜಿಲ್ಲೆಗೆ ನೆರವಾಗಬೇಕು ಎಂದು ಆಗ್ರಹಿಸಿದರು. ಬೇರೆ ಜಿಲ್ಲೆಗಳಲ್ಲಿ ಇರುವಂತೆ ಕೊಡಗಿನಲ್ಲಿ ಕಾವೇರಿ ಮತ್ತು ಲಕ್ಷ್ಮಣ ತೀರ್ಥ ನದಿಗಳಿಗೆ ಚೆಕ್ ಡ್ಯಾಂಗಳಿಲ್ಲ. ಹೀಗಾಗಿ ನೀರು ಹರಿದು ಹೋಗುತ್ತಿದ್ದು, ಅಂತರ್ ಜಲದ…
ಮಡಿಕೇರಿ ಏ.20 : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಮತದಾನ ಹಾಗೂ ಮತ ಎಣಿಕೆ ಕಾರ್ಯವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕರ್ನಾಟಕ ಅಬಕಾರಿ (ಸನ್ನದುಗಳ ಸಾಮಾನ್ಯ ಷರತ್ತುಗಳು) ನಿಯಮಗಳು 1967 ರ ನಿಯಮ 10-ಬಿ ಅಡಿಯಲ್ಲಿ ಪ್ರತ್ಯಾಯೋಜಿತವಾಗಿರುವ ಅಧಿಕಾರದಂತೆ ಮೇ, 08 ರ ಸಂಜೆ 6 ರಿಂದ ಮೇ, 10 ರ ಮಧ್ಯರಾತ್ರಿ 12 ಗಂಟೆಯವರೆಗೆ ಮತ್ತು ಮೇ, 12 ರ ಮಧ್ಯರಾತ್ರಿ 12 ರಿಂದ ಮೇ, 13 ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ವಿಧದ ಮದ್ಯ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಸ್ಟಾರ್ ಹೋಟೆಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ.






