ಮಡಿಕೇರಿ ಏ.20 : ಆಮ್ ಆದ್ಮಿ ಪಾರ್ಟಿಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ದಕ್ಷಿಣ ಕೊಡಗಿನ ಕೆ.ಪಿ.ಬೋಪಣ್ಣ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಕೆ.ಪಿ.ಬೋಪಣ್ಣ ಅವರು ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ಕಾರ್ಯದರ್ಶಿ ಹೆಚ್.ಬಿ.ಪೃಥ್ವಿ, ಸಂಘಟನಾ ಕಾರ್ಯದರ್ಶಿ ಎಂ.ಕೆ.ಅಪ್ಪಯ್ಯ ಹಾಜರಿದ್ದರು.
ಲೇಖಕ: admin
ಕುಶಾಲನಗರ ಏ.20 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2023-24ನೇ ಸಾಲಿಗೆ ರಾಜ್ಯಮಟ್ಟದ ಕ್ರೀಡಾ ವಸತಿ ಶಾಲೆ, ವಸತಿ ನಿಲಯಗಳಿಗೆ ಪ್ರವೇಶಾತಿ ಸಂಬಂಧ ಕಿರಿಯರ ವಿಭಾಗದ ಕ್ರೀಡಾಪಟುಗಳ ಆಯ್ಕೆ ಪರಿಶೀಲನಾ ಪ್ರಕ್ರಿಯೆ ಶಿಬಿರ ಕೂಡಿಗೆಯ ಕ್ರೀಡಾ ಪ್ರೌಢಶಾಲಾ ಆವರಣದಲ್ಲಿ ಆರಂಭಗೊಂಡಿದೆ. ಕಿರಿಯರ ವಿಭಾಗದ ಹಾಕಿ ಕ್ರೀಡೆಯಲ್ಲಿ ಒಟ್ಟು 52 ವಿದ್ಯಾರ್ಥಿಗಳ ಪೈಕಿ 22 ಬಾಲಕಿಯರು, 30 ಬಾಲಕರು, ಫುಟ್‌ಬಾಲ್ ವಿಭಾಗದಲ್ಲಿ 25, ಜಿಮ್ನಾಸ್ಟಿಕ್‌ನಲ್ಲಿ ಓರ್ವ ವಿದ್ಯಾರ್ಥಿನಿ , ಇಬ್ಬರು ಬಾಲಕರು ಭಾಗವಹಿಸಿ ಅಂತಿಮ ಆಯ್ಕೆ ಪ್ರಕ್ರಿಯೆಗೆ ನೋಂದಣಿಯಾಗಿದ್ದಾರೆ. ನೋಂದಣಿಯಾದ ಎಲ್ಲ ವಿದ್ಯಾರ್ಥಿಗಳಿಗೆ ಇಲಾಖೆ ವತಿಯಿಂದ ವಸತಿ ಸೌಲಭ್ಯ ಮತ್ತು ಅಹಾರದ ವ್ಯವಸ್ಥೆ ಒದಗಿಸಲಾಗಿದೆ ಎಂದು ನಿಯೋಜಿತ ಶಿಬಿರಾಧಿಕಾರಿ ದೇವಕುಮಾರ್, ಶಿಬಿರಾಧಿಕಾರಿ ಹಾಕಿ ತರಬೇತಿದಾರ ಬಿ.ಎಸ್ .ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಮಡಿಕೇರಿ ಏ.20 : ಸೂಡಾನ್ ದೇಶದಲ್ಲಿ ಸೇನೆ ಹಾಗೂ ಅರೆ ಸೇನಾಪಡೆಗಳ ನಡುವಿನ ಸಂಘರ್ಷದಿಂದ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಮಾಹಿತಿಯಿದೆ. ಕೊಡಗು ಜಿಲ್ಲೆಯ ಯಾರಾದರೂ ಸೂಡಾನ್ ದೇಶದಲ್ಲಿ ಸಿಲುಕಿದ್ದರೆ, ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಮಾಹಿತಿ ನೀಡಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ. ದೂ:- 08272-221077 08272-221099 ವಾಟ್ಸಾಪ್ ಸಂಖ್ಯೆ:- 8550001077
ಬೇಕಾಗುವ ಸಾಮಾಗ್ರಿಗಳು : ಪನ್ನೀರ್ – 200 ಗ್ರಾಂ, ಗರಂ ಮಸಾಲಾ ಪುಡಿ- 1 ಚಮಚ, ಬ್ರೆಡ್ ಕ್ರಂಬ್ಸ್ – 1/4 ಬಟ್ಟಲು, ನಿಂಬೆ ರಸ- 4 ಚಮಚ, ಕಾಳು ಮೆಣಸಿನ ಪುಡಿ- 1/4 ಪುಡಿ, ಅಚ್ಚಖಾರದ ಪುಡಿ- 1 ಚಮಚ, ಕಾರ್ನ್ ಫ್ಲೋರ್- 1/4 ಬಟ್ಚಲು, ದನಿಯಾ ಪುಡಿ- 1 ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಉಪ್ಪು- ರುಚಿಗೆ ತಕ್ಕಷ್ಟು ಮಾಡುವ ವಿಧಾನ : ಕಾರ್ನ್‌ಫ್ಲೋರ್, ಉಪ್ಪು, ಕಾಳು ಮೆಣಸಿನ ಪುಡಿ, ಅಚ್ಚ ಖಾರದ ಪುಡಿ, ಗರಂ ಮಸಾಲಾ ಮತ್ತು ದನಿಯಾ ಪುಡಿಯನ್ನು ಎಲ್ಲವನ್ನು ಒಂದು ಪಾತ್ರೆಗೆ ಹಾಕಿ, ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ರೀತಿ ಮಿಶ್ರಣ ಮಾಡಿಕೊಳ್ಳಿ. ನಂತರ ಪನ್ನೀರ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಿ. ಕತ್ತರಿಸಿದ ಪನ್ನೀರ್ ಸಣ್ಣ ತುಂಡುಗಳಿಗೆ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಶ್ರಣ ಮಾಡಿ. ಪನ್ನೀರ್ ಕ್ಯೂಬ್ ಅನ್ನು ಕಾರ್ನ್ ಫ್ಲೋರ್ ಪೇಸ್ಟ್‌ನಲ್ಲಿ ಚೆನ್ನಾಗಿ ಅದ್ದಿ, ಅದನ್ನು ಬ್ರೆಡ್ ಕ್ರಂಬ್ಸ್‌ನಲ್ಲಿ ಲೇಪಿಸಿ. ಬಳಿಕ ಎಣ್ಣೆಯನ್ನು…
ಮಡಿಕೇರಿ ಏ.20 : ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿಜಯ ಶಂಕರ್ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮೊದಲು ನಡೆದ ಬೃಹತ್ ಮೆರವಣಿಗೆಯಲ್ಲಿ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಮಾಜಿ ಸದಸ್ಯ ಕೊಡಗಿನ ಎಂ.ಪಿ.ಸುನೀಲ್ ಸುಬ್ರಮಣಿ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.
ಮಡಿಕೇರಿ ಏ.20 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲೊಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ 16ನೇ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಏ.21 ಮತ್ತು 22 ರಂದು ನಡೆಯಲಿದೆ. ಕೇರಳದ ಪಯ್ಯನೂರ್ ನ ಶ್ರೀ ಈಶ್ವರಿ ನಂಬೂದರಿ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಏ.21 ರಂದು ಸಂಜೆ 6 ಗಂಟೆಗೆ ಆಚಾರ್ಯರ ಆಗಮನ, ದೇವಾಲಯದಲ್ಲಿ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಏ.22 ರಂದು ಬೆಳಿಗ್ಗೆ 7 ಗಂಟೆಗೆ ಮಹಾ ಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾ ಪೂಜೆ ನೆರವೇರಲಿದ್ದು, ಮಧ್ಯಾಹ್ನ ಅನ್ನದಾನ ನೆರವೇರಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ತೀರ್ಥ ಪ್ರಸಾದವನ್ನು ಸ್ವೀಕರಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.
ಮಡಿಕೇರಿ ಏ.19 : ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊಲೀಸ್ ವೀಕ್ಷಕರಾಗಿ ದೆಬಾಸಿಸ್ ಸರ್ಕಾರ್ (ಐಪಿಎಸ್) ಅವರನ್ನು ಚುನಾವಣಾ ಆಯೋಗ ನೇಮಕ ಮಾಡಿದೆ. ಜಿಲ್ಲೆಗೆ ಭೇಟಿ ಮಾಡಿದ ಅವರು, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡರು. ವೀಕ್ಷಕರು ಸುದರ್ಶನ ಅತಿಥಿ ಗೃಹದಲ್ಲಿ ಬೆಳಿಗ್ಗೆ 10 ರಿಂದ 11ರ ವರೆಗೆ ಸಂದರ್ಶನಕ್ಕೆ ಲಭ್ಯವಿರಲಿದ್ದಾರೆ. ಅಲ್ಲದೆ ಮೊ.808849288 ಹಾಗೂ ಅವರ ಕ್ಷೇತ್ರಾಧಿಕಾರಿ ಜಿ.ಕೆ.ರಾಘವೇಂದ್ರ ಅವರನ್ನು ಮೊ.948080498 ಮೂಲಕ ಸಂಪರ್ಕ ಮಾಡಬಹುದಾಗಿದೆ.
ಸುಂಟಿಕೊಪ್ಪ,ಏ.20 : ಸುಂಟಿಕೊಪ್ಪ ಪಂಪ್‍ಹೌಸ್ ಬಡಾವಣೆಯ ಮನೆಯೊಂದರಲ್ಲಿ ಹಾವನ್ನು ಪಂಚಾಯಿತಿ ಸಿಬ್ಬಂದಿ ಹಾಗೂ ಉರಗ ಪ್ರೇಮಿ ಬಾಲು ರಕ್ಷಿಸಿದ್ದಾರೆ. ಪಂಪ್ ಹೌಸ್ ಬಡಾವಣೆಯ ನಿವಾಸಿಗಳಾದ ರವಿ ಮತ್ತು ಮುರುಗೇಶ್ ಎಂಬವರ ಮನೆಯ ಸಮೀಪ ಇದ್ದ ಹಾವುನ್ನು ಸ್ಥಳಿಯರು ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತು ಸ್ನೇಕ್ ಬಾಲು ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಬಾಲು ಹಾವನ್ನು ರಕ್ಷಿಸಿದ್ದಾರೆ. ಬಿಸಿಲ ಬೇಗೆಗೆ ಹಾವುಗಳು ಮನೆಯ ಸಮೀಪ ಬರುತ್ತಿದ್ದು ಅವುಗಳಿಗೆ ಯಾವುದೇ ರೀತಿಯ ತೊಂದರೆ ಹಿಂಸೆ ನೀಡದೆ ಅವುಗಳನ್ನು ಕಂಡ ತಕ್ಷಣ ದೂರವಾಣಿ ಸಂಖ್ಯೆಗೆ ಮಾಹಿತಿ ನೀಡುವಂತೆ 9380098500 ಬಾಲು ಅವರು ಮಾಹಿತಿ ನೀಡಿದರು.
ಮಡಿಕೇರಿ ಏ.19 : ನಗರದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ ಶ್ರೀ ಕೋದಂಡ ರಾಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಮೇ 2 ರಿಂದ 4ರ ವರೆಗೆ ಜರುಗಲಿದೆ ಎಂದು ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಜಿ.ರಾಜೇಂದ್ರ ಅವರು ತಿಳಿಸಿದ್ದಾರೆ. ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಶ್ರೀ ರಾಮ, ಸೀತೆ, ಲಕ್ಷ್ಣಣ ಮತ್ತು ಆಂಜನೇಯರನ್ನು ಒಳಗೊಂಡಂಡತೆ ಜಿಲ್ಲೆಯಲ್ಲಿರುವ ಏಕೈಕ ದೇವಾಲಯ ಶ್ರೀ ಕೋದಂಡ ರಾಮ ದೇವಾಲಯವೆಂದು ತಿಳಿಸಿ, ಈ ದೇವಾಲಯ ಜಾತಿ ಮತ ಧರ್ಮಗಳನ್ನು ಮೀರಿ ಮುನ್ನಡೆಯುತ್ತಿರುವ ಧಾರ್ಮಿಕ ಕೇಂದ್ರವೆಂದು ಹೆಮ್ಮೆಯಿಂದ ನುಡಿದರು. ಈ ದೇವಾಲಯದ ನಿರ್ಮಾಣ ಕೆತ್ತನೆ ಕೆಲಸಗಳನ್ನು ಪಾಂಡಿಚೇರಿಯ ಲೋಗಾನಂದ, ಉಪ್ಪಿನಂಗಡಿಯ ವಿಜಯ್ ಹಾಗೂ ಅನೀಶ್ ಹಾಗೂ ಇನ್ನಿತರರು ಅತ್ಯಂತ ಅಚ್ಚುಕಟ್ಟಾಗಿ ಸುಂದರವಾಗಿ ನಿರ್ವಹಿಸಿದ್ದಾರೆ. ದೇವಾಲಯದ ಒಳಾಂಗಣದಲ್ಲಿ ಶಬರಿಮಲೈನಲ್ಲಿ ಕನ್ನಿಮೂಲ ದಿಕ್ಕಿನಲ್ಲಿ ನೆಲೆ ನಿಂತಿರುವ ಮಹಾಗಣಪತಿಯಂತೆ ಕನ್ನಿಮೂಲ ದಿಕ್ಕಿನಲ್ಲಿ ಶ್ರೀ ಬಲಮುರಿ (ಬಲಗಡೆ ಸೊಂಡಿಲು) ಕ್ಷಿಪ್ರಪ್ರಸಾದ ಮಹಾಗಣಪತಿಯ ಗುಡಿಯೂ…
ಮಡಿಕೇರಿ ಏ.19 : ಆದಿ ದ್ರಾವಿಡ ಸಮುದಾಯದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಕ್ಷೇತ್ರದ ಜನತೆಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸಲು ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿರುವ ಹೆಚ್.ಎಂ.ಸೋಮಪ್ಪ ಅವರಿಗೆ ಜನತೆ ಅವಕಾಶವನ್ನು ನೀಡಬೇಕೆಂದು ದಕ್ಷಿಣ ಕನ್ನಡದ ಮಂಗಳೂರಿನ ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾ ವಕ್ತಾರ ರಾಮ್ ಕುಮಾರ್ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿ ದ್ರಾವಿಡ ಸಮುದಾಯಕ್ಕೆ ಸೇರಿರುವ ಹೆಚ್.ಎಂ. ಸೋಮಪ್ಪ ಅವರಿಗೆ ಚುನಾವಣಾ ಸ್ಪರ್ಧೆಗೆ ಅವಕಾಶ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಆದಿ ದ್ರಾವಿಡ ಸಮುದಾಯ ಮೂಲತಃ ದಕ್ಷಿಣ ಕನ್ನಡ ಭಾಗದಿಂದ ವಿವಿಧ ಕೆಲಸ ಕಾರ್ಯಗಳಿಗೆ ಬಂದು ಜಿಲ್ಲೆಯಲ್ಲಿ ನೆಲೆಸಿದವರಾಗಿದ್ದಾರೆ. ಕಳೆದ ಐದು ದಶಕಗಳಿಂದ ಈ ಸಮುದಾಯದ ಮಂದಿ ಹತ್ತು ಹಲ ಸಮಸ್ಯೆಗಳನ್ನು ಎದುರಿಸುತ್ತಾ ಬರುತ್ತಿದ್ದು, ಸೋಮಪ್ಪ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆದಿ ದ್ರಾವಿಡ ಸಮುದಾಯದ ಸಂಕಷ್ಟಗಳಿಗೆ ಧ್ವನಿಯಾಗಬೇಕೆನ್ನುವ ಆಶಯವನ್ನು ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿರುವ ಆದಿ ದ್ರಾವಿಡ…






