ಲೇಖಕ: admin

ಮಡಿಕೇರಿ ಏ.18 : ಕೇರಳದ ಕಣ್ಣೂರಿನಲ್ಲಿರುವ ಪಯ್ಯಂಬಲ ಕಡಲ ತೀರದಲ್ಲಿ ಕಣ್ಮರೆಯಾದ ತಣ್ಣೀರುಹಳ್ಳ ಗ್ರಾಮದ ಸೃಜನ್ ನ ಮೃತದೇಹ ಪತ್ತೆಯಾಗಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮುಗಿದ ಹಿನ್ನೆಲೆ ಕುಟುಂಬದ ಸದಸ್ಯರೊಂದಿಗೆ ಕೇರಳದ ದೇವಾಲಯಗಳು ಹಾಗೂ ಪ್ರವಾಸಿತಾಣಗಳಿಗೆ ತೆರಳಿದ್ದ ಸೃಜನ್ (15) ಪಯ್ಯಾಂಬಲ ಕಡಲ ಕಿನಾರೆಯಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ. ಕೋಸ್ಟಲ್ ಗಾರ್ಡ್ ಸಿಬ್ಬಂದಿಗಳು, ನುರಿತ ಈಜುಗಾರರು ಕಾರ್ಯಾಚರಣೆ ಕೈಗೊಂಡಿದ್ದರು. ಸೋಮವಾರ ರಾತ್ರಿ 8.30ರ ಸುಮಾರಿಗೆ ಸೃಜನ್ ಮೃತದೇಹ ಪತ್ತೆಯಾಗಿದೆ. ಸೃಜನ್ ತಣ್ಣೀರುಹಳ್ಳ ಗ್ರಾಮದ ನಿವಾಸಿ ಶಶಿಕುಮಾರ್ (ಸಚಿನ್) ಹಾಗೂ ನೇರುಗಳಲೆ ಗ್ರಾ.ಪಂ ಸದಸ್ಯೆ ಕವಿತ ದಂಪತಿ ಪುತ್ರ.

Read More

ಮಡಿಕೇರಿ ಏ.18 : ಮಡಿಕೇರಿ ಆಕಾಶವಾಣಿಯಿಂದ ಏಪ್ರಿಲ್, 20 ರಂದು ಸಂಜೆ 6.50 ಕ್ಕೆ ಪ್ರಸ್ತುತ ಧಗೆಯ ಪರಿಸ್ಥಿತಿಯಲ್ಲಿ ಕಾಫಿ ಬೆಳೆಯ ರಕ್ಷಣೆ ಮತ್ತು ಪೋಷಣೆ ಕುರಿತು ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಎಸ್.ಎಲ್.ಪಾಟೀಲ್ ಅವರ ವಿವರವಾದ ಸಲಹೆಗಳ ಕಾರ್ಯಕ್ರಮವು ಪ್ರಸಾರವಾಗುತ್ತಿದೆ. ಉಪಯುಕ್ತ ವಿಚಾರಗಳಿವೆ. ಕಾಫಿ ಬೆಳೆಗಾರರು ತಪ್ಪದೇ ಆಲಿಸಿ, ಹಾಗೆಯೇ ಇತರರಿಗೂ ತಿಳಿಸಿ ರೇಡಿಯೊ ಮೂಲಕ ಇಲ್ಲವೇ newsonairapp ಸಹಾಯದಿಂದ ಕಾರ್ಯಕ್ರಮ ಕೇಳಬಹುದು ಎಂದು ಮಡಿಕೇರಿ ಆಕಾಶವಾಣಿ ನಿಲಯದ ಕಾರ್ಯಕ್ರಮ ನಿರ್ವಾಹಕರಾದ ವಿಜಯ ಅಂಗಡಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಏ.18 : ಮೇ 10 ರಂದು ನಡೆಯುವ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸ್ವೀಪ್ ಕಾರ್ಯಕ್ರಮದ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತದಾನದ ಬಗ್ಗೆ ತಮ್ಮ ಪೋಷಕರಿಗೆ ಜಾಗೃತಿ ಮೂಡಿಸಲು ಕಾರ್ಡಿನಲ್ಲಿ ಪತ್ರ ಬರೆಯುವುದರ ಮೂಲಕ ಮತದಾನದ ಅರಿವು ಮೂಡಿಸಿದರು.

Read More

ಮಡಿಕೇರಿ ಏ.18 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಇಂಡಿಯನ್ ಮೂಮ್ಮೆಂಟ್ ಪಕ್ಷದ (ಐಎಂಪಿ)  ಅಭ್ಯರ್ಥಿ ರಶೀದ ಬೇಗಂ  ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ  ಆಗಮಿಸಿದ  ರಶೀದ ಬೇಗಂ  ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು.

Read More

ಮಡಿಕೇರಿ ಏ.18 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್ ಲಭಿಸದೆ ಇರುವುದರಿಂದ ನಾನು ಮತ್ತಷ್ಟು ಪ್ರಬುದ್ಧನಾಗಿದ್ದು, ಪಕ್ಷದ ಹಿರಿಯ ನಾಯಕರ ಅಣತಿಯಂತೆ ಸಕ್ರಿಯ ಕಾರ್ಯಕರ್ತನಾಗಿರುವೆ ಎಂದು ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿರಾಜಪೇಟೆ ಕ್ಷೇತ್ರದ ಮೇಲೆ ನನಗಿದ್ದ ಅಭಿಮಾನದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಹೊಸ ಮನ್ವಂತರ ಆರಂಭಿಸಬೇಕು ಎನ್ನುವ ಅಭಿಲಾಷೆ ಇತ್ತು. ಅಪಾರ ಪ್ರಮಾಣದ ಅಭಿಮಾನಿಗಳು ಹಾಗೂ ಹಿತೈಷಿಗಳು ನನ್ನನ್ನು ಚುನಾವಣೆಗೆ ಸ್ಪರ್ಧಿಸಿ ಎಂದು ಮಾಡಿದ ಒತ್ತಾಯ ಮತ್ತು ಪ್ರೋತ್ಸಾಹದಿಂದ ನನ್ನ ಹೆಸರು ರಾಜ್ಯ ಮಾತ್ರವಲ್ಲ ದೆಹಲಿಯ ಭಾರತೀಯ ಜನತಾ ಪಕ್ಷದ ವರಿಷ್ಠರ ಮುಂದೆಯೂ ಪರಿಗಣಿತವಾಗುವಂತೆ ಮಾಡಿತು. ನನಗೆ ವೈಯಕ್ತಿಕವಾಗಿ ರಾಜಕೀಯ ಆಸಕ್ತಿಗಿಂತ ಕ್ಷೇತ್ರದ ಮೇಲಿನ ಹಿತಾಸಕ್ತಿ ಮುಖ್ಯವಾಗಿತ್ತು. ವಿಶೇಷವಾಗಿ ವಿರಾಜಪೇಟೆ ಕ್ಷೇತ್ರದ ಜನತೆಗೆ ನಾನೋರ್ವ ಶಿಸ್ತಿನ ಸಿಪಾಯಿಯಾಗಲು, ನಮ್ಮ ದೇಶದ ಹೆಮ್ಮೆಯ ಪ್ರಧಾನಿಯಂತೆ ನಾನು ಕೂಡ ಕೆಲಸಗಾರನಾಗಬೇಕೆಂದು ನನ್ನನ್ನು ಪ್ರೇರೇಪಿಸಿತು.…

Read More

ಮಡಿಕೇರಿ ಏ.18 : ಚುನಾವಣಾ ನೀತಿ ಸಂಹಿತೆಯ ನೆಪದಲ್ಲಿ ಕೊಡಗಿನ ಜಮ್ಮಾ ಹಿಡುವಳಿದಾರ ಕೆಲವು ಅಪರಾಧ ಪ್ರಕರಣಗಳ ಆರೋಪಿಗಳಿಂದ ಕೋವಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ಶ್ರೀ ಕಾವೇರಮ್ಮ ಕೊಡವ ಅಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಟ್ರಸ್ಟ್ ನ ಅಧ್ಯಕ್ಷ ಎಂ.ಬಿ.ದೇವಯ್ಯ, ಪ್ರತಿ ಚುನಾವಣೆ ಸಂದರ್ಭ ಲೈಸೆನ್ಸ್ ಹೊಂದಿರುವ ಕೋವಿಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಟ್ಟುಕೊಳ್ಳುವುದು ಸಾಮಾನ್ಯ. ಈ ನಿಯಮದಿಂದ ಜಮ್ಮಾ ಹಿಡುವಳಿದಾರರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಪ್ರಸ್ತುತ ನೀತಿ ಸಂಹಿತೆ ಜಾರಿಯಾದ ನಂತರ ಪೊಲೀಸರು ಅಪರಾಧ ಸಾಬೀತಾಗದ ವಿಚಾರಣೆ ಹಂತದ ಜಮ್ಮಾ ಹಿಡುವಳಿದಾರ ಆರೋಪಿಗಳಿಂದ ಕೋವಿಯನ್ನು ಠೇವಣಿ ಇಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕೋವಿ ಜಮ್ಮಾ ಹಿಡುವಳಿದಾರರ ಹಕ್ಕಾಗಿದೆ, ಕೋವಿ ಹೊಂದಿರುವವರಿಂದ ಇಲ್ಲಿಯವರೆಗೆ ಕೊಡಗಿನಲ್ಲಿ ಯಾವುದೇ ಅಶಾಂತಿಯ ವಾತಾವರಣ ಸೃಷ್ಟಿಯಾಗಿಲ್ಲ. ಪ್ರತಿ ಚುನಾವಣೆಯೂ ಶಾಂತಿಯುತವಾಗಿ ನಡೆದಿದ್ದು, ಕೋವಿಯಿಂದ ಅನಾಹುತಗಳು ಸಂಭವಿಸಿಲ್ಲ. ಕೊಡಗಿನ ಜನ ಪ್ರಜ್ಞಾವಂತರಾಗಿದ್ದು, ಕೋವಿ ಹಕ್ಕನ್ನು…

Read More

ಮಡಿಕೇರಿ ಏ.18 : ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಕಾರಿಗಳ ಆದೇಶವಿಲ್ಲದೆ ಪೊಲೀಸರು ಜಮ್ಮಾ ಹಿಡುವಳಿದಾರರ ಕೋವಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ತಕ್ಷಣ ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತಿ ಚುನಾವಣೆಯ ಸಂದರ್ಭ ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳ ಆದೇಶದಂತೆ ಲೈಸನ್ಸ್ ಪಡೆದು ಬಳಸುತ್ತಿರುವವರ ಕೋವಿಯನ್ನು ಪೊಲೀಸ್ ಇಲಾಖೆ ಠೇವಣಿ ಇಟ್ಟುಕೊಳ್ಳುವುದು ಸಾಮಾನ್ಯ. ಈ ಕ್ರಮಕ್ಕೆ ಕೊಡಗಿನ ಜನ ಕೂಡ ಸಹಕಾರ ನೀಡುತ್ತಾ ಬಂದಿದ್ದಾರೆ. ಜಮ್ಮಾ ಹಿಡುವಳಿದಾರರ ಕೋವಿಗಳಿಗೆ ಪ್ರತಿ ಚುನಾವಣೆ ಸಂದರ್ಭದಲ್ಲೂ ವಿನಾಯಿತಿ ನೀಡಲಾಗಿದೆ. ಆದರೆ 2023 ರ ಚುನಾವಣೆಯಲ್ಲಿ ಯಾವುದೇ ಆದೇಶ ಮತ್ತು ಮುನ್ಸೂಚನೆ ಇಲ್ಲದೆ ಜಮ್ಮಾ ಹಿಡುವಳಿದಾರರ ಮನೆಗಳಿಗೆ ಪೊಲೀಸರು ತೆರಳಿ ಕೋವಿ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಇಲಾಖೆಯ ಈ ಕ್ರಮದಿಂದ ಕೊಡಗಿನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ಈ ಹಿಂದಿನ ಯಾವುದೇ ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಕೋವಿಯಿಂದ ರಾಜಕೀಯ ಘರ್ಷಣೆಯಾದ ಉದಾಹರಣೆಗಳಿಲ್ಲ. ಆದರೂ ಈ ಚುನಾವಣೆಯಲ್ಲಿ…

Read More

ಮಡಿಕೇರಿ ಏ.18 : ಹೌದು ಭಾಷಣಗಳು ವಿಚಾರವಾದದಿಂದ ಕೂಡಿರಬೇಕೆ ಹೊರತು ಪ್ರಚೋದನಕಾರಿಯಾಗಿರಬಾರದು. ಭಾಷಣಗಳು ಸಮಾಜದ ಮೇಲೆ ಒಂದು ಅದ್ಬುತ ಪರಿಣಾಮ ಬೀರುವ ಒಂದು ಮಾರ್ಗ. ಭಾಷಣದಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಅದೇ ರೀತಿ ಕೆಲವು ಭಾಷಣಗಳು ನಾಶಕ್ಕೂ ಕಾರಣವಾಗುತ್ತದೆ. ಇಂತಹ ಅನೇಕ ನಿದರ್ಶನಗಳು ನಡೆದಿದೆ. ಭಾಷಣಗಳನ್ನು ಮಾಡುವುದು ಒಂದು ಕಲೆ. ಇದು ಕೆಲವರಿಗೆ ರಕ್ತಗತವಾಗಿರುತ್ತದೆ. ಇನ್ನೂ ಕೆಲವರು ಪರಿಶ್ರಮದಿಂದ ಕರಗತ ಮಾಡಿಕೊಂಡಿರುತ್ತಾರೆ. ಕೆಲವು ನಮ್ಮ ರಾಜಕಾರಣಿಗಳು ಮಾತ್ರ ಒಂದಷ್ಟೂ ಒದರುವುದೇ ಭಾಷಣ ಎಂದು ಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಸಮಾಜದಲ್ಲಿ ಕಂಡು ಬರುತ್ತಿರುವುದೇನೆಂದರೆ ನಾಲಗೆಯ ಮೇಲೆ ಹಿಡಿತವಿಲ್ಲದ ಭಾಷಣಗಳು. ಯಾರು, ಯಾರ ಮೇಲೆ, ಯಾವ ವಿಷಯದ ಮೇಲೆ ತಾವು ಭಾಷಣ ಮಾಡುತ್ತಿದ್ದೇವೆ ಎಂದು ಅವರಿಗೆ ಅರಿವು ಇರುವುದಿಲ್ಲ. ಅಬ್ಬರಿಸುವುದೇ ಭಾಷಣವಾಗಿದೆ. ಹಿರಿಯರು, ಕಿರಿಯರು, ಪದವಿಗಳಿಗೆ ಮೌಲ್ಯಗಳಿಗೆ ಬೆಲೆ ನೀಡದೆ ಏಕವಚನದಲ್ಲಿ ಸಂಭೋದಿಸುವುದು ಕೇಳುಗರಿಗೆ ಮುಜುಗರ ಉಂಟು ಮಾಡುತ್ತದೆ. ಈ ಬರವಣಿಗೆ ಬರೆಯಲು ಕಾರಣವೇನೆಂದರೆ ಇತ್ತೀಚಿನ ದಿನಪತ್ರಿಕೆಯೊಂದರಲ್ಲಿ ಭಾರತದ ಉಚ್ಚ…

Read More

ಮಡಿಕೇರಿ ಏ.18 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ಪೊನ್ನಂಪೇಟೆಯ ಸಿ.ಎಸ್.ರವೀಂದ್ರ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಏ.19 ರಂದು ಮಧ್ಯಾಹ್ನ ರವೀಂದ್ರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. 2011ರಲ್ಲಿ ದೇಶದಲ್ಲಿ ಅಣ್ಣಾ ಹಜಾರೆ ನಡೆಸಿದ ಜನಾಂದೋಲನದಿಂದ ಸ್ಫೂರ್ತಿಗೊಂಡು ನಂತರ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷದಲ್ಲಿ ಸೇರ್ಪಡೆಗೊಂಡ ರವೀಂದ್ರ ಅಂದಿನಿಂದ ಇಂದಿನವರೆಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿರುವುದರಿಂದ ಜನರ ಸಮಸ್ಯೆಗಳಿಗೆ ಸುಲಭವಾಗಿ ಸ್ಪಂದಿಸುವ ಇಚ್ಛಾಶಕ್ತಿಯನ್ನು ಹೊಂದಿದ್ದಾರೆ ಎಂದು ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.

Read More

ಮಡಿಕೇರಿ ಏ.18 :  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರು ಇಂದು ನಾಮಪತ್ರ ಸಲ್ಲಿಸಿದರು. ಪಕ್ಷದ ಪ್ರಮುಖರೊಂದಿಗೆ ಮೆರವಣಿಗೆ ಮೂಲಕ ಬಂದ ಪೊನ್ನಣ್ಣ ಅವರು ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಶಬಾನ ಎಂ.ಶೇಖ್ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಎ.ಎಸ್.ಪೊನ್ನಣ್ಣ ಅವರ ಪತ್ನಿ ಕಾಂಚನ , ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ  ಹಾಜರಿದ್ದರು. ::: ಮೆರವಣಿಗೆ ::: ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಪೊನ್ನಣ್ಣ, ಪಂಜರಪೇಟೆಯಿಂದ ಚುನಾವಣಾಧಿಕಾರಿ ಕಚೇರಿವರೆಗೂ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು. ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ, ವಿರಾಜಪೇಟೆ, ಪೊನ್ನಂಪೇಟೆ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜಿ ಪೂಣಚ್ಚ, ಮಿದೇರಿರ ನವೀನ್, ಇಸ್ಮಾಯಿಲ್ ಸೇರಿದಂತೆ ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

Read More