ಲೇಖಕ: admin

ಮಡಿಕೇರಿ ಏ.18 : ಹಿರಿಯ ರಾಜಕಾರಣಿ, ಕೊಡಗು ಜಿ.ಪಂ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಪಕ್ಷದ ಎಸ್.ಟಿ ಘಟಕದ ಜಿಲ್ಲಾಧ್ಯಕ್ಷ  ಎಸ್.ಎನ್.ರಾಜಾರಾವ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

Read More

ಸುಂಟಿಕೊಪ್ಪ ಏ.18 : ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವವು ವಿವಿಧ ಪೂಜಾಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ಧ್ವಜಾರೋಹಣದೊಂದಿಗೆ ಆರಂಭಗೊಂಡ ತೆರೆ ಮಹೋತ್ಸವವು ಬಾವುಟ ಇಳಿಸವ ಮೂಲಕ ಸಂಪನ್ನಗೊಂಡಿತು. ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ಶ್ರೀಮುತ್ತಪ್ಪ ವೆಳ್ಳಾಟಂ, ಚಂಡೆಮೇಳವು ನಡೆಯಿತು. ನಂತರ ವಾದ್ಯಮೇಳದೊಂದಿಗೆ ಶ್ರೀಶಾಸ್ತಪ್ಪನ ವೆಳ್ಳಾಟಂ, ಶ್ರೀ ಗುಳಿಗನ ವೆಳ್ಳಾಟಂ ಜರುಗಿತು. ಸಂಜೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಮಹಿಳೆಯರು ಮತ್ತು ಮಕ್ಕಳು ತಲಾ ದೀಪವನ್ನು ಹಿಡಿದು ಅಡಿಯರ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಭಕ್ತಾಧಿಗಳು ಸಾಗಿದರು. ನಂತರ ಶ್ರೀ ಮುತ್ತಪ್ಪ ವೆಳ್ಳಾಟಂ, ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡುವುದು, ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ಶ್ರೀ ವಸೂರಿಮಾಲೆ ಮೆರವಣಿಗೆ, ಕಳಿಗಪಾಟ್, ಅಂದಿವೇಳ ಕಳಸಂ ಸ್ವೀಕರಿಸಿತು. ಬಳಿಕ ವಳ್ಳಕಟ್ಟ್, ಶ್ರೀ ಗುಳಿಗನ ಕೋಲ, ಶ್ರೀ ಶಾಸ್ತಪ್ಪನ ಕೋಲ, ಬೆಳಗಿನವರೆಗೆ ಶ್ರೀ ತಿರುವಪ್ಪನ ಕೋಲ, ಗಂಭೀರ…

Read More

ಮಡಿಕೇರಿ ಏ.18 : ಕಗ್ಗೋಡ್ಲು-ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯಿಂದ ಶಾಲಾ ಬ್ಯಾಗ್‌ ಕೊಡುಗೆ ನೀಡಲಾಯಿತು. ಕಗ್ಗೋಡ್ಲುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 35 ವಿದ್ಯಾಥಿ೯ಗಳಿಗೆ ಕಲಿಕೆಯನ್ನು ಮುಂದುವರಿಸಲು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗೆ ಸಂತೋಷದಿಂದ ಹಾಜರಾಗಲು ಉತ್ತೇಜಿಸಿ ಶಾಲಾ ಬ್ಯಾಗ್‌ ಹಾಗೂ ಲೇಖನಿ ಸಾಮಾಗ್ರಿಗಳನ್ನು ಉಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್‌ ,ಕಾರ್ಯದರ್ಶಿ ಲಲಿತಾ ರಾಘವನ್‌ , ಸದಸ್ಯರುಗಳಾದ ಉಮಾಗೌರಿ ,ಮಲ್ಲಿಗೆ ಪೈ ಹಾಗೂ ಆಗ್ನೇಸ್ ಮುತ್ತಣ್ಣ, ಶಾಲಾ ಮುಖ್ಯಶಿಕ್ಷಕಿ ಜಲಜಾಕ್ಷಿ ಶಿಕ್ಷಕಿ ಇಂದಿರಾ ಹಾಜರಿದ್ದರು. 

Read More

ನಾಪೋಕ್ಲು ಏ.18 : ಮೂಟೇರಿ ಉಮಾಮಹೇಶ್ವರಿ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಎರಡು ದಿನಗಳ ಕಾಲ ನಡೆದ ಹಬ್ಬದಲ್ಲಿ ದೀಪಾರಾಧನೆ, ದೇವರ ನೃತ್ಯಬಲಿ ನಡೆಯಿತು. ಮುಖ್ಯ ಹಬ್ಬದಂದು ಮಧ್ಯಾಹ್ನ ಎತ್ತುಪೋರಾಟ, ಬೊಳಕಾಟ್, ದುಡಿಕೊಟ್ ಪಾಟ್, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ನೆರವೇರಿತು. ರಾತ್ರಿ ದೇವರ ಅವಭೃತ ಸ್ನಾನ ಹಾಗೂ ನೃತ್ಯಬಲಿ ನಡೆಯಿತು. ವಾರ್ಷಿಕ ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ದೇವಾಲಯದ ತಕ್ಕರಾದ ವಾಂಜಂಡ ಬೋಪಯ್ಯ, ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಚ್ಚಿರ ರೆಮ್ಮಿ ನಾಣಯ್ಯ, ಉಪಾಧ್ಯಕ್ಷ ಕಾಟುಮಣಿಯಂಡ ಉಮೇಶ್, ಕಾರ್ಯದರ್ಶಿ ಪುಲ್ಲೇರ ವಿಠಲ ಪಳಂಗಪ್ಪ, ಆಡಳಿತ ಮಂಡಳಿ ಸದಸ್ಯರು, ಊರ ಮತ್ತು ಪರಾವೂರಿನ ಭಕ್ತಾದಿಗಳು ಪಾಲ್ಗೊಂಡಿದ್ದರು. ದೇವಾಲಯದ ಮುಖ್ಯ ಅರ್ಚಕ ಕೀರ್ತೀಶ್ ಪೂಜಾ ಕೈ ಕಾರ್ಯಗಳನ್ನು ನೆರವೇರಿಸಿದರು. ವರದಿ : ದುಗ್ಗಳ ಸದಾನಂದ.  

Read More

ನಾಪೋಕ್ಲು ಏ.18 : ಕ್ರೀಡೆ ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ, ಎಳೆ ಮನಸ್ಸುಗಳು ಕ್ರೀಡೆ ಎಂದಾಕ್ಷಣ ಉಲ್ಲಾಸಿತಗೊಳ್ಳುತ್ತವೆ ಅರಳುವ ಪ್ರತಿಭೆಗಳಿಗೆ ಇಂತಹ ಶಿಬಿರಗಳು ವೇದಿಕೆಯಾಗಿವೆ ಎಂದು ಕೆಂಬಡತಂಡ ಸಿಮ್ಸ್ ಮಂದಣ್ಣ ಅಭಿಪ್ರಾಯಪಟ್ಟರು. ಮೂರ್ನಾಡು ವಿದ್ಯಾ ಸಂಸ್ಥೆಯ ಜನರಲ್ ಕೆ.ಎಸ್.ತಿಮ್ಮಯ್ಯ ಅಕಾಡೆಮಿ ಫಾರ್ ಸ್ಪೋರ್ಟ್ಸ್ ಅಂಡ್ ಗೇಮ್ಸ್ ವತಿಯಿಂದ 12ನೇ ವರ್ಷದ ಹಾಕಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. ಶಿಬಿರಾರ್ಥಿಗಳು ಶಿಬಿರ ಮುಗಿದ ನಂತರವೂ ಕೂಡ ದೈಹಿಕ ಚಟುವಟಿಕೆಯ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಏಪ್ರಿಲ್ 1 ರಿಂದ ಆರಂಭಗೊಂಡು ಸುಮಾರು 16 ದಿನಗಳ ಕಾಲ ನಡೆದ ಶಿಬಿರ ಮುಕ್ತಾಯಗೊಂಡಿತು. 74 ಶಿಬಿರಾರ್ಥಿಗಳನ್ನ ಒಳಗೊಂಡಿದ್ದ ಈ ಶಿಬಿರದಲ್ಲಿ ಆರು ಮಂದಿ ತರಬೇತಿದಾರರಿದ್ದರು. ಎಲ್ಲಾ ದೈಹಿಕ ತರಬೇತುದಾರರು ಶಿಬಿರಾರ್ಥಿಗಳು ಪೋಷಕ ವರ್ಗದವರು ಹಾಜರಿದ್ದರು. ಈ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರು ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರ ವಿತರಿಸಿ ಶುಭ ಹಾರೈಸಿದರು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ ಏ.17 : ರಾಜ್ಯದಲ್ಲಿ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆೆ ಮತದಾನದ ಪವಿತ್ರ ದಿನ ಮಾತ್ರವಲ್ಲ ಶೇ.40ರ ಕಮಿಷನ್ ದಂಧೆ, ಮೇರೆ ಮೀರಿರುವ ಭ್ರಷ್ಟಾಚಾರವನ್ನು ಓಡಿಸುವ ಮತ್ತು ಡಬಲ್ ಇಂಜಿನ್ ಸರ್ಕಾರಕ್ಕೆ ಉತ್ತರ ನೀಡುವ ಮಹತ್ವದ ದಿನವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಗಾಂಧಿ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಅಜ್ಜಿಕುಟ್ಟೀರ ಪೊನ್ನಣ್ಣ ಅವರ ಗೆಲುವಿಗಾಗಿ ಮತಯಾಚನೆ ಮಾಡಿ ಅವರು ಮಾತನಾಡಿದರು. ರಾಜ್ಯದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿತ್ಯೋಪಯೋಗಿ ವಸ್ತಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಕೊಡುವುದಾಗಿ ಡಬಲ್ ಇಂಜಿನ್ ಸರ್ಕಾರ ನೀಡಿದ್ದ ಭರವಸೆಗಳು ಹುಸಿಯಾಗಿದೆ. ಇದಕ್ಕೆ ಮೇ 10 ರಂದು ಜನರೇ ಉತ್ತರ ನೀಡಬೇಕು ಮತ್ತು ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು…

Read More

ಸೋಮವಾರಪೇಟೆ ಏ.17 : ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ.ಗಣೇಶ್ ಆಶಯ ವ್ಯಕ್ತಪಡಿಸಿದರು. ಈ ಹಿಂದೆ 20 ತಿಂಗಳ ಅವದಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ರೈತರ ಸಾಲಮನ್ನಾ ಮಾಡಿದ್ದಾರೆ. 2018ರಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ ಮನೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ 1000 ಮನೆಗಳನ್ನು ನಿರ್ಮಿಸಿಕೊಟ್ಟು, ಕೊಡಗಿನ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ, ಸ್ವಸಹಾಯ ಸಂಘದ ಸದಸ್ಯರ ಸಾಲಮನ್ನಾ, ಆಟೋಚಾಲಕರಿಗೆ 2ಸಾವಿರ ರೂ.ಗಳ ಮಾಶಾಸನ, ವೃದ್ಧಾಪ್ಯ ಹಾಗು ಅಂಗವಿಕಲರಿಗೆ 5 ಸಾವಿರ ರೂ.ಗಳ ಮಾಶಾಸನ, ಬಡ ಕುಟುಂಬಕ್ಕೆ ವಾರ್ಷಿಕ ಉಚಿತ 5 ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸುವ ಭರವಸೆಯನ್ನು ಜೆಡಿಎಸ್ ನೀಡಿದೆ. ನುಡಿದಂತೆ ನಡೆಯುವ ಏಕೈಕ ಪಕ್ಷ ಜೆಡಿಎಸ್ ಎಂದು ಹೇಳಿದರು. ವಿರಾಜಪೇಟೆ ಕ್ಷೇತ್ರಕ್ಕೆ ಅಲ್ಪಸಂಖ್ಯಾಯತರಿಗೆ ಟಿಕೇಟ್ ನೀಡಿದ ಕೀರ್ತಿ ಜೆಡಿಎಸ್‌ಗೆ ಸಲ್ಲುತ್ತದೆ ಎಂದರು. ಪ್ರಾದೇಶಿಕ ಪಕ್ಷದ ಆಡಳಿತದಿಂದ ಮಾತ್ರ…

Read More

ಸೋಮವಾರಪೇಟೆ ಏ.17 : ಹರಗ ಗ್ರಾಮದಲ್ಲಿ ಯಾವ ವ್ಯಕ್ತಿಗೂ ಬಹಿಷ್ಕಾರ ಹಾಕಿಲ್ಲ. ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಹರಗ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎ.ಧರ್ಮಪ್ಪ ಹೇಳಿದರು. ಗ್ರಾಮ ನಿವಾಸಿಯಾಗಿರುವ ಪಿ.ಡಿ.ಗಿರೀಶ್ ಎಂಬವರು, ಗ್ರಾಮಾಭಿವೃದ್ಧಿ ಮಂಡಳಿ ವಿರುದ್ಧ ಬಹಿಷ್ಕಾರದ ದೂರು ನೀಡಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಉಪತಹಸೀಲ್ದಾರ್, ಬಿಸಿಎಂ ಅಧಿಕಾರಿ ಹಾಗು ಇನ್ನಿತರ ಅಧಿಕಾರಿಗಳು ಗ್ರಾಮಕ್ಕೆ ಬಂದು ಹೇಳಿಕೆ ಪಡೆದುಕೊಂಡು ಸಲಹೆ ನೀಡಿ ಹೋಗಿದ್ದಾರೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗ್ರಾಮದ ಪಿ.ಡಿ.ಗಿರೀಶ್ ಎಂಬವರು ಅರಣ್ಯ ಒತ್ತುವರಿ 6 ಎಕರೆ ಜಾಗದಲ್ಲಿ ಕಾಫಿ ತೋಟ ಮಾಡಿದ್ದರು. ಬೆಟ್ಟದಲ್ಲಿ ಯಂತ್ರದ ಮೂಲಕ ರಸ್ತೆ ಮಾಡಿದ್ದರು. ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ನೋಟಿಸ್ ನೀಡಿ, ಕಾಫಿ ಗಿಡಗಳನ್ನು ಕಿತ್ತು ತೆರವುಗೊಳಿಸಿದ್ದಾರೆ. ಅರಣ್ಯ ಇಲಾಖೆಯವರಿಗೆ ಹರಗ ಗ್ರಾಮದವರು ಹೇಳಿ ತೆರವು ಮಾಡಿಸಿದ್ದಾರೆ ಎಂದು ಗಿರೀಶ್ ಸುಳ್ಳು ಆರೋಪ ಮಾಡಿ ಕಾಗಿನೆಲೆ ಚಾಮುಂಡೇಶ್ವರಿ ದೇವಾಲಯದಿಂದ 40 ಮಂದಿಗೆ ನೋಟೀಸು ಮಾಡಿಸಿದ್ದಾರೆ. ನೋಟೀಸು ಪಡೆದ 40…

Read More

ನಾಪೋಕ್ಲು ಏ.17 : ನಾಪೋಕ್ಲು ಸಮೀಪದ ನೆಲಜಿ ಶ್ರೀ ಭಗವತಿ(ಪೋವದಿಯಮ್ಮೆ) ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಎತ್ತು ಪೋರಾಟ, ಆಂಗೋಲ ಪೊಂಗೋಲ ಸೇವೆ, ವಿವಿಧ ಪೂಜಾ ಕೈಂಕರ್ಯ ಮತ್ತು ದೇವರ ನೃತ್ಯ ಬಲಿ ನಡೆಯಿತು. ಶ್ರೀ ದೇವಿಯ ಸನ್ನಿಧಿಯಲ್ಲಿ ಪೀಲಿ ಆಟ್, ದೇವಿಯ ನೃತ್ಯ ಬಲಿ ಹಾಗೂ ವಿವಿಧ ಸೇವೆಗಳು ನಡೆದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.  ನೆಲಜಿ ಶ್ರೀ ಭಗವತಿ ದೇವಾಲಯದ ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿಯ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. (ವರದಿ : ದುಗ್ಗಳ ಸದಾನಂದ)

Read More

ನಾಪೋಕ್ಲು ಏ.17 : ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ಅಜ್ಜಿಮುಟ್ಟ ಪಳ್ಳಿರಾಣೆ ಪ್ರದೇಶವನ್ನು ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಪಂಚಾಯ್ತಿ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನಗೊಂಡ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು. ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಕಳೆದ ಎರಡು ಮೂರು ವರ್ಷಗಳಿಂದ ಇಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೀರಿನ ಟ್ಯಾಂಕ್  ಇದ್ದರೂ ನೀರು ಸರಬರಾಜಾಗುತ್ತಿಲ್ಲ. ಪ್ರಧಾನಮಂತ್ರಿಗಳ ಜಲಜೀವನ್ ಯೋಜನೆ ಇಲ್ಲಿ ಅನುಷ್ಠಾನಗೊಂಡಿಲ್ಲ. ಕುಡಿಯುವ ನೀರಿಗಾಗಿ ಸಮೀಪದ ಮಸೀದಿಯ ಬಳಿಯ ಕೊಳವೆಬಾವಿಯನ್ನು  ಅವಲಂಬಿಸಬೇಕಾಗಿದೆ. ಹೆಚ್ಚಿನ ನೀರಿಗಾಗಿ ದೂರದ ಹೊಳೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು  ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರಾದ ಮoದಪಂಡ ಮೊಣ್ಣಪ್ಪ, ಇಬ್ರಾಹಿಂ ಪಿ.ಬಿ,ನಬೀಸಾ, ಫೇಮೀನಾ ಮತ್ತಿತರರು ಚುನಾವಣೆ ಬಹಿಷ್ಕರಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.  ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ನೀಡದ ಪಂಚಾಯಿತಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಹೇಳಿದರು. ಪಳ್ಳಿರಾಣೆಗೆ ತುರ್ತಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡಬೇಕು ಮತ್ತು…

Read More