ಲೇಖಕ: admin

ಸುಂಟಿಕೊಪ್ಪ ಏ.19: ಕೊಡಗರಹಳ್ಳಿಯ ಕುಂದೂರುಮೊಟ್ಟೆ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಶ್ರೀ ಮಹಾವಿಷ್ಣು, ಶ್ರೀ ಚಾಮುಂಡೇಶ್ವರಿ, ರಕ್ತೇಶ್ವರಿ ಪರಿವಾರ ದೇವರುಗಳ 45ನೇ ವಾರ್ಷಿಕ ಮಹೋತ್ಸವವು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಏ.17 ರಂದು ಗಣಪತಿ ಹೋಮ ಮತ್ತು ಕೊಡಿ ಏರಿಸುವುದರೊಂದಿಗೆ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊಂಡಿತು. ದೀಪರಾಧನೆ ಏಳು ಸುತ್ತಿನ ಪ್ರದಕ್ಷಣೆ ಹಾಗೂ ಶ್ರೀ ಚಾಮುಂಡಿ ತಂಡದಿಂದ ಚಂಡೆ ಮೇಳ ನೆರವೇರಿತು. ನಂತರ ಶ್ರೀ ಚಾಮುಂಡೇಶ್ವರಿ ದೇವಿಯ ಅಭಿಷೇಕ ಪೂಜೆಯೊಂದಿಗೆ ಭಕ್ತರ ಹರಕೆ ಮತ್ತು ಬೇಡಿಕೆಗಳು ನಡೆದವು ರಾತ್ರಿ ವಿವಿಧ ದೈವಗಳ ಕೋಲ ಜರುಗಿದವು. ಮರುದಿನ ಅಜ್ಜಪ್ಪ ಕೋಲ, ವಿಷ್ಣುಮೂರ್ತಿ ಕೋಲ, ರಕ್ತೇಶ್ವರಿ ಹಾಗೂ ಚಾಮುಂಡೇಶ್ವರಿ ಕೋಲಗಳು ನೆರವೇರಿದ್ದು, ಶ್ರೀದೇವಿ ನೈವೇದ್ಯದೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವವು ಸಂಪನ್ನಗೊಂಡಿತು. ಜಾತ್ರಾಮೋಹತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ವಿದ್ಯುತ್ ದೀಪಾಂಲಕಾರಗಳಿಂದ ಸಿಂಗಾರಿಸಲಾಗಿತ್ತು. ಸುತ್ತ ಮುತ್ತಲ್ಲ ಗ್ರಾಮಗಳ ಭಕ್ತರು ಮೂರು ದಿನಗಳ ಕಾಲ ನಡೆದ ವಾರ್ಷಿಕ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

Read More

ಮಡಿಕೇರಿ ಏ.19 : ಭಾರತೀಯ ವಾಯುಪಡೆಯಲ್ಲಿ ಕರ್ತವ್ಯದಲ್ಲಿರುವ ಜಿಲ್ಲೆಯವರಾದ ಯುವ ಅಧಿಕಾರಿ ವಿಂಗ್ ಕಮಾಂಡರ್ ಮಂದಪಂಡ ತಿಮ್ಮಯ್ಯ ಅವರಿಗೆ ವೆಲ್ಲಿಂಗ್ಟನ್ ಸ್ಟಾಫ್ ಕಾಲೇಜಿನಲ್ಲಿ ತೋರಿರುವ ಸಾಧನೆಗಾಗಿ ಜನರಲ್ ತಿಮ್ಮಯ್ಯ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸ್ಟಾಫ್ ಕಾಲೇಜಿನಲ್ಲಿ ವಿವಿಧ ಚಟುವಟಿಕೆಗಳಲ್ಲಿ ಅತ್ಯುತ್ತಮ ಸಾಧನೆ ತೋರುವ ಅಧಿಕಾರಿಗಳಿಗೆ ಪ್ರಥಮ ಸ್ಥಾನಕ್ಕೆ ಫೀ.ಮಾ.ಮಾಣಿಕ್ ಷಾ ಪ್ರಶಸ್ತಿ ಹಾಗೂ ಎರಡನೆಯ ಸ್ಥಾನಕ್ಕೆ ಜರರಲ್ ತಿಮ್ಮಯ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದೀಗ ತಿಮ್ಮಯ್ಯ ಅವರು ತಮ್ಮ ಸಾಧನೆಗಾಗಿ (ಬೆಸ್ಟ್ ಆಲ್‍ರೌಂಡ್ ಸಾಧನೆ) ಎರಡನೇ ಸ್ಥಾನ ಪಡೆಯುವುದರೊಂದಿಗೆ ಇವರಿಗೆ ಜನರಲ್ ತಿಮ್ಮಯ್ಯ ಪ್ರಶಸ್ತಿ ನೀಡಲಾಗಿದೆ. ಈ ಹಿಂದೆ ಸ್ಕ್ವಾಡ್ರನ್ ಲೀಡರ್ ಆಗಿದ್ದ ತಿಮ್ಮಯ್ಯ ವಿಂಗ್ ಕಮಾಂಡರ್ ಆಗಿ ಬಡ್ತಿಯನ್ನು ಪಡೆದಿದ್ದಾರೆ. ಇವರು ಬೇಂಗೂರಿನವರಾದ ಮಂದಪಂಡ ಚಂಗಪ್ಪ (ಸದ) ಹಾಗೂ ಗೌರಮ್ಮ (ರಜನಿ-ತಾಮನೆ : ಇಟ್ಟಿರ) ದಂಪತಿ ಪುತ್ರ.

Read More

ಸಿದ್ದಾಪುರ ಏ.19 : ಕೋಟ್ಯಂತರ ಜನ-ಜಾನುವಾರುಗಳ ದಾಹ ನೀಗಿಸುವ ಕಾವೇರಿ ನದಿ ತವರಿನಲ್ಲೇ ಮಲಿನವಾಗುತ್ತಿದ್ದು, ಕುಡಿಯುವ ನೀರಿನ ಹಾಹಾಕಾರ ಸೃಷ್ಟಿಯಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಆಡಳಿತ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಜ್ಞಾವಂತ ನಾಗರಿಕರ ಪ್ರವೃತ್ತಿಯಿಂದ ಒಡಲು ಮಲಿನಗೊಳ್ಳುತ್ತಿದ್ದು, ಕೋಟ್ಯಂತರ ಜಲಚರಗಳು ಹಾಗೂ ಸಾರ್ವಜನಿಕರು ಈ ಕೊಳಕು ನೀರನ್ನು ಕುಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯ ಕರಡಿಗೋಡು  ಗ್ರಾಮದಲ್ಲಿ ಮದ್ಯ ಸೇವಿಸಿ ಬಾಟಲಿ ಹಾಗೂ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ನದಿಗೆ ಎಸೆದು ಇಡೀ ವಾತಾವರಣವನ್ನೆ ಕಲುಷಿಗೊಳಿಸುತ್ತಿದ್ದಾರೆ. ಕಳೆದ ವರ್ಷ ಇದೇ ಪ್ರದೇಶದಲ್ಲಿ ಸ್ವಚ್ಚತಾಕಾರ್ಯ ನಡೆಸಲಾಗಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದರ ಪರಿಣಾಮ ಗ್ರಾ.ಪಂ ಶುಚಿತ್ವ ಕಾಪಾಡಲು ಸೂಚಿಸಿದರೂ ನದಿ ಸಂರಕ್ಷಣೆಗೆ ಕಾಳಜಿ ವಹಿಸುವಲ್ಲಿ ವಿಫಲವಾಗಿರುವ ಆಡಳಿತ ಮಂಡಳಿ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರಡಿಗೋಡು ಗ್ರಾಮದಲ್ಲಿ ರೆಸಾರ್ಟ್ ಸೇರಿದಂತೆ ಹೋಂಸ್ಟೇಗಳು ಪ್ರವಾಸಿಗರಿಗೆ ಆಶ್ರಯ ಕಲ್ಪಿಸುತ್ತಿವೆ. ಇಲ್ಲಿಗೆ ಬರುವ ಪ್ರವಾಸಿಗರು ವಾಯು ವಿವಾಹರಕ್ಕೆ ಬಂದು ನದಿ ತೀರದಲ್ಲಿ…

Read More

ನಾಪೋಕ್ಲು ಏ.19 : ಪಾಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವವು ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಮಹಾಲಿಂಗೇಶ್ವರ ದೇವರ ಮೂಲ ಸ್ಥಾನದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ವಾರ್ಷಿಕ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗಣ ಹೋಮ ಮತ್ತು ಕೊಡಿಮರ ಏರಿಸುವುದು, ಉತ್ಸವಬಲಿ ನಡೆಯಿತು. ಅಲ್ಲದೆ ಭಾನುವಾರ ಉತ್ಸವ ಬಲಿ ಮತ್ತು ದೀಪಾರಾಧನೆ ಜರಗಿತು. ಹಗಲು ನೃತ್ಯಬಲಿ ನಡೆದು ಸಂಜೆ ದೀಪಾರಾಧನೆ, ಪಟ್ಟಣಿಹಬ್ಬ ನೆರವೇರಿತು. ಬೆಳಗ್ಗೆ ತುಲಾಭಾರ, ಮಧ್ಯಾಹ್ನ ಎತ್ತು ಪೋರಾಟ, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾಪೂಜೆ ತೀರ್ಥ ಪ್ರಸಾದ ವಿತರಣೆ ಜರಗಿತು. ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ದಿಗೆ ವಿವಿಧ ಹರಕೆ ಪೂಜೆಯನ್ನು ನೆರವೇರಿಸಿದರು. ಅಪರಾಹ್ನ ನಡೆದ ಜೋಡಿ ದೇವರ ನೃತ್ಯೋತ್ಸವವನ್ನು ಭಕ್ತರು ಶ್ರದ್ದಾಭಕ್ತಿಯಿಂದ ಕಣ್ತುಂಬಿಕೊಂಡರು. ಜಾತ್ರಾ ಮಹೋತ್ಸವದ ಪೂಜಾ ವಿಧಿ ವಿಧಾನಗಳನ್ನು ದೇವಾಲಯದ ಮುಖ್ಯ ಅರ್ಚಕ ದೇವಿ ಪ್ರಸಾದ್, ತಂತ್ರಿಗಳಾದ ಕೃಷ್ಣ ನೂರಿತಾಯ, ದಿವಾಕರ, ಕೃಷ್ಣಪ್ರಸಾದ್ ,ಸತ್ಯಮೂರ್ತಿ ನೆರವೇರಿಸಿದರು. ಈ ಸಂದರ್ಭ ಬಂಡಾರ ತಕ್ಕರಾದ ಎಡಿಕೇರಿ ಪ್ರವೀಣ್, ನಾಡುತಕ್ಕರಾದ ಚೌರಿರ ಚೋಮಣಿ…

Read More

ಮಡಿಕೇರಿ ಏ.18 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಇಂದು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರ ಬೃಹತ್ ಮೆರವಣಿಗೆ ಬಳಿಕ, ವಿರಾಜಪೇಟೆ ತಾಲ್ಲೂಕು ಕಚೇರಿಗೆ ಆಗಮಿಸಿದ ಎ.ಎಸ್.ಪೊನ್ನಣ್ಣ ಅವರು, ಚುನಾವಣಾಧಿಕಾರಿ ಶಬಾನಾ ಎಂ.ಶೇಖ್ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭ ಪೊನ್ನಣ್ಣ ಅವರ ಪತ್ನಿ ಪತ್ನಿ ಕಾಂಚನ ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ಕಾಂಗ್ರೆಸ್ ಮುಖಂಡ ಖಾಸಿಂ, ವಕೀಲ ಶ್ರೀಧರ್ ನಾಯರ್ ಹಾಜರಿದ್ದರು. ::: ವಿಶೇಷ ಪೂಜೆ ::: ನಾಮಪತ್ರ ಸಲ್ಲಿಕೆಗೂ ಮೊದಲು ಎ.ಎಸ್.ಪೊನ್ನಣ್ಣ ಅವರು ಬೆಳಗ್ಗೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಮತ್ತು ತಲಕಾವೇರಿ, ವಿರಾಜಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ::: ಶಕ್ತಿ ಪ್ರದರ್ಶನ ::: ನಗರದ ಸರ್ವೋದಯ ಕಾಲೇಜು ಬಳಿಯಿಂದ ಆರಂಭಗೊoಡ ಕಾಂಗ್ರೆಸ್ ಪಕ್ಷದ ಬೃಹತ್ ಮೆರವಣಿಗೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಬೆಂಬಲಿಗರು…

Read More

ಸೋಮವಾರಪೇಟೆ ಏ.18 : ಸೋಮವಾರಪೇಟೆಯ ಹಿರಿಕರ ಗ್ರಾಮದ ಮಲ್ಲೇಶ್ವರ ದೇವಾಲಯದ ವಾರ್ಷಿಕ ವಿಶೇಷ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಂಗಳವಾರ ಬೆಳಗ್ಗಿನ ಜಾವ ಕೊಲ್ಲಿಗದ್ದೆಯ ಕೆರೆಯಲ್ಲಿ ಗಂಗಾ ಪೂಜೆ ಸಲ್ಲಿಸಿದ ಗ್ರಾಮಸ್ಥರು ಸಕಾಲದಲ್ಲಿ ಮಳೆ ಹಾಗು ಗ್ರಾಮದ ಸುಭೀಕ್ಷೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬಸವಣ್ಣ ದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಗ್ರಾಮದ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಪ್ರತಿಕುಟುಂಬದವರು ಅವರ ಮನೆಗಳ ಮುಂದೆ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಕಳಸ ಹಿಡಿದ ಮಹಿಳೆಯರು ದೇವಾಲಯದ ಮೂರು ಸುತ್ತು ಮೆರವಣಿಗೆ ನಡೆಸಿದರು. ನಂತರ ಕೆಂಡ ಹಾಯಲಾಯಿತು. ::: ಕ್ರೀಡಾಕೂಟ ::: ಪೂಜೆಯ ಅಂಗವಾಗಿ ಗ್ರಾಮದ ಕ್ರೀಡಾಸ್ಪರ್ಧೆಗಳು ನಡೆದವು. ಮಹಿಳೆಯರ ಹಗ್ಗಾಜಗ್ಗಾಟದಲ್ಲಿ ಚರಿತ್ರಾ ತ್ರಿಲೋಕ್ ತಂಡ ಪ್ರಥಮ, ಅಶಿಕಾ ವಿಜಯಕುಮಾರ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ಅಭಿಮನ್ಯು ತಂಡ ಪ್ರಥಮ, ದ್ರೋಣ ತಂಡ ದ್ವಿತೀಯ ಸ್ಥಾನ ಗಳಿಸಿತು. ಬಸ್ಸು ಹುಡುಕಾಟ ಸ್ಪರ್ಧೆಯಲ್ಲಿ ಅಕ್ಷಿತಾ ದೇವರಾಜು ಪ್ರಥಮ, ಎಚ್.ಎಲ್. ಪ್ರಿಯಾ ದ್ವಿತೀಯ ಸ್ಥಾನ…

Read More

ಕುಶಾಲನಗರ, ಏ.18 : ಕುಶಾಲನಗರ ಗಡಿ ಭಾಗದ ಚುನಾವಣಾ ವಾಹನ ತಪಾಸಣಾ ಕೇಂದ್ರದಲ್ಲಿ ಮಂಗಳವಾರ  ದಾಖಲೆ ಇಲ್ಲದ  4.77 ಲಕ್ಷ ರೂ ಹಣ ವಶಪಡಿಸಿಕೊಳ್ಳಲಾಗಿದೆ.  ಕೊಪ್ಪ ಆವರ್ತಿ  ಕಡೆಯಿಂದ ಕೊಡಗು ಜಿಲ್ಲೆಯ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಸಂದರ್ಭ ಚುನಾವಣಾ ಅಧಿಕಾರಿಗಳ ತಂಡದ ಪಿ ಬಿ ಪೂವಯ್ಯ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವೀಂದ್ರ ಅವರ ನೇತೃತ್ವದ ತಂಡ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದ ವೇಳೆಗೆ ದಾಖಲೆ ಇಲ್ಲದ 4.77 ಲಕ್ಷದ ನಗದು ಪತ್ತೆಯಾಗಿದೆ. ಹಣವನ್ನು ವಶಪಡಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.  ಚುನಾವಣಾ ತಪಾಸಣಾ ಕೇಂದ್ರದ  ಕಾರ್ಯಾಚರಣೆ ತಂಡದಲ್ಲಿ ಮಹದೇವ್, ಸಚಿನ್ ಎಎಸ್ಐ ಗಣಪತಿ, ಪೊಲೀಸ್ ಸಿಬ್ಬಂದಿ ಮನೋಜ್ ಮತ್ತಿತರರು ಇದ್ದರು.

Read More

ಮಡಿಕೇರಿ ಏ.18 : ಆಮ್ ಆದ್ಮಿ ಪಾರ್ಟಿಯ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ದಕ್ಷಿಣ ಕೊಡಗಿನ ಕೆ.ಪಿ.ಬೋಪಣ್ಣ ಅವರು ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಆಮ್ ಆದ್ಮಿ ಪಾರ್ಟಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಬೋಪಣ್ಣ ಅವರು ಏ.20 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಇಬ್ಬರು ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೋಪಣ್ಣ ಅವರು ಆಮ್ ಆದ್ಮಿ ಪಾರ್ಟಿಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು, ಕೋವಿಡ್ ಸಂದರ್ಭ ಮಾಸ್ಕ್, ನೊಂದವರಿಗೆ ಹಾಲು ಮತ್ತು ಆಹಾರ ವಿತರಣೆ ಮಾಡಿ ಸಮಾಜ ಸೇವೆ ಸಲ್ಲಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಸಹಿ ಸಂಗ್ರಹ ಅಭಿಯಾನ ಮತ್ತು ಬೆಂಗಳೂರಿನಲ್ಲಿ ಪಕ್ಷ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಇವರು ವೃತ್ತಿಯಲ್ಲಿ ವಾಹನದ ಬಿಡಿಭಾಗಗಳ ತಯಾರಕರು ಆಗಿದ್ದಾರೆ ಎಂದು ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ.

Read More

ಮಡಿಕೇರಿ ಏ.18 : ರಂಗಭೂಮಿಯಲ್ಲಿ ದಾಖಲೆ ನಿರ್ಮಿಸಿರುವ “ಶಿವದೂತ ಗುಳಿಗ” ಕನ್ನಡ ಪೌರಾಣಿಕ ನಾಟಕವು ಏ.24 ರಂದು ಮಡಿಕೇರಿಯಲ್ಲಿ ಪ್ರದರ್ಶನ ಕಾಣಲಿದೆ ಎಂದು ಜಾನಪದ ಪರಿಷತ್‍ನ ಸಂಚಾಲಕ ವಿಕ್ರಂ ಜಾದೂಗಾರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕ ಅಕಾಡಮಿ ಪ್ರಶಸ್ತಿ ವಿಜೇತರಾದ ಪ್ರಸಿದ್ಧ ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದ ಹಾಗೂ ಕಾಂತಾರಾ ಚಲನಚಿತ್ರದ ಗುರುವ ಪಾತ್ರಧಾರಿಯಾಗಿ ಮಿಂಚಿದ ಸ್ವರಾಜ್ ಶೆಟ್ಟಿ, ಮುಖ್ಯ ಅಭಿನಯದ ‘ಶಿವದೂತ ಗುಳಿಗ’ ನಾಟಕವು ಏ.24 ರಂದು ನಗರದ ಗಾಂಧಿ ಮೈದಾನದಲ್ಲಿ ರಾತ್ರಿ 7 ಗಂಟೆಗೆ ಪ್ರದರ್ಶನ ಕಾಣಲಿದೆ ಎಂದು ಮಾಹಿತಿ ನೀಡಿದರು. ಈಗಾಗಲೇ 50ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದು, 500ರ ಪ್ರದರ್ಶನದ `ದಾಖಲೆಯತ್ತ ಮುನ್ನುಗುತ್ತಿದೆ ಎಂದ ಅವರು, ಪರಿಣಾಮಕಾರಿ ಕಥೆ, ಆತ್ಯದ್ಭುತ ರಂಗ ಸಜ್ಜಿಕೆಯಿಂದ ಕರ್ನಾಟಕದ ಎಲ್ಲೆಡೆ ಹಾಗೂ ವಿದೇಶದಲ್ಲೂ ಕೂಡ ಪ್ರದರ್ಶನ ನೀಡಿರುವ ಅಪರೂಪದ ಅವಕಾಶ ಮಡಿಕೇರಿ ಪ್ರೇಕ್ಷಕರಿಗೆ ಒಲಿದು ಬಂದಿದೆ ಎಂದರು. 30ಕ್ಕೂ ಹೆಚ್ಚು ಕಲಾವಿದರು, ಟನ್ನುಗಟ್ಟಲೆ ಸಾಮಾಗ್ರಿ, ಅತ್ಯಧುನಿಕ…

Read More

ಮಡಿಕೇರಿ ಏ.18 : ಕೊಡವ ನ್ಯಾಷನಲ್ ಕೌನ್ಸಿಲ್‌ನ ಬೇಡಿಕೆಯಾಗಿರುವ ಕೊಡವರಿಗೆ ಭೂ ರಾಜಕೀಯ ಸ್ವಾಯತ್ತತೆ ನೀಡಬೇಕು ಹಾಗೂ ಜನಾಂಗಕ್ಕೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನದ ಬೇಡಿಕೆಯನ್ನು ಪೂರೈಸಲು ಆಯೋಗ ರಚಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯವು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟೀಸ್ ನೀಡಿದೆ. ಜನಾಂಗದ ಬೇಡಿಕೆಗಳ ಪೂರೈಕೆಗೆ ಆಯೋಗ ರಚಿಸುವಂತೆ ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಏ.6 ರಂದು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಏ.17 ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಸನ್ನ ಬಿ ವರಾಲೆ ಅವರನ್ನು ಒಳಗೊಂಡ ಪೀಠ, ಅರ್ಜಿಯಲ್ಲಿನ ಮನವಿಯಂತೆ ಸಿ.ಎನ್.ಸಿ ಬೇಡಿಕೆಗಳ ಈಡೇರಿಕೆಗೆ ಆಯೋಗ ರಚಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟೀಸ್ ಜಾರಿ ಮಾಡಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಏ.6 ರಂದು ವಕೀಲ ಸತ್ಯ ಸಬರ್‌ವಾಲ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ…

Read More