ಮಡಿಕೇರಿ ಮಾ.7 : ಮಡಿಕೇರಿ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್ 3 ಗದ್ದಿಗೆ ಮತ್ತು ಎಫ್2 ಓಂಕಾರೇಶ್ವರ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಮಾ. 9 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಗೌಡ ಸಮಾಜ, ಕನ್ನಂಡಬಾಣೆ, ಓಂಕಾರೇಶ್ವರ ದೇವಸ್ಥಾನ ರಸ್ತೆ, ವೈವಾಸ್, ಗಣಪತಿಬೀದಿ, ಜೂನಿಯರ್ ಕಾಲೇಜು, ಸಂಪಿಗೆಕಟ್ಟೆ, ಅಜಾದ್‍ನಗರ, ಮಾರ್ಕೆಟ್, ಎ.ವಿ.ಶಾಲೆ, ಭಗವತಿನಗರ, ಕಾನ್ವೆಂಟ್ ಜಂಕ್ಷನ್, ಗಾಳಿಬೀಡು, ಕಾಲೂರು, ಹೆಬ್ಬೆಟ್ಟಗೇರಿ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ 33/11 ಕೆವಿ ಮೂರ್ನಾಡು, ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ನಾಪೋಕ್ಲು ಮತ್ತು ಹೊದ್ದೂರು ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾರ್ಯ ನಿರ್ವಹಿಸಬೇಕಿರುವುದರಿಂದ ಮಾರ್ಚ್, 09 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ನಾಪೋಕ್ಲು, ಹೊದ್ದೂರು, ಕೊಟ್ಟಮುಡಿ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲವ್ಯಾಪ್ತಿಯ…
ಲೇಖಕ: admin
ಮಡಿಕೇರಿ ಮಾ.7 : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಇ-ಶ್ರಮ್ ಯೋಜನೆಯ ಆಟೋ ಪ್ರಚಾರ (ಸಂಚಾರಿ ರಥ) ಕಾರ್ಯಕ್ರಮಕ್ಕೆ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ನಂತರ ಮಾತನಾಡಿ ಎಲ್ಲಾ ಅಸಂಘಟಿತ ಕಾರ್ಮಿಕರು ಇ-ಶ್ರಮ್ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಂಡು ಸರ್ಕಾರದಿಂದ ದೊರೆಯುವ ಸೌಲಭ್ಯ ಪಡೆದುಕೊಳ್ಳಬೇಕು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮುಂದಿನ ದಿನಗಳಲ್ಲಿ ಅಸಂಘಟಿತ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ.ಯತ್ನಟ್ಟಿ, ಕಟ್ಟಡ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೇರೆ ಬೇರೆ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗಳು, ದಿನಗೂಲಿ ನೌಕರರ ಸಂಘದ ಅಧ್ಯಕ್ಷರಾದ ಜಗದೀಶ ಹಾಗೂ ಕಾರ್ಮಿಕ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಹಾಜರಿದ್ದರು.
ಮಡಿಕೇರಿ ಮಾ.7 : ‘ರಾಷ್ಟ್ರದ ಮೂಲ ಸಂಸ್ಕೃತಿಯ ಬೇರು, ಭವ್ಯ ಭಾರತದ ತೇರು’ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಮೂಲ ಸಂಸ್ಕೃತಿ ಮತ್ತು ಕನ್ನಡ ಸಂಸ್ಕೃತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಪ್ರತಿಪಾದಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ‘ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ’ ನಶಿಸಿ ಹೋಗುತ್ತಿರುವ ತಳ ಸಮುದಾಯದ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸ್ತುತ ಕಾಲದಲ್ಲಿ ಕಲಾ ಸಾಹಿತ್ಯದಲ್ಲಿ ಭಾವನಾತ್ಮಕತೆ ಕಡಿಮೆಯಾಗುತ್ತದೆ. ಇದರಿಂದ ಮೂಲ ಸಂಸ್ಕೃತಿ ಉಳಿಯಲು ಸಾಧ್ಯವೇ ಎಂಬುದನ್ನು ಚಿಂತಿಸಬೇಕಿದೆ. ಆ ನಿಟ್ಟಿನಲ್ಲಿ ವಿವಿಧ ಕಲಾಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮೂಲ ಸಂಸ್ಕೃತಿ -ಕನ್ನಡ ಸಂಸ್ಕೃತಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದರು. ಪ್ರತಿಯೊಬ್ಬರೂ ಒಂದಲ್ಲ ಒಂದು ಜಾನಪದ ಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದು. ಸದಾ ಧನಾತ್ಮಕವಾಗಿ ಚಿಂತಿಸಬಹುದು ಎಂದು ಜಗದೀಶ್…
ಸೋಮವಾರಪೇಟೆ ಮಾ.7 : ಆಕಸ್ಮಿಕವಾಗಿ ಕಾಫಿ ತೋಟಕ್ಕೆ ಬೆಂಕಿ ಬಿದ್ದು ಫಸಲು ನಾಶವಾಗಿರುವ ಘಟನೆ ಗರ್ವಾಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಡಿ.ಕೆ. ಬೆಳ್ಳಿಯಪ್ಪ ಎಂಬುವವರಿಗೆ ಸೇರಿದ ಕಾಫಿ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ 150ಕ್ಕಿಂತ ಹೆಚ್ಚು ಕಾಫಿಗಿಡಗಳು ಹಾಗೂ ಬೆಲೆ ಬಾಳುವ ಮರಗಳು ಬಿಂಕಿಗಾಹುತಿಯಾಗಿವೆ. ಪಕ್ಕದ ಕಾಫಿ ತೋಟದ ಮಾಲೀಕರು ಖಾಲಿ ಜಾಗಕ್ಕೆ ಹಚ್ಚಿದ ಬೆಂಕಿ ಹರಡಿಕೊಂಡಿದ್ದು,ಲಕ್ಷಂತರ ರೂ. ಮೌಲ್ಯ ಫಸಲು ನಾಶವಾಗಿದೆ. ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಬೆಳ್ಳಿಯಪ್ಪ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿ ದ್ದಾರೆ.
ಮಡಿಕೇರಿ ಮಾ.7 : ಗೋಣಿಕೊಪ್ಪ-ಮೈಸೂರು ಹೆದ್ದಾರಿಯಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾAಜಾ ಮಾರಾಟದ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆ ದಾಳಿ ಮಾಡಿದ ಪೊಲೀಸರು 400 ಗ್ರಾಂ ಗಾಂಜಾ ಸಹಿತ ಗೋಣಿಕೊಪ್ಪಲು ನಿವಾಸಿ ವಿ.ಎಸ್.ಗುರುದತ್ತ (30) ಎಂಬಾತನನ್ನು ವಶಕ್ಕೆ ಪಡೆದರು. ಡಿವೈಎಸ್‌ಪಿ ನಿರಂಜನ್ ರಾಜೇ ಅರಸ್, ಸಿಪಿಐ ವಸಂತ್.ಕೆ.ಎಂ, ಪಿಎಸ್‌ಐ ಸಿದ್ದರಾಜು ಟಿ. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಇವರ ಕಾರ್ಯಕ್ಷಮತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬoದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಎಸ್‌ಪಿ ಮನವಿ ಮಾಡಿದ್ದಾರೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲವೆoದು ಹೇಳಿದ್ದಾರೆ.
ವಿರಾಜಪೇಟೆ ಮಾ.7 : ಸಮಾಜ ಚಿಂತಕರು, ದಾಸ ಸಾಹಿತ್ಯದ ಹರಿಕಾರರು, ಸಮಾಜ ಸುಧಾರಕರು ಕಾಲ ಜ್ಞಾನಿಗಳು ಶ್ರೀ ಕೈವಾರ ತಾತಯ್ಯ ಎಂದು ಜಿಲ್ಲಾಧ್ಯಕ್ಷ ಟಿ.ಎಲ್.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಶ್ರೀ ಕೈವಾರ ತಾತಯ್ಯನವರ 297ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದಿನ ಕಾಲದ ದಾರ್ಶನಿಕ ಮಹಾನಿಯರ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಿದೆ. ಕೈವಾರ ತಾತಯ್ಯ ನವರು ಬಲಿಜ ಸಮಾಜದಲ್ಲಿ ಜನಿಸಿ ತನ್ನ ದಾಸ ಸಾಹಿತ್ಯದ ಮೂಲಕ ನಾಡಿಗೆ ಚಿರಪರಿಚಿತವಾದ ಮಹಾನ್ ವ್ಯಕ್ತಿಗಳು. 1726 ರಲ್ಲಿ ಜನಿಸಿದ ಕೈವಾರ ತಾತಯ್ಯ ತಮ್ಮ ಬದುಕಿನುದ್ದಕ್ಕೂ ಸಮಾಜ ಮುಖಿಯಾಗಿ ಬಾಳಿದವರು. ಅಂತಹ ಅಪ್ರತಿಮ ಸಾಧಕರ ಜಯಂತಿ ಆಚರಣೆ ಮಾಡುವುದು ನಮ್ಮ ಪುಣ್ಯ. ಇಂದಿನ ಯುವಕರಿಗೆ ಅವರ ಸಾಧನೆಗಳು ಸಾಹಿತ್ಯಗಳು ಅವಿಸ್ಮರಣೀಯ ಎಂದು ತಿಳಿಸಿದರು. ವಿರಾಜಪೇಟೆ ಬಳೆ ವರ್ತಕ ಹಾಗೂ ಕೊಡಗು ಬಲಿಜ ಸಮಾಜ ಉಪಾಧ್ಯಕ್ಷ ಯತಿರಾಜ್ ಹಾಗೂ ಹಂಸವೇಣಿ ತಾತಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಗ್ರೇಡ್ 2 ತಹಶೀಲ್ದಾರ್ ಪ್ರದೀಪ್…
ಸೋಮವಾರಪೇಟೆ ಮಾ.7 : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಶಾಲೆಯ ವತಿಯಿಂದ ‘ಮಾತೃತ್ವದಿಂದ ಕ್ರಿಯಾತತ್ವ’ ಹೆಸರಿನಲ್ಲಿ ಮಕ್ಕಳ ತಾಯಂದಿರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಗಮನ ಸೆಳೆಯಿತು. ಕಳೆದ ನಾಲ್ಕು ದಿನಗಳಿಂದ ಶಾಲಾ ಆವರಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಅಮ್ಮಂದಿರು ತಮ್ಮ ಮಕ್ಕಳ ಎದುರು ನೃತ್ಯ ಮಾಡಿ ರಂಜಿಸಿದರು. ಅನೇಕರು ಸಮೂಹ ನೃತ್ಯ, ಭಾವಗೀತೆ, ಭಕ್ತಿ ಗೀತೆ, ಚಿತ್ರಗೀತೆಗಳನ್ನು ಹಾಡಿ ಸಂಭ್ರಮಿಸಿದರು. ತಮ್ಮ ಮಕ್ಕಳು ಕಲಿಯುವ ಶಾಲೆಯಲ್ಲಿ ಅಮ್ಮಂದಿರು ನೃತ್ಯಗಳನ್ನು ಕಲಿತು ನೃತ್ಯ ಮಾಡಿ ಮಕ್ಕಳನ್ನು ರಂಜಿಸಿರುವುದು ವಿಶೇಷವಾಗಿತ್ತು. ಮಂಗಳವಾರದಂದು ಅಮ್ಮಂದಿರಿಗೆ ಅರಿಶಿನಿ ಕುಂಕುಮ, ಬಾಗಿನ ನೀಡಿ ಗೌರವಿಸಲಾಯಿತು. ಬುಧವಾರ ವಿದ್ಯಾರ್ಥಿಗಳು ಮಹಿಳಾ ಸಿಬ್ಬಂದಿಗಳನ್ನು ಗೌರವಿಸುತ್ತಾರೆ. ಮಹಿಳೆ ಕುಟುಂಬದ ಸಲಹೆಗಾರ್ತಿಯಾಗಿ, ಕುಟುಂಬದ ದಾದಿ, ಮಕ್ಕಳು ಹಾದಿ ತಪ್ಪಿದಾಗ ತಿದ್ದುವ ಗುರು. ಜೀವನದ ಸರ್ವಶ್ರೇಷ್ಟ ಸ್ಥಾನಗಳನ್ನು ಅಲಂಕರಿಸುವ ಮಹಿಳೆ ತನ್ನ ಜೀವನದ ಬಹುಪಾಲು ಸಮಯವನ್ನು ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕಳೆಯುತ್ತಾಳೆ. ಮನಸ್ಸಿನಲ್ಲಿರುವ ತನ್ನ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಮಕ್ಕಳಿಗಾಗಿ ಗಂಡನಿಗಾಗಿ, ಸಮಾಜದ…
ಜಯನಗರ ಮಾ.7 : ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ವತಿಯಿಂದ ಜಯನಗರದಲ್ಲಿ ಆಯೋಜಿಸಿದ್ದ ಜನೌಷಧಿ ದಿವಸ್ ಆಚರಣೆ-2023 ಮತ್ತು 100 ನೇ ಜನೌಷಧಿ ಕೇಂದ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ನಂತರ ಸಂಚಾರಿ ಆರೋಗ್ಯ ಕ್ಲಿನಿಕ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇಂದ್ರ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಮತ್ತಿತತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಾತೋಡಿ ಜಲಪಾತ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿರುವ ಒಂದು ಜಲಪಾತ. ಇದು ಸಿರ್ಸಿಯಿಂದ 73 ಕಿಲೋಮೀಟರ್ ದೂರದಲ್ಲಿದೆ. ಯಲ್ಲಾಪುರದಿಂದ ಸುಮಾರು 32 ಕಿ.ಮೀ. ದೂರದಲ್ಲಿದೆ. ಈ ಜಲಪಾತವು ದಾಂಡೇಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಬರುವುದಲ್ಲದೆ ದಟ್ಟ ಕಾನನದ ನಡುವೆ ಸೇರಿಕೊಂಡಿದೆ. ಹಲವಾರು ಝರಿಗಳಿಂದ ಸೇರಿದ ನೀರು ಸುಮಾರು 15 ಮೀಟರ್ ಎತ್ತರದಿಂದ ಧುಮುಕುತ್ತದೆ. ನಂತರ ಕೊಡಸಳ್ಳಿ ಜಲಾಶಯದ ಮೂಲಕ ಕಾಳಿ ನದಿಯನ್ನು ಸೇರುತ್ತದೆ. ಯಲ್ಲಾಪುರದಿಂದ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಬ್ಬಳ್ಳಿಗೆ ಹೋಗುವ ಮಾರ್ಗದಲ್ಲಿ 5 ಕಿ.ಮೀ. ನಷ್ಟು ಮುಂದೆ ಸಾಗಿ ಎಡಕ್ಕೆ (ಕಲಘಟಗಿ, ಹುಬ್ಬಳ್ಳಿಯಿಂದ ಬರುವವರು ಬಲಕ್ಕೆ ತಿರುಗಬೇಕು) ತಿರುಗಿ 25 ಕಿ.ಮೀ. ಸಾಗಿದರೆ ಸಾತೋಡಿ ಜಲಪಾತದ ಪ್ರದೇಶವು ಕಾಣಸಿಗುತ್ತದೆ. ಅರಣ್ಯ ಇಲಾಖೆಯ ಅನುಮತಿ ಪತ್ರ ಪಡೆದು(ಕೆಲವೊಮ್ಮೆ ಪಡೆಯದೆಯೂ ತೆರಳಬಹುದು) 2 ಕಿ.ಮೀ. ನಷ್ಟು ಕಚ್ಚಾರಸ್ತೆಯಲ್ಲಿ ನಡೆದು ಸಾಗಿದರೆ ಜಲಪಾತದ ಸೌಂದರ್ಯವು ಕಾಣುತ್ತದೆ. ಉತ್ತರ ಕನ್ನಡ ಜಿಲ್ಲೆ, ಜಲಪಾತಗಳಿಗೆ ತವರು ಮನೆ. ಜಲಪಾತಗಳ ಜಿಲ್ಲೆಯೆಂದೇ ಕೆಲವೊಮ್ಮೆ ಕರೆಸಿಕೊಳ್ಳುವ ಈ ಪ್ರದೇಶ, ಮಳೆಗಾಲದ…
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಕ್ಕಬಿಲಗುಂಜಿ ಕಮಲೇಶ್ವರ ದೇಗುಲದಲ್ಲಿ ಪರಶಿವ ಗಂಗೆಯ ಶಿರದ ಮೇಲೆ ನೆಲೆಸಿದ್ದು ಭಕ್ತರ ಇಷ್ಟಾರ್ಥ ನೆರವೇರಿಸುತ್ತಾ ಕೀರ್ತಿಗಳಿಸಿದ್ದಾನೆ. ಇಲ್ಲಿ ಶಿವನ ಪದತಳದಲ್ಲಿ ಗಂಗೆ ತೀರ್ಥರೂಪದಲ್ಲಿ ನೆಲೆಸಿದ್ದು ಸದಾ ಹರಿಯುತ್ತಿರುತ್ತಾಳೆ. ಕಲಾ ನಿಪುಣತೆ : ಸಂಪೂರ್ಣ ಶಿಲಾಮಯ ದೇಗುಲವಾಗಿರುವ ಈ ದೇವಸ್ಥಾನ ಸುಂದರ ಕಂಬಗಳ ಕೆತ್ತನೆ, ಜಗತಿ, ನವರಂಗ, ಗರ್ಭಗುಡಿ ಹಾಗೂ ನಂದಿಮಂಟಪ ಹೊಂದಿದೆ. ಮೇಲ್ಚಾವಣಿಯ ಮೇಲೆ ಮರ ಉರುಳಿ ಗೋಪುರ ಶಿಥಿಲಗೊಂಡ ಕಾರಣ ಹೊಸದಾಗಿ ಮರ ಮತ್ತು ಹಂಚು ಬಳಸಿ ಮೇಲ್ಚಾವಣಿ ನಿರ್ಮಿಸಲಾಗಿದೆ. ಇದರಿಂದಾಗಿ ಮೇಲ್ನೋಟಕ್ಕೆ ಆಧುನಿಕ ಕಟ್ಟಡದಂತೆ ತೋರುವ ಈ ದೇಗುಲ ಸಮೀಪಿಸಿದಾಗ ಶಿಲಾ ದೇಗುಲದ ವೈಭವ ಕಣ್ಣಿಗೆ ಕಟ್ಟುತ್ತದೆ. ದೇಗುಲದ ಹಿಂಭಾಗದಲ್ಲಿ ಎತ್ತರದ ಶಿಖರ, ಮುಂಭಾಗದಲ್ಲಿ ಪವಿತ್ರ ಪುಷ್ಕರಣಿ ಇದೆ. ಎಲ್ಲೆಡೆ ಒಂದು ಪುಷ್ಕರಣಿ ಇದ್ದರೆ ಇಲ್ಲಿ ಎರಡು ಪುಷ್ಕರಣಿ ಹಾಗೂ ಎರಡು ತೀರ್ಥದ ನೆಲೆಯಿರುವುದು ಇರುವುದು ವಿಶೇಷ. ದೇಗುಲದ ಬಲಭಾಗದಲ್ಲಿ ಚಿಕ್ಕ ಆಲಯವಿದ್ದು ನಕ್ಷತ್ರಾಕಾರದ ಪುಷ್ಕರಣಿ ತೀರ್ಥದಲ್ಲಿ ಉದ್ಭವ ಶಿವಲಿಂಗವಿದೆ. ಈ ಶಿವಲಿಂಗ…






