ಲೇಖಕ: admin

ಮಡಿಕೇರಿ ಏ.3 :  ಕುಶಾಲನಗರದ  ಸರ್ಕಾರಿ ಶಾಲೆಯಲ್ಲಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಕಂಪ್ಯೂಟರ್ ಕೊಠಡಿಗೆ ಶಂಕುಸ್ಥಾಪನೆ  ನೆರವೇರಿಸಲಾಯಿತು. ಸರ್ಕಾರಿ ಶಾಲೆಯಲ್ಲಿ ಕಂಪ್ಯೂಟರ್‌ ಕೊಠಡಿ ಇಲ್ಲದೇ  ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿಗಳು ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಶಾಲೆ ಕೊಠಡಿಯ ಸಮಸ್ಯೆ ಬಗ್ಗೆ ಹೇಳಿಕೊಂಡಿ ಹೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಹೆಚ್.ಆರ್.ರಂಗನಾಥ್  ಪಬ್ಲಿಕ್ ಟಿವಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನಿರ್ಮಾಣ  ಮಾಡುವುದಾಗಿ ಭರವಸೆ ನೀಡಿದರು. ಅದರಂತೆ  ಇಂದು ಕುಶಾಲನಗರದಲ್ಲಿ ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ಮಲ್ಲಿಕಾರ್ಜುನ್,  ಸೋಮವಾರಪೇಟೆ ತಾಲೂಕಿನ ಬಿಈಓ ಸುರೇಶ್ ರೂ. 8 ಲಕ್ಷ ವೆಚ್ಚದ ನೂತನ ಕೊಠಡಿಗೆ ಭೂಮಿ ಪೂಜೆ ನೆರವೇರಿಸಿದರು. ಪಬ್ಲಿಕ್ ಟಿವಿ ಕಾರ್ಯಕ್ಕೆ ಕುಶಾಲನಗರ ಜನರ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ನವದೆಹಲಿ ಏ.3 : ನೆರೆಯ ರಾಷ್ಟç ಪಾಕಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನದ ಹಣದುಬ್ಬರವು ಶೇಕಡಾ 35.37ಕ್ಕೆ ತಲುಪಿದೆ. ಆಹಾರಕ್ಕಾಗಿ ನೂಕುನುಗ್ಗಲು ಉಂಟಾಗಿ ಕಳೆದ ಹತ್ತು ದಿನಗಳಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ. ಮಾರ್ಚ್ನಲ್ಲಿ ಸಾರಿಗೆ ಬೆಲೆಗಳು ಶೇಕಡಾ 54.94 ರಷ್ಟು ಏರಿಕೆಯಾಗಿದ್ದು, ಮಾರ್ಚ್ನಲ್ಲಿ ಆಹಾರ ಹಣದುಬ್ಬರವು ಶೇಕಡಾ 47.15 ರಷ್ಟು ಏರಿಕೆಯಾಗಿದೆೆ. ಬಟ್ಟೆ ಮತ್ತು ಶೂಗಳ ಬೆಲೆಗಳು 21.93 ಶೇಕಡಾ, ವಸತಿ, ನೀರು ಮತ್ತು ವಿದ್ಯುತ್ ಬೆಲೆಗಳು 17.49 ರಷ್ಟು ಹೆಚ್ಚಾಗಿದೆ. ಆಹಾರ ಸಾಮಾಗ್ರಿಗಳ ಬೆಲೆ ಕೈಗೆಟುಕದಷ್ಟು ದುಬಾರಿಯಾಗಿದೆ. ಒಟ್ಟಿನಲ್ಲಿ ಪಾಕ್ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ.

Read More

ಮಡಿಕೇರಿ ಏ.3 : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹುಣುಸೂರು ಬಳಿ ನಡೆದಿದೆ. ಕೇರಳದ ಕಣ್ಣೂರಿನ ನಿವಾಸಿ ಶ್ರೀಧರನ್ ಅವರ ಪುತ್ರ ರಾಜೇಶ್(43) ಎಂಬುವವರೇ ಮೃತರು. ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಜೇಶ್ ಊರಿಗೆ ತೆರಳಲು ಪ್ರಯಾಣ ಬೆಳೆಸಿದ್ದರು. ಹುಣಸೂರು ಬಳಿ ಬರುತ್ತಿದ್ದ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ಬಸ್ ಚಾಲಕ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಬದುಕುಳಿಯಲಿಲ್ಲ.

Read More

ಜಾರ್ಖಂಡ್ ಏ.3 : ಜಾರ್ಖಂಡ್ ರಾಜ್ಯದ ಛತ್ರದಲ್ಲಿ ಸಿಆರ್‌ಪಿಎಫ್ ಕೋಬ್ರಾ ಬೆಟಾಲಿಯನ್, ಜೆಎಪಿ ಮತ್ತು ಐಆರ್‌ಬಿ, ಪಲಾಮು ಮತ್ತು ಚತ್ರಾ ಜಿಲ್ಲೆಗಳ ಪೊಲೀಸ್ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಐವರು ನಕ್ಸಲರು ಬಲಿಯಾಗಿದ್ದಾರೆ. ಹತ್ಯೆಗೀಡಾದ ಐವರ ಪೈಕಿ ಇಬ್ಬರಿಗೆ ತಲಾ 25 ಲಕ್ಷ ರೂ. ಹಾಗೂ ಮೂವರಿಗೆ ತಲಾ 5 ಲಕ್ಷ ರೂ ಇನಾಮು ಘೋಷಣೆ ಮಾಡಲಾಗಿತ್ತು. ಹತ್ಯೆಯಾದ ನಕ್ಸಲರಿಂದ ಎಕೆ 47, ಇನ್ಸಾಸ್ ರೈಫಲ್ಸ್ ನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.

Read More

ಜಮ್ಮು ಏ.3 : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಹಾರಾಟದ ಬಗ್ಗೆ ಸಂಶಯ ವ್ಯಕ್ತವಾಗಿದೆ. ಡ್ರೋನ್ ನಿಂದ ಬೀಳಿಸಲಾಗಿದೆ ಎನ್ನಲಾಗಿರುವ ಶಸ್ತ್ರಾಸ್ತ್ರಗಳನ್ನು ಪೊಲೀಸರು ಸೋಮವಾರ ವಶಪಡಿಸಿಕೊಂಡಿದ್ದಾರೆ. ಮುಂಜಾನೆ ರಖ್ ಬರೋತಿಯ ರೈಲ್ವೆ ಮಾರ್ಗದ ಬಳಿ ಮೂರು ಪಿಸ್ತೂಲ್ ಮತ್ತು 4 ಗ್ರೆನೇಡ್‌ಗಳು ಪತ್ತೆಯಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಸಾಂಬಾ) ಸುರೀಂದರ್ ಚೌಧರಿ ತಿಳಿಸಿದ್ದಾರೆ. ಹೊಲದಲ್ಲಿ ಶಂಕಿತ ಶಸ್ತ್ರಾಸ್ತ್ರ ಬಿದ್ದಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ತಂಡ ಕಾರ್ಯಾಚರಣೆ ನಡೆಸಿತು.

Read More

ವಿರಾಜಪೇಟೆ ಏ.3 : ಜೆ.ಡಿ.ಎಸ್. ಪಕ್ಷದಲ್ಲಿ ಸಕ್ರೀಯರಾಗಿದ್ದು, ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಪಕ್ಷದ ಪ್ರಮುಖರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಅವರ ನಿವಾಸದಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಳಲೆ ಮತ್ತು ಚೆನ್ನಯ್ಯನಕೋಟೆ ಗ್ರಾಮದ ಜೆ.ಡಿ.ಎಸ್ ಪ್ರಮುಖ ನಾಯಕರಾದ ಎಂ.ಸಿ.ದೇವಯ್ಯ, ಅಕ್ಬರ್, ವಿ.ಸಿ.ದೇವರಾಜ್ ಮತ್ತು ಎಂ.ಕೆ.ವಸಂತ್ ಅವರುಗಳನ್ನು ಎ.ಎಸ್. ಪೊನ್ನಣ್ಣ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರು ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಜಾತ್ಯಾತೀತ ನಿಲುವುಗಳ ಮೇಲೆ ತತ್ವ ಸಿದ್ದಾಂತಗಳನ್ನು ಒಪ್ಪಿ ಸಮರ್ಥ ನಾಯಕರನ್ನು ಚುನಾಯಿಸುವ ದೃಷ್ಟಿಯಿಂದ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡಿರುವವರಿಗೆ ಅಭಿನಂದನೆ ಸಲ್ಲಿಸಿದರು. ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಒತ್ತು ನೀಡಿ ಎಂದು ಹೇಳಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್. ಪೊನ್ನಣ್ಣ ಮಾತನಾಡಿ, ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು…

Read More

ಮಡಿಕೇರಿ ಏ.3 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಕರ್ನಾಟಕ ಶಾಸ್ತ್ರೀಯ ನೃತ್ಯ ಮತ್ತು ತಾಳವಾದ್ಯ ವಿಭಾಗದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಮಡಿಕೇರಿಯ ಎಸ್.ಪಿ.ಮೌಲ್ಯ ಪುಟ್ಟಯ್ಯ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇವಳು ಮಡಿಕೇರಿಯ ಕೇಕಡ ಪಳಂಗಪ್ಪ (ಪ್ರವೀಣ್) ಹಾಗೂ ಮಾಲ ದಂಪತಿಗಳ ಪುತ್ರಿಯಾಗಿದ್ದು, ನಾಟ್ಯನಿಕೇತನ ನೃತ್ಯಾಲಯದ ವಿದುಷಿ ಪೂರ್ಣಿಮ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.

Read More

ನಾಪೋಕ್ಲು ಏ.3 : ನಾಪೋಕ್ಲು ನಾಡಕಚೇರಿಯಲ್ಲಿ ಸ್ಥಳೀಯ ಹೋಬಳಿಗೆ ಒಳಪಟ್ಟ ಅಂಗವಿಕಲ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರಿಗೆ ನಮೂನೆ 12 ಡಿ ವಿತರಿಸುವ ಬಗ್ಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ನಮೂನೆಯನ್ನು ವಿತರಿಸಲಾಯಿತು. ಈ ಸಂದರ್ಭ ಕಂದಾಯ ಪರಿವೀಕ್ಷಕ( Ri) ರವಿಕುಮಾರ್ ಹಾಗೂ ಗ್ರಾಮ ಲೆಕ್ಕಿಗರು, ಸಿಬ್ಬಂದಿಗಳು ಉಪಸ್ಥಿತರಿದ್ದರು. (ವರದಿ : ದುಗ್ಗಳ ಸದಾನಂದ)

Read More

ನಾಪೋಕ್ಲು ಏ.3 : ಮೇರಿ ಮಾತೆ ದೇವಾಲಯದಲ್ಲಿ ಗರಿಗಳ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ ಧರ್ಮ ಗುರುಗಳಾದ ಜ್ಞಾನ ಪ್ರಕಾಶ್ ತೆಂಗಿನ ಗರಿಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಭಕ್ತಾದಿಗಳಿಗೆ ಗರಿಗಳನ್ನು ವಿತರಿಸಲಾಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿದ್ದರು. (ವರದಿ : ದುಗ್ಗಳ ಸದಾನಂದ)

Read More

ಮಡಿಕೇರಿ ಏ.3 : ಮಾದಾಪುರದ ಹಾಡಗೇರಿ ಗ್ರಾಮದ ಶ್ರೀ ಭದ್ರಕಾಳಿ ದೇವಾಲಯದ ವಾರ್ಷಿಕ ಹಬ್ಬವು ಶ್ರದ್ಧಾಭಕ್ತಿಯಿಂದ ಜರುಗಿತು. ದೊಡ್ಡಹಬ್ಬದ ಪ್ರಯುಕ್ತ ಮಧ್ಯಾಹ್ನ ಬೋಳ್‍ಕಾಟ್, ಚೋಪ್ ಆಟ್ ನಡೆಯಿತು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More