ಶ್ರೀಮಂಗಲ ಸೆ.29 NEWS DESK : ಕೊಡವ ಭಾಷೆಯ ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಯಾದ ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ವು ತನ್ನ ಮಾಸಿಕ ಕಾರ್ಯಕ್ರಮ ಯೋಜನೆಯಡಿ ವಿಶೇಷವಾದ ಕವಿಗೋಷ್ಠಿ ನಡೆಸುವ ಉದ್ದೇಶದಿಂದ ‘ಕನ್ಯಾರ್ ಕವನ ವಾಚನ ಗೋಷ್ಠಿ’ ನಡೆಸಲು ಉದ್ದೇಶಿಸಿದ್ದು, ಕವಿಗಳಿಂದ ಕವನ ಆಹ್ವಾನಿಸಲಾಗಿದೆ. ಕವಿಗಳು ಕೊಡವ ಕ್ಯಾಲೆಂಡರಿನ “ಕನ್ಯಾರ್” ತಿಂಗಳಿಗೆ (ಸೆ.16 ರಿಂದ ಅ.16 ರವರೆಗಿನ ಅವಧಿಯ) ಸಂಬಂಧಿಸಿದ ವಸ್ತು ವಿಶಯವನ್ನಾಧರಿಸಿ ಕವನ ಬರೆದು ವಾಚಿಸುವ ವಿನೂತನ ಗೋಷ್ಠಿಯನ್ನು ನಡೆಸುತ್ತಿದ್ದು, ಕವಿಗಳು ಕನ್ಯಾರ್ ತಿಂಗಳಿನ ವಿಶೇಷತೆಯನ್ನಾಧರಿಸಿ ಬರೆದ ಕೊಡವ ಕವನವನ್ನು ಅ.10ರ ಒಳಗೆ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಕಛೇರಿಗೆ ತಲುಪಿಸಬಹುದು. ಅಥವಾ 9880584732 / 9448326014 / 9449998789 ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು. ಮೊದಲು ಬಂದ 40 ಕವನಗಳನ್ನು ಗೋಷ್ಠಿಯಲ್ಲಿ ವಾಚಿಸಲು ಅವಕಾಶ ನೀಡುವುದರೊಂದಿಗೆ ಕವನಗಳನ್ನು ಪುಸ್ತಕ ಮುದ್ರಿಸಿ ಪ್ರಕಟಿಸಲಾಗುವುದು. ರಾಜ್ಯಮಟ್ಟದ ಈ ಕನ್ಯಾರ್ ಕವಿಗೋಷ್ಠಿಗೆ ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆಯಲ್ಲಿ ‘ಕನ್ಯಾರ್’ ತಿಂಗಳ ವಸ್ತು ವಿಷಯಗಳನ್ನಾಧರಿಸಿ…
ಲೇಖಕ: admin
ಮೂರ್ನಾಡು ಸೆ.29 NEWS DESK : ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮೂರ್ನಾಡುವಿನಲ್ಲಿ ಅ.1 ರಂದು ಅದ್ದೂರಿ ಆಯುಧ ಪೂಜಾ ಮಹೋತ್ಸವ ನಡೆಯಲಿದೆ. ಮೂರ್ನಾಡು ಪ್ರೌಢಶಾಲೆಯ ಮೈದಾನ ಹಾಗೂ ನಾಡ್‍ಮಂದ್‍ನಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ 32ನೇ ವರ್ಷದ ಆಯುಧ ಪೂಜೆಯ ಸಂಭ್ರಮಾಚರಣೆಗೆ ಮೂರ್ನಾಡು ಪಟ್ಟಣ ಅಣಿಯಾಗುತ್ತಿದೆ. ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘವು ಆಯೋಜಿಸುತ್ತಿರುವ ವಿಜೃಂಭಣೆಯ ಆಯುಧ ಪೂಜಾ ಕಾರ್ಯಕ್ರಮವು ಅಪರಾಹ್ನ 2 ಗಂಟೆಗೆ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯೊಂದಿಗೆ ಪ್ರಾರಂಭಗೊಳ್ಳಲಿದೆ. ನಂತರ ಮುಖ್ಯರಸ್ತೆಯಲ್ಲಿ ಅಲಂಕೃತ ವಾಹನಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಅಲಂಕೃತ ವಾಹನಗಳೊಂದಿಗೆ ಈ ಬಾರಿ ವಿಶೇಷವಾಗಿ ಕ್ಯಾಲಿಕಟ್‍ನ ಹರಿಶ್ರೀ ಕಲಾ ಸಮಿತಿಯ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಟಿ ಮೆರವಣಿಗೆ ಆಕರ್ಷಣೆ ನೀಡಲಿದೆ. ಸಂಜೆಯ ವೇಳೆಗೆ ವಿನೋದ್ ಕರ್ಕೆರ ಅವರ ಮೈಸೂರಿನ ಸಿಗ್ನೇಚರ್ ಡ್ಯಾನ್ಸ್ ಕಂಪನಿಯ ಡಿಕೆಡಿ ವಿಜೇತ ರಾಹುಲ್‍ರಾವ್ ಮತ್ತು ಸಂಗಡಿಗರ ನೃತ್ಯ ಕಾರ್ಯಕ್ರಮ, ಮೂರ್ನಾಡಿನ ಜಲಜ ನಾಗರಾಜ್ ಅವರ…
ಕಾರ್ಕಳ ಸೆ.29 NEWS DESK : ವಿಶ್ವ ಹೃದಯ ದಿನಾಚರಣೆಯ ಪ್ರಯುಕ್ತ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಮತ್ತು ರೋಟರಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳ ಹಾಗೂ ಡಾ. ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ನಡೆದ ವಾಕಥಾನ್ ಹೃದಯ ದಿನಾಚರಣೆಯ ಅವಾರ್ಡ್ ಸ್ಪರ್ಧೆಯಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಗರಿಷ್ಠ ವಿದ್ಯಾರ್ಥಿಗಳ ಭಾಗವಹಿಸುವಿಕೆಯಲ್ಲಿ ಪ್ರಥಮ ಸ್ಥಾನ, ಅತ್ಯಂತ ಶಿಸ್ತಿನ ತಂಡಕ್ಕೆ ಪ್ರಥಮ ಸ್ಥಾನ, ಘೋಷಣೆ ಕೂಗುವಿಕೆಯಲ್ಲಿ ಪ್ರಥಮ, ಸ್ಕಿಟ್ ಸ್ಪರ್ಧೆಯಲ್ಲಿ ದ್ವಿತೀಯ, ಫ್ಲಕಾರ್ಡ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ-ಬೋಧಕೇತರ ವರ್ಗದವರು ಪ್ರಶಂಸಿಸಿದ್ದಾರೆ.
ಸೋಮವಾರಪೇಟೆ ಸೆ.29 NEWS DESK : ಟೀಮ್ 12 ಆಫ್ ರೋಡರ್ಸ್ ವತಿಯಿಂದ ತಾಲ್ಲೂಕಿನ ಕೊತ್ನಳ್ಳಿ, ಕುಡಿಗಾಣ, ಬೆಂಕಳ್ಳಿ ಗ್ರಾಮಗಳ ಖಾಸಗಿ ಜಮೀನಿನಲ್ಲಿ ನಡೆದ ಜೀಪ್ ಆಫ್‍ರೋಡ್ ರ‍್ಯಾಲಿ ಗ್ರಾಮೀಣ ಜನರನ್ನು ರಂಜಿಸಿತು. ಕೊತ್ನಳ್ಳಿ ಗ್ರಾಮಸ್ಥರು ರ‍್ಯಾಲಿಗೆ ಚಾಲನೆ ನೀಡಿದರು. ಟ್ರ್ಯಾಕ್‍ನಲ್ಲಿ ಜೀಪ್ ತೆರಳುತ್ತಿದ್ದಂತೆ ಧಾರಾಕಾರ ಮಳೆ ಸುರಿಯಲು ಪ್ರಾರಂಭಿಸಿತು. ಕಡಿದಾದ ರಸ್ತೆಯಲ್ಲಿ ಅನೇಕ ವಾಹನಗಳು ಸಿಲುಕಿಕೊಂಡವು. ನಂತರ ಟ್ರಾಕ್ಟರ್ ಮತ್ತು ಕ್ರೇನ್ ಬಳಸಿ ವಾಹನಗಳನ್ನು ಟ್ರಾಕ್‍ಗಳಿಗೆ ತರಲಾಯಿತು. ಅತೀ ಹೆಚ್ಚು ಮಳೆಬೀಳುವ ಕುಡಿಗಾಣ, ಕೊತ್ತನಳ್ಳಿ ಗ್ರಾಮದ ಖಾಸಗಿ ಜಾಗದ ಕಾಫಿ, ಏಲಕ್ಕಿ ತೋಟಗಳ ಕಚ್ಚಾರಸ್ತೆಯಲ್ಲಿ ತೆರಳುವುದು ಚಾಲಕರಿಗೆ ಸವಾಲಾಗಿ ಪರಿಣಮಿಸಿತು. ರಾಜ್ಯದ ವಿವಿಧ ಭಾಗಗಳಿಂದ 125 ವಾಹನಗಳಲ್ಲಿ 250 ರಷ್ಟು ಸ್ಪರ್ಧಿಗಳು ಭಾಗವಹಿಸಿದ್ದರು. ಖಾಸಗಿ ಜಮೀನಿನಲ್ಲೇ ಆಫ್‍ರೋಡ್ ರ್ಯಾಲಿಯನ್ನು ಆಯೋಜಿಸಿಲಾಗಿದೆ. ಆರಣ್ಯ ಪ್ರದೇಶದಲ್ಲಿ ಯಾವುದೇ ಟ್ರ್ಯಾಕ್ ಇರುವುದಿಲ್ಲ. ಕಾಫಿ, ಏಲಕ್ಕಿ ತೋಟದ ರಸ್ತೆಯಲ್ಲಿ ನಡೆಯಲಿದೆ. ಆಫ್‍ರೋಡ್ ಸ್ಫೋಟ್ರ್ಸ್ ಇವೆಂಟ್ ಆಗಿರುವುದರಿಂದ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ರ್ಯಾಲಿ ಆಯೋಜನೆಗೆ ಮೊದಲು…
ಮಡಿಕೇರಿ, ಸೆ.29 NEWS DESK : ಕಾಲೇಜು ಹಂತಗಳಲ್ಲಿ ವಾರ್ಷಿಕ ವಿಶೇಷ ಶಿಬಿರಗಳ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯದ ಜೊತೆಯಲ್ಲಿ ಬದುಕಿನ ಮೌಲ್ಯ ಗಳನ್ನು ಕಲಿಸಿಕೊಡುತ್ತದೆ. ಜೊತೆಯಲ್ಲಿ ವಿದ್ಯಾರ್ಥಿಗಳ ಅಭಿರುಚಿಯನ್ನು ಗುರುತಿಸುವ ಕಾರ್ಯವಾಗುವುದು ಎಂದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಕೀಯ ಅಧಿಕಾರಿ ಡಾ. ಎಂ.ಯು. ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜಿನ ವತಿಯಿಂದ ಬಸವನಹಳ್ಳಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ 2025-26ನೇ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆರೋಗ್ಯದ ಕಾಳಜಿ ಮತ್ತು ಅಂಗಾಂಗ ದಾನದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರವಾದ ಮಾಹಿತಿಯನ್ನು ತಿಳಿಸಿದರು. ವಿಶೇಷ ಆಹ್ವಾನಿತರಾಗಿದ್ದ ಪತ್ರಕರ್ತ ಕೆ.ಕೆ.ನಾಗರಾಜ ಶೆಟ್ಟಿ ಮಾತಾನಾಡಿ ಇಂತಹ ಶಿಬಿರಗಳ ಮೂಲಕ ಸೇವಾ ಮನೋಭಾವ ಬೆಳೆಸಿಕೊಳ್ಳುವುದರ ಜೊತೆಯಲ್ಲಿ ನಾಯಕತ್ವದ ಗುಣಗಳು, ಧೈರ್ಯ ಮತ್ತು ದೃಡಸಂಕಲ್ಪವನ್ನು ಕಲಿಸಿಕೊಡುತ್ತದೆ.ಸಂಘಟನಾತ್ಮಕ ವಾಗಿ ಕಾರ್ಯ ನಿರ್ವಹಿಸುವ,ಅದರ ನಿರ್ವಹಣೆ ಮತ್ತು ಆದರ್ಶ ಜೀವನ ಮೌಲ್ಯ…
ಮಡಿಕೇರಿ NEWS DESK ಸೆ.28 : ಮಳೆಯ ವಾತಾವರಣದ ನಡುವೆಯೂ, ನಗರದ ಗಾಂಧಿ ಮೈದಾನದಲ್ಲಿ ಮಡಿಕೇರಿ ದಸರೆಯ ಭಾಗವಾಗಿರುವ ‘ಮಹಿಳಾ ದಸರಾ’ವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು. ಮಹಿಳೆಯರಲ್ಲಿನ ಕ್ರಿಯಾಶೀಲತೆಗೆ ಒತ್ತು ನೀಡಿ, ಅವರಲ್ಲಿನ ಪ್ರತಿಭಾ ಅನಾವರಣಕ್ಕೆ ಕಾರ್ಯಕ್ರಮ ಪೂರಕವಾಗಿತ್ತು. ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿಯ ಸಂಯುಕ್ತಾಶ್ರಯದಲ್ಲಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿತ ಮಹಿಳಾ ದಸರಾ ಸಮಾರಂಭವನ್ನು ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ ಅವರು, ಉದ್ಘಾಟಿಸಿದರು. ದಸರಾ ಉತ್ಸವದ ಭಾಗವೇ ಆಗಿರುವ ಮಹಿಳಾ ದಸರಾ ಉತ್ಸವದಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ತೋರಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಎಂಎಲ್‌ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಮಾತನಾಡಿ, ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಯಶಸ್ವಿಯಾಗಿ ನಡೆಯುವುದಕ್ಕೆ ಪೂರಕವಾಗಿ ಶಾಸಕರು ಮುತುವರ್ಜಿ ವಹಿಸಿ ಸರ್ಕಾರದಿಂದ ಅಗತ್ಯ ಅನುದಾನವನ್ನು ಒದಗಿಸಿದ್ದಾರೆ. ಹೀಗಿದ್ದೂ ದಸರಾ ಕಾರ್ಯಕ್ರಮಗಳ ವ್ಯವಸ್ಥಿತ ಆಯೋಜನೆಗೆ ಅಗತ್ಯವಾದ ಪೂರ್ವ ಭಾವಿ…
ಮಡಿಕೇರಿ NEWS DESK ಸೆ.28 : ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ್ದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಅವರೊಂದಿಗೆ ಕೂರ್ಗ್ ಹೋಟೆಲ್ ರೆಸಾರ್ಟ್ಸ್ ಎಸೋಸಿಯೇಷನ್ ಮತ್ತು ಹೋಂಸ್ಟೇ ಪದಾಧಿಕಾರಿಗಳು ಭೇಟಿಯಾಗಿ ಕಾಫಿಯ ಬಗ್ಗೆ ಚರ್ಚಿಸಿದರು. ನಗರದ ಹೋಟೆಲ್ ವ್ಯಾಲ್ಯೂ ಸಭಾಂಗಣದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಹಾಗೂ ಕಾಫಿ ಮಂಡಳಿಯ ಉಪ ನಿರ್ದೇಶಕ ಚಂದ್ರಶೇಖರ್ ಅವರೊಂದಿಗೆ ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ದಿನೇಶ್ ಕಾರ್ಯಪ್ಪ ಮತ್ತು ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾಧ್ಯ ಕ್ಷೆ ಮೋಂತಿ ಗಣೇಶ್ ಇವರ ಸಮ್ಮುಖದಲ್ಲಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಅವರು ಕೊಡಗಿನ ಹಾಗೂ ಭಾರತದ ಕಾಫಿಯನ್ನು ಪುನಶ್ಚೇತನ ಮತ್ತು ಉತ್ತಮ ಗುಣಮಟ್ಟದ ಆಯ್ಕೆಯ ಬಗ್ಗೆ ವಿಶ್ವ ಮಟ್ಟದಲ್ಲಿ ಪ್ರಖ್ಯಾತಿ ಪಡಿಸಲು ಯಾವ ರೀತಿಯಲ್ಲಿ ಕ್ರಮವಹಿಸಬೇಕು ಎಂಬುದರ ಕುರಿತು ವಿವರಿಸಿದ ರು. ಕೊಡಗಿನ ಕಾಫಿಯನ್ನು ಉತ್ಕೃಷ್ಟ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಹಾಗೂ ಗುಣಮಟ್ಟ ಕಾಪಾಡುವ ವಿಜಯಗಳ ಬಗ್ಗೆ ಕಾಫಿ…
ಮಡಿಕೇರಿ NEWS DESK ಸೆ.28 : ಪ್ರವಾಸಿಗರ ದಟ್ಟಣೆಯ ಹಿನ್ನೆಲೆಯಲ್ಲಿ ಮಡಿಕೇರಿ ಸಮೀಪದ ಅಬ್ಬಿಫಾಲ್ಸ್ನಲ್ಲಿ ಹಸಿ ಕಸ ಮತ್ತು ಒಣ ಕಸದ ಪ್ರತ್ಯೇಕ ವಿಂಗಡಣೆಯ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ ಸಯ್ಯದ್ ಖಾಜಾ ಮೊಹಿದ್ದೀನ್ ತಿಳಿಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಜಿಲ್ಲಾ ವರ್ತಕರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾಲಿನ್ಯ ನಿಯಂತ್ರಣ ಸಂಬಂಧ ನಡೆದ ಚರ್ಚೆಯಲ್ಲಿ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪರವಾಗಿ ವಿಚಾರ ಮಂಡಿಸಿದ ಜಿಲ್ಲಾ ಚೇಂಬರ್‌ನ ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ಅವರು, ಜಿಲ್ಲೆಯಲ್ಲಿ ಒಟ್ಟಾರೆ ಅವೈಜ್ಞಾನಿಕವಾಗಿ ಕಸ ಸಂಗ್ರಹಾತಿ ನಡೆಯುತ್ತಿದೆ ಎಂದು ಹೇಳಿದರು. ಪ್ರವಾಸಿಗರಿಗೆ ಕಸವನ್ನು ಹಾಕಲು ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ ರಸ್ತೆ ಬದಿಯಲ್ಲಿಯೇ ಕಸದ ಬ್ಯಾಗ್‌ಗಳನ್ನು ಎಸೆದು ಹೋಗುತ್ತಿದ್ದು ಈ ಹಿಂದೆ ಅಲ್ಲಲ್ಲೇ ಕಸದ ಬುಟ್ಟಿಗಳನಿಟ್ಟು ಅವುಗಳಿಗೆ ಕಸವನ್ನು ಹಾಕುವ ವ್ಯವಸ್ಥೆ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ವ್ಯವಸ್ಥೆಯನ್ನು ತೆಗೆದುಹಾಕಿದ್ದರಿಂದ ಅತ್ಯಂತ ಅವೈಜ್ಞಾನಿಕವಾಗಿ ರಸ್ತೆ…
ಮೈಸೂರು NEWS DESK ಸೆ.27 : ಮೈಸೂರು ದಸರಾ ಮಹೋತ್ಸವ -2025 ರ ಅಂಗವಾಗಿ ಪಿ. ಕಾಳಿಂಗರಾವ್ ಸಭಾಂಗಣ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆದ *ರಾಜ್ಯಮಟ್ಟದ ದಸರಾ ಯೋಗಾಸನ* ಸ್ಪರ್ಧೆಯಲ್ಲಿ ವಿಶೇಷ ಚೇತನರ ವಿಭಾಗದಲ್ಲಿ ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿ ಸುಮೇಶ್ ಕೆ.ಪಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮುಖ್ಯ ಶಿಕ್ಷಕರು, ವಿಶೇಷ ಶಿಕ್ಷಕರು ಹಾಗೂ ಯೋಗ ಶಿಕ್ಷಕರಾಗಿರುವ ಶಿವರಾಜ್ ಎಸ್.ಸಿ ಅವರು ಸುಮೇಶ್ ಗೆ ತರಬೇತಿ ನೀಡಿದ್ದಾರೆ. ಸುಮೇಶ್ ಚಿನ್ನದ ಪದಕ, ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಇವರು ಸಿದ್ದಾಪುರ ಗುಹ್ಯ ಗ್ರಾಮದ ನಿವಾಸಿ ಪ್ರೇಮಾ ನಂದ ಕೆ.ಸಿ ಹಾಗೂ ಮೀನಾಕ್ಷಿ ಅವರ ಪುತ್ರ.
ಮಡಿಕೇರಿ NEWS DESK ಸೆ.28 : ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದ್ದರೂ ಅತಿಹೆಚ್ಚು ಮಳೆಯಾಗುವ ಕೊಡಗು ಜಿಲ್ಲೆಯಲ್ಲಿ ಸರ್ವಋತು ರಸ್ತೆಗಳನ್ನು ನಿರ್ಮಿಸಲಾಗದ ಬಿಜೆಪಿ ಮಂದಿ ಇಂದು ಶಾಸಕದ್ವಯರ ಜನಪ್ರಿಯತೆಯನ್ನು ಸಹಿಸದೆ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಬಗರ್ ಹುಕುಂ ಸಮಿತಿಯ ಸದಸ್ಯ ಜೆ.ಎಲ್.ಜನಾರ್ಧನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ 25 ವರ್ಷಗಳಿಂದ ಅವೈಜ್ಞಾನಿಕ ರೂಪದ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳನ್ನು ಮಾಡಿರುವುದೇ ಇಂದು ಜಿಲ್ಲೆಯ ರಸ್ತೆಗಳು ಇಷ್ಟೊಂದು ಹದಗೆಡಲು ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ಜನ ನಿರಂತರವಾಗಿ ಅಧಿಕಾರವನ್ನು ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಕಾರಣ ಈ ಬಾರಿ ಇಬ್ಬರು ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಶಾಸಕದ್ವಯರು ಅಭಿವೃದ್ಧಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಗ್ರಾಮೀಣ ರಸ್ತೆ, ಸೇತುವೆಗಳು ಅಭಿವೃದ್ಧಿ ಹೊಂದುತ್ತಿವೆ, ಬಡವರ ನಿವೇಶನ, ಮನೆಗಳಿಗೆ ಹಕ್ಕುಪತ್ರ ದೊರೆಯುತ್ತಿದೆ. ಕ್ರೀಡಾಂಗಣಗಳು ಅಭಿವೃದ್ಧಿಯಾಗುತ್ತಿವೆ, ಅರ್ಧದಲ್ಲೇ ನಿಂತಿದ್ದ…






