ಲೇಖಕ: admin

ಮಡಿಕೇರಿ ಸೆ.30 NEWS DESK : ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಗಾನವಿ ಎನ್.ಡಿ ಡಿಫರೆಂಟ್ ಟೈಪ್ ಆಫ್ ಡಿಸಾಸ್ಟರ್ ಎಲರ್ಟ್ ಎಂಬ ವಿಷಯದ ಮಾಡೆಲ್ ನ್ನು ತಯಾರಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ವಿಜ್ಞಾನ ಮತ್ತು ಗಣಿತ ವಿಭಾಗ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಎಂಬ ವಿಷಯದಡಿ ನಡೆಸಿದ ನಡೆದ ಸ್ಪರ್ಧೆಯಲ್ಲಿ ಗಾನವಿ ಸ್ಪರ್ಧಿಸಿ ಕೊಡಗಿನಿಂದ ಆಯ್ಕೆಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ. ಅ.4 ರಂದು ಬೆಂಗಳೂರಿನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಎನ್.ಡಿ.ಗಾನವಿ ಭಾಗವಹಿಸಲಿದ್ದಾಳೆ. ಇವಳು ಭಾಗಮಂಡಲ ನಿವಾಸಿ ನಿಡ್ಯಮಲೆ ದೇವಾನಂದ ಮತ್ತು ಪ್ರತಿಮಾ ದಂಪತಿಯ ಪುತ್ರಿ. ವರದಿ : ದುಗ್ಗಳ ಸದಾನಂದ. 

Read More

ಮೈಸೂರು, ಸೆ.30 NEWS DESK : ಕನ್ನಡ ಸಾಹಿತ್ಯ ಲೋಕ ಮಾತ್ರವಲ್ಲ, ಸಾರಸ್ವತ ಲೋಕದಲ್ಲಿ ಕಳಶಪ್ರಾಯರಾಗಿದ್ದ, ಖ್ಯಾತ ಸಾಹಿತಿ ಡಾ. ಎಸ್‌.ಎಲ್‌. ಭೈರಪ್ಪ ಅವರು ಇಹಲೋಹ ತ್ಯಜಿಸಿ, ಅವರ ಕೋಟ್ಯಂತರ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸಿದೆ. ಆದರೆ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಸದರು ಪತ್ರ ಬರೆದು ಮನವಿ ಮಾಡಿದ್ದಾರೆ. ಸತ್ಯ ಶೋಧನೆ, ನಿರಂತರ ಅಧ್ಯಯನಗಳನ್ನು ನಡೆಸಿ ಕೃತಿಗಳನ್ನು ರಚಿಸಿ ಶ್ರೇಷ್ಠ ಲೇಖಕರಲ್ಲಿ ಒಬ್ಬರಾಗಿರುವ ಡಾ.ಎಸ್‌.ಎಲ್‌. ಭೈರಪ್ಪನವರು ಸಾರಸ್ವತ ಲೋಕದ ಜೊತೆಗೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನೊಂದಿಗೆ ವಿಶೇಷ ನಂಟು ಹೊಂದಿರುವುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿ, ಮೈಸೂರು ಪ್ರಾದೇಶಿಕ ಶಿಕ್ಷಣ ಕಾಲೇಜಿನಲ್ಲಿ ಅಧ್ಯಾಪಕರಾಗಿ ವಿಶೇಷ ಸ್ಥಾನ ಹೊಂದಿದ್ದಾರೆ. ಸರಸ್ವತಿ ಪುತ್ರರಾಗಿ, ಸಾಹಿತ್ಯ ದಿಗ್ಗಜರಾಗಿ ಮಾತ್ರವಲ್ಲ ಗೌರವಾನ್ವಿತ…

Read More

ಸೋಮವಾರಪೇಟೆ ಸೆ.30 NEWS DESK : ಸಕಲೇಶಪುರ ಡಿಪ್ಪೋಗೆ ಸೇರಿದ ಹಳೆಯ ಕೆ.ಎಸ್.ಆರ್.ಟಿ.ಸಿ ಬಸ್ ಒಂದು ಮಾರ್ಗ ಮಧ್ಯೆಯೇ ಹಲವು ಬಾರಿ ನಿಂತು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಿದ ಘಟನೆ ಕೂತಿ–ತೋಳುರುಶೆಟ್ಟಳ್ಳಿ ಮಾರ್ಗದಲ್ಲಿ ನಡೆದಿದೆ. ಹೆತ್ತೂರು–ವನಗೂರು–ಕೂಡುರಸ್ತೆ–ಕೂತಿ–ತೋಳುರುಶೆಟ್ಟಳ್ಳಿ ಮಾರ್ಗವಾಗಿ ಸೋಮವಾರಪೇಟೆಗೆ ಮಧ್ಯಾಹ್ನ 12 ಗಂಟೆಗೆ ತಲುಪಬೇಕಾದ ಸರ್ಕಾರಿ ಸಾರಿಗೆ ಬಸ್ ಇಂದು ಹಲವೆಡೆ ನಿಂತು, ಎತ್ತರದ ಪ್ರದೇಶದ ರಸ್ತೆಯಲ್ಲಿ ಚಳಿಸದೇ ಪ್ರಯಾಣಿಕರನ್ನು ಕೆಳಗಿಳಿಸಿ ನಂತರ ಮತ್ತೆ ಹತ್ತಿಸಿಕೊಂಡು ಸಾಗುವ ಪರಿಸ್ಥಿತಿ ಎದುರಾಯಿತು. ಇದರಿಂದಾಗಿ ಬಸ್ ಸುಮಾರು ಒಂದು ಗಂಟೆ ತಡವಾಗಿ ಸೋಮವಾರಪೇಟೆಗೆ ತಲುಪಿತು. ಈ ಘಟನೆಯಿಂದ ಬೇಸತ್ತ ಸಾರ್ವಜನಿಕರು ಸೋಮವಾರಪೇಟೆ ಸಂಚಾರಿ ನಿರೀಕ್ಷಕ ಹಾಗೂ ಬಸ್ ಚಾಲಕ ಮತ್ತು ನಿರ್ವಾಹಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯು ನಡೆಯಿತು. ಪ್ರತಿದಿನ ಈ ಮಾರ್ಗದಲ್ಲಿ ಹಳೆಯ ‘ಗುಜರಿ’ ಬಸ್ಸುಗಳನ್ನು ನಿಯೋಜಿಸುವುದರಿಂದ ನಿರಂತರ ತೊಂದರೆ ಎದುರಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಸಕಲೇಶಪುರ ಡಿಪ್ಪೋ ವ್ಯವಸ್ಥಾಪಕರಿಗೆ ಹಲವಾರು ಬಾರಿ ಸಮಸ್ಯೆ ತಿಳಿಸಿದರು ಈ ವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.…

Read More

ಮಡಿಕೇರಿ ಸೆ.29 NEWS DESK : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಎಂ.ಎಸ್.ಎಂ.ಇ ನಿರ್ದೇಶನಾಲಯ, ಕೆ.ಸಿ.ಟಿ.ಯು. ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಂಯುಕ್ತ ಆಶ್ರಯದಲ್ಲಿ ಕೋವಿಡ್ ನಂತರ ನಷ್ಟಕ್ಕೆ ಒಳಗಾದ ಉದ್ಯಮಗಳ ಮರು ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಆರ್‍ಎಎಂಪಿ ಯೋಜನೆಯಡಿಯಲ್ಲಿ ಟ್ರೇಡ್ಸ್ ಹಾಗೂ ಇಎಸ್‍ಎಂ ಯೋಜನೆ ಕುರಿತು ಕುಶಾಲನಗರದ ಖಾಸಗಿ ಹೋಟೆಲ್‍ನಲ್ಲಿ ಒಂದು ದಿನದ ಅರಿವು ಕಾರ್ಯಾಗಾರ ನಡೆಯಿತು.  ಕಾರ್ಯಕ್ರಮವನ್ನು ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೆಂಗಳೂರು ಟೆಕ್ಸಾಕ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿದ್ದರಾಜು ವಹಿಸಿದ್ದರು.  ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಕೆ.ಶಿವಲಿಂಗಯ್ಯ,   ಗ್ರಾಮೀಣ ಕೈಗಾರಿಕೆಗಳು ಉಪ ನಿರ್ದೇಶಕರಾದ ರಘು ಸಿ.ಎನ್. ಉಪನಿರ್ದೇಶಕರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಲೀಡ್ ಡಿಸ್ಟ್ರಿಕ್ ಮ್ಯಾನೇಜರ್ ಆರ್.ಕೆ. ಬಾಲಚಂದ್ರ, ಮಡಿಕೇರಿ ಕೆ.ಎಸ್.ಎಫ್.ಸಿ. ಉಪ ವ್ಯವಸ್ಥಾಪಕರು(ಕಾನೂನು) ತೃಪ್ತಿ ಎಸ್., ಡಿ.ಎಸ್.ಎಂ.ಎಸ್. ಅಧ್ಯಕ್ಷರಾದ ಸಿ.ವಿ.ನಾಗೇಶ್, ಕೂಡಿಗೆ ರೆಸ್ಟಿ(ಆರ್‍ಎಸ್‍ಇಟಿಐ)ನ ಪ್ರಕಾಶ್ ಕುಮಾರ್, ಸಿಡಾಕ್‍ನ ಜಂಟಿ…

Read More

ಮಡಿಕೇರಿ ಸೆ.29 NEWS DESK : ಸರ್ಕಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ಸರ್ಕಾರದ ಕಾರ್ಯಕ್ರಮ ರೂಪಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಆ ದಿಸೆಯಲ್ಲಿ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮನವಿ ಮಾಡಿದ್ದಾರೆ. ನಗರದ ಸುದರ್ಶನ ಅತಿಥಿ ಗೃಹದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧಿಸಿದಂತೆ ಅಪಪ್ರಚಾರ ಮಾಡುತ್ತಿದ್ದು, ರಾಜಕೀಯ ಪ್ರೇರಿತವಾಗಿದೆ ಎಂದರು. ಸಂವಿಧಾನ ಅರ್ಥ ಮಾಡಿಕೊಳ್ಳುವವರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುವುದಿಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲದವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಡಿ ಎಂದು ಬಹಿರಂಗವಾಗಿ ಹೇಳುತ್ತಾರೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕೇಂದ್ರದವರು ಜಾತಿವಾರು ಜನಗಣತಿ ಮಾಡಲು ಮುಂದಾಗುತ್ತಿದ್ದಾರೆ. ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವುದು ಜಾತಿ ಸಮೀಕ್ಷೆಯಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ನುಡಿದರು.…

Read More

ಮೂರ್ನಾಡು ಸೆ.29 NEWS DESK : ಮೂರ್ನಾಡು ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದÀ ಮುತ್ತಾರ್ಮುಡಿ ಗ್ರಾಮದಲ್ಲಿ ಆಯೋಜಿಸಲಾಗಿರುವ ಎನ್‍ಎಸ್‍ಎಸ್ ಶಿಬಿರದಲ್ಲಿ ಉಪನ್ಯಾಸ ಕಾರ್ಯಕ್ರಮ ಜರುಗಿತು. ಮೂರ್ನಾಡು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಕ ಕಂಬಿರಂಡ ಬೋಪಣ್ಣ ನಶಾ ಮುಕ್ತ ಭಾರತ ಎಂಬ ವಿಷಯದ ಕುರಿತು ಮಾತನಾಡಿ, ಮಾದಕ ವಸ್ತುಗಳು ಮನುಷ್ಯನ ದೇಹ ಮತ್ತು ಮನಸ್ಸುಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಆರೋಗ್ಯಕರ ಸಮಾಜ ಮತ್ತು ಬಲಿಷ್ಠ ಭಾರತ ನಿರ್ಮಾಣದ ನಿಟ್ಟಿನಲ್ಲಿ ಯುವ ಜನತೆ ಮಾದಕ ವಸ್ತುಗಳಿಂದ ದೂರವಿರಬೇಕು. ಆರೋಗ್ಯಕರ ಜೀವನ ನಡೆಸಲು ಮಾದಕ ವಸ್ತುಗಳ ಬಗ್ಗೆ ನಿರಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಮುಖ್ಯಅತಿಥಿಯಾಗಿ ಆಗಮಿಸಿದ್ದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಪೆಮ್ಮಡಿಯಂಡ ವೇಣುಅಪ್ಪಣ್ಣ ಮಾತನಾಡಿ, ಮಾದಕ ಮುಕ್ತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು. ಮತ್ತೋರ್ವ ಅತಿಥಿ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್‍ರೈ ಮಾತನಾಡಿ ಎನ್‍ಎನ್‍ಎಸ್ ಶಿಬಿರವು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ…

Read More

ಮಡಿಕೇರಿ ಸೆ.28 NEWS DESK : ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸೆ.30 ರಂದು ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ 12ನೇ ವಷ೯ದ ಮಕ್ಕಳ ದಸರಾ ಆಯೋಜಿತವಾಗಿದೆ ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಸಹಯೋಗದಲ್ಲಿ ಸೆ.30 ರಂದು ಮಂಗಳವಾರ ಬೆಳಗ್ಗೆ 9 ಗಂಟೆಯಿಂದಲೇ ಗಾಂಧಿ ಮೈದಾನದಲ್ಲಿ ಮಕ್ಕಳಿಗಾಗಿ ಮಕ್ಕಳ ಅಂಗಡಿ, ಸಂತೆ. ಮಂಟಪ , ಛದ್ಮವೇಷ ಕ್ಲೇ ಮಾಡೆಲಿಂಗ್ ಸ್ಪಧೆ೯ಗಳು ಆಯೋಜಿಸಲ್ಪಟ್ಟಿವೆ. ಜಿಲ್ಲಾದಿಕಾರಿ ವೆಂಕಟರಾಜಾ ಮಕ್ಕಳ ದಸರಾ ಉದ್ಘಾಟಿಸಲಿದ್ದು, ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಮಿಸ್ಟಿ ಹಿಲ್ಸ್ , ಕಾಯ೯ದಶಿ೯ ಬಿ.ಕೆ. ಕಾಯ೯ಪ್ಪ, ದಸರಾ ಸಮಿತಿ ಅಧ್ಯಕ್ಷೆ ಕಲಾವತಿ, ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾಯಾ೯ಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾಯ೯ದಶಿ೯ ಅರುಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಈ ವಷ೯ ಅತ್ಯಧಿಕ ಸಂಖ್ಯೆಯಲ್ಲಿ ಸ್ಪಧಿ೯ಗಳು ಮಕ್ಕಳ ದಸರಾಕ್ಕೆ ನೋಂದಣಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ…

Read More

ಸೋಮವಾರಪೇಟೆ ಸೆ.29 NEWS DESK : ಯುವ ಜನಾಂಗವು ಆರೋಗ್ಯಕ್ಕೆ ಹಾನಿಯುಂಟುಮಾಡುವ ದುಶ್ಚಟಗಳಂತಹ ಸಾಮಾಜಿಕ ಪಿಡುಗುಗಳಿಗೆ ದಾಸರಾಗದೆ ಉತ್ತಮ ಆರೋಗ್ಯ ಮತ್ತು ಜೀವನ ಕಂಡುಕೊಳ್ಳಲು ಸಂಕಲ್ಪ ತೊಡಬೇಕು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಮಾದಾಪುರ ಶ್ರೀಮತಿ ಡಿ.ಚನ್ನಮ್ಮ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ( ಎನ್ನೆಸ್ಸೆಸ್ ) ಘಟಕದ ವತಿಯಿಂದ “ನಶಾ ಮುಕ್ತ ಭಾರತ ಅಭಿಯಾನ:2025” ಎಂಬ ಕೇಂದ್ರ ವಿಷಯದಡಿ ಗರಗಂದೂರು ಗ್ರಾಮದಲ್ಲಿ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಏರ್ಪಡಿಸಿದ್ದ ನಶಮುಕ್ತ ಭಾರತ ಅಭಿಯಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು. ಸಮಾಜ ಹಾಗೂ ಆರೋಗ್ಯ ಹಾಳು ಮಾಡುವ ದುಶ್ಚಟಗಳಿಂದ ಎಲ್ಲರೂ ದೂರವಿದ್ದು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಯುವಕರು ದೇಶದ ಆಸ್ತಿಯಾಗಬೇಕೇ ವಿನಾಃ ಯುವಜನತೆ ಮಾದಕ ಪದಾರ್ಥಗಳ ನಶೆಯುಕ್ತ ಯಾವುದೇ ಪದಾರ್ಥಗಳನ್ನು ಸೇವಿಸದೇ…

Read More

ಮಡಿಕೇರಿ ಸೆ.29 NEWS DESK : ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವತಿಯಿಂದ ಭಾರತೀಯ ಕಾಫಿ ಮಂಡಳಿ, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಮತ್ತು ಯುಪಿಎಎಸ್‍ಐ ಸಂಸ್ಥೆಗಳ ಸಹಯೋಗದಲ್ಲಿ ಕೊಡಗಿನ ವಿವಿಧೆಡೆ ಅಂತರರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತಿದೆ ಎಂದು ಸಂಸ್ಥೆ ಕಾರ್ಯದರ್ಶಿ ಅಪ್ಪನೆರವಂಡ ಅನಿತಾ ನಂದಾ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ವಿಶ್ವಾದ್ಯಂತ ಕಾಫಿ ಬಳಕೆ ಮತ್ತು ಮೆಚ್ಚುಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆಯ ವಿಶೇಷ ದಿನದಂದು ಕೊಡಗಿನಾದ್ಯಂತ ನಾಲ್ಕು ಸ್ಥಳಗಳಲ್ಲಿ ಕಾಫಿ ವಿತರಣಾ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು. ಸೆ.30 ರಂದು ಬೆಳಿಗ್ಗೆ 10.40 ಗಂಟೆಗೆ ಪೊನ್ನಂಪೇಟೆ ಸಿಐಟಿ ಎಂಜಿನಿಯರಿಂಗ್ ಕಾಲೇಜು, ಅ.1 ರಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆ ಹಾಗೂ ಮಾಲ್ದಾರೆ ಪಟ್ಟಣದಲ್ಲಿ, ಅ.4 ರಂದು ಸೋಮವಾರಪೇಟೆ ಚಿಕ್ಕ ಬಸಪ್ಪ ಕ್ಲಬ್ ನಲ್ಲಿ ಕಾರ್ಯಕ್ರಮ ನಡೆಸಿ, ಕಾಫಿ ವಿತರಿಸಲಾಗವುದೆಂದು…

Read More

ಮಡಿಕೇರಿ ಸೆ.29 NEWS DESK : ಹುದುಗೂರು ಸಮೀಪದ ಯಡವನಾಡು ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದ ಉಮೇಶ್ ರಾಜ್ ಅರಸ್ ಮತ್ತು ಜೆ.ಕೆ.ರವಿ ಎಂಬುವರ ಜಮೀನಿಗೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು ಭತ್ತದ ಗದ್ದೆಗಳನ್ನು ತುಳಿದು ತಿಂದು ಬಾರಿ ನಷ್ಟ ಪಡಿಸಿವೆ. ಅಲ್ಲದೆ ಅನೇಕ ಅಡಿಕೆ ಗಿಡಗಳನ್ನು ಹಾಳು ಮಾಡಿದೆ. ಮೀಸಲು ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಕೃಷಿಕರ ಗದ್ದೆ, ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣ ಬೆಳೆಗಳನ್ನು ಧ್ವಂಸ ಪಡಿಸಿ ನಷ್ಟ ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ಬೆಳೆ ನಷ್ಟಗೊಳಗಾದವರಿಗೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿಗಳು ಇದುವರೆಗೂ ಪರಿಹಾರವನ್ನು ನೀಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸ್ಧಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.

Read More