ಮಡಿಕೇರಿ NEWS DESK ಸೆ.21 : ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಹಿನ್ನಲೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದಿಂದ ಕಾರುಗುಂದದಲ್ಲಿ ವಿದ್ಯಾಥಿ೯ಗಳಿಗೆ ಸವಿಕಾಫಿಯನ್ನು ನೀಡಲಾಯಿತು. ಕೊಡಗು ಕಾಫಿ ಜಾಗ್ರತಿ ಸಂಘದಿಂದ ಶಾಲೆಗಳಲ್ಲಿ ಮಕ್ಕಳಿಗೆ ಕಾಫಿ ಪಾನೀಯದ ಜಾಗ್ರತಿ ಮೂಡಿಸುವ ಕಾಯ೯ಕ್ರಮದ ಅಂಗವಾಗಿ ಕಾರುಗುಂದ ಸಕಾ೯ರಿ ಶಾಲಾ ವಿದ್ಯಾಥಿ೯ಗಳಿಗೆ ಸವಿಯಾದ ಕಾಫಿ ನೀಡಲಾಯಿತು. ಆರೋಗ್ಯದ ಮೇಲೆ ಕಾಫಿಯಿಂದ ಉಂಟಾಗುವ ಉತ್ತಮ ಪರಿಣಾಮಗಳನ್ನು ವಿವರಿಸಲಾಯಿತು. ಕಾಫಿಯಿಂದಾಗಿ ಪ್ರತಿ ನಿತ್ಯ ಮನುಷ್ಯನಿಗೆ ಹೆಚ್ಚು ಲವಲವಿಕೆ ಬರುತ್ತದೆ ಎಂದೂ ತಿಳಿಸಲಾಯಿತು. ಕೊಡಗಿನಲ್ಲಿ ಕಾಫಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು ಈ ನಿಟ್ಟಿನಲ್ಲಿ ಕೖಷಿಕರು ಮತ್ತು ಕಾಮಿ೯ಕರ ಶ್ರಮವನ್ನೂ ಶಾಲಾ ವಿದ್ಯಾಥಿ೯ಗಳಿಗೆ ತಿಳಿಸಲಾಯಿತು. ಸಂಸ್ಥೆಯ ಪ್ರಮುಖರಾದ ಕುಟ್ಟೇಟಿರ ಕುಮಾರಿ ಕುಂಜ್ಞಪ್ಪ, ನಾಟೋಳಂಡ ಗಿರಿಜಾ ಚಮ೯ಣ್ಣ, ಕುಟ್ಟೇಟಿರ ಗೌರಮ್ಮ ಕಾವೇರಪ್ಪ, ಜರೀನ್ ಉತ್ತಪ್ಪ, ಮೊಟ್ಟೆಯಂಡ ಲೀನಾ ಕುಟ್ಟಪ್ಪ, ಪಟ್ಟಮಾಡ ಲೇಖಾ ಪೊನ್ನಪ್ಪ, ಕಬ್ಬಚ್ಚಿರ ಸಬಿತ ಉತ್ತಯ್ಯ, ಶಾಲಾ ಮುಖ್ಯಶಿಕ್ಷಕಿ ಪವೀ೯ನ್ ಹಾಜರಿದ್ದು ಕಾಫಿ ಕುರಿತು ಮಾಹಿತಿ ನೀಡಿದರು.
ಲೇಖಕ: admin
ವಿರಾಜಪೇಟೆ ಸೆ.20 NEWS DESK : ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ವಿರಾಜಪೇಟೆಯ ಸೆಂಟ್ ಆನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿಭಾಗಕ್ಕೆ 2025 -26ನೇ ಸಾಲಿಗೆ ಪ್ರವೇಶಾತಿ ಆರಂಭವಾಗಿದೆ. ನುರಿತ ಉಪನ್ಯಾಸಕರು, ಸುಸಜ್ಜಿತ ಕೊಠಡಿ, ಐಸಿಟಿ ತರಗತಿ, ಗ್ರಂಥಾಲಯ ವ್ಯವಸ್ಥೆ, ವೈಫೈ ವ್ಯವಸ್ಥೆ, ಕೆ ಸೆಟ್ ಹಾಗೂ ನೆಟ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಜೊತೆಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡನೆ, ಇಂಡಸ್ಟ್ರಿಯಲ್ ವಿಸಿಟ್ ಹಾಗೂ ಇಂಟರ್ನ್ ಷಿಪ್, ಬೋಧನಾ ಕೌಶಲ್ಯ ತರಬೇತಿ, ಸೆಮಿನಾರ್, ಫೆಸ್ಟ್ ಗಳಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಪ್ರಾಯೋಗಿಕ ತರಬೇತಿಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಈ ಹಿಂದಿನ ಸಾಲಿನ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆಯುವುದರ ಜೊತೆಗೆ ಪ್ರತಿ ಸೆಮಿಸ್ಟರ್ ಗಳಲ್ಲೂ ಶೇ.100 ಫಲಿತಾಂಶ ದಾಖಲಾಗಿರುತ್ತದೆ. ಶಿಕ್ಷಣ ಮಾತ್ರವಲ್ಲದೆ ಉದ್ಯೋಗ ಘಟಕದ ಮೂಲಕ ಕ್ಯಾಂಪಸ್ ಸೆಲೆಕ್ಷನ್, ಸಾಂಸ್ಕೃತಿಕ ಚಟುವಟಿಕೆ, ಶೈಕ್ಷಣಿಕ ಪ್ರವಾಸ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತಿದೆ. ಜೊತೆಗೆ ಗ್ರಾಮೀಣ ಭಾಗದ…
ಮಡಿಕೇರಿ NEWS DESK ಸೆ.21 : ರಾಜ್ಯ ಸರಕಾರ ನಡೆಸುತ್ತಿರುವ ಜಾತಿ ಜನಗಣತಿ ಸಂದರ್ಭ ಕೊಡಗು ಜಿಲ್ಲೆಯ ಮರಾಠ ಮರಾಟಿ ಸಮಾಜ ಬಾಂಧವರು ಜಾತಿಯನ್ನು ಮರಾಠ ಎಂದು ನಮೂದಿಸುವಂತೆ ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರದ ಗೆಜೆಟೆಡ್ ನೋಟಿಫಿಕೇಶನ್ ನಲ್ಲಿ ‘ಮರಾಠ’ ಎಂದು ಇರುವುದರಿಂದ ಯಾವುದೇ ವ್ಯತ್ಯಾಸಗಳನ್ನು ಮಾಡದೆ ಮತ್ತು ತಪ್ಪು ಮಾಹಿತಿ ನೀಡದೆ ಸಹಕರಿಸಬೇಕೆಂದು ತಿಳಿಸಿದ್ದಾರೆ. ಮುಂದೆ ಕೊಡಗಿನಲ್ಲಿ ‘ಮರಾಠ’ ಎಂದು ಒಂದೇ ಜಾತಿಯ ದೃಢೀಕರಣವನ್ನು ಪಡೆಯಲು ಸಂಘದ ಮೂಲಕ ಶ್ರಮಿಸಲಾಗುವುದು. ಈಗಾಗಲೇ ಮಾರಾಠಿ, ಮಾರಾಟ, ಮಾರಾಟಿ ಮರಾಠ ಈ ರೀತಿಯ ವ್ಯತ್ಯಾಸಗಳಿದ್ದು, ಯಾವುದೇ ಗೊಂದಲವಿಲ್ಲದೆ ಜಿಲ್ಲಾ ಸಂಘದ ಸೂಚನೆಯಂತೆ ‘ಮರಾಠ’ ಎಂದು ನಮೂದಿಸಬೇಕು. ಭಾಷೆಯನ್ನು ಮರಾಠ ಅಥವಾ ಕನ್ನಡ ಅಥವಾ ತುಳು ಎಂದು ನಮೂದಿಸಬೇಕು. ಅಂತರ್ಜಾತಿ ವಿವಾಹ ಆದವರು ಕೂಡ ತಮ್ಮ ಮೂಲ ಜಾತಿ ‘ಮರಾಠ’ ಎಂದೇ ನಮೂದಿಸಬೇಕು. ಈ ಮಾಹಿತಿಯನ್ನು ಸಂಘದ…
*ಸೋಮವಾರಪೇಟೆಯಲ್ಲಿ ನವ್-ವೈಭವ್* ಸೋಮವಾರ ಸೆಪ್ಟೆಂಬರ್ 22 ರಂದು ಸೋಮವಾರಪೇಟೆಯ ಸಾಕ್ಷಿ ಕನ್ವೆಷನ್ ಹಾಲ್ ನಲ್ಲಿ ಲಾಸ್ಯ -ರಿಧಿ ಆಯೋಜಿಸಿರುವ ಪ್ರದರ್ಶನ ಹಾಗೂ ಮಾರಾಟ. ನಾಡಹಬ್ಬವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸುವರ್ಣಾವಕಾಶ. ನಾಡಿನ ಸುಪ್ರಸಿದ್ದ ಸಂಸ್ಥೆಗಳಿಂದ ವಿನ್ಯಾಸಗೊಂಡ ರೆಡಿಮೇಡ್ ಉಡುಪುಗಳು – ಮಹಿಳೆಯರ ಡಿಸೈನರ್ ಸೀರೆಗಳು ಹಾಗೂ ಉಡುಗೆಗಳು – ಗೃಹಬಳಕೆ ಸಾಮಗ್ರಿಗಳು – ಆರ್ಗಾನಿಕ್ ಉತ್ಪನ್ನಗಳು – ಆಯ್ದ ವಿನೂತನ ಶೈಲಿಯ ಆಭರಣಗಳು – ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯ ಇರುತ್ತವೆ. ಬಳಸಿದ ಜರಿರೇಶ್ಮೆ ಸೀರೆಗಳನ್ನು ಜರಿಯ ಮೌಲ್ಯ ನಿರ್ಧರಿಸಿ ಖರೀದಿಸಲಾಗುತ್ತದೆ. ಗ್ರಾಹಕರಿಗೆ ಆಹ್ಲಾದ ನೀಡಲು ಕಾಫಿ ಶಾಪ್ ವಿವಿಧ ಬಗೆಯ ವಿಶೇಷ ಕೇಕ್ ಮುಂತಾದ ಬೇಕಿಂಗ್ ಉತ್ಪನ್ನಗಳು ಕೊಡಗಿನ ಸಾಂಪ್ರದಾಯಿಕ ಶೈಲಿಯಲ್ಲಿ ಸಿದ್ಧಪಡಿಸಿದ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು. ಇನ್ ಡೋರ್ ಗಿಡಗಳನ್ನು ಬೆಳೆಸುವ ಮಣ್ಣು ಹಾಗೂ ಸೆರಾಮಿಕ್ ಪಾಟ್ ಗಳು. ಮರ ಹಾಗೂ ಲೋಹದಿಂದ ತಯಾರಿಸಿದ ಅಲಂಕಾರಿಕ ಕರಕುಶಲ ವಸ್ತುಗಳು. ಬನ್ನಿ… ದಸರಾ ನವರಾತ್ರಿಯ ಪವಿತ್ರ ನಾಡಹಬ್ಬಕ್ಕೆ ಮೆರಗು ನೀಡುವ ನವ್-ವೈಭವ್ ಪ್ರದರ್ಶನ ಹಾಗೂ ಮಾರಾಟಕ್ಕೆ ನಿಮ್ಮ ಆತ್ಮೀಯರನ್ನೂ ಕರೆತನ್ನಿ. ನೆನಪಿಡಿ ಸೆಪ್ಟೆಂಬರ್ 22,…
ಮಡಿಕೇರಿ NEWS DESK ಸೆ.21 : ಕೊಡವರು ಸಾಮೂಹಿಕವಾಗಿ ಸಾಂವಿಧಾನಿಕ ಮಾನ್ಯತೆಯನ್ನು ಪಡೆಯುವಾಗ, ನಮ್ಮ ಪ್ರಾಚೀನತೆಯನ್ನು ಜನಾಂಗೀಯ ಮತ್ತು ಮಾನವಶಾಸ್ತ್ರೀಯ ಗುಣಲಕ್ಷಣಗಳ ಮೂಲಕ ದೃಢೀಕರಿಸಬೇಕು, ಅದು ಅಂತಿಮವಾಗಿ ನಮ್ಮ ಹಕ್ಕನ್ನು ಗಟ್ಟಿಗೊಳಿಸುತ್ತದೆ. ಈ ಕಾರಣಕ್ಕಾಗಿ ಸರ್ವ ಕೊಡವರು ಜಾತಿ ಜನಗಣತಿಯ ಸಂದರ್ಭ ‘ಕೊಡವ’ ಎಂದು ನಮೂದಿಸುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹಿಂದಿನ ಯುಗದಲ್ಲಿ ನಮ್ಮ ಪೂರ್ವಜರು ಬರೆದ ಕೊಡವ ಜನಾಂಗೀಯ ತತ್ವಗಳ ಪ್ರಕಾರ, ಕೊಡವರು ಒಂದು ಜಾತಿಯಲ್ಲ, ಕೊಡವರು ಚತುರ್ಭುಜ ಜಾತಿ ವ್ಯವಸ್ಥೆಯಡಿಯಲ್ಲಿ ಬರುವುದಿಲ್ಲ. ಕೊಡವರು ಒಂದೇ ಜನಾಂಗ, ಏಕ ಜನಾಂಗೀಯ ಸಮುದಾಯ ಎಂದು ಉಲ್ಲೇಖಿಸಿದ್ದಾರೆ. ಕೊಡವರ ಕುರಿತಾದ ಸ್ವಾತಂತ್ರö್ಯಪೂರ್ವದ ದಾಖಲೆಗಳು ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ಕೊಡವ ಜನಾಂಗೀಯ ಸಮುದಾಯ ಆನಿಮಿಸ್ಟಿಕ್ ನಂಬಿಕೆಯುಳ್ಳವರಾಗಿದ್ದಾರೆ. ಪೂರ್ವಜರನ್ನು (ಗುರು-ಕಾರೋಣ), ಅಗಲಿದ ಆತ್ಮಗಳು, ಸಮಾಧಿ ಸ್ಥಳಗಳು, ಯುದ್ಧಭೂಮಿಗಳು, ನರಮೇಧದ ಸ್ಮಾರಕಗಳು, ಯುದ್ಧ ಸ್ಮಾರಕಗಳು, ಪರ್ವತ ದೇವತೆ, ಪವಿತ್ರ ಮಂದ್(ಪವಿತ್ರ…
ಮಡಿಕೇರಿ NEWS DESK ಸೆ.20 : ಮಾನಸಿಕ ಅಸ್ವಸ್ಥರ ಆರೈಕೆಗಾಗಿ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರವೊಂದು ಸರಕಾರದ ನಿಯಮಗಳನ್ನು ಉಲ್ಲಂಘಸಿ ಅನುದಾನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ ನಗರಸಭಾ ಸದಸ್ಯ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಸರಕಾರದ ಯೋಜನೆಯ ಪ್ರಕಾರ ನಿಗಧಿತ ಮನೋರೋಗಿಗಳು ಹಾಗೂ ಅಗತ್ಯ ಸಿಬ್ಬಂದಿ ವರ್ಗ ಸುಸಜ್ಜಿತ ಕಟ್ಟಡದೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ. ವಿಪರ್ಯಾಸವೆಂದರೆ ಇಲ್ಲಿ ಯಾವುದೇ ವೃತ್ತಿಪರ ಸಿಬ್ಬಂದಿಗಳಿಲ್ಲ, ಒಬ್ಬ ಅಡುಗೆ ಸಹಾಯಕ ಹಾಗೂ ಕೆಲವೇ ಮಂದಿ ಬುದ್ದಿಮಾಂದ್ಯ ವ್ಯಕ್ತಿಗಳ ಹಾಜರಾತಿಯೊಂದಿಗೆ ಕೇಂದ್ರವನ್ನು ನಡೆಸುತ್ತಾ ಮಾನಸಿಕ ಆರೋಗ್ಯ ಕಾಯಿದೆ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಈ ಆರೈಕೆ ಕೇಂದ್ರವನ್ನು ನಿರ್ವಹಿಸಲು ಸರಕಾರದಿಂದ ವಾರ್ಷಿಕವಾಗಿ ಲಕ್ಷಾಂತರ ರೂ. ಹಣ ಬರುತ್ತಿದೆ. ಕೇಂದ್ರದ ಉಸ್ತುವಾರಿ ವಹಿಸಿರುವ ವ್ಯಕ್ತಿ ತಿಂಗಳಿಗೆ ಸುಮಾರು 20 ರಿಂದ 30 ಫಲಾನುಭವಿಗಳ ಹಾಜರಾತಿಯನ್ನು ತೋರಿಸಿ ಹಣ ದುರುಪಯೋಗ ಪಡಿಸುತ್ತಿರುವುದು ಕಂಡು ಬಂದಿದೆ. ನಾಲ್ವರು ವೃತ್ತಿಪರ ಸಿಬ್ಬಂದಿಗಳು…
ಮಡಿಕೇರಿ NEWS DESK ಸೆ.20 : ವಿರಾಜಪೇಟೆಯ ಗಾಂಧಿನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಬ್ಯೂಟಿ ಪಾರ್ಲರ್ ಮತ್ತು ಸ್ಪಾ ಹೆಸರಿನಲ್ಲಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ಬಳಕೆ ಮಾಡುತ್ತಿದ್ದ ಆರೋಪದಡಿ ವಿರಾಜಪೇಟೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಕೇರಳ ಕಣ್ಣೂರು ಜಿಲ್ಲೆಯ ಪಿ.ಪಿ.ಪ್ರದೀಪನ್(48), ಕಲೇಶ್ ಕುಮಾರ್(45), ಶಾಜಿ(38) ಹಾಗೂ ವಿರಾಜಪೇಟೆ ಅಮ್ಮತ್ತಿ ನಿವಾಸಿ ಪೊನ್ನಣ್ಣ(48) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ದಾಳಿ ವೇಳೆ ಸ್ಥಳದಲ್ಲಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಶಾಮೀಲಾಗಿರುವ ಇತರರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳ ವಿರುದ್ದ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ವಿರಾಜಪೇಟೆ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಠಾಣಾಧಿಕಾರಿ ಎನ್.ಜೆ.ಲತಾ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ಮಡಿಕೇರಿ NEWS DESK ಸೆ.20 : ರಾಜ್ಯ ಸರಕಾರ ನಡೆಸುತ್ತಿರುವ ಜಾತಿ ಜನಗಣತಿಯ ಸಂದರ್ಭ ಜಿಲ್ಲೆಯ ಮುಸಲ್ಮಾನರು ಯಾವುದೇ ಗೊಂದಲಕ್ಕೊಳಗಾಗದೆ ಧರ್ಮದ ಕಾಲಂನಲ್ಲಿ ‘ಇಸ್ಲಾಂ’, ಜಾತಿ ಕಾಲಂನಲ್ಲಿ “ಮುಸ್ಲಿಂ”, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ಮತ್ತು ಭಾಷೆಯ ಕಾಲಂನಲ್ಲಿ ನೀವಾಡುವ ಭಾಷೆಯನ್ನು ನಮೂದಿಸುವಂತೆ ಕೊಡಗು ಜಿಲ್ಲಾ ಮುಸ್ಲಿಂ ಯೂನಿಟಿ ಅಧ್ಯಕ್ಷ ಕೆ.ಎ.ಯಾಕುಬ್ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯೊಂದಿಗೆ ಜನಗಣತಿಗೆ ರಾಜ್ಯ ಸರಕಾರ ಈಗಾಗಲೇ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮುಸ್ಲಿಂ ಸಮುದಾಯದ 124 ಉಪಜಾತಿಗಳ ಪಟ್ಟಿಯನ್ನು ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿದೆ. ಇದರಲ್ಲಿರುವ ಯಾವುದೇ ಉಪಜಾತಿಗೆ ಸೇರಿದವರಾಗಿದ್ದಲ್ಲಿ ಆಯಾ ಉಪಜಾತಿಯನ್ನು ನಮೂದಿಸಬಹುದೆಂದು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಿಕ್ಷೆ-2025 ಕುಟುಂಬ ಅನುಸೂಚಿಗಾಗಿ ತಯಾರಿಸಲಾದ ಮಾದರಿ ನಮೂನೇ ಅರ್ಜಿಯಲ್ಲಿ ಕುಟುಂಬದ ಮುಖ್ಯಸ್ಥರ ಮಾಹಿತಿ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಕುಟುಂಬದ ಪಡಿತರ…
ಸಿದ್ದಾಪುರ ಸೆ.20 NEWS DESK : ರಾಜ್ಯ ಸರ್ಕಾರವು ಸೆ.22 ರಿಂದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದು, ಈ ಸಮೀಕ್ಷೆಯಲ್ಲಿ ಹಲವಾರು ನ್ಯೂನತೆಗಳಿದ್ದು ಈ ನೂನ್ಯತೆಗಳನ್ನು ಸರಿಪಡಿಸಬೇಕೆಂದು ಜಿಲ್ಲಾ ಎಸ್.ಎನ್.ಡಿ.ಪಿ.ಯೂನಿಯನ್‌ನ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ಒತ್ತಾಯಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರಸ್ತುತ ಇರುವ ಜಾತಿ ಕಾಲಂಮಿನಲ್ಲಿ ಮಲಯಾಳಿ ಬಿಲ್ಲವ ಎಂಬ ಜಾತಿ ಇದ್ದು, ಈ ರೀತಿ ಜಾತಿ ಇರುವುದಿಲ್ಲ ಎಂದು ತಿಳಿಸಿದರು. ನಮ್ಮ ಜನಾನಂಗದವರು ತೀಯಾನ್ (ezhava) ಎಂದು ನಮೂದಿಸಬೇಕೆಂದು ಮನವಿ ಮಾಡಿದ್ದಾರೆ. ರಾಜ್ಯ ಸರ್ಕಾರವು ಈಗಿರುವ ಕ್ರೈಸ್ತ ಧರ್ಮ ದ ಎದುರು 46 ಹಿಂದೂ ಜಾತಿಗಳ ಹೆಸರುಗಳನ್ನು ನಮೂದಿಸಿರುವುದು ಮುಂದಿನ ದಿನಗಳಲ್ಲಿ ಸರ್ಕಾರವೇ ಮತಾಂತರಕ್ಕೆ ಪ್ರಚೋದನೆ ಕೊಟ್ಟಂತಾಗುತ್ತದೆ ಎಂದು ಆರೋಪಿಸಿದರು.ಈ ಹಿನ್ನೆಲೆಯಲ್ಲಿ ಸರ್ಕಾರವು ಇದೀಗ ಕೈಗೊಂಡಿರುವ ಸಮೀಕ್ಷೆಯನ್ನು ಕೈಬಿಡಬೇಕೆಂದು ಲೋಕೇಶ್ ಮನವಿ ಮಾಡಿಕೊಂಡಿದ್ದಾರೆ. ಸಮಾಜ ಬಾಂಧವರು ಜಾತಿಯ ಕಾಲಂನಲ್ಲಿ ತೀಯನ್ ಮತ್ತು ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ ಎಂದು ನಮೂದಿಸಬೇಕೆಂದು ಮನವಿ ಮಾಡಿದ್ದಾರೆ.
ಮಡಿಕೇರಿ ಸೆ.20 NEWS DESK : ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವತಿಯಿಂದ ಜಿಲ್ಲೆಯ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆಯು ಸೆ.22 ರಿಂದ ಆರಂಭವಾಗಲಿದ್ದು, ಎರಡನೇ ಹಂತದ ತರಬೇತಿ ಕಾರ್ಯಾಗಾರವು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಿತು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಿದ್ಧತೆ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಸಮೀಕ್ಷೆದಾರರು ಮತ್ತು ಮೇಲ್ವಿಚಾರಕರ ನಿಯೋಜನೆ, ಕಿಟ್ ವಿತರಣೆ ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಕ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 1132 ಸಮೀಕ್ಷಾದಾರರು ಮತ್ತು 71 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಸಮೀಕ್ಷಾದಾರರ ಮ್ಯಾಪಿಂಗ್ ಕಾರ್ಯವು ಶೇ.90 ರಷ್ಟು ಪೂರ್ಣಗೊಂಡಿದೆ. ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಯಲಿದೆ ಎಂದು ಹೇಳಿದರು. ಈಗಾಗಲೇ ಪ್ರತೀ ಕುಟುಂಬಗಳಿಗೂ ಸ್ಟಿಕ್ಕರ್‍ಗಳನ್ನು ಅಂಟಿಸಲಾಗಿದೆ. ಆ ನಿಟ್ಟಿನಲ್ಲಿ ಪ್ರತೀ ಕುಟುಂಬದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ…






