ಲೇಖಕ: admin

ಮಡಿಕೇರಿ ಸೆ.22 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನಲ್ಲಿ ನೂತನವಾಗಿ ನಿರ್ಮಾಣ ಆಗಲಿರುವ ತಾಲ್ಲೂಕು ಕಚೇರಿ ಕಟ್ಟಡ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಪರಿಶೀಲಿಸಿದರು. ಈ ಸಂದರ್ಭವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ತಹಶೀಲ್ದಾರ್ ಮೋಹನ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಣ್ಣೀರ ಹರೀಶ್, ಉಪಾಧ್ಯಕ್ಷರು ಅಲೀರ ರಶೀದ್, ಪಕ್ಷದ ಪ್ರಮುಖರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK ಸೆ.22 : ರಾಜ್ಯ ಸರಕಾರದ ಮೂಲಕ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಜಾತಿ ಜನಗಣತಿಯಲ್ಲಿ ಅರೆಭಾಷೆ ಗೌಡರು ಜಾತಿಯನ್ನು GOWDA (ಗೌಡ) ಎಂದು ನಮೂದಿಸುವಂತೆ ಕೊಡಗು ಗೌಡ ವಿದ್ಯಾ ಸಂಘ ಮನವಿ ಮಾಡಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿದ್ಯಾ ಸಂಘದ ಅಧ್ಯಕ್ಷ ನವೀನ್ ಅಂಬೆಕಲ್ ಅವರು ರಾಜ್ಯ ಸರಕಾರ ಮತ್ತು ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ನಡೆಸುವ ಗಣತಿಯ ಸಂದರ್ಭ ಅರೆಭಾಷೆ ಗೌಡರು ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು, ಉಪಜಾತಿ ‘ಅರೆಭಾಷೆ ಗೌಡ’ ಹಾಗೂ ಮಾತೃಭಾಷೆ ಕಾಲಂನಲ್ಲಿ ‘ಅರೆಭಾಷೆ’ ಎಂದು ನಮೂದಿಸುವಂತೆ ಕೋರಿದ್ದಾರೆ. ಮೂಲತಃ ಅರೆಭಾಷೆ ಗೌಡರು ಒಕ್ಕಲಿಗ ಸಮುದಾಯದ ಭಾಗವಾಗಿದ್ದಾರೆ, ಆದರೆ ಅರೆಭಾಷೆ ಗೌಡರ ಶೈಕ್ಷಣಿಕ, ಕಂದಾಯ ಸೇರಿದಂತೆ ಎಲ್ಲಾ ಮೂಲ ದಾಖಲೆಗಳಲ್ಲಿ GOWDA (ಗೌಡ) ಎಂದೇ ನಮೂದಿಸಲಾಗಿದೆ. ಈಗ ಬದಲಾಯಿಸಿ ಮಾಹಿತಿ ನೀಡಿದರೆ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅರೆಭಾಷೆ ಗೌಡ ಸಮುದಾಯದ ಸಭೆಗಳನ್ನು…

Read More

ಮಡಿಕೇರಿ ಸೆ.22 NEWS DESK : ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪದ ಸ್ವಾತಂತ್ರ ಹೋರಾಟಗಾರರ ಭವನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಆಯೋಜಿಸಿದ ಶ್ರೀ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಶಾಸಕರು ನಾಡಿನ ಸಮಸ್ತ ಜನರಿಗೆ ಆ ತಾಯಿಯ ಕೃಪಾಶೀರ್ವಾದ ದೊರೆಯುವಂತಾಗಲಿ ಎಂದು ಹಾರೈಸಿದರು. ನಮ್ಮ ಪುರಾತನ ಆಚರಣೆ ಹಾಗೂ ನಂಬಿಕೆಯಂತೆ, ಈ ನವರಾತ್ರಿಯ ಸಂದರ್ಭವು ಎಲ್ಲಾ ದುಷ್ಟ ಶಕ್ತಿಗಳನ್ನು ಹೋಗಲಾಡಿಸುವ ದೇವಿಯ ಅವತಾರವನ್ನು ಪೂಜಿಸುವ ದಿನವಾಗಿದೆ. ಆ ಶಕ್ತಿ ಮಾತೆಯು ನಾಡಿನ ಎಲ್ಲರಿಗೂ ಒಳಿತನ್ನು ಮಾಡಿ ದುಷ್ಟತನವನ್ನು ದೂರ ಮಾಡಿ ಸಮಾಜವು ಉತ್ತಮ ಬಾಂಧವ್ಯದೊಂದಿಗೆ ಮುಂದುವರೆಯುವಂತೆ ಹರಿಸಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ  ವಿಧಾನ ಪರಿಷತ್ ಮಾಜಿ ಸದಸ್ಯರು ಅರುಣ್ ಮಾಚಯ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಕಾಳಿಮಾಡ ಪ್ರಶಾಂತ್, ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ…

Read More

ನಾಪೋಕ್ಲು ಸೆ.22 NEWSDESK : ಎಮ್ಮೆಮಾಡು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಸೂಫೀ ಶಹೀದ್ ಅವರ ದರ್ಗಾಕ್ಕೆ ವಿಧಾನಸಭಾ ಸಭಾಪತಿ (ಸ್ಪೀಕರ್) ಯು.ಟಿ ಖಾದರ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಎಮ್ಮೆಮಾಡುವಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಇಸ್ಲಾಂ ಮುಸ್ಲಿಂ ಜಮಾತ್ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಅವರನ್ನು ಜಮಾತ್ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಜಮಾಯಿತಿನ ಪದಾಧಿಕಾರಿಗಳು, ಧರ್ಮ ಗುರುಗಳು, ಚುನಾಯಿತ ಪ್ರತಿನಿಧಿ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ. 

Read More

ಮಡಿಕೇರಿ NEWS DESK ಸೆ.21 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಪಾಲ್ಗೊಂಡು ಶುಭ ಹಾರೈಸಿದರು. ಈದ್ ಮಿಲಾದ್ ಹಬ್ಬ ಪ್ರಪಂಚದಾದ್ಯಂತ ಆಚರಿಸಲ್ಪಡುತ್ತಿದ್ದು, ಇದು ಶಾಂತಿಯ ಸಂದೇಶವನ್ನು ಸಾರುವ ಹಬ್ಬವಾಗಿದೆ. ಈ ಕಾರ್ಯಕ್ರಮವು ನಾಡಿನ ಎಲ್ಲಾ ಜನಾಂಗದವರು ಶಾಂತಿ ಸೌಹಾರ್ದತೆಯಿಂದ ಸಹಬಾಳ್ವೆ ಮಾಡಬೇಕೆಂಬ ಸಂದೇಶವನ್ನು ಸಾರುತ್ತದೆ ಹಾಗೂ ಇದನ್ನು ನಾವೆಲ್ಲರೂ ಅಳವಡಿಸಿಕೊಂಡಲ್ಲಿ ಸೌಹಾರ್ದ-ಸದೃಢ  ಭಾರತ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಸ್ಮಾರ್ಟ್ ಕ್ಲಾಸ್ ಕೊಠಡಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಿತಿಮತಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ನವೀನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಾನಂಡ ಪೃಥ್ವಿ, ಮುನೀರ್, ಮುಸ್ತಾಫಾ, ರಫೀಕ್ ವಾಕವಿ, ರಾಮಕೃಷ್ಣ, ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK ಸೆ.21 : ಅಹ್ಮದಿಯಾ ಮುಸ್ಲಿಂ ಜಮಾಅತಿನ ಮಡಿಕೇರಿ ಘಟಕದ ವತಿಯಿಂದ ‘ಹ್ಯುಮಾನಿಟಿ ಫಸ್ಟ್’ನ 30ನೇ ವರ್ಷ ಮತ್ತು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ನಡಿಗೆ, ಓಟ ಮತ್ತು ಸೈಕಲಿಂಗ್ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು. “ಎಲ್ಲರಲ್ಲೂ ಪ್ರೀತಿ,ಯಾರೊಂದಿಗೂ ದ್ವೇಷವಿಲ್ಲ”   ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ನಗರದ ‘ಬೈತುಲ್ ಹುದಾ’ ಮಸೀದಿಯಲ್ಲಿ ಧರ್ಮಗುರುಗಳಾದ ಕಲೀಂ ಖಾನ್ ಸಾಹೇಬ್ ಅವರು ಚಾಲನೆ ನೀಡಿದರು.ನಂತರ ಶಾಂತಿ ಸಂದೇಶಗಳ ಫಲಕಗಳೊಂದಿಗೆ ನಡಿಗೆಯ ಮೂಲಕ ಮಾರುಕಟ್ಟೆ, ಇಂದಿರಾ ಗಾಂಧಿ ವೃತ್ತ, ಕಾಲೇಜು ರಸ್ತೆ, ರೇಸ್ ಕೋರ್ಸ್ ರಸ್ತೆ ಮಾರ್ಗವಾಗಿ ರಾಜಾಸೀಟ್ ವರೆಗೆ ಜಾಥಾ ನಡೆಸಲಾಯಿತು. “ವಿಶ್ವಯುದ್ಧ 3 ನಿಲ್ಲಿಸಿ” ಎಂಬ ವಿಶೇಷ ಅಭಿಯಾನದೊಂದಿಗೆ  ಶಾಂತಿ, ಸಾಮರಸ್ಯ ಮತ್ತು ಸೌಹಾರ್ದದ ಸಂದೇಶಗಳನ್ನು ಸಾರುವ ಮೂಲಕ ಜಾಗತಿಕ ಸಂಘರ್ಷವನ್ನು ತಡೆಗಟ್ಟಲು ಪರಸ್ಪರ ಸಹಕಾರದ ತುರ್ತು ಅವಶ್ಯಕತೆ,ಶಾಂತಿ ಹಾಗೂ ಏಕತೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.’ಹ್ಯುಮಾನಿಟಿ ಫಸ್ಟ್’ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಮೊಹಮ್ಮದ್ ಶರೀಫ್ ಅವರು ಮಾತನಾಡಿ “ಹ್ಯುಮಾನಿಟಿ ಫಸ್ಟ್” ಸಂಸ್ಥೆಯು ಸ್ಥಾಪನೆಗೊಂಡು ಇದೀಗ…

Read More

ಮಡಿಕೇರಿ NEWS DESK ಸೆ.21 : ಮಡಿಕೇರಿ ದಸರಾ- ಜನೋತ್ಸವ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹತ್ತು ದಿನಗಳ ಸಂಭ್ರಮದ ವಾತಾವರಣ ಕಂಡುಬರಲಿದೆ. ಮಡಿಕೇರಿ ನಗರ ದಸರಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ತಾ.23ರಿಂದ ಅಕ್ಟೋಬರ್ 2ರವರೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಂಜೆ 6 ಗಂಟೆಯಿಂದ  ಕಾರ್ಯಕ್ರಮಗಳು ಜರುಗಲಿವೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ. ತಾ.23ರಂದು ಸಂಜೆ 6ಗಂಟೆಗೆ ಭಾಗಮಂಡಲ ಜಾನ್ ಡ್ಯಾನ್ಸ್ ಗ್ಯಾಲರಿ ತಂಡದಿಂದ ನೃತ್ಯ ವೈಭವ, ಮೈಸೂರಿನ ನಿತ್ಯ ನಿರಂತರ ಟ್ರಸ್ಟ್ನ ವಿಶೇಷ ಚೇತನ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ, ಬೆಂಗಳೂರು ಸ್ವರ ಸಿಂಚನ ತಂಡದಿಂದ ಸಂಗೀತ ರಸಮಂಜರಿ. 24ರಂದು ಬೆಳಿಗ್ಗೆ 10 ಗಂಟೆಗೆ ಕಾಫಿ ದಸರಾ, ಸಂಜೆ 6 ಗಂಟೆಯಿಂದ ಅಓತರ ರಾಷ್ಟ್ರೀಯ ಖ್ಯಾತಿಯ ಹರಿ,ಚೇತನ ಮತ್ತು ತಂಡದವರಿಂದ ಆಕರ್ಷಕ ಕಥಕ್ ನೃತ್ಯ,  ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯಿಂದ ಸಾಂಸ್ಕೃತಿಕ ವೈವಿಧ್ಯ, ಮಡಿಕೇರಿ ಡ್ಯಾನ್ಸ್ ಲ್ಯಾಬ್…

Read More

ಸೋಮವಾರಪೇಟೆ NEWS DESK ಸೆ.21 : ಕೊಡಗು ವಿಶ್ವವಿದ್ಯಾಲಯದ ಕಬಡ್ಡಿ ತಂಡಕ್ಕಾಗಿ ಆಯ್ಕೆ ಪ್ರಕ್ರಿಯೆ ಸೋಮವಾರಪೇಟೆಯ ಸಂತ ಜೋಸೆಫರ ಪದವಿ ಕಾಲೇಜಿನಲ್ಲಿ ನಡೆಯಿತು. ಸೋಮವಾರಪೇಟೆಯ ಸೇಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಅವಿನಾಶ್ ಅವರು ಕಾರ್ಯಕ್ರಮವನ್ನು ಉದ್ಘಾಟಸಿದರು. ಜಿಲ್ಲೆಯ ವಿವಿಧ ಪದವಿ ಕಾಲೇಜುಗಳಿಂದ ಆಗಮಿಸಿದ್ದ 50 ವಿದ್ಯಾರ್ಥಿಗಳು ತಮ್ಮ ಕಬಡ್ಡಿ ಕೌಶಲ್ಯವನ್ನು ಪ್ರದರ್ಶಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಅಂತಾರಾಷ್ಟ್ರೀಯ ಹ್ಯಾಂಡ್ಬಾಲ್ ಆಟಗಾರ ಗ್ರೀನಿಡ್ಜ್ ಡಿ. ಕುನ್ಹಾ, ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಆಟಗಾರರಿಗೆ ಕಬಡ್ಡಿ ಆಟದ ತಂತ್ರಗಾರಿಕೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡಾ ಚಟುವಟಿಕೆಯಲ್ಲೂ ಭಾಗವಹಿಸಬೇಕು. ಕ್ರೀಡೆಯಿಂದ ಮಾನಸಿಕ ಹಾಗು ದೈಹಿಕ ಅರೋಗ್ಯ ವೃದ್ದಿಸುತ್ತದೆ. ಕ್ಷೇತ್ರ ಕ್ಷೇತ್ರದಲ್ಲೂ ಉದ್ಯೋಗದ ಅವಕಾಶ ಹೆಚ್ಚಿವೆ. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದವರು ಶಿಸ್ತು ಮತ್ತು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ಕಿವಿಮಾತು ಹೇಳಿದರು. ಗ್ರೀನಿಡ್ಜ್ ಡಿ.ಕುನ್ಹಾ, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ದೈಹಿಕ ಶಿಕ್ಷಣ…

Read More

ಸೋಮವಾರಪೇಟೆ NEWS DESK ಸೆ.21 :ಸಂತ ಜೋಸೆಫರ ಪದವಿ ಕಾಲೇಜ್ ನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಅವಿನಾಶ್ ಮತ್ತು ಆರ್‌ಎಫ್‌ಒ ಶೈಲೇಂದ್ರ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಸಂತ ಜೋಸೆಫರ ನರ್ಸಿಂಗ್ ಕಾಲೇಜಿನ ವೈದ್ಯರಾದ ಡಿ.ಜಿ.ಮಮತ, ಕಾಲೇಜಿನ ಪ್ರಾಂಶುಪಾಲ ಬಿ.ಆರ್. ಹರೀಶ್, ದೇವಾಲಯ ಪಾಲಾನ ಸಮಿತಿ ಕಾರ್ಯದರ್ಶಿ ಶೀಲಾ ಡಿಸೋಜ, ಸದಸ್ಯರುಗಳಾದ ಶಾಂತಿ ಡಿಸಿಲ್ವಾ, ಜೋಸ್ಟಿನ್ ಡಿಸೋಜ ಇದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಎಸ್.ಪಿ.ನವನೀತ್, ಜಂಟಿ ಕಾರ್ಯದರ್ಶಿ ನಿರ್ಮಿತಾ, ಖಜಾಂಚಿ ಚೇತನ್, ಸಾಂಸ್ಕೃತಿಕ ಕಾರ್ಯದರ್ಶಿ ಚರಣ್, ಸಹ ಕಾರ್ಯದರ್ಶಿ ಸೃಜನಾ, ಕ್ರೀಡಾ ಕಾರ್ಯದರ್ಶಿ ಸೃಜನ್, ಸಹ ಕಾರ್ಯದರ್ಶಿ ಆಶಿತ, ಶಿಸ್ತು ನಾಯಕ ದೀಪಕ್, ನಾಯಕಿ ದೀಪ್ತಿ ಅವರುಗಳಿಗೆ ಅವಿನಾಶ್ ಪ್ರತಿಜ್ಞಾವಿಧಿ ಬೋಧಿಸಿದರು.

Read More

ಸೋಮವಾರಪೇಟೆ NEWS DESK ಸೆ.21 : ಸಮಾಜದಲ್ಲಿ ಅಪೌಷ್ಠಿಕತೆ ಹೋಗಲಾಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಹೇಳಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಪಟ್ಟಣದ ಸ್ತ್ರೀ ಶಕ್ತಿ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  ಇದು ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಬೇಕು. ಯಾರೂ ಕೂಡ ಸೌಲಭ್ಯಗಳಿಂದ ವಂಚಿತರಾಗಬಾರದು. ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಡಿಗಳಿದ್ದು, ಅಲ್ಲಿ ಯಾರೂ ಕೂಡ ಸರ್ಕಾರದ ಸೌಲಭ್ಯಗಳಿಂದ ದೂರ ಉಳಿಯದಂತೆ ಎಚ್ಚರಿಕೆ ವಹಿಸಬೇಕೆಂದರು. ಪೌಷ್ಠಿಕ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸುವ ಮೂಲಕ ತಾಯಿ ಹಾಗು ಮಗುವಿನ ಆರೋಗ್ಯ ವೃದ್ಧಿಯಾದರೆ ಅದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು. ಗರ್ಭಿಣಿಯರು, ಬಾಣಂತಿಯರು, ತಾಯಂದಿರು ತಮ್ಮ ಮಕ್ಕಳ ಆರೋಗ್ಯದ ದೃಷ್ಠಿಯಿಂದ ಪೌಷ್ಠಿಕಾಂಶಭರಿತ ಆಹಾರಗಳನ್ನೇ ಸೇವಿಸಬೇಕೆಂದು ಆರೋಗ್ಯ ಶಿಕ್ಷಣಾಧಿಕಾರಿ…

Read More