ಸೋಮವಾರಪೇಟೆ NEWS DESK ಜು.27 : ಸೋಮವಾರಪೇಟೆ ಸಮೀಪದ ಶಾಂತಳ್ಳಿ ಜೇಡಿಗುಂಡಿ ಸಮೀಪ ರಸ್ತೆಯ ಮೇಲೆ ಬರೆ ಕುಸಿಯುವ ಸಂದರ್ಭ ಸುದ್ದಿ ಮಾಡುತ್ತಿದ್ದ ಪತ್ರಕರ್ತ ಹರಗ ಶರಣ್ ಎಂಬುವವರ ಓಮಿನಿ ವ್ಯಾನ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಬರೆ ಕುಸಿತದ ಫೋಟೋ ತೆಗೆಯುತ್ತಿದ್ದ ಸಂದರ್ಭ, ವಾಹನದ ಮೇಲೆ ಮರವೊಂದು ಬಿದ್ದ ಪರಿಣಾಮ ವಾಹನ ಸಂಪೂರ್ಣ ಜಖಂಗೊಂಡಿದೆ. ಶರಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲೇಖಕ: admin
ಸೋಮವಾರಪೇಟೆ NEWS DESK ಜು.27 : ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಮಳೆಯ ಆರ್ಭಟ ಭಾನುವಾರವೂ ಮುಂದುವರಿದಿದ್ದು, ಗ್ರಾಮೀಣ ಭಾಗದ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿವೆ. ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದಿದ್ದು ಕಂಬಗಳು ನೆಲಕ್ಕುರುಳಿವೆ. ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ ರಾಜ್ಯ ಹೆದ್ದಾರಿಯ ಶಾಂತಳ್ಳಿ-ಜೇಡಿಗುಂಡಿ ಬಳಿಯಲ್ಲಿ ರಸ್ತೆಯ ಮೇಲೆ ಬರೆ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಶೀಟ್‌ಗಳು ಗಾಳಿಗೆ ಹಾರಿಹೋಗಿವೆ. ಬಳಗುಂದ ಗ್ರಾಮದ ಮಣಿ ಎಂಬವರ ಮನೆಯ ತಡೆಗೋಡೆ ಕುಸಿದು ಹಾನಿಯಾಗಿದೆ. ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಮೀಪ ಬರೆ ಕುಸಿಯಲು ಪ್ರಾರಂಬಿಸಿದ್ದು, ಪಟ್ಟಣ ಪಂಚಾಯಿತಿ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಂಗಡಿಯವರು ಸೂಕ್ತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಚಿಕ್ಕತೋಳೂರು ಗ್ರಾಮದ ಸಿ.ಎನ್.ಪ್ರಕಾಶ್ ಅವರ ಕೊಟ್ಟಿಗೆಯ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಸಿ.ಈ.ಸುಬ್ಬಯ್ಯ ಅವರ ಮನೆ ಮೇಲೆ ಬೈನೆ ಮರ ಬಿದ್ದಿದೆ. ಯಡೂರು ಗ್ರಾಮದ ಎಂ.ಎಸ್.ಹೊನ್ನಪ್ಪ ಅವರ ಮನೆ ಸಮೀಪದ ಬರೆಕುಸಿದಿದೆ. ಸೂರ್ಲಬ್ಬಿ ಪ್ರೌಢಶಾಲೆಯ ವೇದಿಕೆ ಕಟ್ಟಡದ ಮೇಲ್ಚಾವಣಿ…
ಮಡಿಕೇರಿ NEWS DESK ಜು.27 : ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ಅವರ ನೇತೃತ್ವದ ನಿಯೋಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿತು. ಗೌಡ ಸಮಾಜಕ್ಕೆ ಭೂಮಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭ ಶಾಸಕರಾದ ಎ.ಎಸ್ .ಪೊನ್ನಣ್ಣ, ಡಾ.ಮಂತರ್ ಗೌಡ ಉಪಸ್ಥಿತರಿದ್ದರು. ಪ್ರಮುಖರಾದ ಕೊಲ್ಯದ ಗಿರೀಶ್, ಕುಯ್ಯಮುಡಿ ವಸಂತ ದಂಬೆಕೋಡಿ ಆನಂದ, ಹುದೇರಿ ರಾಜೇಂದ್ರ, ಪೊನ್ನಚ್ಚನ ಮಧು, ಅಮೆ ಸೀತಾರಾಮ ಮತ್ತಿತರರು ಹಾಜರಿದ್ದರು.
ಮಡಿಕೇರಿ NEWS DESK ಜು.27 : ಕನ್ನಡ ಸಾಹಿತ್ಯ ಪರಿಷತ್ತಿನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮೂರ್ನಾಡುವಿನ ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ದಿ.ಕೊಕ್ಕಲೆರ ಚಂಗಪ್ಪ ಅವರ ಜ್ಞಾಪಕಾರ್ಥ ದತ್ತಿನಿಧಿ ಸ್ವೀಕಾರ, ಹಿರಿಯ ಸಾಹಿತಿ ಕಿಗ್ಗಾಲು ಎಸ್.ಗಿರೀಶ್ ಅವರು ರಚಿಸಿರುವ ಪತ್ತೆದಾರಿ ಕಾದಂಬರಿ “ಕಣ್ಮರೆಯಾದ ಕಾಂತಮಣಿ” ಪುಸ್ತಕ ಬಿಡುಗಡೆ ಮತ್ತು ಮೂರ್ನಾಡು ಹೋಬಳಿ ಶಾಲೆಗಳ ಶಿಕ್ಷಕರುಗಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಮೂರ್ನಾಡುವಿನ ಪಿಎಂ ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ದತ್ತಿ ಪ್ರಶಸ್ತಿಗಳಿದ್ದು, ಮೂರ್ನಾಡಿನಲ್ಲಿ ಇದೇ ಮೊದಲ ಬಾರಿಗೆ ದತ್ತಿನಿಧಿ ಸ್ಥಾಪನೆ ಮಾಡಿರುವುದು ಪ್ರಶಂಸನೀಯವೆಂದರು. ಇಲ್ಲಿಯವರೆಗೆ ಎಲ್ಲಾ ಕಡೆ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ…
ಮಡಿಕೇರಿ NEWS DESK ಜು.27 : ಕೊಡಗು ಜಿಲ್ಲೆಯಾದ್ಯಂತ ಗಾಳಿ ಮಳೆ ಮುಂದುವರೆದಿದ್ದು, ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಮತ್ತು ಮನೆಗಳು ಬಿದ್ದು ಹಾನಿ ಸಂಭವಿಸಿದೆ. ಸಾಲು ಸಾಲು ವಿದ್ಯುತ್ ಕಂಬಗಳು ನೆಲಕಚ್ಚಿರುವುದರಿಂದ ಜಿಲ್ಲೆಯ ಬಹುತೇಕ ಗ್ರಾಮಗಳು ಕಾರ್ಗತ್ತಲಿನಲ್ಲಿವೆ. ಚಳಿ, ಗಾಳಿ, ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿಯಲ್ಲಿ ಒಂದೇ ದಿನದಲ್ಲಿ ದಾಖಲೆಯ 10 ಇಂಚು ಮಳೆಯಾಗಿದ್ದರೆ, ದಕ್ಷಿಣ ಕೊಡಗಿನ ಹುದಿಕೇರಿಯಲ್ಲಿ 8 ಇಂಚು, ಶ್ರೀಮಂಗಲದಲ್ಲಿ 7 ಇಂಚು, ಕಾವೇರಿಯ ಉಗಮ ಸ್ಥಾನ ಮಡಿಕೇರಿ ತಾಲ್ಲೂಕಿನ ತಲಕಾವೇರಿ ಮತ್ತು ಭಾಗಮಂಲದಲ್ಲಿ 6 ಇಂಚು ಮಳೆಯಾಗಿದೆ. ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯದ ಎದುರು ಇರುವ ಯಡವನಾಡು- ಹಾರಂಗಿ ಸೇತುವೆ ನೀರಿನಿಂದ ಮುಳುಗಡೆಯಾಗಿದ್ದು, ಸೇತುವೆಯ ಎರಡು ಬದಿಯಲ್ಲಿ ಪೋಲೀಸ್ ಬ್ಯಾರಿಕೇಡ್ ನ್ನು ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು ಅಳವಡಿಸಿದರು. ಸಾರ್ವಜನಿಕರು ಹಾಗೂ ವಾಹನಗಳು ಹೋಗದಂತೆ ಎಚ್ಚರಿಕೆ ನೀಡಿದ್ದಾರೆ. *ಹಲವೆಡೆ ಹಾನಿ* ಅಮ್ಮತ್ತಿ ಹೋಬಳಿ ಪುಲಿಯೇರಿ…
ಸೋಮವಾರಪೇಟೆ NEWS DESK ಜು.27 : ಅತಿಯಾದ ಮಳೆಯಿಂದ ಬರೆಕುಸಿಯುವ ಭೀತಿಯಿಂದ ಮುಂಜಾಗ್ರತೆಯಾಗಿ ಪಟ್ಟಣ ಬಸ್ಸ್ ನಿಲ್ದಾಣದ 5 ಅಂಗಡಿಗಳನ್ನು ತಹಸೀಲ್ದಾರ್ ಕೃಷ್ಣ ಮೂರ್ತಿ ಇಂದು ಖಾಲಿಮಾಡಿಸಿ ಬೀಗ ಜಡಿದಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ,ರಭಸದ ಗಾಳಿಯಿಂದ ಅಲ್ಲಲ್ಲಿ ಮರಗಳು,ಮನೆಗಳು ಧರೆಗುರುಳಿವೆ.ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಬಸಪ್ಪ ಪೆಟ್ರೋಲ್ ಬಂಕ್ ಹಿಂಬಾಗದಲ್ಲಿ ತಡೆಗೋಡೆ ನಿರ್ಮಿಸಲು ಮಣ್ಣು ತೆಗೆದು ಹಲವು ಸಮಯಗಳಾಗಿದ್ದರೂ ಈ ವರೆಗೆ ಕಾಮಗಾರಿ ನಡೆಸದ ಹಿನ್ನಲೆಯಲ್ಲಿ ಭಾರಿ ಮಳೆಯಿಂದ ಬರೆಕುಸಿಯುವ ಭೀತಿ ಎದುರಾಗಿದೆ ಇದರ ಮೇಲ್ಭಾಗದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿರುವ ತರಕಾರಿ ಅಂಗಡಿ,ಪಟ್ಟಣ ಪಂಚಾಯ್ತಿ ಸದಸ್ಯ ಸಂಜೀವ ಅವರದ್ದು ಸೇರಿದಂತೆ 5 ಅಂಗಡಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದು ಈಬಗ್ಗೆ ಗಮನ ಹರಿಸಿದ ತಾಲೂಕು ದಂಡಾಧಿಕಾರಿ ಕೃಷ್ಣಮೂರ್ತಿಯವರು ಸ್ಥಳಕ್ಕೆ ತೆರಳಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಎಚ್ಚರಿಕೆ ಹಾಗೂ ಮಾಹಿತಿ ನೀಡಿ ತಕ್ಷಣವೇ ಎಲ್ಲಾ ಅಂಗಡಿಗಳನ್ನು ತಕ್ಷಣವೇ ಖಾಲಿಮಾಡಿಸಿ ಬೀಗ ಜಡಿದಿದ್ದಾರೆ. ವಿಪತ್ತು ನಿರ್ವಹಣಾ ಕಾಯಿದೆಯಡಿ ಅಂಗಡಿಗಳನ್ನು ಖಾಲಿ ಮಾಡಿಸಿದ್ದೇವೆ, ಬರೆ ಕುಸಿಯದಂತೆ…
ವಿರಾಜಪೇಟೆ ಜು.26 NEWS DESK : ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಯೋಧರ ಧೈರ್ಯ ಹಾಗೂ ತ್ಯಾಗವು ದೇಶದ ಪ್ರತಿಯೊಬ್ಬ ನಾಗರೀಕರಿಗೆ ಆದರ್ಶವಾಗಲಿ ಎಂದು ವಿರಾಜಪೇಟೆಯ ಕೊಡಗು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಹೇಳಿದರು. ಕೊಡಗು ಮಾಜಿ ಸೈನಿಕರ ಸಂಘದ ವತಿಯಿಂದ ವಿರಾಜಪೇಟೆ ಪಟ್ಟಣದಲ್ಲಿನ ಹುತಾತ್ಮರ ಸ್ಮಾರಕದ ಬಳಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕ್ಕೆ ಪುಷ್ಪನಮನ ಸಲ್ಲಿಸಿ ಸೈನಿಕರ ತ್ಯಾಗ ಬಲಿದಾನದ ಕುರಿತು ಮಾತನಾಡಿದರು. ಈ ಸಂದರ್ಭ ತಾಲ್ಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಅನಂತ ಶಂಕರ ಅವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ಪೋಲಿಸ್ ಇಲಾಖೆ ವತಿಯಿಂದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ, ಪುರಸಭೆ ವತಿಯಿಂದ, ಮಾಜಿ ಸೈನಿಕರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಹಾಗೂ ರೋಟರಿ ಶಾಲೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ವತಿಯಿಂದ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಚವನ್ನಿಟ್ಟು ನಮನ ಸಲ್ಲಿಸಲಾಯಿತು.…
ಸೋಮವಾರಪೇಟೆ ಜು.26 NEWS DESK : ಕಾರ್ಗಿಲ್ ವಿಜಯ ದಿನದ ಅಂಗವಾಗಿ ಹಿಂದೂಜಾಗರಣ ವೇದಿಕೆ ವತಿಯಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಲಾಯಿತು. ಸೋಮವಾರಪೇಟೆ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ದಿನದ ಮಹತ್ವ ಕುರಿತು ಮಾತನಾಡಿದರು. ಈ ಸಂದರ್ಭ ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು , ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ದೇಶಭಕ್ತರು ಭಾಗವಹಿಸಿದರು.
ಮಡಿಕೇರಿ ಜು.25 NEWS DESK : ಕೊಡಗು ಜಿಲ್ಲೆಯಾದ್ಯಂತ ಬಿರುಗಾಳಿ ಸಹಿತ ವ್ಯಾಪಕ ಮಳೆಯಾಗುತ್ತಿದ್ದು, ಸಾವು ನೋವು ಸಂಭವಿಸಿದೆÉ. ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದರೆ, ಚಲಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ಬಿದ್ದು ಚಾಲಕ ಹಾಗೂ ವಿದ್ಯಾರ್ಥಿನಿ ಗಾಯಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಗಾಳಿಯ ವೇಗ ಹೆಚ್ಚುತ್ತಲೇ ಇರುವುದರಿಂದ ಜಿಲ್ಲೆಯ ಜನ ಆತಂಕಗೊಂಡಿದ್ದಾರೆ. ಭಾರೀ ಗಾಳಿಮಳೆಗೆ ಮನೆಯ ಗೋಡೆ ಕುಸಿದ ಪರಿಣಾಮ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕಲಬುರ್ಗಿ ಜಿಲ್ಲೆಯ ನಿವಾಸಿ ರವಿ ಎಂಬುವವರ ಪತ್ನಿ ಸುಷ್ಮಾ (37) ಮೃಪಟ್ಟಿದ್ದಾರೆ. ಮೃತರ ಸಹೋದರ ಅಕ್ಷಯ್ ಗೆ ಭುಜ ಭಾಗಕ್ಕೆ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕುಟುಂಬವರ್ಗಕ್ಕೆ ಸಾಂತ್ವಾನ ಹೇಳಿದರು. ಅಧಿಕಾರಿಗಳನ್ನು ಸಂಪರ್ಕಿಕಿಸಿದ ಅವರು ಅಗತ್ಯ ತುರ್ತು ಕ್ರಮಕೈಗೊಳ್ಳುವಂತೆ ತಿಳಿಸಿದರು. *ಆಟೋದ ಮೇಲೆ ಬಿದ್ದ ಮರ* ಸೋಮವಾರಪೇಟೆ…
ಮಡಿಕೇರಿ ಜು.26 NEWS DESK : ಅಪ್ರೆಂಟಿಸ್ ಕಾಯಿದೆ, 1961 ರ ಅಡಿಯಲ್ಲಿ ಮತ್ತು ಅಪ್ರೆಂಟಿಸ್ಶಿಪ್ ನೀತಿಯ ಪ್ರಕಾರ ಅಪ್ರೆಂಟಿಸ್‍ಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಇಂಡಿಯನ್ ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಅಪ್ರೆಂಟಿಸ್ ಶಿಪ್ ನೀಡಲು ಮುಂದಾಗಿದೆ. 2025-26 ನೇ ಸಾಲಿಗೆ ದೇಶದಾದ್ಯಂತ ಒಟ್ಟು 1,500 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದ್ದು, ಕರ್ನಾಟಕದಿಂದ 42 ಮಂದಿಗೆ ಅವಕಾಶ ಸಿಗಲಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 7ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಇದು ಒಂದು ವರ್ಷದ ಉದ್ಯೋಗ ತರಬೇತಿಯಾಗಿರುತ್ತದೆ. ಅಪ್ರೆಂಟಿಸ್ಷಿಪ್ ಒಂದು ಉದ್ಯೋಗ ತರಬೇತಿಯಾಗಿದೆಯೇ ಹೊರತು ಬ್ಯಾಂಕ್ನಿಂದ ನಡೆಯುವ ನೇಮಕಾತಿ ಆಗಿರುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ. ಅರ್ಹತೆಗಳೇನು ? :: ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಆದರೆ, ಅಭ್ಯರ್ಥಿಗಳು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ನಿಗದಿತ ವಿದ್ಯಾರ್ಹತೆ…






