ಮಡಿಕೇರಿ ಜು.26 NEWS DESK : ಐತಿಹಾಸಿಕ ಮಡಿಕೇರಿ ದಸರಾ ಆಚರಣೆಗೆ ಪೂರ್ವಭಾವಿಯಾಗಿ ಸಂಪ್ರದಾಯದAತೆ ನಗರದ ಪೇಟೆ ಶ್ರೀರಾಮಮಂದಿರದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಆ ಮೂಲಕ ದಸರಾ ಜನೋತ್ಸವದ ಸಿದ್ಧತಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಮಡಿಕೇರಿ ದಸರಾ ಉತ್ಸವವನ್ನು ಯಾವುದೇ ವಿಘ್ನಗಳಿಲ್ಲದೆ ಯಶಸ್ವಿಗೊಳಿಸುವಂತೆ ಸಮಿತಿಯ ಪ್ರಮುಖರು ಪ್ರಾರ್ಥಿಸಿದರು. ದಸರಾ ಸಮಿತಿಯ ನೂತನ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್ ಮಾತನಾಡಿ ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ಸಿದ್ಧತಾ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ದಸರಾ ಹಬ್ಬದ ಆಚರಣೆಗೆ ಎಲ್ಲರ ಸಹಕಾರದ ಅಗತ್ಯವಿದ್ದು, ಒಗ್ಗಟ್ಟನಿಂದ ಅದ್ದೂರಿಯಾಗಿ ಆಚರಿಸೋಣವೆಂದು ಮನವಿ ಮಾಡಿದರು. ಮಡಿಕೇರಿ ದಸರಾ ಸಮಿತಿಯ ಅಧ್ಯಕ್ಷರಾದ ನಗರಸಭೆಯ ಅಧ್ಯಕ್ಷೆ ಪಿ.ಕಲಾವತಿ, ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ದಶ ಮಂಟಪ ಸಮಿತಿಯ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್, ಸಮಿತಿಯ ಪ್ರಮುಖರಾದ ಜಿ.ಎಂ.ಸತೀಶ್ ಪೈ, ಕಾನೆಹಿತ್ಲು ಮೊಣ್ಣಪ್ಪ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ನಗರಸಭೆ ಸದಸ್ಯರು, ದಶಮಂಟಪ ಸಮಿತಿಯ…
ಲೇಖಕ: admin
ಮಡಿಕೇರಿ ಜು.26 NEWS DESK : ಬಿಜೆಪಿಯ ಶಾಸಕರುಗಳೇ ಇದ್ದ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನಡೆಯದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಆಡಳಿತದ ಈ ಅವಧಿಯಲ್ಲಿ ನಡೆಯುತ್ತಿದೆ. ಆದರೆ ಜಿಲ್ಲೆಯ ಜನರಿಗೆ ಅಭಿವೃದ್ಧಿಯ ವಿಚಾರದಲ್ಲಿ ಬಿಜೆಪಿ ತಪ್ಪು ಸಂದೇಶವನ್ನು ನೀಡುತ್ತಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾದ ಟಿ.ಈ.ಸುರೇಶ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಸಾಕಷ್ಟು ಉತ್ತಮ ಕೆಲಸಗಳನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ನಡೆಯದ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಡೆಯುತ್ತಿದೆ. ಅಭಿವೃದ್ಧಿಯ ಬಗ್ಗೆ ಬಿಜೆಪಿಗೆ ಕಾಳಜಿ ಇದ್ದಿದ್ದರೆ ಅವರ ಅವಧಿಯಲ್ಲಿ ಅದನ್ನು ಮಾಡಬೇಕಿತ್ತು ಎಂದು ಹೇಳಿದರು. ಪ್ರತಿಪಕ್ಷ ಬಿಜೆಪಿಗೆ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ. ಇದಕ್ಕೆ ಬದಲಾಗಿ ಕೇವಲ ಕಾಂಗ್ರೆಸ್ ಆಡಳಿತವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನಷ್ಟೆ ಮಾಡುತ್ತಿರುವುದಾಗಿ ಟೀಕಿಸಿದರು. *ಅಭಿವೃದ್ಧಿ ಕಾರ್ಯ* :: ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ತಮ್ಮ ಇಲ್ಲಿನವರೆಗಿನ ಅಧಿಕಾರದ…
ಮಡಿಕೇರಿ ಜು.26 NEWS DESK : ಕೊಡಗು ವಿದ್ಯಾಲಯದ ಎನ್‌ಸಿಸಿ ಘಟಕದ ವತಿಯಿಂದ ನಗರದಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಯನ್ನು ಶುಚಿಗೊಳಿಸುವುದರ ಮೂಲಕ ಕಾರ್ಗಿಲ್ ವಿಜಯ ದಿವಸ್ ನ್ನು ಆಚರಿಸಲಾಯಿತು. ಕೊಡಗು ವಿದ್ಯಾಲಯದ ಎನ್‌ಸಿಸಿ ಕೆಡೆಟ್ ಗಳು ಪ್ರತಿಮೆಯನ್ನು ಶುಚಿಗೊಳಿಸಿ, ಆವರಣದ ಸುತ್ತ ಬೆಳೆದಿದ್ದ ಕಾಡು ಸಸಿಗಳನ್ನು ಕಿತ್ತು, ಗುಡಿಸಿ ಶುಚಿಗೊಳಿಸಿದರು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್., ಆಡಳಿತ ಅಧಿಕಾರಿ ರವಿ.ಪಿ ನೆರವೇರಿಸಿದರು. ಶಾಲೆಯ ಎನ್ ಸಿ ಸಿ ಅಧಿಕಾರಿ ಮೇಜರ್ ದಾಮೋದರ ಗೌಡ ಹಾಗೂ ಎನ್ ಸಿ ಸಿ ಸಿಬ್ಬಂದಿಗಳು ಹಾಜರಿದ್ದರು.
ಮಡಿಕೇರಿ ಜು.26 NEWS DESK : ಮಡಿಕೇರಿ ಕೊಡವ ಸಮಾಜ, ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ ಮತ್ತು ನಗರದ ಕೊಡವ ಕೇರಿಗಳ ಸಂಯುಕ್ತಾಶ್ರಯದಲ್ಲಿ ಆ.3 ರಂದು ಸಾಂಪ್ರದಾಯಿಕ 8ನೇ ವರ್ಷದ ‘ಕಕ್ಕಡ ಒತ್ತೊರ್ಮೆ ಕೂಟ’ವನ್ನು ಆಯೋಜಿಸಲಾಗಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಎಂ.ಪಿ.ಮುತ್ತಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರಿನ ಅವಧಿಯಲ್ಲಿ ಬರುವ ಕಕ್ಕಡ ಮಾಸದಲ್ಲಿ, ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ದ್ ಸೊಪ್ಪು ಮತ್ತಿತರ ಖಾದ್ಯ ಪದಾರ್ಥಗಳನ್ನು ಮಾಡಲಾಗುತ್ತದೆ. ಇವುಗಳನ್ನು ಯುವ ಸಮೂಹಕ್ಕೆ ಪರಿಚಯಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಅಂದು ಬೆಳಗ್ಗೆ 10 ಗಂಟೆಗೆ ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಕಕ್ಕಡ ನಮ್ಮೆ ಒತ್ತೊರ್ಮೆ ಕೂಟ ಆರಂಭಗೊಳ್ಳಲಿದೆ. ಜಿಲ್ಲೆಯ ಶಾಸಕರುಗಳಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಎಂಎಲ್‍ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಸಮಾಜ ಸೇವಕಿ ಕಾಂಚನ ಪೊನ್ನಣ್ಣ ಹಾಗೂ ಸಮಾಜ ಸೇವಕಿ ದಿವ್ಯಾ ಮಂತರ್ ಗೌಡ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.…
ಮಡಿಕೇರಿ ಜು.26 NEWS DESK : ಭಾಗಮಂಡಲ ಹೋಬಳಿ ಕರಿಕೆ ಗ್ರಾಮದ ಸುಮತಿ ಎಂಬವರ ವಾಸದ ಮನೆಯ ಮೇಲೆ ಮರ ಬಿದ್ದು ಶೀಟ್ ಗಳು ಹಾನಿಯಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷರು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮಡಿಕೇರಿ ಜು.26 NEWS DESK : ವಿರಾಜಪೇಟೆ ತಾಲ್ಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಗಾಳಿಗೆ ಕೆದಮುಳ್ಳೂರು ಗ್ರಾಮದ ಚುರಿಯಾಲ್‍ನಲ್ಲಿರುವ ಪನ್ನಂಗಾಲತ್ತಮ್ಮೆ ಗುಡಿಯ ಮೇಲೆ ಮರ ಬಿದ್ದು ಹಾನಿಯಾಗಿದೆ. ದೇವಾಲಯದ ಅರ್ಧ ಭಾಗದಷ್ಟು ಹಾನಿಗೀಡಾಗಿದ್ದು, ಯಾರೂ ಇಲ್ಲದ್ದರಿಂದ ಅನಾಹುತ ತಪ್ಪಿದೆ. ಸ್ಥಳಕ್ಕೆ ವಿರಾಜಪೇಟೆ ತಹಶೀಲ್ದಾರರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಮಡಿಕೇರಿ ಜು.26 NEWS DESK : ಕೊಡಗಿನಲ್ಲಿ ಪ್ರವಾಸೋದ್ಯಮಿಗಳು ಒಗ್ಗಟ್ಟಿನಿಂದ ಪರಿಸರ ಸ್ನೇಹಿಯಾದ ವಿನೂತನ ಯೋಜನೆ ಜಾರಿಗೆ ಮುಂದಾದರೆ ಖಂಡಿತವಾಗಿಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉಜ್ವಲ ಭವಿಷ್ಯವಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಭಿಪ್ರಾಯಪಟ್ಟಿದ್ದಾರೆ. ಕೊಡಗಿನ ನಿಸಗ೯ ಸಂಪತ್ತು, ಶ್ರೀಮಂತ ಸಂಸ್ಕೃತಿಯನ್ನೂ ಪ್ರವಾಸೋದ್ಯಮಿಗಳು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಗಮನ ನೀಡಬೇಕೆಂದು ಅವರು ಕಿವಿಮಾತು ಹೇಳಿದ್ದಾರೆ. ನಗರದ ಹೊರವಲಯದಲ್ಲಿನ ವೈಲ್ಡರ್ ನೆಸ್ ರೆಸಾಟ್೯ನಲ್ಲಿ ಕೂಗ್೯ ಹೋಟೆಲ್ಸ್, ರೆಸಾಟ್೯ ಅಸೋಸಿಯೇಷನ್ ನ ನೂತನ ವೆಬ್ ಸೈಟ್, ಲಾಂಛನ ಅನಾವೋರಣಗೊಳಿಸಿ ಕಾಯ೯ಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಮಾತನಾಡಿದರು. ಕುಶಾಲನಗರ – ಮಡಿಕೇರಿ ನಡುವಿನ ಹೆದ್ದಾರಿಯಲ್ಲಿ ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಖಾಸಗಿ ಜಾಗ ದೊರಕಿದರೆ, ಶೌಚಾಲಯ, ಮಿನಿ ರೆಸ್ಟೋರೆಂಟ್ ವ್ಯವಸ್ತೆ ಕಲ್ಪಿಸಲು ಸಕಾ೯ರದಿಂದ ಸಾಧ್ಯವಿದೆ. ಸದ್ಯದಲ್ಲಿಯೇ ಮೈಸೂರು – ಕುಶಾಲನಗರ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾದ ನಂತರ ಕುಶಾಲನಗರದಲ್ಲಿ ವಾಹನ ದಟ್ಟಣೆ ಇಳಿಮುಖವಾಗುವ ಸಾಧ್ಯತೆಯಿದೆ ಎಂದರಲ್ಲದೇ, ಮಡಿಕೇರಿಯಲ್ಲಿ ವಾಹನ ದಟ್ಟಣೆ ಮತ್ತು ವಾಹನ ನಿಲುಗಡೆ ಸಮಸ್ಯೆ ನಿವಾರಿಸಲು…
ಮಡಿಕೇರಿ ಜು.26 NEWS DESK : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಕೊಡಗಿನ ವಿವಿಧೆಡೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಸಂಪಾಜೆ ವ್ಯಾಪ್ತಿಯ ಮೇಕೇರಿ ಗ್ರಾಮದ ಸುಭಾಸ್ ನಗರದ ನಸೀಮಾ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿ ಉಂಟಾಗಿದೆ. ಡಬ್ಬಡ್ಕ ಗ್ರಾಮದ ಮುಕ್ಕಾಟಿ ತಮ್ಮಯ್ಯ ಎಂಬುವರ ಮನೆಯ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶನಿವಾರಸಂತೆ ಹೋಬಳಿ ಕೊರಲಳ್ಳಿ ಗ್ರಾಮದ ಸುಕನ್ಯಾ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಕೆದಮಳ್ಳೂರು ಗ್ರಾಮದ ಚೂರಿಯಾಲದ ದೇವಸ್ಥಾನದ ಮೇಲೆ ಮರ ಬಿದ್ದು ದೇವಸ್ಥಾನವು ಅರ್ಧಕ್ಕಿಂತ ಹೆಚ್ಚು ಹಾನಿಯಾಗಿದ್ದು, ಸ್ಥಳಕ್ಕೆ ವಿರಾಜಪೇಟೆ ತಹಶಿಲ್ದಾರರು ಭೇಟಿ ನೀಡಿ ಪರಿಶೀಸಿದ್ದಾರೆ. ಅಮ್ಮತ್ತಿ ಹೋಬಳಿ ಬಿಳುಗುಂದ ಗ್ರಾಮದ ಹೆಚ್.ಟಿ.ಗಣೇಶ್ ಎಂಬುವರ ವಾಸದ ಮನೆಯ ಹಿಂಬದಿಯ ಗೋಡೆ ಮತ್ತು ಮೇಲ್ಚಾವಣಿ ಮಳೆಯಿಂದ ಕುಸಿದು ಬಿದ್ದು ತೀವ್ರ ಹಾನಿಯಾಗಿದೆ. ಮಡಿಕೇರಿ -ಸೋಮವಾರಪೇಟೆ ಮಾರ್ಗದ ರಸ್ತೆ ಕಾಜೂರು ಬಳಿ ಮರ ರಸ್ತೆಗೆ…
ಕುಶಾಲನಗರ ಜು.26 NEWS DESK : ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ವಿದ್ಯಾರ್ಥಿನಿ ವಿ.ಜೆ.ಜಾಯ್ಸ್ ಲೀನಾ 2024-25ನೇ ಶೈಕ್ಷಣಿಕ ಸಾಲಿನ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಗಳಿಸಿದ್ದಾರೆ. ಕೊಡಗು ಜಿಲ್ಲೆಯ ಏಕೈಕ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇದೇ ಪ್ರಥಮ ಬಾರಿಗೆ ಈ ಗೌರವಕ್ಕೆ ಭಾಜನವಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಫಲಿತಾಂಶ ಪ್ರಕಟಿಸಿದ್ದು, ರ‍್ಯಾಂಕ್ ಪಟ್ಟಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬೆಳಗಾಂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ 25ನೇ ಘಟಿಕೋತ್ಸವದಲ್ಲಿ ಜಾಯ್ಸ್ ಲೀನಾ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು. ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆಯ ಆಟೋ ಚಾಲಕ ಜೋಸೆಫ್ ವಂದನಾಥ್ ಮತ್ತು ಜೋಸೆಫಿನ್ ದಂಪತಿಗಳ ಪುತ್ರಿ ಜಾಯ್ಸ್ ಲೀನಾ ಕುಶಾಲನಗರ ಫಾತಿಮಾ ಕಾನ್ವೆಂಟ್ ನಲ್ಲಿ ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿ, ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಮಾಡಿ ನಂತರ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು.
ಸೋಮವಾರಪೇಟೆ ಜು.26 NEWS DESK : ಮನೆಯ ಗೋಡೆ ಕುಸಿದು ಕಾರ್ಮಿಕ ಮಹಿಳೆ ಮೃತಪಟ್ಟ ಸ್ಥಳಕ್ಕೆ ಮಾಜಿ ಶಾಸಕ ಎಂ.ಪಿ.ಅಪ್ಪಚುರಂಜನ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಹಾನಗಲ್ಲು ಗ್ರಾಮದಲ್ಲಿ ಮನೆಯ ಗೋಡೆಕುಸಿದು ಸುಷ್ಮಾ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮನೆಯೊಳಗಿದ್ದ ಮೂವರು ಮಕ್ಕಳು ಹಾಗೂ ಸಹೋದರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ರಂಜನ್ ಘಟನೆಯ ಬಗ್ಗೆ ಮಾಹಿತಿ ಪಡೆದು ಬೇಸರ ವ್ಯಕ್ತಪಡಿಸಿದರು. ಕುಟುಂಬವರ್ಗಕ್ಕೆ ಸಾಂತ್ವಾನ ಹೇಳುವುದರೊಂದಿಗೆ, ದೈರ್ಯತುಂಬಿದರು. ಈ ಸಂದರ್ಭ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಕಿಸಿದ ಅವರು ಅಗತ್ಯ ತುರ್ತು ಕ್ರಮಕೈಗೊಳ್ಳುವಂತೆ ತಿಳಿಸಿದರು. ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್, ಕಾರ್ಯದರ್ಶಿ ಸೋಮೇಶ್ ಹಾಗೂ ಮುಂತಾದವರು ಹಾಜರಿದ್ದರು.






