ಮಡಿಕೇರಿ ಜು.28 NEWS DESK : ಮತದಾರರ ಸಾಕ್ಷರತಾ ಸಂಘದ ವತಿಯಿಂದ ಮಕ್ಕಂದೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಆಡಳಿತ ಮಂಡಳಿಯ ಚುನಾವಣೆ ನಡೆಯಿತು. ಪರಿಷ್ಕೃತ ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ, ಮತಯಂತ್ರ, ಚುನಾವಣಾ ಅಧಿಕಾರಿಗಳ ನೇಮಕ ಮಾಡಲಾಗಿತ್ತು. ಇವುಗಳೆಲ್ಲವನ್ನೂ ಸಿದ್ಧ ಮಾಡಿಕೊಳ್ಳಲಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಮತಪೆಟ್ಟಿಗೆ, ಮತ ಚೀಟಿಗಳ ಬದಲು ಮೊಬೈಲ್ ನಲ್ಲಿ ಮತಯಂತ್ರಗಳನ್ನು ಬಳಸಿ ಮಕ್ಕಳು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು. ಒಂದು ಮೊಬೈಲ್ ನ್ನು ಇವಿಎಂ ಓಟಿಂಗ್ ಮೆಷಿನ್ ಬ್ಯಾಲೆಟ್ ಯೂನಿಟ್ ಆಗಿ ಮತ್ತೊಂದು ಮೊಬೈಲ್ ನ್ನು ಕಂಟ್ರೋಲ್ ಯುನಿಟ್ ಆಗಿ ಬಳಸಲಾಯಿತು. ಮತ ಎಣಿಕೆ ಓಟಿಂಗ್ ಮೆಷಿನ್ ನಲ್ಲಿ ನಡೆಯಿತು. ಮತ ಎಣಿಕೆಯ ನಂತರ ಶಾಲಾ ನಾಯಕರಾಗಿ ಅಕ್ಷಯ್ ಕುಮಾರ್ ಹಾಗೂ ಶಾಲಾ ನಾಯಕಿಯಾಗಿ ಜ್ಯೋತಿ ತಮ್ಮ ಆಡಳಿತ ಮಂಡಳಿಯ ಸಚಿವರನ್ನು ಆಯ್ಕೆ ಮಾಡಿದರು. ಚುನಾವಣಾ ಆಯುಕ್ತರಾಗಿ ಶಾಲಾ ಮುಖ್ಯ ಶಿಕ್ಷಕರಾದ ಹರಿಣಾಕ್ಷಿ ಕಾರ್ಯ ನಿರ್ವಹಿಸಿದರು. ಸಂಚಾಲಕರಾಗಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ…
ಲೇಖಕ: admin
ಕುಶಾಲನಗರ ಜು.28 NEWS DESK : ಮೈಸೂರಿನ ಸೇವಾ ಭಾರತಿ ಟ್ರಸ್ಟ್ ವತಿಯಿಂದ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸೀಗೆಹೊಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲಾಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಣೆ ಮಾಡಲಾಯಿತು. ಮಕ್ಕಳಿಗೆ ಪುಸ್ತಕ ವಿತರಿಸಿ ಮಾತನಾಡಿದ ಸೇವಾ ಭಾರತಿ ಟ್ರಸ್ಟ್ ನ ಸಂಯೋಜಕ ಡಾ.ಅಚ್ಯುತರಾವ್, ತಮ್ಮ ಸಂಸ್ಥೆಯ ವತಿಯಿಂದ ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಧನೆಯ ಸಲಕರಣೆಗಳನ್ನು ನೀಡುತ್ತಾ ಅವರ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮಕ್ಕಳಿಗೆ ನೋಟ್ ಪುಸ್ತಕಗಳು ಸೇರಿದಂತೆ ಲೇಖನ ಸಾಮಾಗ್ರಿಗಳು ಹಾಗೂ ಮಕ್ಕಳ ಕಲಿಕೆಗೆ ಬೇಕಾದ ಪೂರಕ ಸಾಮಾಗ್ರಿಗಳನ್ನು ಉಚಿತವಾಗಿ ವಿತರಿಸಿಕೊಂಡು ಬರಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ತಮ್ಮ ಶಾಲೆಯಲ್ಲಿ ಗುರುಗಳು ಕಲಿಸುವ ಪಾಠ- ಪ್ರವಚನಗಳನ್ನು ಉತ್ತಮವಾಗಿ ಅಧ್ಯಯನ ಮಾಡುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಸೇವಾ ಭಾರತಿ ಟ್ರಸ್ಟ್ ಸರ್ಕಾರಿ ಶಾಲಾ ಮಕ್ಕಳಿಗೆ ನೆರವು ನೀಡುತ್ತಿರುವುದು ಶ್ಲಾಘನೀಯವಾದುದು…
ಸುಂಟಿಕೊಪ್ಪ ಜು.28 NEWS DESK : ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಕುಶಾಲನಗರದ ಜೀವ ಸ್ಕಿನ್ ಮತ್ತು ಹೇರ್ ಕ್ಲಿನಿಕ್ ಸಹಯೋಗದಲ್ಲಿ ಸುಂಟಿಕೊಪ್ಪದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂದಿರದಲ್ಲಿ ಉಚಿತ ಚರ್ಮರೋಗ ಮತ್ತು ಕೂದಲು ಚಿಕಿತ್ಸಾ ಶಿಬಿರ ನಡೆಯಿತು. ಶಿಬಿರದಲ್ಲಿ ಕುಶಾಲನಗರದ ವೈದ್ಯೆ ಡಾ. ಎಸ್.ಪಿ.ವರ್ಷ ಕರುಣ್, ಶಿಬಿರಾರ್ಥಿಗಳಿಗೆ ಚರ್ಮರೋಗ ಮತ್ತು ಕೂದಲು ಆರೋಗ್ಯಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಸೋರಿಯಾಸಿಸ್, ಗಜಕರ್ಣ, ಅಲರ್ಜಿ, ಬಂಗು, ತೊನ್ನು, ಮುಖದ ಕಲೆ, ಉಗುರಿನ ಸಮಸ್ಯೆ, ಮೊಡವೆ ಚಿಕಿತ್ಸೆ, ಮಚ್ಚೆ, ಕೂದಲು ಉದುರುವಿಕೆ ಇತ್ಯಾದಿ ಚರ್ಮ ಹಾಗೂ ಕೂದಲಿಗೆ ಸಂಬಂಧಿಸಿದಂತೆ ವೈದ್ಯರು ತಪಾಸಣೆ ನಡೆಸಿದರು. ಶಿಬಿರದಲ್ಲಿ 78 ಮಂದಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು. ಆರೋಗ್ಯ ತಪಾಸಣೆ ನಡೆಸಿ ಮಾತನಾಡಿದ ವೈದ್ಯರಾದ ಡಾ.ವರ್ಷ ಕರುಣ್, ಜನರು ತಮ್ಮ ಆರೋಗ್ಯ ರಕ್ಷಣೆ ಜೊತೆಗೆ ಚರ್ಮ ಮತ್ತು ಕೂದಲು ರಕ್ಷಣೆಗೆ ಗಮನಹರಿಸಬೇಕು ಎಂದರು. ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳಿಗೆ ಉತ್ತಮ ಪೆÇ್ರೀಟಿನ್ ಯುಕ್ತ ಆಹಾರ…
ಕುಶಾಲನಗರ ಜು.28 NEWS DESK : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳ ಕಾರ್ಯಕಾರಿಣಿ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಹೆಚ್.ಜಿ.ಕುಮಾರ್, ಕಾರ್ಯದರ್ಶಿ ಎಸ್.ಎಂ.ಮಹೇಂದ್ರ ಅವರನ್ನು ತಾಲ್ಲೂಕು ಸಂಘದಿಂದ ಸನ್ಮಾನಿಸಲಾಯಿತು. ನೂತನವಾಗಿ ಪದಾಧಿಕಾರಿಗಳಾಗಿ ದಿನೇಶ್ ಗೌಡಳ್ಳಿ, ಹೂಬಟ್೯ ಡಯಾಸ್, ಸಿ.ಡಿ.ಲೋಕೇಶ್, ವಿಕ್ರಾಂತ್ ಕೇಳ್ಕರ್, ವಿಜಯ್ ಕುಮಾರ್, ಅರುಣ್ ಕುಮಾರ್ ಅವರನ್ನು ಆಯ್ಕೆಮಾಡಿಕೊಳ್ಳಲಾಯಿತು. ಅನುದಾನಿತ ಶಾಲಾ ಶಿಕ್ಷಕರು ಅನುಭವಿಸುತ್ತಿರುವ ವೇತನದ ಸಮಸ್ಯೆ, ಇನ್ಕ್ರಮೆಂಟ್, ಟೈಂ ಬಾಂಡ್,ಇನ್ನಿತರ ವಿಷಯಗಳ ಬಗೆ ಚರ್ಚಿಸಿ, ಕ್ಷೇತ್ರಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರನ್ನು ಭೇಟಿ ಮಾಡಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಸಹಶಿಕ್ಷಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಪರಿಹಾರ ಮಾಡುವ ಬಗ್ಗೆ ಚರ್ಚಿಸಲಾಯಿತು. ತಾಲ್ಲೂಕಿನ ಪದಾಧಿಕಾರಿಗಳು ತಾಲ್ಲೂಕಿನ ಕಾರ್ಯಕಾರಿಣಿ ಸಭೆಯನ್ನು ಶನಿವಾರಸಂತೆ, ಕುಶಾಲನಗರ ಹಾಗೂ ಸೋಮವಾರಪೇಟೆಯಲ್ಲಿ ನಡೆಸಲು ತೀರ್ಮಾನ ಮಾಡಲಾಯಿತು. ಜೂಮ್ ಮೀಟಿಂಗ್ ಮುಖಾಂತರ…
ನಾಪೋಕ್ಲು ಜು.28 NEWS DESK : ಹೋಬಳಿ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಬಿರುಸಿನ ಮಳೆಯಾಗಿದ್ದು ಭಾನುವಾರ ಕೊಂಚ ಕಡಿಮೆಯಾಗಿದೆ. ಗಾಳಿ ಮಳೆಯಿಂದ ಅಲ್ಲಲ್ಲಿ ವಾಸದ ಮನಗಳಿಗೆ ಹಾನಿ ಉಂಟಾಗಿದ್ದು, ಕೆಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು, ಮೂರ್ನಾಡು ಸಂಪರ್ಕ ರಸ್ತೆಯ ಬೋಳಿಬಾಣೆ ಎಂಬಲ್ಲಿ ಕಾವೇರಿ ಪ್ರವಾಹ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಂಪರ್ಕ ಸ್ಥಗಿತಗೊಂಡಿದೆ, ಕೊಟ್ಟಮುಡಿ ಜಂಕ್ಷನ್ ಸಮೀಪ ಮೂರ್ನಾಡು ರಸ್ತೆಯಲ್ಲಿ ಕಾವೇರಿ ನದಿ ದಡದಲ್ಲಿರುವ ಶೆಡ್ ಜಲಾವೃತವಾಗಿ ಮುಳುಗಡೆಯಾಗಿದೆ. ನಾಪೋಕ್ಲು, ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿರುವ ಚೆರಿಯಪರಂಬು ಎಂಬಲ್ಲಿ ರಸ್ತೆಯೂ ಕಾವೇರಿ ಪ್ರವಾಹದಿಂದ ಜಲಾವೃತವಾಗಿ ಸಂಪರ್ಕ ಕಡಿತಗೊಂಡು ಇಲ್ಲಿಯ ನಿವಾಸಿಗಳು ಕೊಡವ ಸಮಾಜ ರಸ್ತೆಯನ್ನು ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಕ್ಕಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದ ವೈಕೋಲ್ ನಿವಾಸಿ ಅಶ್ರಫ್ ಎಂಬವರ ವಾಸದ ಮನೆಯ ಸಮೀಪ ಬರೆ ಕುಸಿದು ಸಂಕಷ್ಟ ಎದುರಾಗಿದೆ. ಇದೇ ಕುಂಜಿಲ ಗ್ರಾಮದ ನಿವಾಸಿ ಉಮ್ಮರ್ ಎಂಬವರ ಮನೆಯ ಒಂದು ಭಾಗದ ಗೋಡೆ ಮಳೆ ಗಾಳಿಯಿಂದಾಗಿ ರಾತ್ರಿ…
ಮಡಿಕೇರಿ ಜು.28 NEWS DESK : ಬೆಂಗಳೂರಿನ ಕ್‌ಗ್ಗಟ್‌ನಾಡ್ ಕೊಡವ ಸಂಘದ 5ನೇ ವರ್ಷದ ಒತ್ತೋರ್ಮೆ ಕೂಟವು ಸಂಭ್ರಮದಿಂದ ನಡೆಯಿತು. ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡಗಿನ ಹಾಗೂ ಕೊಡವರ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ನಾಡಿನದ್ಯಂತ ಪಸರಿಸಲು ಇಂತಹ ಸಮ್ಮಿಲನ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಯುವ ಪೀಳಿಗೆಯ ಮೇಲೆ ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಆಚರಣೆಗಳನ್ನು ಮುಂದುವರಿಸುವ ಗುರುತರ ಜವಾಬ್ದಾರಿ ಇದೆ. ಆಧುನಿಕತೆಗೆ ಹೊಂದಿಕೊಂಡು ನಮ್ಮ ಸಂಸ್ಕೃತಿಯನ್ನು ಪೋಷಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು. ನಾಡಿನ ಏಳಿಗೆಗಾಗಿ ತನ್ನ ಕೈಲಾದ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಇದೇ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಹಿರಿಯ ಪತ್ರಕರ್ತ ಎಂ.ಎ.ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್‌ಗ್ಗಟ್‌ನಾಡ್ ಕೊಡವ ಸಂಘದ…
ನಾಪೋಕ್ಲು ಜು.28 NEWS DESK : ನೆಲಜಿ ಗ್ರಾಮದ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಅಪಾರ ಕೃಷಿ ಗಿಡಗಳನ್ನು ದ್ವಂಸ ಮಾಡಿ ನಷ್ಟ ಉಂಟು ಮಾಡಿರುವ ಘಟನೆ ಜರುಗಿದೆ. ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ್ದು, ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿವೆ. ನೆಲಜಿ ಗ್ರಾಮದ ಕೋಟೆರ ಸತೀಶ್ ಮತ್ತು ಸಹೋದರ ಪ್ರಸಾದ್ ಜೋಯಪ್ಪ, ಫಾರ್ಮರ್ಸ್ ಕ್ಲಬ್, ಕೋಟೆರ ಐನ್ ಮನೆ ಹಾಗೂ ಸುತ್ತಮುತ್ತಲಿನ ತೋಟದಲ್ಲಿನ ಕೃಷಿ ಗಿಡಗಳನ್ನು ನಾಶಪಡಿಸಿವೆ. ಅಲ್ಲದೆ ಕಕ್ಕಬ್ಬೆ, ಕುಂಜಿಲ, ಯವಕಪಾಡಿಯ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ಧ್ವಂಸಮಾಡಿದ್ದವು. ಕಾಡಾನೆಗಳನ್ನು ಒಂದು ಭಾಗದಿಂದ ಓಡಿಸಿದರೆ ಮತ್ತೊಂದು ಭಾಗದಿಂದ ನುಸುಳುತ್ತವೆ. ಗ್ರಾಮದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಜು.28 NEWS DESK : ಕೊಡಗು ಪತ್ರಕತ೯ರ ಸಂಘ (ರಿ) ಹಾಗೂ ರೋಟರಿ ಮಿಸ್ಟಿ ಹಿಲ್ಸ್ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಕಾಗಿ೯ಲ್ ವಿಜಯ್ ದಿವಸ್ ಕಾರ್ಯಕ್ರಮ ಮತ್ತು ಯೋಧರಿಗೆ ಗೌರವ ನಮನ ಸಲ್ಲಿಸುವ ಕಾಯ೯ಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಭಾಗವಹಿಸಿ ವೀರ ಯೋಧರಿಗೆ ಗೌರವಾರ್ಪಣೆ ಮಾಡಿದರು. ದೇಶ ರಕ್ಷಣೆಯಲ್ಲಿ ವೀರ ಯೋಧರ ಕೊಡುಗೆಯನ್ನು ಸ್ಮರಿಸಿದ ಪೊನ್ನಣ್ಣ ವೀರತ್ವಕ್ಕೆ ಕೊಡಗು ಹೆಸರುವಾಸಿಯಾಗಿದ್ದು, ಕೊಡಗಿನ ಸಾವಿರಾರು ಜನ ಸೈನಿಕರ ಕೊಡುಗೆ ಈ ದೇಶದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಬಣ್ಣಿಸಿದರು. ದೇಶದ ಪ್ರತಿಯೊಬ್ಬರು ದೇಶಭಕ್ತಿಯನ್ನು ಬೆಳೆಸಿಕೊಂಡಲ್ಲಿ, ನಮ್ಮ ನಾಡು, ನಮ್ಮ ದೇಶ ಸಮೃದ್ಧವಾಗುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪೊನ್ನಣ್ಣ ಅಭಿಪ್ರಾಯಪಟ್ಟರು. ನಮ್ಮ ದೇಶವನ್ನು ಕಾಯುವ ಯೋಧರನ್ನು ನಾವು ಸದಾ ಸ್ಮರಿಸುತ್ತಾ ಅವರಿಗೆ ಚಿರಋಣಿಯಾಗಿರಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಕಿವಿಮಾತು ಹೇಳಿದರು. ಕೊಡಗಿನಿಂದ ದೇಶದ ಸೈನ್ಯಕ್ಕೆ ನೀಡಲಾದ ಯೋಧರ ಕೊಡುಗೆ ಬೇರೆ ಯಾವ ರಾಜ್ಯದಿಂದಲೂ ಇಲ್ಲ ಎಂದು ಹೇಳಿದ…
ಮಡಿಕೇರಿ ಜು.28 NEWS DESK : ಹಣತೆ ಉರಿಸಿ, ಪುಪ್ಪಗಳನ್ನು ಅಪಿ೯ಸಿ, ದೇಶಭಕ್ತಿಯ ಹಾಡುಗಳೊಂದಿಗೆ ಯೋಧರು, ಹಾಗೂ ಭಾರತ ಮಾತೆಗೆ ಜೈಘೋಷಗಳ ಮೂಲಕ ವಿನೂತನ ರೀತಿಯಲ್ಲಿ ಕೊಡಗು ಪತ್ರಕತ೯ರ ಸಂಘ (ರಿ) ಮತ್ತು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಕಾಗಿ೯ಲ್ ವಿಜಯ್ ದಿವಸ್ ಅಂಗವಾಗಿ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು. ನಗರದ ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಜಿಲ್ಲೆಯಾದ್ಯಂತಲಿನ 75 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಅಮರ್ ಜವಾನ್ ಸ್ಮಾರಕದ ಪ್ರತಿಕೖತಿಗೆ ಪುಪ್ಪಾಚ೯ನೆ ಮಾಡಿ, ಹಣತೆ ಬೆಳಗಿ ಯೋಧರಿಗೆ ಭಾವಪೂಣ೯ ಗೌರವ ನಮನ ಸಲ್ಲಿಸಿದರು. ಯೋಧರೆ ನಾವೆಂದೂ ಮರೆಯೋದಿಲ್ಲ ನಿಮ್ಮನ್ನು ಎಂಬ ಸಂದೇಶ ಸಾರುವ ಕಾಯ೯ಕ್ರಮವನ್ನು ಕಾಗಿ೯ಲ್ ಸಮರದಲ್ಲಿ ಹುತಾತ್ಮರಾದ ಪೆಮ್ಮಂಡ ಕಾವೇರಪ್ಪ ಅವರ ಪತ್ನಿ ಪೆಮ್ಮಂಡ ಶೋಭಾ ಕಾವೇರಪ್ಪ ದೀಪಬೆಳಗಿಸಿ ಉದ್ಘಾಟಿಸಿದರು. ರೋಟರಿ ಜಿಲ್ಲೆಯ ನಿಕಟಪೂವ೯ ಗವನ೯ರ್ , ಮಾಜಿ ನೌಕದಳದ ಅಧಿಕಾರಿ ವಿಕ್ರಂದತ್ತ, ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಕಾಯ೯ದಶಿ೯ ಸುರೇಶ್ ಬಿಳಿಗೇರಿ, ರೋಟರಿ…
ಮಡಿಕೇರಿ NEWS DESK ಜು 27 : ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಹಲವೆಡೆ ಪ್ರವಾಸಿ ತಾಣಗಳ ಮಾಹಿತಿ ಫಲಕಗಳನ್ನು ಅಳವಡಿಸುವ ಯೋಜನೆಗೆ ರಾಜಾಸೀಟ್ ಹೊರಬದಿಯಲ್ಲಿ ಫಲಕ ಅನಾವರಣಗೊಳಿಸುವ ಮೂಲಕ ಚಾಲನೆ ದೊರಕಿದೆ. ನಗರದ ಹೆಸರಾಂತ ಪ್ರವಾಸೀ ತಾಣ ರಾಜಾಸೀಟ್ ನಲ್ಲಿ ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ರಾಜಾಸೀಟ್ ನಿಂದ ಇರುವ ದೂರದ ಮಾಹಿತಿಯುಳ್ಳ ಬೖಹತ್ ಹೋಡಿ೯ಂಗ್ ನ್ನು ಅನಾವರಣಗೊಳಿಸಲಾಯಿತು. ಕೂಗ್೯ ಹೋಟೇಲ್, ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ, ಪ್ರಧಾನ ಕಾಯ೯ದಶಿ೯ ನಾಸೀರ್, ನಗರಸಭೆಯ ಪೌರಾಯುಕ್ತ ರಮೇಶ್ ಹಾಜರಿದ್ದರು. ಇಂಥ ಮಾಹಿತಿ ಫಲಕಗಳನ್ನು ಪ್ರವಾಸಿಗರ ಅನುಕೂಲತೆಗಾಗಿ ಜಿಲ್ಲೆಯ 12 ಪ್ರಮುಖ ಪ್ರವಾಸಿ ತಾಣಗಳಲ್ಲಿ ಅಳವಡಿಸಲಾಗುತ್ತಿದ್ದು, ಆಯಾ ಪ್ರವಾಸಿ ತಾಣದಿಂದ ಬೇರೆ ಕಡೆಗಳಲ್ಲಿನ ಪ್ರವಾಸಿ ತಾಣಕ್ಕೆ ಎಷ್ಟು ದೂರವಾಗಲಿದೆ. ಆ ಪ್ರವಾಸಿ ತಾಣದ ವಿಶೇಷ ಏನೆಂಬ ಮಾಹಿತಿ ಈ ಹೋಡಿ೯ಂಗ್ ನಲ್ಲಿರಲಿದೆ ಎಂದು ದಿನೇಶ್ ಕಾಯ೯ಪ್ಪ ಮಾಹಿತಿ ನೀಡಿದರು.…






