ಮಡಿಕೇರಿ ಮಾ.6 NEWS DESK : ಮಡಿಕೇರಿ ನಗರ ಠಾಣೆಯಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮ ನಡೆಯಿತು. ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಠಾಣೆಯ ಬಗ್ಗೆ, ಪೊಲೀಸ್ ಸೇವೆಗಳ ಬಗ್ಗೆ, ಮಕ್ಕಳ ಕಾನೂನು, ರಸ್ತೆ ಸುರಕ್ಷತೆ, ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮಗಳ ಕುರಿತು ಠಾಣಾಧಿಕಾರಿಗಳು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.
ಲೇಖಕ: admin
ಮಡಿಕೇರಿ ಮಾ.6 NEWS DESK : ನಾಪೋಕ್ಲು ಹಾಗೂ ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಸಂಬಂಧಿಸಿದ ನರಿಯಂದಡ ಗ್ರಾಮ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ನಾಪೋಕ್ಲು ಮತ್ತು ವಿರಾಜಪೇಟೆ ಗ್ರಾಮಾಂತರ ಠಾಣೆಯ ಅಧಿಕಾರಿಗಳು ಭಾಗವಹಿಸಿ, ಗ್ರಾಮಸ್ಥರಿಗೆ ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ, ಅಪ್ರಾಪ್ತರಿಂದ ವಾಹನ ಚಾಲನೆ, ಸೈಬರ್ ಅಪರಾಧಗಳು ಸೇರಿದಂತೆ ಇತರ ವಿಷಯಗಳ ಬಗ್ಗೆ ಕಾನೂನು ಅರಿವು ಮೂಡಿಸಿದರು.
ಮಡಿಕೇರಿ ಮಾ.6 NEWS DESK : ಕೊಡಗು ವಿಶ್ವ ವಿದ್ಯಾನಿಲಯವನ್ನು ರದ್ದುಗೊಳಿಸಬಾರದು, ಸಿ ಮತ್ತು ಡಿ ಭೂಮಿಯ ಗೊಂದಲ ನಿವಾರಿಸಬೇಕು, ಪರಿಶಿಷ್ಟರ ಅನುದಾನವನ್ನು ಉಚಿತ ಭಾಗ್ಯಗಳಿಗೆ ಬಳಸಬಾರದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದೆ. ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಧರಣಿ ಸತ್ಯಾಗ್ರಹ ಆರಂಭಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಮೂರು ಪ್ರಮುಖ ಬೇಡಿಕೆಗಳು ಸೇರಿದಂತೆ ಕೊಡಗಿನ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ತನ್ನ ಬಜೆಟ್ ಅಧಿವೇಶನದಲ್ಲೇ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕೊಡಗು ವಿವಿ ಎನ್ನುವುದು ಒಂದೆರಡು ದಿನಗಳಲ್ಲಿ ದೊರಕಿದ್ದಲ್ಲ. ಕಳೆದ ಎರಡು ದಶಕಗಳ ನಿರಂತರ ಪ್ರಯತ್ನಗಳಿಂದ, ಜಿಲ್ಲೆಯ ಬಡ ಮಕ್ಕಳ ಉನ್ನತ ವ್ಯಾಸಂಗದ ಕನಸನ್ನು ನನಸುಗೊಳಿಸುವ ನಿಟ್ಟಿನಲ್ಲಿ ದೊರೆತ ಫಲವೇ ಆಗಿದೆ. ಯಾವುದೇ ಕಾರಣಕ್ಕೂ ಕೊಡಗು ವಿವಿಯನ್ನು ರದ್ದುಗೊಳಿಸಲು ಬಿಡುವುದಿಲ್ಲ ಎಂದರು. ಅಧಿವೇಶನದಲ್ಲಿ ಸರ್ಕಾರ ಕೊಡಗಿನ…
ನಾಪೋಕ್ಲು ಮಾ.6 NEWS DESK : ನಾಲ್‍ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಮಾ.24 ರಿಂದ ಹಾಕಿ ತರಬೇತಿ ಶಿಬಿರ ನಡೆಯಲಿದೆ. ಬಲ್ಲಮಾವಟಿ ನೇತಾಜಿ ವಿದ್ಯಾ ಸಂಸ್ಥೆ ಆಟದ ಮೈದಾನದಲ್ಲಿ ನಡೆಯಲಿರುವ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಿಬಿರದ ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಿ ಕೊಳ್ಳಲು ಕರವಂಡ ಸುರೇಶ್-9480251850, ಚಂಗೇಟಿರ ಸೋಮಣ್ಣ-9901629090 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಮಾ.6 NEWS DESK : ಕೊಡವ ಸಮಾಜದ ಕ್ರೀಡೆ, ಸಾಂಸ್ಕೃತಿಕ ಮತ್ತು ಮನರಂಜನಾ (ಕ್ಲಬ್) ಕೂಟದ ವತಿಯಿಂದ ಮೂರನೇ ವರ್ಷದ ಕೊಡವ ಬ್ಯಾಡ್ಮಿಂಟನ್ ಮತ್ತು ಸ್ನೂಕರ್ ಟೂರ್ನಮೆಂಟ್ ಮಾ.15 ಮತ್ತು 16ರಂದು ಸಮಾಜದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು (ಕ್ಲಬ್) ಕೂಟದ ಅಧ್ಯಕ್ಷ ಬಿದ್ದಾಟಂಡ ಎಸ್.ತಮ್ಮಯ್ಯ ತಿಳಿಸಿದರು. ನಾಪೋಕ್ಲು ಕೊಡವ ಸಮಾಜದ (ಕ್ಲಬ್) ಕೂಟದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಕೊಡವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನೂರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ. ಕ್ಲಬ್ ವತಿಯಿಂದ ನಡೆಯುವ ಮೂರನೇ ವರ್ಷದ ಟೂರ್ನಮೆಂಟ್ ಇದಾಗಿದ್ದು, ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪುರುಷರ ಡಬಲ್ಸ್ 20 ವರ್ಷ ಒಳಗಿನವರಿಗೆ, 20-35 ವಯೋಮಿತಿ, 35-50 ವರ್ಷ ವಯೋಮಿತಿ ಹಾಗೂ 50 ವರ್ಷ ಮೇಲ್ಪಟ್ಟು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಮುಕ್ತ ಮಿಕ್ಸ್ ಡ್ ಡಬಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯು ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಗುವುದು ಎಂದ ಅವರು…
ನಾಪೋಕ್ಲು ಮಾ.6 NEWS DESK : ಪೇರೂರು ದವಸ ಭಂಡಾರದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮೂವೇರ ಪೆಮ್ಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬೊಟ್ಟೋಳಂಡ ಕರುಂಬಯ್ಯ, ನಿರ್ದೇಶಕರುಗಳಾಗಿ ಬೊಟ್ಟೋಳಂಡ ಮಿಟ್ಟು ಪೂಣಚ್ಚ, ತೋಲಂಡ ಕಾವೇರಪ್ಪ, ಬೊಟ್ಟೋಳಂಡ ಕುಶಾಲಪ್ಪ, ಮಚ್ಚುರ ಬಿದ್ದಯ್ಯ, ಪಾಲೇಯಡ ದೇವಯ್ಯ, ಆನೇಡ ಚಿಣ್ಣಪ್ಪ, ತೆಕ್ಕಡ ಭೀಮಯ್ಯ, ಬೊಟ್ಟೋಳಂಡ ರೇಷ್ಮ, ಪಾಲೆಯಡ ಪೂವಮ್ಮ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯನ್ನು ಸಹಕಾರ ಸಂಘಗಳ ಸಹ ನಿಬಂಧಕರಾದ ಸಂದಿಪ್ ಮತ್ತು ಪೇರೂರು ದವಸಭಂಡಾರದ ಕಾರ್ಯದರ್ಶಿ ಅಪ್ಪಚ್ಚೀರ ಬೋಪಯ್ಯ ಕಾರ್ಯ ನಿರ್ವಹಿಸಿದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಮಾ.6 NEWS DESK : ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು-ಕೀಯಲ್ ಕೇರೀ-ಮೂವೇರ-ತೆಕ್ಕೆಡ ಹಾಗೂ ಮೇದರ ಮನೆಗಳಿಗೆ ತೆರಳುವ ರಸ್ತೆಯ ಅಭಿವೃದ್ಧಿ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ಅನುದಾನದಲ್ಲಿ ಕೈಗೊಳ್ಳಲಾಯಿತು. ಹಲವಾರು ವರ್ಷಗಳಿಂದ ಯಾವುದೇ ಪ್ರಮುಖ ಅಭಿವೃದ್ಧಿ ಕಾಮಗಾರಿ ಕಾಣದೆ ತೀರಾ ಕುಗ್ರಾಮವಾಗಿದ್ದ ಪೇರೊರು-ಕೀಯಲ್ ಕೇರಿಗೆ ರಸ್ತೆ ಕಾಮಗಾರಿ ಕೈಗೊಂಡಿದ್ದಕ್ಕೆ, ಈ ಭಾಗದ ಸ್ಥಳೀಯ ನಾಗರೀಕರು ಶಾಸಕರಿಗೆ ಧನ್ಯವಾದ ಸಲ್ಲಿಸಿದರು.
ಮಡಿಕೇರಿ ಮಾ.6 NEWS DESK : ಕಾಟಕೇರಿಯ ಎಸ್ಟೇಟ್ ನ ಪೈಪ್‍ಲೈನ್ ಒಳಗಡೆ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪಿಯೂಸ್ ಪೆರೇರಾ ರಕ್ಷಿಸಿ ಅರಣ್ಯ ಇಲಾಖೆಗೆಯ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟರು. ಹಾವುಗಳು ಕಂಡರೆ ಕೊಲ್ಲದೆ ಉರಗ ತಜ್ಞರಿಗೆ ಮಾಹಿತಿಯನ್ನು ನೀಡಿ ಸುರಕ್ಷಿತವಾಗಿ ಅರಣ್ಯ ಬಿಡುವಂತೆ ಕರೆ ನೀಡಿದರು. ಹಾವುಗಳು ಕಂಡುಬಂದರೆ +919481952253 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದರು.
ಮಡಿಕೇರಿ NEWS DESK ಮಾ.5 : ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಬಂಧಿತ ಆರೋಪಿಯಾಗಿರುವ ವ್ಯಕ್ತಿಗೆ ಟೂತ್ ಪೇಸ್ಟ್ ಟ್ಯೂಬ್ ನಲ್ಲಿ ಮಾದಕ ವಸ್ತು ನೀಡಲೆಂದು ತಂದಿದ್ದ ಆರೋಪಿಯನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ನಿವಾಸಿ ಸುರಭಿಲ್ (26) ಎಂಬಾತ ಬಂಧಿತ ಆರೋಪಿಯಾಗಿದ್ದು, ಟೂತ್ ಪೇಸ್ಟ್ ಟ್ಯೂಬ್ ಸಹಿತ 24 ಗ್ರಾಂ ಹ್ಯಾಶಿಶ್ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣಾಧೀನ ಬಂಧಿತ ಆರೋಪಿ ಸನಮ್ ಎಂಬಾತನ ಸಹೋದರನೆಂದು ಹೇಳಿಕೊಂಡು ಸಂದರ್ಶನಕ್ಕಾಗಿ ಸುರಭಿಲ್ ಕಾರಾಗೃಹಕ್ಕೆ ಬಂದು ದಿನ ನಿತ್ಯದ ಸಾಮಾಗ್ರಿಗಳಾದ ಟೂತ್ ಪೇಸ್ಟ್, ಟೂತ್ ಬ್ರಶ್, ಸೋಪ್, ಬಟ್ಟೆ ಸೋಪ್ ಮತ್ತು ಶ್ಯಾಂಪ್ ನ್ನು ನೀಡಲು ಮುಂದಾಗುತ್ತಾನೆ. ಜಿಲ್ಲಾ ಕಾರಾಗೃಹ ಅಧೀಕ್ಷಕ ಸಂಜಯ್ ಜತ್ತಿ ಅವರು ವಸ್ತುಗಳನ್ನು ಪರಿಶೀಲಿಸುವ ಸಂದರ್ಭ ಟೂತ್ ಪೇಸ್ಟ್ ಟ್ಯೂಬ್‌ನ ಒಳಗೆ ಪೇಸ್ಟ್ನ ಬದಲಿಗೆ ಕಪ್ಪು ಬಣ್ಣದ ಅಮಲು ಪದಾರ್ಥವನ್ನು ತುಂಬಿ ತಂದಿರುವುದು ಕಂಡುಬAದಿದೆ. ಇದು ನಿಷೇಧಿತ ಹ್ಯಾಶಿಶ್…
ಮಡಿಕೇರಿ ಮಾ.5 NEWS DESK : 2023-24 ನೇ ಸಾಲಿನ ಗಾಂಧಿ ಗ್ರಾಮ ರಾಜ್ಯ ಪುರಸ್ಕಾರಕ್ಕೆ ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆಯ 5 ಗ್ರಾ.ಪಂ ಗಳು ಆಯ್ಕೆಯಾಗಿವೆ. ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾ.ಪಂ, ಸೋಮವಾರಪೇಟೆ ತಾಲ್ಲೂಕಿನ ದುಂಡಳ್ಳಿ, ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ, ಪೊನ್ನಂಪೇಟೆ ತಾಲ್ಲೂಕಿನ ಮಾಯಮುಡಿ ಹಾಗೂ ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾ.ಪಂ ಗಳು ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಗಾಂಧಿ ಗ್ರಾಮ ಪುರಸ್ಕಾರವನ್ನು ಪಡೆದುಕೊಳ್ಳಲಿವೆ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಪ್ರತಿ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ ರೂ.5 ಲಕ್ಷಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕುರಿತು ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ, ದುಂಡಳ್ಳಿ ಗ್ರಾ.ಪಂ ಅಧ್ಯಕ್ಷೆ ಸತ್ಯಾವತಿ, ಹಾಲುಗುಂದ ಗ್ರಾ.ಪಂ ಅಧ್ಯಕ್ಷ ಕುಶ ಅಯ್ಯಪ್ಪ, ಮಾಯಮುಡಿ ಗ್ರಾ.ಪಂ…






