ಮಡಿಕೇರಿ ಮೇ 30 : ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಸೇರಿದಂತೆ ವಿವಿಧ ಖಾಸಗಿ ಶಾಲೆಗಳು ಪ್ರಾರಂಭಗೊಂಡಿದ್ದು ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿವಾಗಿ ಬರಮಾಡಿಕೊಂಡರು.
ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ, ಶಾಂತಿಭವನ, ಕೊಡಗರಹಳ್ಳಿ ಶಾಂತಿನಿಕೇತನ ವಿದ್ಯಾಸಂಸ್ಥೆಗಳಲ್ಲಿ ತರಗತಿಗಳು ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಬಹು ಉತ್ಸುಕತೆ ಮತ್ತು ಸಂತೋಷದಿಂದಲೇ ಹೆಜ್ಜೆ ಹಾಕಿದರು.
ಶಾಲೆಯ ಮುಂಭಾಗ ಮತ್ತು ಆವರಣವನ್ನು ಬಾಳೆಕಂಬ, ತಳೀರು ತೋರಣ, ಹೂವುಗಳಿಂದ ಅಲಂಕರಿಸಲಾಗಿತ್ತು.
ಶಾಲೆಯ ಎಲ್ಲ ಶಿಕ್ಷಕರು ಶಾಲಾ ಮಹಾದ್ವಾರ ಅಕ್ಕಪಕ್ಕದಲ್ಲಿ ನಿಂತು ಚಪ್ಪಾಳೆ ತಟ್ಟೆ, ಹೂವು, ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಮುಖ್ಯ ದ್ವಾರದಿಂದ ತಮ್ಮ ಮಕ್ಕಳನ್ನು ವಾದ್ಯದೊಂದಿಗೆ ಕರೆ ತರಲಾಯಿತು.
ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಫಾ.ಅರುಳ್ ಸೆಲ್ವಕುಮಾರ್, ಮುಖ್ಯ ಶಿಕ್ಷಕ ಸೆಲ್ವರಾಜ್, ಶಿಕ್ಷಕರು ಇದ್ದರು.
ಸಮೀಪದ ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯಲ್ಲೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಪ್ರೀತಿಯಿಂದ ಸ್ವಾಗತಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಪಾತಿಮಾ, ಶಿಕ್ಷಕರು, ಆಡಳಿತ ಮಂಡಳಿ ಪದಾಧಿಕಾರಿಗಳು ಇದ್ದರು.
ಶಿಕ್ಷಕರಿಂದ ಸ್ವಚ್ಛತಾ ಕಾರ್ಯ ; ಸರ್ಕಾರಿ ಶಾಲೆಗಳು ಪ್ರಾರಂಭಗೊಳ್ಳುವುದರಿಂದ ಮಕ್ಕಳ ಸ್ವಾಗತಕ್ಕಾಗಿ ಶಿಕ್ಷಕರು ಸ್ವಚ್ಛತಾ ಕಾರ್ಯ ತೊಡಗಿಸಿಕೊಂಡಿದ್ದಾರೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವತಃ ಮುಖ್ಯ ಶಿಕ್ಷಕರು, ಶಿಕ್ಷಕರು ಶಾಲಾ ಕೊಠಡಿ, ಆವರಣವನ್ನು ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದರು. ಎಲ್ಲ ಶಿಕ್ಷಕರು ಶಾಲಾ ಕೊಠಡಿ, ಆವರಣಗಳನ್ನು ಗುಡಿಸಿ, ನೀರು ಹಾಕಿ ಶುಚಿ ಗೊಳಿಸಿ ತಳಿರು ತೋರಣ, ರಂಗೋಲಿ, ಬಾಳೆಕಂಬ ನೆಟ್ಟು ವಿದ್ಯಾರ್ಥಿಗಳ ಸ್ವಾಗತಿಸಲು ಸನ್ನದರಾಗಿ ಕಾಯುತ್ತಿದ್ದಾರೆ.
ಗದ್ದೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆ, ಮತ್ತಿಕಾಡು, ಕಂಬಿಬಾಣೆ, ಕೊಡಗರಹಳ್ಳಿ, ಏಳನೇ ಹೊಸಕೋಟೆ ಸೇರಿದಂತೆ ವಿದ್ಯಾರ್ಥಿಗಳ ಸ್ಚಾಗತಕ್ಕೆ ಸನ್ನದ್ಧರಾಗಿದ್ದಾರೆ.