ಕುಶಾಲನಗರ ಜು.3 : ಕುಶಾಲನಗರ ಶ್ರೀ ಶಿರಡಿ ಸಾಯಿ ದೇವಾಲಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಮುಂಜಾನೆಯಿಂದಲೇ ಕಾಕಡ ಆರತಿ, ನಂತರ ಗಣಪತಿ ಹೋಮ, ಸಾಯಿ ಹೋಮ, ದೇವರಿಗೆ ಪಂಚಾಮೃತ ಅಭಿಷೇಕ ನಂತರ ಭಕ್ತಾದಿಗಳಿಂದ ಹಾಲಿನ ಅಭಿಷೇಕ ನಡೆಯಿತು.
ನಂತರ ಸಾಮೂಹಿಕ ಸತ್ಯನಾರಾಯಣ ಪೂಜೆ ಮಹಾಮಂಗಳಾರತಿ ಹಾಗೂ ಅನ್ನ ಪ್ರಸಾದ ವಿನಿಯೋಗ ನಡೆಯಿತು.
ರಾಘವೇಂದ್ರ ಭಟ್, ನವೀನ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಶ್ರೀ ಶಿರಡಿ ಸಾಯಿ ಟ್ರಸ್ಟ್ ಅಧ್ಯಕ್ಷರಾದ ಧರೇಶ್ ಬಾಬು ಮತ್ತು ನಿರ್ದೇಶಕರುಗಳು ಇದ್ದರು.








