ಮಡಿಕೇರಿ ಜು.14 : ಕುಶಾಲನಗರದ ರಥಬೀದಿಯಲ್ಲಿರುವ ಎರಡು ಚಿನ್ನಾಭರಣ ಮಳಿಗೆಯಲ್ಲಿ ನಕಲಿ ಚಿನ್ನವನ್ನಿಟ್ಟು ಅಸಲಿ ಚಿನ್ನವನ್ನು ಕಳ್ಳತನ ಮಾಡಿರುವ ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ವಂಚಕರ ಬಳಿಯಿಂದ 75 ಗ್ರಾಂ ತೂಕದ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ.
ಚಿತ್ರದುರ್ಗದ ಪಾಮರಹಳ್ಳಿ ಗ್ರಾಮದ ನಿವಾಸಿಗಳಾದ ಆನ್ನೆಯಮ್ಮ (36), ಕೈರುನ್ (46) ಹಾಗೂ ಜೈರಾಭಿ (36) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಕಳವು ಮಾಲಿನ ವಿವರ : 1. 12,80 ಗ್ರಾಂ ತೂಕದ ಚಿನ್ನದ ಜುಮಕಿ ಓಲೆ
2, 480 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿ ಓಲೆ
3, 4,74 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿ ಓಲೆ
ಒಟ್ಟು ಎರಡೂ ಪ್ರಕರಣಗಳಿಂದ ಸುಮಾರು 75 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸದರಿ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಂದರರಾಜು ಕೆ.ಎಸ್ ರವರ ನಿರ್ದೇಶನದಂತೆ ಸೋಮವಾರಪೇಟೆ: ಉಪ-ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಆರ್.ಎ, ಗಂಗಾಧರಪ್ಪರವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಮಹೇಶ್ ಬಿ.ಜೆ. ನೇತೃತ್ವದಲ್ಲಿ, ಪಿಎಸ್‌ಐ ರವೀಂದ್ರ, ಪಿಎಸ್‌ಐ ಭಾರತಿ, ಎಎಸ್‌ಐ ಶ್ರೀ ವೆಂಕಟೇಶ್, ಎಎಸ್ ಐ ಶ್ರೀ ವೆಂಕಟೇಶ್, ಸಿಬ್ಬಂದಿಯವರಾದ ಆಶಾ, ಸುದಿಶ್ ಕುಮಾರ್ ಕೆ.ಎಸ್.. ರಂಜಿತ್ ಸಿಡಿಆರ್ ಘಟಕದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್, ಪ್ರವೀಣ್‌ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಪ್ರಕರಣವನ್ನು ಪತ್ತೆಹಚ್ಚಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಅವರು ನಗದು ಬಹುಮಾನವನ್ನು ಘೋಷಿಸಿದ್ದಾರೆ.