ಮಡಿಕೇರಿ ಅ.2 : ಬಾಳೆಲೆ ಗ್ರಾಮ ಪಂಚಾಯಿತಿ, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಮತ್ತು ಶಾಲಾ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬಾಳೆಲೆ ಮುಖ್ಯ ರಸ್ತೆ, ಪದವಿಪೂರ್ವ ಕಾಲೇಜಿನ ಸುತ್ತಮುತ್ತ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಗ್ರಾ.ಪಂ ಪ್ರತಿನಿಧಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಏಕಕಾಲಕ್ಕೆ ಸ್ವಚ್ಛತಾ ಕಾರ್ಯ ಕೈಗೊಂಡರು. ಪಂಚಾಯತಿ ಅಧ್ಯಕ್ಷೆ ಮುಕ್ಕಾಟಿರ ಜಾನಕಿ ಕಾವೇರಪ್ಪ, ಮಾಜಿ ಅಧ್ಯಕ್ಷ ಪೊಡಮಾಡ ಸುಕೇಶ್ ಭೀಮಯ್ಯ, ಸದಸ್ಯರಾದ ಅದೇಂಗಡ ವಿನು ಉತ್ತಪ್ಪ, ಕಾಲೇಜು ಪ್ರಾಂಶುಪಾಲ ಎನ್.ಕೆ ಪ್ರಭು, ಪ್ರೌಢಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ್, ಪ್ರಮುಖರಾದ ಅಡ್ಡೇಂಗಡ ಅರುಣ್, ಸಜನ್, ರಾಖಿ, ಅಜಯ್, ಕಾವೇರಮ್ಮ, ಶೌರ್ಯ, ಪಡಿಞರಂಡ ಪ್ರಭು ಕುಮಾರ್, ಲಕ್ಷ್ಮಿ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಜಾತಾ ವಿಜಯನಾಥನ್ ಹಾಗೂ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.











