ಬೆಂಗಳೂರು ನ.29 : ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಗಳಿಸಿದ “ಕಾಂತಾರ” ಚಿತ್ರಕ್ಕೆ ಗೋವಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (54ನೇ ಇಂಟರ್ ನ್ಯಾಷನಲ್ ಫಿಲ್ಮ ಫೆಸ್ಟಿವಲ್ ಆಫ್ ಇಂಡಿಯಾ) ತೀರ್ಪುಗಾರರ ವಿಶೇಷ ಪ್ರಶಸ್ತಿ “ಸಿಲ್ವರ್ ಪೀಕಾಕ್” (ಸ್ಪೆಷಲ್ ಜ್ಯೂರಿ ಅವಾರ್ಡ್) ಲಭಿಸಿದೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ “ಕಾಂತಾರ” ಪಾತ್ರವಾಗಿದೆ.
ಅದ್ಭುತ ನಟನೆ ಮತ್ತು ಕತೆ ಹೇಳಿರುವ ರೀತಿಗೆ ರಿಷಬ್ ಶೆಟ್ಟಿ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ನೀಡಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಟ್ವೀಟ್ ಮಾಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಹರ್ಷ ಹಂಚಿಕೊಂಡಿರುವ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಸ್ಪೆಷಲ್ ಜ್ಯೂರಿ ಅವಾರ್ಡ್ ನ್ನು ರಂಗಭೂಮಿ ಮತ್ತು ಚಿತ್ರರಂಗದ ಸ್ಫೂರ್ತಿಯ ಚಿಲುಮೆ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ಅವರಿಗೆ ಅರ್ಪಿಸುವುದಾಗಿ ತಿಳಿಸಿದ್ದಾರೆ.











