ಮಡಿಕೇರಿ ಸೆ.9 NEWS DESK : ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ಹಾಲು ಡೈರಿಯಿಂದ ಮದರ್ ಡೈರಿಗೆ ಸಾಗಿಸುವ ಕಾಲಾವಧಿ ಹೆಚ್ಚಾಗಿದ್ದು, ಇದರಿಂದ ಹಾಲು ಕೆಡುವ ಸಾಧ್ಯತೆಗಳು ಹೆಚ್ಚು ಆದ್ದರಿಂದ ಸಂಘದ ವತಿಯಿಂದ ಜಾಗದ ವ್ಯವಸ್ಥೆ ಮಾಡಿದರೆ, ಮಿನಿ ಹಾಲು ಶೀತಲೀಕರಣಕ್ಕೆ ವೆಚ್ಚ ಭರಿಸುವುದಾಗಿ ಹಾಲು ಒಕ್ಕೂಟದ ಕೂಡಿಗೆ ವೃತ್ತದ ವಿಸ್ತರಣಾಧಿಕಾರಿ ಬಿ.ವಿ.ವೀಣಾ ಹೇಳಿದರು. ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ 2023 -24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಬಿ.ಎಂ.ಸಾಗರ್, ಸಂಘದ ಸದಸ್ಯರ ಅಹವಾಲು ಆಲಿಸಿ ಸೂಕ್ತ ಪರಿಹಾರ ಸೂಚಿಸಿದರು. ಸಭೆಯಲ್ಲಿ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಹೇಮಂತ್ ಕುಮಾರ್, ಗುಡ್ಡೆಹೊಸೂರು ಹಾಲು ಒಕ್ಕೂಟದ ಉಪಾಧ್ಯಕ್ಷ ಎನ್.ಪಿ.ಸುಲೋಚನ, ನಿರ್ದೇಶಕರುಗಳಾದ ಯತೀಶ್ ಮೋಹನ ಕುಮಾರ್, ಪಳಂಗಪ್ಪ, ಗುರುಪ್ರಸಾದ್, ಕಾಶಿ, ಶುಭಶೇಖರ, ಅಭಿಷೇಕ್, ಕಮಲ, ಕಮಲಾಕ್ಷಿ, ಬಸಮ್ಮ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ನವೀನ್ ನಿರೂಪಿಸಿದರು. ನಿರ್ದೇಶಕ ಧನ್ ಪಾಲ್ ವಂದಿಸಿದರು. ಸನ್ಮಾನ :: ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಸಂಘದ ಸದಸ್ಯರು ಹಾಗೂ ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.