ಮಡಿಕೇರಿ ಸೆ.10 NEWS DESK : ಕೊಡಗಿನಲ್ಲಿ 16ಕ್ಕೂ ಹೆಚ್ಚು ಗ್ಲಾಸ್ ಬ್ರಿಡ್ಜ್‍ಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಗಾಜಿನ ಸೇತುವೆಗಳು ನಿರ್ಮಾಣಗೊಂಡರೆ ಕೊಡವ ಲ್ಯಾಂಡ್ ನರಕವಾಗಲಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಕೊಡಗು ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಸಿಎನ್‍ಸಿ ವತಿಯಿಂದ ಚೇರಂಬಾಣೆಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು. ಅತ್ಯಂತ ಸೂಕ್ಷ್ಮ ಪರಿಸರ ವಲಯವನ್ನು ಹೊಂದಿರುವ ಕೊಡಗಿನಲ್ಲಿ ಗ್ಲಾಸ್ ಬ್ರಿಡ್ಜ್ ಗಳ ನಿರ್ಮಾಣದಿಂದ ಜನದಟ್ಟಣೆ ಅಧಿಕವಾಗುತ್ತದೆ. ಇದನ್ನು ತಡೆದುಕೊಳ್ಳುವ ಶಕ್ತಿ ಕೊಡವ ಲ್ಯಾಂಡ್ ಗೆ ಇಲ್ಲದಾಗಿದೆ. ಈ ಯೋಜನೆ ಪರಿಸರದ ಮೇಲೆ ತೀವ್ರ ದುಷ್ಪರಿಣಾಮವನ್ನುಂಟು ಮಾಡಲಿದೆ ಎಂದರು. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ರೆಸಾರ್ಟ್, ವಿಲ್ಲಾ, ಟೌನ್ ಶಿಪ್‍ಗಳ ನಿರ್ಮಾಣಕ್ಕಾಗಿ ಬೆಟ್ಟಗುಡ್ಡಗಳ ನಾಶ, ಮರಗಳ ಹನನವಾಗುತ್ತಿದೆ. ಪ್ರಾಕೃತಿಕ ವಿಕೋಪಕ್ಕೆ ಕಾರಣವಾಗಬಲ್ಲ ಈ ಅಂಶಗಳನ್ನು ಮುಚ್ಚಿ ಹಾಕುತ್ತಿರುವ ಸರ್ಕಾರ ಬಂಡವಾಳಶಾಹಿಗಳ ಪರವಾದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. ಕೊಡವರ ಪೂರ್ವಾರ್ಜಿತ ಭೂಮಿಯಾಗಿದ್ದ ಕಡಮಕ್ಕಲ್ಲಿನಿಂದ ಪೆರುಂಬಾಡಿ ವರಗಿನ ಕೆಲವು ಪ್ರದೇಶವನ್ನು ಕೇರಳದ ವ್ಯಕ್ತಿಗಳಿಗೆ 1930ರಲ್ಲಿ ಭೋಗ್ಯಕ್ಕೆ ನೀಡಲಾಗಿದೆ. ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣದ ಕಾಡುಗಳನ್ನು ನಾಶ ಮಾಡುವ ದಂಧೆ ಇಂದಿಗೂ ಎಗ್ಗಿಲ್ಲದೆ ಮುಂದುವರೆದಿದೆ. ಸರ್ಕಾರದೊಂದಿಗೆ ನಂಟು ಹೊಂದಿರುವ ಕೊಟ್ಟಾಯಂನ ಬೃಹತ್ ಟಿಂಬರ್ ಉದ್ಯಮಪತಿಗಳು ಇಡೀ ಕೊಡಗನ್ನು ನಿಯಂತ್ರಿಸುತ್ತಿದ್ದಾರೆ. ಇವರಿಗೆ ಯಾವ ಕಾನೂನು ಕೂಡ ಅನ್ವಯವಾಗುತ್ತಿಲ್ಲ. ಆದರೆ ಕೊಡವರು ಗೃಹ ಉಪಯೋಗಕ್ಕೆ ತಾವು ನೆಟ್ಟು ಬೆಳೆಸಿದ ಸಿಲ್ವರ್ ಮರವನ್ನು ಕಡಿದರೆ ಅದನ್ನೇ ಬೊಟ್ಟು ಮಾಡಿ ಸರ್ಕಾರ ಕಿರುಕುಳ ನೀಡುತ್ತಿದೆ ಮತ್ತು ನಮ್ಮನ್ನು ಖಳನಾಯಕರಂತೆ ನೋಡುತ್ತಿದೆ. ದೊಡ್ಡ ದೊಡ್ಡ ರೆಸಾರ್ಟ್‍ಗಳ ನಿರ್ಮಾಣಕ್ಕೆ ಪರ್ವತವನ್ನು ಬಗೆದು ವಯನಾಡಿನ ರೀತಿಯಲ್ಲಿ ಭೂಕುಸಿತಕ್ಕೆ ಆಹ್ವಾನ ನೀಡುವ ಪ್ರಕೃತಿಯ ಮೇಲಿನ ದಾಳಿಯನ್ನು ತಡೆಯುವ ಬದಲು ಸರ್ಕಾರ ಬಂಡವಾಳಶಾಹಿಗಳಿಗೆ ಬೆಂಬಲವಾಗಿ ನಿಂತಿದೆ. ಇತ್ತೀಚೆಗೆ ಅರಣ್ಯ ಮಂತ್ರಿಗಳು ಹೊರಡಿಸಿರುವ ಸುತ್ತೋಲೆಯಲ್ಲಿ ಕೊಡಗಿನ ಪ್ರಕೃತಿಗೆ ಮಾರಕವಾಗಿರುವ ರೆಸಾರ್ಟ್ ಹಾಗೂ ಭೂಮಿಯನ್ನು ಭೋಗ್ಯಕ್ಕೆ ಪಡೆದ ಕಂಪೆನಿಗಳು ನಿರಂತರ ನಡೆಸುತ್ತಿರುವ ಮರಹನನದ ಬಗ್ಗೆ ಪ್ರಸ್ತಾಪಿಸಿಲ್ಲ. ಕೊಡಗಿನ ಪ್ರಾಕೃತಿಕ ವಿಕೋಪ, ಭೂಸ್ಫೋಟ ಮತ್ತು ಜಲಪ್ರಳಯದ ಅಂಶಗಳನ್ನು ಉಲ್ಲೇಖಿಸಿಲ್ಲ ಎಂದು ಎನ್.ಯು.ನಾಚಪ್ಪ ಆರೋಪಿಸಿದರು. ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‍ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
::: ಸೆ.16 ರಂದು ಹುದಿಕೇರಿಯಲ್ಲಿ ಜನಜಾಗೃತಿ :::
ಸಿಎನ್‍ಸಿ ವತಿಯಿಂದ ಸೆ.16 ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ಮಾಹಿತಿ ನೀಡಿದರು. ಚೇರಂಬಾಣೆಯಲ್ಲಿ ನಡೆದ ಜನಜಾಗೃತಿ ಮನವ ಸರಪಳಿಯಲ್ಲಿ ಕಲ್ಮಾಡಂಡ ದಮಯಂತಿ, ಕಲ್ಮಾಡಂಡ ರೀಟ, ಮಂದಪಂಡ ರಮ್ಯಾ, ಕಲ್ಮಾಡಂಡ ಕವಿತಾ, ಕೇಕಡ ಗಂಗೆ ಅಪ್ಪಣ್ಣ, ಪಟ್ಟಮಾಡ ಸೀತಮ್ಮ, ತೇಲಪಂಡ ಶೈಲ, ಅಳಮಂಡ ಜೈ, ಅಜ್ಜಿನಂಡ ಪಾಪಣ್ಣ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಚೀಯಬೇರ ಸೋಮಣ್ಣ, ಬೊಳ್ಳಾರ್ಪಂಡ ಪೂವಯ್ಯ, ಕಾಡಂಡ ಅಪ್ಪಸಾಮಿ, ಬೊಳ್ಳಾರ್ಪಂಡ ಸಾಬು, ಬಾಚರಣಿಯಂಡ ಹ್ಯಾರಿ, ಪಟ್ಟಮಾಡ ಮುತ್ತಣ್ಣ, ಮಂದಪಂಡ ಸೂರಜ್, ಕೇಕಡ ತಮ್ಮಯ್ಯ, ಪಟ್ಟಮಾಡ ಅಶೋಕ್, ಮಣೋಟಿರ ಚಂದನ್, ಕೇಕಡ ತಮ್ಮಯ್ಯ, ಮೊಟ್ಟೆಯಂಡ ಪಾರ್ಥ, ನಾಪಂಡ ಗಣೇಶ್, ಕೊಕ್ಕಂಡ ಚಂಗಪ್ಪ, ಬಿಜ್ಜಂಡ ಬೋಪಯ್ಯ, ಕುಂಚೆಟ್ಟಿರ ಗೋಪಾಲ್, ಅಜ್ಜಿನಂಡ ಚೀಯಣ್ಣ, ಬಡ್ಡೀರ ಗಣಪತಿ, ಕೇಕಡ ಸಂಜು, ಬಾಚರಣಿಯಂಡ ಬಸಪ್ಪ, ಅಜ್ಜಿನಂಡ ಕುಟ್ಟಪ್ಪ, ಕೊಟ್ಟುಕತ್ತೀರ ಟಾಟ, ಕೇಕಡ ಸುಬ್ಬಯ್ಯ, ಕೇಕಡ ಕುಟ್ಟಪ್ಪ, ಕೇಕಡ ಪಳಂಗಪ್ಪ, ಬಡ್ಡೀರ ಕೀರ್ತಿ, ಪಟ್ಟಮಾಡ ಪ್ರಕಾಶ್, ಕಲ್ಮಾಡಂಡ ಮೊಣ್ಣಪ್ಪ, ಪಟ್ಟಮಾಡ ಸುರೇಶ್, ಅಯ್ಯಂಡ ಗಣೇಶ್, ಚಡಿಯಂಡ ಲವ, ಐಯಂಡ ಅನು, ಕೊಟ್ಟುಕತ್ತೀರ ಬಾಬಿ, ಕೇಕಡ ವಿಠಲ್, ಪೊನ್ನಚೆಟ್ಟೀರ ಹರೀಶ್, ಬೊಪ್ಪಡ್ತಂಡ ಡಾಲಿ ಹರಿ, ಪರುವಂಡ ಪ್ರದೀಪ್, ಕುಟ್ಟೇಟಿರ ಪ್ರಭು, ಕೇಕಡ ಬೋಪಣ್ಣ, ಕೇಕಡ ಕುಟ್ಟಪ್ಪ, ಕೇಕಡ ಉತ್ತಪ್ಪ, ತೇಲಪಂಡ ರಾಜಾ, ಕೇಕಡ ಕಾಳಪ್ಪ, ಮಂದಪಂಡ ಗಣಪತಿ, ಕುಟ್ಟೇಟಿರ ಕುಂಞಪ್ಪ, ಕುಂಚೆಟ್ಟಿರ ಪೆಮ್ಮಯ್ಯ, ಕುಂಚೆಟ್ಟಿರ ಸೋಮಣ್ಣ, ಬಡ್ಡೀರ ಸಂಪತ್, ಐಯಂಡ ಹರೀಶ್, ಕಲ್ಮಾಡಂಡ ಕಾಳಪ್ಪ, ಕುಂಚೆಟ್ಟಿರ ರಮೇಶ್, ಇಂದಂಡ ವಾಸು, ತೇಲಪಂಡ ಕಿರಣ್, ಕಬ್ಬಚ್ಚಿರ ಶೇರಿ, ಪೊನ್ನಚೆಟ್ಟೀರ ಪೊನ್ನಪ್ಪ, ಕೇಕಡ ಸುಬ್ರಮಣಿ, ಕೇಕಡ ಮೊಣ್ಣಪ್ಪ, ಬಾಚರಣಿಯಂಡ ಕಾರ್ಯಪ್ಪ, ಕೇಕಡ ಮಂದಣ್ಣ, ಪುಟ್ಟಿಚಂಡ ದೇವಯ್ಯ, ಪಟ್ಟಮಾಡ ಸತೀಶ್, ಪಟ್ಟಮಾಡ ಸುಂದರ್, ಪಟ್ಟಮಾಡ ವಿಜಯ್, ಚೀಯಬೇರ ರಾಬಿನ್, ಕುಂಚೆಟ್ಟಿರ ಪೂವಯ್ಯ, ತೇಲಪಂಡ ಗಣೇಶ್, ಕಲ್ಮಾಡಂಡ ಅಶೋಕ್, ಮಂದಪಂಡ ವೇಣು, ಬೊಳ್ಳಾರ್ಪಂಡ ರಾಜಪ್ಪ, ಮೊಟ್ಟೆಯಂಡ ತಮ್ಮಯ್ಯ, ಕೇಕಡ ಕಿರಣ್, ಮಣೋಟಿರ ಚಿಣ್ಣಪ್ಪ, ಕಲ್ಮಾಡಂಡ ಗಣೇಶ್, ಪಟ್ಟಮಾಡ ಪ್ರಧಾನ್, ಪಟ್ಟಮಾಡ ಹೇಮ್, ತೇಲಪಂಡ ಮಂದಣ್ಣ, ಇದಂಡ ದೇವಯ್ಯ, ಕುಂಚೆಟ್ಟೀರ ಕಾರ್ಯಪ್ಪ, ಪೊಡನೋಳಂಡ ಸೋಮಣ್ಣ, ಮಂದಪಂಡ ನಾಣಯ್ಯ, ಇದಂಡ ಕುಮಾರ್, ಕೇಕಡ ಬೋಪಣ್ಣ, ನಾಪಂಡ ಪ್ರತಾಪ್, ನಾಟೋಳಂಡ ಜೈರಾಜ್, ಮುಕ್ಕಾಟಿರ ವಿಠಲ್, ಚೀಯಬೇರ ರೋಶನ್, ಅಳಮಂಡ ನೆಹರು, ಕಲ್ಮಾಡಂಡ ವಾಸು, ಐಯಂಡ ಅಯ್ಯಪ್ಪ, ಬಡ್ಡೀರ ಪಳಂಗಪ್ಪ, ಅಜ್ಜಿನಂಡ ವಿಶು, ಅಜ್ಜಿನಂಡ ಸುರೇಶ್, ಅಜ್ಜಿನಂಡ ರಘು, ಅಜ್ಜಿನಂಡ ಜಗದೀಶ್, ಬೊಪ್ಪಡ್ತಂಡ ಪೂಣಚ್ಚ, ಮೊಟ್ಟೆಯಂಡ ಮೊಣ್ಣಪ್ಪ, ಕಬ್ಬಚ್ಚೀರ ಉತ್ತಯ್ಯ, ಕಾಡಂಡ ಭೀಮಯ್ಯ, ಬಡ್ಡೀರ ನಂದಾ, ಪಟ್ಟಮಾಡ ಬೊಳ್ಳಿಯಪ್ಪ, ಮೇರಿಯಂಡ ಮೋಹನ್, ಮಂದಪಂಡ ರಂಜಿ, ಬಿಜ್ಜಂಡ ಸೋಮಯ್ಯ, ಬಾಚರಣಿಯಂಡ ಲವ, ಬೋಪಡ್ತಂಡ ಸುಬ್ಬಯ್ಯ, ಚೀಯಬೇರ ಪಾಪಣ್ಣ, ಮೊಟ್ಟೆಯಂಡ ಶಂಬು, ಪೊನ್ನಚೆಟ್ಟೀರ ಮಿತ್ರ, ಪಳಂಗೇಟಿರ ರಾಮು, ಚಡಿಯಂಡ ಡಾಲಿ, ಮಂದಪಂಡ ಅರಸು, ಅಜ್ಜಿನಂಡ ಸಾಬು ಸೇರಿದಂತೆ ಮತ್ತಿತರರು ಪಾಲ್ಗೊಂಡು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡರು.