ಸುಂಟಿಕೊಪ್ಪ ಸೆ.11 NEWS DESK : ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ ಕರ್ನಾಟಕ ಸಂಭ್ರಮ 50ನೇ ಅಭಿಯಾನದ ಅಂಗವಾಗಿ ನಾಡಿನಾದ್ಯಂತ ಸಂಚರಿಸುತ್ತಿರುವ ಕನ್ನಡಾಂಬೆ ಭುವನೇಶ್ವರಿಯ ರಥವನ್ನು ಐಗೂರಿನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಐಗೂರು ಗ್ರಾ.ಪಂ, ಕನ್ನಡ ಸಾಹಿತ್ಯ ಪರಿಷತ್ ಘಟಕ, ಐಗೂರು ಸರಕಾರಿ ಪ್ರೌಢಶಾಲೆ, ಕಾಜೂರು ಪ್ರಾಥಮಿಕ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಕನ್ನಡ ರಥದ ಭುವನೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು. ಶಾಲಾ ವಿದ್ಯಾರ್ಥಿನಿಯರು ಪೂರ್ಣಕುಂಭದೊಂದಿಗೆ ರಥವನ್ನು ಸ್ವಾಗತಿಸಿದರು. ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಜಿತ್ ಕುಮಾರ್, ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ದಿನೇಶ್, ಐಗೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಟಿ.ಎಸ್.ಪೂರ್ಣಕುಮಾರ್ ಸುವರ್ಣ ಕರ್ನಾಟಕದ ಮಹತ್ವ ಬೆಳೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಈ ಸಂದರ್ಭ ಐಗೂರು ಗ್ರಾ.ಪಂ ಅಧ್ಯಕ್ಷ ಜಿ.ಕೆ.ವಿನೋದ್, ಉಪಾಧ್ಯಕ್ಷ ಗೌರಮ್ಮ, ಐಗೂರು ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಬಾರನ ಕೀರ್ತಿಕುಮಾರ್, ಗೌರವ ಅಧ್ಯಕ್ಷ ಕೇಕಡ ವಾಸು ಪೂವಯ್ಯ, ಸಂಘಟನಾ ಕಾರ್ಯದರ್ಶಿ ಡಿ.ಹೆಚ್.ವಿಶ್ವನಾಥರಾಜ್ ಅರಸು, ಖಜಾಂಚಿ ಬೆಳ್ಯಪ್ಪ, ಸದಸ್ಯರುಗಳಾದ ಮಾಚ್ಚಂಡ ಅಶೋಕ, ಭರತ್, ಐಗೂರು ಗ್ರಾ.ಪಂ ಸದಸ್ಯರುಗಳಾದ ಜೋಯಪ್ಪ, ಬಾರನ ಪ್ರಮೋದ್, ಲಿಂಗೇರಿ ರಾಜೇಶ, ಬೇಬಿ ಜಾನಕಿ ಮೇದಪ್ಪ, ಗೌರವ ಕಾರ್ಯದರ್ಶಿ ಕಾಜೂರು ಶಾಲೆಯ ಮುಖ್ಯೋಪಾಧ್ಯಯಿನಿ ಸರಳಕುಮಾರಿ, ಆಟೋ ಚಾಲಕರ ಸಂಘದ ಜಿ.ಕೆ.ಅವಿಲಾಶ್ ಹಾಜರಿದ್ದರು. ಶಾಲಾ ವಿದ್ಯಾರ್ಥಿಗಳು ವಾದ್ಯಗೋಷ್ಠಿಯೊಂದಿಗೆ ಸುವರ್ಣ ಕರ್ನಾಟಕ ರಥವನ್ನು ಸ್ವಾಗತಿಸಿದ್ದು ವಿಶೇಷವಾಗಿತ್ತು.