ಮಡಿಕೇರಿ ನ.2 NEWS DESK : ಗುಡ್ಡೆಹೊಸೂರು ಪ್ರಾಥಮಿಕ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಾದ್ಯಗೋಷ್ಠಿ, ಕನ್ನಡ ಡಿಂಡಿಮ ಘೋಷಣೆಯೊಂದಿಗೆ ಗುಡ್ಡೆಹೊಸೂರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಕ್ಕಳಿಂದ ಕನ್ನಡ ಭಾಷೆ, ನೆಲ, ಜಲದ ಪ್ರಾಮುಖ್ಯತೆ ಕುರಿತು ಮಾತನಾಡಿದರು. ಎಸ್ ಡಿಎಂಸಿ ಅಧ್ಯಕ್ಷ ನಾಗೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ರುಕ್ಮಿಣಿ, ಮುಖ್ಯ ಶಿಕ್ಷಕರಾದ ಸಣ್ಣಸ್ವಾಮಿ, ಮರಿಯಾ, ಗೀತ, ಯಶುಮತಿ, ಚಂದ್ರಶೇಖರ್, ಸದಸ್ಯರಾದ ಶೀಲಾ, ಅಂಜು ಮಕ್ಕಳು ಪಾಲ್ಗೊಂಡಿದ್ದರು.











