ವಿರಾಜಪೇಟೆ ನ.26 NEWS DESK : ಕೊಡವ ಸಾಂಪ್ರದಾಯಿಕ ವಾಲಗತ್ತಾಟ್ ಅನ್ನು ಬೆಳೆಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ವಿರಾಜಪೇಟೆಯ ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ “ತೂಕ್ ಬೊಳಕ್ ಕೊಡವ ವಾಲಗತ್ತಾಟ್ ನಮ್ಮೆ ಪೈಪೋಟಿ ಕಾರ್ಯಕ್ರಮವು ಡಿ.10 ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಪೊನ್ನಂಪೇಟೆ ಕೊಡವ ಸಮಾಜದ ಸಹಕಾರದಲ್ಲಿ ಈ ಬಾರಿ ವಿಜ್ರಂಭಣೆಯಿಂದ ವಾಲಗತಾಟ್ ನಮ್ಮೆಯನ್ನು ಆಚರಿಸಲು ನಿರ್ಧರಿಸಿದ್ದು, ಪುರುಷರು ಮಹಿಳೆಯರು ಮಕ್ಕಳು ಎಂಬ 16 ವಿಭಾಗದಲ್ಲಿ ಪೈಪೋಟಿಯನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು. ಚಿಕ್ಕ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರತರುವ ಹಾಗೂ ಕೊಡವ ವಾಲಗತಾಟ್ ಅನ್ನು ಒಂದು ಹಬ್ಬವಾಗಿ ಆಚರಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನಮ್ಮ ಸಂಸ್ಥೆಯಿಂದ ವಾಲಗತ್ತಾಟ್ ನಮ್ಮೆಯನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ಪೈಪೋಟಿ ನಡೆಯಲಿದ್ದು, ಪೊನ್ನಂಪೇಟೆಯಲ್ಲಿ ನಡೆಯುವ ಕೊಡವ ವಾಲಗತಾಟ್ ನಮ್ಮೆಗೆ ಜನಾಂಗ ಬಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಪೈಪೋಟಿ ವಿಭಾಗ :: ಚಿಕ್ಕ ಮಕ್ಕಳಿಂದ 1ನೇ ತರಗತಿ, 2-4ನೇ ತರಗತಿ, 5-7ನೇ ತರಗತಿ, 8-10ನೇ ತರಗತಿ, ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ, ಪದವಿ, ಸಾರ್ವಜನಿಕರು, ಹಿರಿಯ ನಾಗರಿಕರು ಹೀಗೆ ಪುರುಷರು ಮಹಿಳೆಯರು ಎಂದು ಪ್ರತ್ಯೇಕವಾಗಿ 16 ವಿಭಾಗದಲ್ಲಿ ಈ ಸ್ಪರ್ಧೆ ನಡೆಯಲಿದೆ ಎಂದು ತಿಳಿದ್ದಾರೆ. ಆಸಕ್ತರು ಡಿ.5ರ ಒಳಗೆ ತಮ್ಮ ಹೆಸರನ್ನು ವಿರಾಜಪೇಟೆ ಮೂರ್ನಾಡು ರಸ್ತೆಯಲ್ಲಿರುವ ತೂಕ್ ಬೊಳಕ್ ಪತ್ರಿಕೆ ಕಾರ್ಯಾಲಯ ಅಥವಾ 9480556667, 9480905756 ಮೊಬೈಲ್ ಸಂಖ್ಯೆಯಲ್ಲಿ ನೋಂದಾಯಿಸಬಹುದು ಎಂದು ತಿಳಿಸಿದರು.