ನಾಪೋಕ್ಲು ನ.26 NEWS DESK : ಸ್ವಾಮಿ ವಿವೇಕಾನಂದರ ದಿವ್ಯ ಲೀಲಾ ಕ್ಷೇತ್ರವಾಗಿರುವ ಡಿವೈನ್ ಪಾರ್ಕ್ ನ ಅಂಗ ಸಂಸ್ಥೆಯಾದ ಮೂರ್ನಾಡಿನ ವಿವೇಕ ಜಾಗೃತ ಬಳಗದ ವತಿಯಿಂದ ಮುರ್ನಾಡಿನ ಸಮುದಾಯ ಭವನದಲ್ಲಿ ವಾತ್ಸಲ್ಯ ಶ್ರೀ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಿವೈನ್ ಪಾರ್ಕ್ ಅಧಿಕಾರಿ ಪದ್ಮಲತಾ ರಾವ್ ಮಾತನಾಡಿ ಉತ್ತಮ ಸಂಸ್ಕಾರವಂತ ಮಗುವನ್ನು ಪಡೆಯುವಲ್ಲಿ ತಾಯಿಯ ಪಾತ್ರವನ್ನು ವಿವರಿಸಿದ್ದರು. ಕೊಡಗು ಜಿಲ್ಲಾ ಶುಶ್ರೂಷಕ ಘಟಕದ ನಿವೃತಾಧಿಕಾರಿ ಬೈಲೋಳಿ ಕುಸುಮ ಲಕ್ಷ್ಮಣ ಮಾತನಾಡಿ ಗರ್ಭಿಣಿಯರ ಆರೋಗ್ಯದ ಕುರಿತು ಮಾಹಿತಿ ನೀಡಿದರು. ಸುಮಾರು 130 ಸದ್ಭಕ್ತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡರು. ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಮಡಿಲು ತುಂಬಿಸುವ ಕಾರ್ಯ ನಡೆಯಿತು. ವೇದಿಕೆಯಲ್ಲಿ ಬಳಗದ ಅಧ್ಯಕ್ಷರಾದ ದಿವ್ಯ ತೇಜ್ ಕುಮಾರ್ ಹಾಜರಿದ್ದರು. ಬಳಗದ ಕಾರ್ಯಕರ್ತರಾದ ನಿಶಾಮಣಿ ಸ್ವಾಗತಿಸಿದರು. ಶೃತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವರದಿ : ದುಗ್ಗಳ ಸದಾನಂದ.