ಮಡಿಕೇರಿ ಡಿ.3 NEWS DESK : ಮೂರ್ನಾಡು ಶಾದಿಮಹಲ್ ನಲ್ಲಿ ಮೈಮಾ ಸಂಘಟನೆ ವತಿಯಿಂದ ನಡೆದ ಅನುಸ್ಮರಣಾ ಕಾರ್ಯಕ್ರಮ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಹು ನಿಝಾರ್ ಅಹ್ಸನಿ ಕಕ್ಕಡಿಪುರಂ (ಕುಂಜಿಲ0 ಉಸ್ತಾದ್) ಸಂಘಟನೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾಡಿನಲ್ಲಿ ಬದುಕಿ ಬಾಳಿದ್ದ ಹಿರಿಯರು ಸ್ನೇಹಿತರು ಕುಟುಂಬದವರು ಸೇರಿದಂತೆ ಮರಣ ಹೊಂದಿದ ಸರ್ವ ಸತ್ಯವಿಶ್ವಾಸಿಗಳ ಪಾರತ್ರಿಕ ಕ್ಷೇಮ ಆಗ್ರಹಿಸಿ ನಡೆಸಲಾದ ಪವಿತ್ರ ಖುರ್ಆನ್ ಖತಮ್ ದುಆ ದಿಕ್ರ್ ಸ್ವಲಾತ್ ಹದಿಯ ಅರ್ಪಣೆ ಕಾರ್ಯವು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ನಡೆಸುವಂತಾಗಲಿ ಎಂದರು. ಪ್ರಾರ್ಥನಾ ಸಂಗಮದ ದುಆ ಕಾರ್ಯಕ್ಕೆ ಕಕ್ಕಡಿಪುರಂ ಅಹ್ಸನಿ ಮುಖ್ಯ ನೇತೃತ್ವ ವಹಿಸಿದ್ದರು.











