ಮಡಿಕೇರಿ ಜ.7 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರು ಕೊಡವ ಸಮಾಜ ಸಹಯೋಗದಲ್ಲಿ ಜ.26 ರಂದು ರಾಜ್ಯ ಮಟ್ಟದ ಕೊಡವ ವಿಚಾರ ಸಂಕಿರಣ ನಡೆಯಲಿದೆ. ಬೆಂಗಳೂರು ಕೊಡವ ಸಮಾಜದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಲಿರುವ ವಿಚಾರ ಸಂಕಿರಣವನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೇಂದ್ರ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ಬಿ. ಕಂಬಾರ ಉದ್ಘಾಟಿಸಲಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ, ಕೇಂದ್ರ ವರಮಾನ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ದೇವಣಿರ ಪ್ರೀತ್ ಗಣಪತಿ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕರೋಟಿರ ಟಿ. ಪೆಮ್ಮಯ್ಯ, ನಿವೃತ್ತ ಎಸಿಪಿ ಬಿದ್ದಂಡ ಬಿ. ಅಶೋಕ್ ಕುಮಾರ್, ರಾಜ್ಯ ಉಚ್ಛ ನ್ಯಾಯಾಲಯದ ವಕೀಲೆ ಪುಲಿಯಂಡ ಅನು ಚಂಗಪ್ಪ, ಡ್ಯಾಫೋಡಿಲ್ಸ್ ವಿದ್ಯಾಸಂಸ್ಥೆಯ ಮುಖ್ಯಸ್ಥೆ ನೆರವಂಡ ಮಾಧುರಿ ಚಂಗಪ್ಪ, ಪರಮವೀರಚಕ್ರ ವಿಜೇತ ಕರ್ನಲ್ ಪುಟ್ಟಿಚಂಡ ಎಸ್. ಗಣಪತಿ(ನಿ), ಮೇಜರ್ ಜನರಲ್ ಕೊಡಂದೆರ ಅರ್ಜುನ್ ಮುತ್ತಣ್ಣ, ಬಂಜಾರ ಅಕಾಡೆಮಿಯ ಅಧ್ಯಕ್ಷ ಡಾ. ಎ. ಆರ್. ಗೋವಿಂದ ಸ್ವಾಮಿ ಪಾಲ್ಗೊಳ್ಳಲಿದ್ದಾರೆ. ವಿಚಾರ ಸಂಕಿರಣದಲ್ಲಿ ಡಾ. ಪುರುಷೋತ್ತಮ ಬಿಳಿಮಲೆ, ಹಿರಿಯ ಪತ್ರಕರ್ತ ಮನೆಯಪಂಡ ಎ. ಪೊನ್ನಪ್ಪ, ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ಪತ್ರಕರ್ತ ರಾಷ್ಟ್ರೀಯ ವಿಚಾರವಾದಿ ಮಾಣಿಪಂಡ ಸಂತೋಷ್ ತಮ್ಮಯ್ಯ, ವಿಚಾರ ಮಂಡಿಸಲಿರುವರು. ಇದೊಂದು ವಿಶೇಷ ಹಾಗೂ ಅರ್ಥಪೂರ್ಣ ಸಮಾರಂಭವಾಗಲಿದ್ದು ಕಾರ್ಯಕ್ರಮದ ನಡು ನಡುವೆ ಕೊಡವ ಸಾಂಸ್ಕೃತಿಕ ಕಲಾ ಪ್ರಕಾರಗಳ ಪ್ರದರ್ಶನವನ್ನು ಏರ್ಪಡಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ತಿಳಿಸಿದ್ದಾರೆ.