ಮಡಿಕೇರಿ ಜ.14 NEWS DESK : ಕೃಷಿಕ್ ಸರ್ವೋದಯ ಫೌಂಡೇಶನ್ ವತಿಯಿಂದ 2025 ನೇ ಸಾಲಿನ ಯುಪಿಎಸ್‍ಸಿ ಪ್ರಿಲಿಮ್ಸ್ ಬರೆಯುತ್ತಿರುವ ಸ್ಪರ್ಧಾರ್ಥಿಗಳಿಗೆ ಉಚಿತ ಯುಪಿಎಸ್‍ಸಿ ಪ್ರಿಲಿಮ್ಸ್ ಕ್ರ್ಯಾಶ್ ಕೋರ್ಸ್ ಅನ್ನು ಜನವರಿ 16 ರಿಂದ ಏಪ್ರಿಲ್ 30 ರವರೆಗೆ ಆಯೋಜಿಸಲಾಗುತ್ತಿದೆ. ಉತ್ತಮ ಫಲಿತಾಂಶ ನೀಡುವ ದೃಷ್ಟಿಯಿಂದ ನುರಿತ ಪ್ರಾಧ್ಯಾಪಕರಿಂದ ಗುಣಮಟ್ಟದ ಬೋಧನೆ ನೀಡಲಾಗುವುದು ಹಾಗೂ ಅನುಮಾನ ನಿವಾರಣಾ ಅವಕಾಶಗಳು, ಹದಿನೈದು ದಿನಗಳಿಗೊಮ್ಮೆ ವಿಷಯವಾರು ಪರೀಕ್ಷೆಗಳು ಮತ್ತು ಮೇ 2025 ರಲ್ಲಿ ಯುಪಿಎಸ್‍ಸಿ ಪ್ರಿಲಿಮ್ಸ್ ಜಿಎಸ್‍ಐ ಮತ್ತು ಜಿಎಸ್2 ಅಣುಕು ಪರೀಕ್ಷೆಗಳನ್ನು ನಡೆಸಲಾಗುವುದು. ಈ ತರಗತಿಗಳು ಆನ್‍ಲೈನ್ ಹಾಗೂ ಆಫ್ ಲೈನ್ ನಲ್ಲಿ ಲಭ್ಯವಿದ್ದು, ಆನ್‌ಲೈನ್ ತರಗತಿಗಳು ಕೆಎಸ್‍ಎಫ್ ಅಕಾಡೆಮಿ, ಚಂದ್ರ ಲೇಔಟ್, ವಿಜಯನಗರ, ಬೆಂಗಳೂರು-40 ಇಲ್ಲಿ ನಡೆಯಲಿವೆ. ಈ ತರಗತಿಗಳಿಗೆ ಹಾಜರಾಗಲು ನೋಂದಣಿ ಕಡ್ಡಾಯ. ಹೆಚ್ಚಿನ ವಿವರಗಳಿಗೆ ದೂ.ಸಂ. 9845318599, 9845319299, ಇಮೈಲ್: ksfchandralayout@gmail.com ಅಥವಾ ವೆಬ್‍ಸೈಟ್: www.ksfkarnataka.com ನ್ನು ಸಂಪರ್ಕಿಸಬಹುದು ಎಂದು ಕೃಷಿಕ್ ಸರ್ವೋದಯ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.