ಚೆಟ್ಟಳ್ಳಿ NEWS DESK ಜ.14 :ರಾಜಸ್ಥಾನದ ಸುತ್ತಲಿನ ಮರಳಿನ ಗುಡ್ಡಾಗಾಡಿನ ಪ್ರದೇಶದಲ್ಲಿ ಅತೀ ವೇಗದ 4×4 ರ‍್ಯಾಲಿ ವಾಹನಗಳ ಸಾಹಸಮಯ ರ‍್ಯಾಲಿ ಕ್ರೀಡೆಯ ಸ್ಪೆಷಲ್ ಬಿಲ್ಡ್ ವೆಹಿಕಲ್ ಕ್ಯಾಟಗರಿಯಲ್ಲಿ ಕೊಡಗಿನ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಪ್ರಥಮ ಸ್ಥಾನದ ಮುಡಿಗೇರಿಸಿಕೊಂಡಿದ್ದಾರೆ. ರಾಜಸ್ಥಾನದ ಬಿಕಾನೆಲ್ ನಲ್ಲಿ ರಾಜ್ಯಸ್ಥಾನ ಮೋಟಾರ್ ಸ್ಪೋಟ್ಸ್ ಕಬ್ಲ್ ಮೂರು ದಿನಗಳ ಕಾಲ ಅಯೋಜಿಸಿದ ಡ್ಯೂನ್ ಕ್ರಾಸ್ 5.0 ರ‍್ಯಾಲಿಯಲ್ಲಿ C1 C2 C3 ಹಾಗು C4 ಕ್ಯಾಟಗರಿಯನ್ನು ಆಯೋಜಿಸಲಾಗಿತ್ತು. 2.0 ಲೀಟರ್ ನ ವಾಹನದಲ್ಲಿ ಅಮ್ಮತ್ತಿಯ ಉದ್ದಪಂಡ ಚೇತನ್ ಚಂಗಪ್ಪ ಹಾಗೂ ಅರುಣಾಚಲ್ ಪ್ರದೇಶದ ಉಜ್ವಲ್ ನಮ್ಯೂಮ್ ಸ್ಪೆಷಲ್ ಬಿಲ್ಡ್ ವೆಹಿಕಲ್ ಕ್ಯಾಟಗರಿಯಲ್ಲಿ ಭಾಗವಹಿಸಿದರು. ಹೆಚ್ಚಿನ ಚಳಿಗಾಳಿಯಲ್ಲಿ ಮರಳಿನ ಧೂಳಿನ ನಡುವೆ ಅತೀ ವೇಗದಲ್ಲಿ ಧೈರ್ಯ ಹಾಗೂ ಅತ್ಯುತ್ತಮ ಸಾಹಸ ಪ್ರದರ್ಶನದ ಮೂಲಕ 10 ಹಂತಗಳಲ್ಲಿ ಡ್ರೈವರ್ ಹಾಗೂ ಕೊ-ಡ್ರೈವರಾಗಿದ್ದ ಚೇತನ್ ಚಂಗಪ್ಪ ಜೋಡಿ ಅತೀ ಕಡಿಮೆ ಸಮಯದಲ್ಲಿ ಅಂತರವನ್ನು ಮುಗಿಸುವ ಮೂಲಕ ಪ್ರಥಮ ಸ್ಥಾನದ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು. ಹಲವು ಇಂಡಿಯನ್ ನ್ಯಾಷನಲ್ ಚಾಂಪಿಯನ್ ಶಿಪ್, ರೈನ್ ಫಾರೆಸ್ಟ್ ಚಾಲೇಂಜ್ ಹಾಗು ಆಫ್ ರೋಡ್ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ರಾಜಸ್ಥಾನದ ಮರಳುಗಾಡಿನ ನಡುವೆ ಅಯೋಜಿಸಿದ ರ‍್ಯಾಲಿಯಲ್ಲಿ ಭಾಗವಹಿಸಿದ್ದು ಇದೇ ಮೊದಲು. ರೋಚಕ ಅನುಭವದ ಜೊತೆ ಮೊದಲ ಸ್ಥಾನ ಪಡೆದಿರುವುದು ಹೆಮ್ಮೆ ಎನಿಸಿದೆಂದು ಚೇತನ್ ಚಂಗಪ್ಪ ಹೇಳಿದರು.