ವಿರಾಜಪೇಟೆ ಜ.17 NEWS DESK : ಅಮ್ಮತ್ತಿ ಒಂಟಿಅಂಗಡಿ ಗ್ರಾಮದ ಶ್ರೀ ಕ್ಷೇತ್ರ ಎಡೂರಿನಲ್ಲಿ ಜ.18 ಮತ್ತು 19 ರಂದು ಕಲ್ಲುರ್ಟಿ ಕೊರಗಜ್ಜ ದೈವಗಳ ವಾರ್ಷಿಕ ನೇಮೋತ್ಸವ ನಡೆಯಲಿದೆ. ಜ.17 ರಂದು ಸಂಜೆ 7 ಗಂಟೆಗೆ ದೇವಿಯ ವಿಶೇಷ ಪೂಜೆ ನಡೆಯಲಿದೆ. ಜ.18 ರಂದು ಸಂಜೆ 6.30ಕ್ಕೆ ದೈವಗಳ ಭಂಡಾರ ಇಳಿಯುವುದು. ರಾತ್ರಿ 10.30ಕ್ಕೆ ಪರಿವಾರ ದೈವಗಳಾದ ಶ್ರೀ ಜೋಡಿ ಕಲ್ಲುರ್ಟಿ, ಶ್ರೀ ಮಂತ್ರದೇವತೆ, ಶ್ರೀ ಮಂತ್ರ ಗುಳಿಗ ದೈವಗಳ ದರ್ಶನ ನಡೆಯಲಿದೆ. ಜ.19 ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಧರ್ಮದೈವ ಅಣ್ಣಪ್ಪ ಪಂಜೂರ್ಲಿ ಹಾಗೂ 10 ಗಂಟೆಗೆ ಸ್ವಾಮಿ ಕೊರಗಜ್ಜ ನೇಮೋತ್ಸವ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ